ಮಹಿಳೆಯರು ವಯಸ್ಸಿನ ಒಂದು ಹಂತದ ಬಳಿಕ ಅಥವಾ ಮದುವೆಯ ಬಳಿ ತಮ್ಮ ದೇಹದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಇದರ ಪರಿಣಾಮ ಏನಾಗುತ್ತದೆಂದರೆ, ಅವರ ದೇಹ ಅಸ್ತ್ಯವ್ಯಸ್ತಗೊಳ್ಳುತ್ತದೆ ಅಥವಾ ಅವರು ಜೀವನಶೈಲಿಗೆ ಸಂಬಂಧಪಟ್ಟ ರೋಗಗಳಗೆ ತುತ್ತಾಗುತ್ತಾರೆ.

ನಾವು ಇಲ್ಲಿ ಎಂತಹ ಕೆಲವು ವರ್ಕ್‌ ಔಟ್ಸ್ ಬಗ್ಗೆ ತಿಳಿಸುತ್ತಿದ್ದೇವೆಂದರೆ, ಅವನ್ನು ನೀವು ತಜ್ಞರ ಉಸ್ತುವಾರಿಯಲ್ಲಿ ಮಾಡಿದರೆ, ನಿಮಗೆ ತುಂಬಾ ಉಪಯುಕ್ತವಾಗಿ ಪರಿಣಮಿಸುತ್ತವೆ. ಕಾರ್ಡಿಯೋ ವರ್ಕ್‌ ಔಟ್‌ ಕಾರ್ಡಿಯೋ ಬಹಳ ಉಪಯುಕ್ತ. ಇದು ತೂಕ ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಅದರಿಂದ ಒತ್ತಡ ಕಡಿಮೆಯಾಗುತ್ತದೆ. ಈ ವರ್ಕ್‌ ಔಟ್‌ ನಿಂದ ಶ್ವಾಸಕೋಶಗಳ ತನಕ ಆಮ್ಲಜನಕ ತಲುಪಲು ಸಹಾಯವಾಗುತ್ತದೆ. ಅದರಿಂದ ಹೃದಯ ಸದೃಢ ಹಾಗೂ ರಕ್ತ ಕೂಡ ಶುದ್ಧವಾಗುತ್ತದೆ.

ಕಾರ್ಡಿಯೋ ವರ್ಕ್‌ ಔಟ್‌ ತೂಕವನ್ನು ನಿಯಂತ್ರಿಸಿ, ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆಗೊಳಿಸುತ್ತದೆ ಹಾಗೂ ರೋಗಗಳಿಂದ ರಕ್ಷಿಸುತ್ತದೆ. ಬೇರೆ ಬೇರೆ ತೆರನಾದ ಕಾರ್ಡಿಯೋ ವರ್ಕ್‌ ಔಟ್‌ ನಿಂದ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಬಹುದು.

ಏರೋಬಿಕ್ಸ್

Aerobicks

ಈ ವ್ಯಾಯಾಮವನ್ನು ನೀವು ಯಾವಾಗ ಬೇಕಾದರೂ ಎಲ್ಲಿಯಾದರೂ ಚಿಕ್ಕ ಜಾಗದಲ್ಲಿ ಕೂಡ ಮಾಡಬಹುದು. ಇದರಲ್ಲಿ ನೀವು ನಿಮ್ಮ ಮೆಚ್ಚಿನ ಸಂಗೀತಕ್ಕೆ ತಕ್ಕಂತೆ ಕೆಲವು ಹೆಜ್ಜೆಗಳನ್ನು ಹಾಕಬಹುದು. ಗ್ರೇಪ್‌ ವೈನ್‌, ಲೆಗ್‌ ವರ್ಕ್‌, ಜಂಪಿಂಗ್‌ ಜಾಕ್ಸ್ ನಂತಹ ಮೂವ್ ‌ಗಳಿಂದ ಇಡೀ ದೇಹದ ತೂಕ ಕುಗ್ಗುತ್ತದೆ. ಬೆವರಿನ ಮುಖಾಂತರ ದೇಹದಿಂದ ಬೇಡದ ಘಟಕಗಳು ಅಂದರೆ ಟಾಕ್ಸಿನ್ಸ್ ಹೊರಹೋಗುತ್ತವೆ.

ಬೆವರಿನ ಮುಖಾಂತರ ದೇಹದಿಂದ ಟಾಕ್ಸಿನ್‌ ಗಳು ಹೊರಹೋಗುವುದೇ ಫ್ಯಾಟ್‌ ಮತ್ತು ರೋಗಗಳಿಂದ ನಮ್ಮನ್ನು ದೂರಗೊಳಿಸುತ್ತದೆ. ಕೇವಲ ಬೆವರು ಹರಿಸಿದರಷ್ಟೇ ಸಾಲದು, ಕಡಿಮೆ ಪರಿಶ್ರಮ ಕೂಡ ಅತ್ಯವಶ್ಯ. ಏರೋಬಿಕ್ಸ್ ವರ್ಕ್‌ ಔಟ್‌ ನಲ್ಲಿ ನಿಮ್ಮ ಹೃದಯ ಗತಿಯನ್ನು ಲೋನಿಂದ ಹೈ ತನಕ ಕೊಂಡೊಯ್ದು ಒಂದು ಮಟ್ಟದಲ್ಲಿ ಮೇಂಟೇನ್‌ ಮಾಡಬಹುದು. ಅದು ಕೂಡ ತೂಕ ಕಡಿಮೆ ಮಾಡುವುದರಲ್ಲಿ ನೆರವಾಗುತ್ತದೆ.

ಸ್ಟ್ರೆಂಥ್ವರ್ಕ್ಔಟ್

ಮಹಿಳೆಯರಿಗೆ ಸ್ಟ್ರೆಂಥ್‌ ವರ್ಕ್‌ ಔಟ್‌ ಅತ್ಯವಶ್ಯ ಮತ್ತು ಅದು ಟ್ರೆಂಡ್‌ ಕೂಡ ಆಗಿದೆ. ಇದರಿಂದ ಮಹಿಳೆಯರಲ್ಲಿ ಆಸ್ಟ್ರಿಯೊಪೊರೊಸಿಸ್‌ ನ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಮೂಳೆಗಳ ಸಾಂಧ್ರತೆ ಅಂದರೆ ಬೋನ್‌ ಡೆನ್ಸಿಟಿ ಹೆಚ್ಚುತ್ತದೆ. ಇದರಲ್ಲಿ ಬೈಸೆಪ್‌ ವರ್ಕ್‌, ಟ್ರೈಸೆಪ್‌ ಎಕ್ಸ್ ಟೆನ್ಶನ್‌, ಹ್ಯಾಮರ್‌ ವರ್ಕ್‌, ಶೋಲ್ಡರ್‌ ಪ್ರೆಸ್‌, ಪುಷಪ್ಸ್, ಟ್ರೈಸೆಪ್‌ ಡ್ರಿಪ್ಸ್ ಮುಂತಾದ ಮಹಿಳೆಯರಿಗೆ ಅತ್ಯಂತ ಉಪಯುಕ್ತ.

ಡ್ಯಾನ್ಸ್ ಫಿಟ್ನೆಸ್

7-workout-se-4

ಫಿಟ್‌ ನೆಸ್‌ ಡ್ಯಾನ್ಸ್ ಮಹಿಳೆಯರಿಗೆ ಅತ್ಯುಪಯುಕ್ತ ಹಾಗೂ ಇತ್ತೀಚೆಗೆ ಇದು ಹೆಚ್ಚು ಟ್ರೆಂಡ್‌ ಆಗುತ್ತಾ ಹೊರಟಿದೆ. ಇದರಲ್ಲಿ ನೀವು ಬಾಂಗ್ರಾ, ಬೆಲ್ಲಿ ಡ್ಯಾನ್ಸ್ ನ್ನು ಬೇರೆ ಬೇರೆ ರೀತಿಯಲ್ಲಿ ತಿರುಗುವುದರ ಮೂಲಕ 30-35 ನಿಮಿಷಗಳ ಕಾಲ ವರ್ಕ್‌ ಔಟ್ ಮಾಡಬಹುದು. ಈ ಡ್ಯಾನ್ಸ್ ಮೋಜಿನ ಜೊತೆಗೆ ತೂಕವನ್ನೂ ಕಡಿಮೆಗೊಳಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ