ಚಳಿ ಅತಿ ಎನಿಸಿದಾಗ ರೂಂ ಹೀಟರ್‌ ಹಾಗೂ ಬ್ಲೋಯರ್‌ಗಳನ್ನೂ ಬಳಸುತ್ತೇವೆ. ಇದರಿಂದ ನಮ್ಮ ಚರ್ಮದ ಶುಷ್ಕತೆ ಹೆಚ್ಚುತ್ತದೆ, ಏಕೆಂದರೆ ಇವು ನಮ್ಮ ಚರ್ಮದ ಆರ್ದ್ರತೆ ಹೀರಿಕೊಳ್ಳುತ್ತವೆ. ಇದರಿಂದ ಚರ್ಮ ನಿರ್ಜೀವವಾಗಿ ಪೋಷಣೆ ಕಳೆದುಕೊಳ್ಳುತ್ತದೆ. ಇವುಗಳ ನಿವಾರಣೆಗೆ ಕೆಲವು ಸಲಹೆಗಳು :

ಚರ್ಮದಲ್ಲಿ ಆರ್ದ್ರತೆ ಉಳಿಸಿಕೊಳ್ಳಿ

ಚರ್ಮ ನಮ್ಮ ದೇಹದ ಮಹತ್ವಪೂರ್ಣ ಅಂಗ. ಇದನ್ನು ಹೆಚ್ಚು ಮೃದು ಹಾಗೂ ಪೋಷಿತಗೊಳಿಸಲು ಹೆಚ್ಚುವರಿ ಸಂರಕ್ಷಣೆಯ ಅಗತ್ಯವಿದೆ. ಕ್ರೀಂಯುಕ್ತ ಮಾಯಿಶ್ಚರೈಸರ್‌, ಆಯಿಲ್ ‌ಬಾಥ್‌, ಸ್ನಾನಕ್ಕೆ ವಿಟಮಿನ್‌ `ಈ' ಯುಕ್ತ ಬಾಡಿ ವಾಶ್‌ ಬಳಸುವುದರಿಂದ ಚರ್ಮದಲ್ಲಿ ಆರ್ದ್ರತೆ ಉಳಿದುಕೊಳ್ಳುತ್ತದೆ.

ಅಗತ್ಯವೆನಿಸಿದರೆ ಮನೆಯಲ್ಲೇ ಬಾಡಿ ಲೋಶನ್‌ ಸಿದ್ಧಪಡಿಸಬಹುದು. ಆಲಿವ್ ‌ಆಯಿಲ್‌, ಆಲ್ಮಂಡ್‌ ಆಯಿಲ್‌, ವಿಟಮಿನ್‌ ಕ್ಯಾಪ್ಸೂಲ್ಸ್ ‌ಎಕ್ಸ್ ಟ್ರಾಕ್ಟ್ ಬೆರೆಸಿಕೊಂಡರೆ ಆಯ್ತು, ನಿಮ್ಮ ಬಾಡಿ ಲೋಶನ್‌ ಮನೆಯಲ್ಲೇ ರೆಡಿ! ಚಳಿಗಾಲದಲ್ಲಿ 1-2 ಸಲ ಸೆಲೂನ್‌ಗೆ ಹೋಗಿ ಫೇಶಿಯಲ್ ಅಥವಾ ಬಾಡಿ ಮಸಾಜ್‌ ಮಾಡಿಸಿಕೊಳ್ಳುವುದು ಕೂಡ ಲಾಭಕರ. ಫೇಶಿಯಲ್‌ಗಾಗಿ ನೀವು ರೇಡಿಯನ್ಸ್ ಗ್ಲೋ ಫೇಶಿಯಲ್ ಆರಿಸಿ. ಇದರಲ್ಲಿ ಧಾರಾಳವಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತವೆ. ಇವು ಚರ್ಮದ ಆರ್ದ್ರತೆಯ ಬ್ಯಾಲೆನ್ಸ್ ಕಾಪಾಡುತ್ತದೆ. ಚಳಿಗಾಲದಲ್ಲಿ ಕೋಕೋ ಬಟರ್‌, ಶಿಯಾ ಬಟರ್‌ನಿಂದ ಬಾಡಿ ಮಸಾಜ್‌ ಮಾಡುವುದರಿಂದ ಚರ್ಮ ಬಹಳ ಕೋಮಲ, ಮೃದು ಆಗುವುದರೊಂದಿಗೆ ಕಲೆಗುರುತುಗಳು, ಮೃತಕೋಶಗಳು ತೊಲಗಿಹೋಗುತ್ತವೆ.

ಮೃದು ತುಟಿಗಳು

ಪದರಗಳೇಳುವ, ಒಣ, ಒಡೆದ ತುಟಿಗಳ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅತಿ ಸರಳ ವಿಧಾನವೆದರೆ, ನಿಮ್ಮ ಹ್ಯಾಂಡ್ ಬ್ಯಾಗಿನಲ್ಲಿ ಸದಾ ಒಂದು ಲಿಪ್‌ ಬಾಮ್ ಇಟ್ಟುಕೊಳ್ಳಿ. ನೈಸರ್ಗಿಕವಾಗಿ ತುಟಿಗಳಿಗೆ ಆರ್ದ್ರತೆ ಒದಗಿಸಲು ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿರಿ. ಇದರಿಂದ ಒಡೆದ ತುಟಿಗಳು ಬೇಗ ಸರಿಹೋಗುತ್ತವೆ, ಅವುಗಳ ಕಪ್ಪುಬಣ್ಣ ದೂರಾಗುತ್ತದೆ.

ಒಡೆದ ಹಿಮ್ಮಡಿಗಳು

ಒಡೆದ ಹಿಮ್ಮಡಿಗಳು ಕೆಟ್ಟದಾಗಿ ಕಂಡುಬರುವುದು ಮಾತ್ರವಲ್ಲದೆ, ಅದರಿಂದ ನೋವು ಹೆಚ್ಚಿ ಕೆಲವೊಮ್ಮೆ ರಕ್ತ ಜಿನುಗುವುದೂ ಉಂಟು. ಇದು ಚಳಿ ತೀವ್ರ ಹೆಚ್ಚಿರುವ ಪ್ರದೇಶಗಳಲ್ಲಿ ದಟ್ಟವಾಗಿ ಕಾಡುತ್ತದೆ.

ಇದರ ನಿವಾರಣೆಗಾಗಿ ನಿಯಮಿತವಾಗಿ ಅದರ ಕ್ಲೀನಿಂಗ್‌, ಸ್ಕ್ರಬಿಂಗ್‌, ಮಾಯಿಶ್ಚರೈಸಿಂಗ್‌ ಇತ್ಯಾದಿ ಮಾಡಿ. ಇದಕ್ಕಾಗಿ ನೀವು ಸೆಲೂನ್‌ಗೆ ಹೋಗಿ ಇಂಟೆನ್ಸ್ ಮಾಯಿಶ್ಚರೈಸಿಂಗ್‌ ಪೆಡಿಕ್ಯೂರ್‌ ಸಹ ಮಾಡಿಸಬಹುದು. ಇದರಿಂದ ಪಾದದ ಮಾಂಸಖಂಡಗಳಿಗೆ ಆರಾಮ ದೊರಕುತ್ತದೆ. ಪೆಡಿಕ್ಯೂರ್‌ ಚರ್ಮದಲ್ಲಿ ರಕ್ತ ಪ್ರವಾಹ ಹೆಚ್ಚಿಸಿ, ಚರ್ಮಕ್ಕೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೆ, ನಿಯಮಿತವಾಗಿ ಪೆಟ್ರೋಲಿಯಂ ಜೆಲ್ಲಿ, ಫುಟ್‌ ಕ್ರೀಂ ಹಚ್ಚುವುದರಿಂದ ಒಡೆದ ಹಿಮ್ಮಡಿಗಳು ಸರಿಹೋಗುತ್ತವೆ. ಜೊತೆಗೆ ಮಣ್ಣು, ಧೂಳಿನಿಂದ ತಪ್ಪಿಸಲು ಶೂ, ಚಪ್ಪಲಿ ಜೊತೆ ಅಗತ್ಯ ಸಾಕ್ಸ್ ಧರಿಸಿರಿ.

ಕೈ, ಕಾಲು, ಮಂಡಿ, ಮೊಣಕೈಗಳ ರಕ್ಷಣೆ

ಚಳಿಗಾಲದಲ್ಲಿ ಇವು ಎಂದಿನಂತಿರದೆ ತುಸು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅದರ ಮೇಲೆ ನಿಂಬೆ, ಜೇನುತುಪ್ಪ ಹಚ್ಚಿ ತಿಕ್ಕುವುದರಿಂದ ಬಣ್ಣ ಎಷ್ಟೋ ತಿಳಿಯಾಗುತ್ತದೆ, ಆರ್ದ್ರತೆಯೂ ಕೂಡುತ್ತದೆ.

- ಕೆ. ಕಾಮಾಕ್ಷಿ

ಅಗತ್ಯ ಕಿವಿಮಾತು

ನಿಯಮಿತ ಸಮಯದ ಗಡುವಿನ ಮಧ್ಯೆ ನೀರು, ದ್ರವ ಪದಾರ್ಥಗಳನ್ನು ಪದೇಪದೇ ಸೇವಿಸುವುದರಿಂದ ಚರ್ಮದ ಆರ್ದ್ರತೆ ಉಳಿಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ