ಶ್ರೇಯಾ ಗರ್ಭಿಣಿಯಾಗಿದ್ದಳು. ಅವಳು ಹುಟ್ಟಲಿರುವ ಮಗುವಿನ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಳು. ಅವಳಿಗೆ ಹೆರಿಗೆಯಾದಾಗ ಅವಳಿ ಮಕ್ಕಳು ಜನಿಸಿದವು. ತನಗೆ ಏಕಕಾಲಕ್ಕೆ ಎರಡು ಮಕ್ಕಳು ಹುಟ್ಟಲಿವೆ ಎಂದು ಅವಳು ಊಹೆ ಕೂಡ ಮಾಡಿರಲಿಲ್ಲ. ಏಕೆಂದರೆ ಅವಳು ಯಾವ ವೈದ್ಯರ ಬಳಿ ನಿಯಮಿತವಾಗಿ ಚೆಕ್‌ ಮಾಡಿಸುತ್ತಿದ್ದಳೊ, ಅವರು ಕೂಡ ಈ ಬಗ್ಗೆ ಖಚಿತಪಡಿಸಿರಲಿಲ್ಲ.

ವೈದ್ಯರು ಅವಳಿಗೆ ಅವಳಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಸೂಚನೆಗಳನ್ನು ಕೊಟ್ಟರು. ಆ ಎಳೆ ಕಂದಮ್ಮಗಳ ಸ್ವಚ್ಛತೆ, ಪೋಷಣೆ ಸಹಿತ ಬ್ರೆಸ್ಟ್ ಫೀಡಿಂಗ್‌ ಕುರಿತಾದ ಮಾಹಿತಿಗಳನ್ನು ಕೊಟ್ಟರು.

ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಒಂದು ವಾರ ಎಲ್ಲವೂ ಸರಿಯಾಗಿತ್ತು. ಆದರೆ ಎರಡು ಮಕ್ಕಳು ಯಾವಾಗಲೂ ಅಳುತ್ತಿದ್ದವು. ಶ್ರೇಯಾ ಗಾಬರಿಗೊಂಡು ವೈದ್ಯರ ಬಳಿ ಹೋದಾಗ ಅವರು ಮಕ್ಕಳು ಕಿರಿಕಿರಿ ಮಾಡಲು ಸರಿಯಾಗಿ ಹಾಲುಣಿಸದೇ ಇರುವುದೇ ಕಾರಣ ಎಂದು ಹೇಳಿದರು.

ಎರಡು ಮಕ್ಕಳು ಹುಟ್ಟಿದಾಗ ಇದು ಸಾಮಾನ್ಯ ಸಂಗತಿ. ಹಾಗಾಗಿ ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಹಾಲುಣಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಆ ಬಳಿಕ ವೈದ್ಯರು ಬ್ರೆಸ್ಟ್ ಫೀಡಿಂಗ್‌ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ಎಚ್ಚರಿಕೆಗಳನ್ನು ವಹಿಸಲು ತಿಳಿಸಿದರು. ಅವನ್ನು ಅನುಸರಿಸಿದ ಬಳಿಕ ಶ್ರೇಯಾಳಿಗೆ ಮಕ್ಕಳ ಸಮಸ್ಯೆ ನಿವಾರಣೆಯಾಯಿತು. 6 ತಿಂಗಳ ತನಕ ವಿಶೇಷ ಕಾಳಜಿ :

ಶಿಶು ತಜ್ಞೆ ಡಾ. ರಾಧಿಕಾ ಹೀಗೆ ಹೇಳುತ್ತಾರೆ, ಸಾಮಾನ್ಯವಾಗಿ ತಾಯಂದಿರು ಸ್ತನ್ಯಪಾನ ಮಾಡಿಸುವುದರ ಜೊತೆಗೆ ಆಗಾಗ ಹಸುವಿನ ಹಾಲು, ಜೇನುತುಪ್ಪ, ಗಂಜಿ ನೀರು ಮುಂತಾದವನ್ನು ಕುಡಿಸುತ್ತಾರೆ. ಎರಡು ಮಕ್ಕಳು ಏಕಕಾಲಕ್ಕೆ ಹುಟ್ಟಿದಾಗಲಂತೂ ಈ ಕ್ರಮ ಮತ್ತಷ್ಟು ಜೋರಾಗಿ ನಡೆಯುತ್ತದೆ. ಏಕೆಂದರೆ ತಾನು ಕುಡಿಸುತ್ತಿರುವ ಹಾಲು ಮಕ್ಕಳಿಗೆ ಸಾಲುತ್ತಿಲ್ಲ ಎಂದು ತಾಯಿಗೆ ಅನಿಸುತ್ತಿರುತ್ತದೆ. 6 ತಿಂಗಳಿಗೂ ಮುಂಚೆ ಕಂದನಿಗೆ ತಾಯಿಯ ಹಾಲಿನ ಜೊತೆಗೆ ಮೇಲಿನದನ್ನು ಏನಾದರೂ ಕೊಟ್ಟರೆ, ಅದು ಅನಾರೋಗ್ಯ ಪೀಡಿತವಾಗುವುದರ ಜೊತೆಗೆ, ಅದರ ಪೋಷಣೆಯ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ತಾಯಿಯಾದವಳು ಕಂದಮ್ಮಗಳಿಗೆ ಎದೆಹಾಲಿನ ಹೊರತು ಬೇರೇನನ್ನೂ ಕೊಡಬಾರದೆಂದು ನಿರ್ಧರಿಸಬೇಕು. ಎರಡೂ ಮಕ್ಕಳಿಗೆ ಸಾಕಾಗುವಷ್ಟು ಹಾಲು ತಾಯಿಯ ಸ್ತನಗಳಲ್ಲಿ ಉತ್ಪತ್ತಿಯಾಗುತ್ತದೆ.

ಶಸ್ತ್ರಚಿಕಿತ್ಸೆಯಿಂದ ಹುಟ್ಟಿದ ಮಕ್ಕಳಿಗೂ ಕೂಡ ಎದೆಹಾಲು ಕುಡಿಸುವುದನ್ನು ಮುಂದುವರಿಸಿ. ಶಸ್ತ್ರಚಿಕಿತ್ಸೆಯ ಮೂಲಕ ಜನಿಸಿದ ಮಕ್ಕಳಿಗೆ ಎದೆಹಾಲು ಕುಡಿಸಲು ವಿಳಂಬವಾಗುತ್ತದೆ. ಅವಳಿ ಮಕ್ಕಳ ಬಾಬತ್ತಿನಲ್ಲಿ ಈ ವಿಳಂಬ ಇನ್ನಷ್ಟು ಹೆಚ್ಚುತ್ತದೆ. ಹೆರಿಗೆಯಾದ ಒಂದು ಗಂಟೆಯಲ್ಲಿಯೇ ಶಿಶುಗಳಿಗೆ ತಾಯಿಯ ಸ್ತನಗಳಲ್ಲಿ ಉತ್ಪತ್ತಿಯಾಗುವ ಗಾಢ ಹಳದಿ ಹಾಲು ಅಂದರೆ ಕೊಲೊಸ್ಟ್ರಮ್ ದೊರಕಬೇಕು. ಏಕೆಂದರೆ ಇದು ಮಕ್ಕಳನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. ಒಂದು ವೇಳೆ ಸಿಸೇರಿಯನ್‌ ಹೆರಿಗೆಯಾಗಿದ್ದರೆ, ತಾಯಿಯಾದವಳು ಸ್ತನ್ಯಪಾನ ಮಾಡಿಸಲು ಒಂದು ಬದಿಗೆ ಅಡ್ಡವಾಗಿ ಮಲಗಿ ಹಾಲು ಕುಡಿಸಬೇಕು. ಹೀಗೆ ಇನ್ನೊಂದು ಬದಿ ಅಡ್ಡವಾಗಿ ಮಲಗಿಕೊಂಡು ಇನ್ನೊಂದು ಮಗುವಿಗೆ ಹಾಲು ಕುಡಿಸಬೇಕು. ಹಾಲು ಕುಡಿಸುವಾಗ ಮಗುವಿನ ತಲೆಯ ಮೇಲೆ ಕೈಗಳ ಆಸರೆ ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ