ಮಾತೃತ್ವ ಹಲವು ತಪ್ಪು ಕಲ್ಪನೆಗಳನ್ನು ಥಳಕು ಹಾಕಿಕೊಂಡಿದೆ. ತಾಯಿಯಾದ ಬಳಿಕ ಆಹಾರ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬುದು ಇದರಲ್ಲಿ ಪ್ರಮುಖವಾದುದು. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುವ ಶೃತಿಗೆ ಹೆರಿಗೆಯ ಬಳಿಕ ತನ್ನ ತೂಕ ಹೆಚ್ಚಬಾರದು ಎಂಬ ಅಪೇಕ್ಷೆ ಇತ್ತು. ವೈದ್ಯರ ಸಲಹೆಯ ಮೇರೆಗೆ ಆಕೆ ಹೆರಿಗೆಯಾದ 8 ವಾರಗಳ ಬಳಿಕ ದಿನ 2 ಕಿಮೀನಷ್ಟು ನಡೆಯತೊಡಗಿದಳು. ಕೆಲವು ಪ್ರಕಾರದ ವ್ಯಾಯಾಮಗಳನ್ನು ಕೂಡ ಮಾಡತೊಡಗಿದಳು.

ಅಜ್ಜಿ ಕಾಲದ ಡಯೆಟ್‌ ಬದಲು ವೈದ್ಯರ ಸಲಹೆಯ ಮೇರೆಗೆ ಆರೋಗ್ಯಕರ ಆಹಾರ ಸೇವನೆ ಮಾಡತೊಡಗಿದಳು. ಅದರಲ್ಲಿ ಪೋಷಕಾಂಶದ ಪ್ರಮಾಣ ಜಾಸ್ತಿ ಹಾಗೂ ಕೊಬ್ಬಿನಂಶ ಕಡಿಮೆ ಇತ್ತು. ಹೆರಿಗೆ ಕೋಣೆಗೆ ಹೋಗುವ ತನಕ ಆಕೆ ಆಸ್ಪತ್ರೆಯ ಕೊಠಡಿಯಲ್ಲಿ ಸುತ್ತಾಡುತ್ತಿದ್ದಳು.

ಶೃತಿಯ ಪ್ರಯತ್ನಕ್ಕೆ ಫಲ ಸಿಕ್ಕಿತು. ಆಕೆಗೆ ಸಹಜ ಹೆರಿಗೆಯಾಯಿತು. ಆ ಸಂದರ್ಭದಲ್ಲಿ ಆಕೆಯ ದೇಹ ತೂಕ 78 ಕಿಲೋ ಗ್ರಾಂ ಆಗಿತ್ತು. ಹೆರಿಗೆಯ ಬಳಿಕ ಆಕೆ ಪುನಃ  ವೈದ್ಯರ ಸಲಹೆಯಂತೆ ಆರೋಗ್ಯಕರ ಆಹಾರ ಸೇವಿಸತೊಡಗಿದಳು. ಅದರಿಂದಾಗಿ ಆಕೆ ತೂಕ 78 ರಿಂದ 56ರ ತನಕ ಬಂತು.ಈ ಬಗ್ಗೆ ಶೃತಿ ಹೇಳುತ್ತಾರೆ, ``ಹೆರಿಗೆಯ ಸಮಯದಲ್ಲಿ ತೂಕ ಹೆಚ್ಚಾಗುತ್ತದೆ. ಆದರೆ ಅದನ್ನು ಮೊದಲಿನಿಂದಲೇ ನಿರ್ವಹಿಸಿಕೊಳ್ಳುತ್ತಾ ಹೋದರೆ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸುಲಭ. ಮೆಟ್ರೊ ಸಿಟಿಗಳಲ್ಲಿ ಮಹಿಳೆಯರಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಇಲ್ಲಿ ಮಹಿಳೆಯರಿಗೆ ಹೆಚ್ಚು ಎಕ್ಸ್ ಪೋಶರ್‌ ದೊರೆಯುತ್ತಿದೆ. ಇಂತಹದರಲ್ಲಿ ಅವಳು ಅನ್‌ಫಿಟ್‌ ಆಗಿರಲು ಇಷ್ಟಪಡುವುದಿಲ್ಲ. ಆದಷ್ಟು ಬೇಗ ಫಿಟ್‌ ಆಗಿ ಕೆಲಸಕ್ಕೆ ಮರಳಲು ಇಚ್ಛಿಸುತ್ತಾಳೆ. ಈಗ ಅವರಲ್ಲಿ ಗರ್ಭಾವಸ್ಥೆಯ ಭಯ ಕಡಿಮೆಯಾಗುತ್ತಿದೆ. ಅವರು ಮೊದಲಿನಿಂದಲೇ ತಮ್ಮನ್ನು ಚೆನ್ನಾಗಿ ಮ್ಯಾನೇಜ್‌ಮಾಡಿಕೊಳ್ಳುತ್ತಿದ್ದಾರೆ.''

ಮೊದಲು ಹಾಗೂ ನಂತರದ ಡಯೆಟ್

ಸ್ತ್ರೀ ರೋಗ ತಜ್ಞೆ ಡಾ. ರೇಣುಕಾ ಹೀಗೆ ಹೇಳುತ್ತಾರೆ, ``ಮಹಿಳೆಯೊಬ್ಬಳಲ್ಲಿ ಗರ್ಭಾವಸ್ಥೆ 5ನೇ ವಾರದಿಂದ ಶುರುವಾಗುತ್ತದೆ. ಕೆಲವು ಮಹಿಳೆಯರಲ್ಲಿ ಮೊದಲ ತಿಂಗಳಲ್ಲಿಯೇ ಅದು ಗೋಚರಿಸುತ್ತದೆ. ಎರಡನೇ ತಿಂಗಳಲ್ಲಿ ಕೆಲವು ಮಹಿಳೆಯರಲ್ಲಿ ಮುಂಜಾನೆ ಹೊತ್ತು ನಿಶ್ಶಕ್ತಿ ಎನಿಸುತ್ತದೆ. ಆಗ ಏನೂ ತಿನ್ನಬೇಕೆಂದು ಅನಿಸುವುದಿಲ್ಲ. ಆದರೆ ಅದೇ ಅವಧಿಯಲ್ಲಿ ತಿನ್ನುವುದು ಅವಶ್ಯಕ. ಗರ್ಭಿಣಿಗೆ ಪ್ರತಿ ದಿನ 2500 ದಿಂದ 3000 ಕ್ಯಾಲೋರಿಯ ಅವಶ್ಯಕತೆ ಉಂಟಾಗುತ್ತದೆ. ಅದರಲ್ಲಿ ಶೇ.10 ಪ್ರೋಟೀನ್‌ನಿಂದ, ಶೇ.35 ಕೊಬ್ಬು ಅಂದರೆ ಎಣ್ಣೆ, ತುಪ್ಪ ಹಾಗೂ ಬೆಣ್ಣೆಯಿಂದ ಹಾಗೂ ಶೇ.55 ಕಾರ್ಬೋಹೈಡ್ರೇಟ್‌ನಿಂದ ದೊರೆಯಬೇಕು.''

ಗರ್ಭಾವಸ್ಥೆಯ 2ನೇ ಹಾಗೂ 3ನೇ ತಿಂಗಳಲ್ಲಿ ಕೇವಲ 300 ಕ್ಯಾಲೋರಿ ಹಾಗೂ 15 ರಿಂದ 20 ಗ್ರಾಂ ಪ್ರೋಟೀನ್‌ನ ಅವಶ್ಯಕತೆ ಉಂಟಾಗುತ್ತದೆ. ಕ್ಯಾಲೋರಿಯ ಅವಶ್ಯಕತೆ ಗರ್ಭಿಣಿಯ ದೇಹ ತೂಕ ಹಾಗೂ ದೈಹಿಕ ಶ್ರಮಕ್ಕನುಗುಣವಾಗಿ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಊಟದಲ್ಲಿ ತರಕಾರಿ, ಹಣ್ಣು, ಕಾಳುಗಳು ಮತ್ತು ಪ್ರೋಟೀನ್‌ ಇರಬೇಕು.

ಪ್ರತಿದಿನ 4 ಚಮಚಕ್ಕಿಂತ ಹೆಚ್ಚು ಎಣ್ಣೆ ಬಳಸಬೇಡಿ. ಮೂರೂ ಹೊತ್ತಿನ ಆಹಾರದಲ್ಲಿ ಯಾವುದಾದರೊಂದು ಹಾಲಿನ ಉತ್ಪನ್ನ ಇರುವಂತೆ ನೋಡಿಕೊಳ್ಳಿ. ದೇಹದಲ್ಲಿ ತೇವಾಂಶ ಕಾಪಾಡಿಕೊಂಡು ಹೋಗಲು ದಿನಕ್ಕೆ 8-10 ಗ್ಲಾಸ್‌ ನೀರು ಸೇವನೆ ಅತ್ಯವಶ್ಯ. ಗರ್ಭಾವಸ್ಥೆಯಲ್ಲಿ 3-4 ಗಂಟೆಗಳಿಗೊಮ್ಮೆ ಸಮತೋಲಿತ ಆಹಾರ ಸೇವಿಸಿ. ನಡುನಡುವೆ ಲಘು ಆಹಾರ ಸೇವಿಸಿ. ಈ ಅವಧಿಯಲ್ಲಿ ಯಾವುದೇ ಉಪವಾಸದ ವ್ರತ ಮಾಡಬೇಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ