ಚಳಿಗಾಲದಲ್ಲಿ ನೀವು ಯಥೇಚ್ಛವಾಗಿ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಅವಧಿಯಲ್ಲಿ ಪಚನ ವ್ಯವಸ್ಥೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಅವಧಿಯಲ್ಲಿ ಡ್ರೈಫ್ರೂಟ್ಸ್ ಹಾಗೂ ನಟ್ಸ್ ನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹುದು. ಹೆಚ್ಚಿನ ಆಹಾರ ಸೇವನೆಯಿಂದ ಈ ದಿನಗಳಲ್ಲಿ ಸಾಕಷ್ಟು ವ್ಯಾಯಾಮ ಮಾಡುವ ಅವಶ್ಯಕತೆ ಉಂಟಾಗುತ್ತದೆ. ಆರೋಗ್ಯ ಪ್ರಜ್ಞೆಯಿಂದಿರುವ ಯುವ ಜನಾಂಗದವರಿಗೆ ಈ ಕಾಲ ಸವಾಲಿನಿಂದ ಕೂಡಿದುದಾಗಿರುತ್ತದೆ. ಚಳಿಗಾಲದಲ್ಲಿ ವ್ಯಾಯಾಮ ಮಾಡಿ ದೇಹವನ್ನು ಶಕ್ತಿಯುತಗೊಳಿಸುವುದು ಅತ್ಯವಶ್ಯಕ. ಜೊತೆಗೆ ನೀವು ಸೇವಿಸುವ ಆಹಾರ ಹೇಗಿರಬೇಕೆಂದರೆ, ಅದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೂ ದೇಹಕ್ಕೆ ಪರಿಪೂರ್ಣ ಕ್ಯಾಲೋರಿ ದೊರಕಬೇಕು.

khichdi-recipe-dal-khichdi-recipe-moong-dal-khichdi-kichadi-recipe-2-696x927

 

ಚಳಿಗಾಲದ ಡಯೆಟ್‌ : ಈ ಹವಾಮಾನದಲ್ಲಿ ದೇಹದಲ್ಲಿನ ದಣಿವು ಹಾಗೂ ಆಲಸ್ಯ ದೂರಗೊಳಿಸಲು, ದಿನವಿಡೀ ಸ್ಛೂರ್ತಿ ಹಾಗೂ ಶಕ್ತಿ ಕಾಯ್ದುಕೊಂಡು ಹೋಗಲು ಯುವಜನರು ಡಯೆಟ್‌ ಚಾರ್ಟ್‌ ಮೇಲೆ ಗಮನಹರಿಸಬೇಕು. ದೇಹಕ್ಕೆ ಶಕ್ತಿ ದೊರಕುವಂತಹ ಹಾಗೂ ಚುರುಕಿನಿಂದ ಇರಲು ಸಾಧ್ಯವಾಗುವಂತಹ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು.

IB190602_190602163432760_SM388535

 

ಬ್ರೇಕ್ಫಾಸ್ಟ್ : ಬೆಳಗಿನ ಉಪಾಹಾರ ಶಕ್ತಿಯುತ ಆಗಿರಬೇಕು. ಉಪಾಹಾರದಲ್ಲಿ ಮೊಟ್ಟೆಯೊಂದಿಗೆ, ಉಪ್ಪಿಟ್ಟು, ಸ್ಯಾಂಡ್ ವಿಚ್‌, ದೋಸೆ ಮುಂತಾದವುಗಳನ್ನು ಸೇವಿಸಿ. ಪ್ರತಿದಿನ ಉಪಾಹಾರದ ಬಳಿಕ ಕೆನೆರಹಿತ 1 ಗ್ಲಾಸ್‌ ಬಿಸಿ ಹಾಲು ಕುಡಿಯಲು ಮರೆಯಬೇಡಿ. ಇವೆಲ್ಲದರ ಜೊತೆಗೆ 1 ಪ್ಲೇಟ್‌ ಫ್ರೂಟ್ಸ್ ಅಥವಾ ವೆಜಿಟೆಬಲ್ ಸಲಾಡ್‌ ನಿಮ್ಮ ಉಪಾಹಾರವನ್ನು ಪರಿಪೂರ್ಣಗೊಳಿಸುತ್ತವೆ. ಉಪಾಹಾರ ಸ್ವಲ್ಪ ಭಾರ ಎನಿಸಿದರೂ ತಪ್ಪೇನಿಲ್ಲ.

91363_3000x2000

 

ಮಧ್ಯಾಹ್ನಕ್ಕೆ : ಊಟದಲ್ಲಿ ಹಸಿರು ತರಕಾರಿಗಳು, ಚಪಾತಿ, ತಾಜಾ ಮೊಸರು ಇಲ್ಲವೇ ಮಜ್ಜಿಗೆ, ಸಿಪ್ಪೆ ಸಹಿತ ಧಾನ್ಯಗಳು, ಅನ್ನ, ಸೂಪ್‌ ಹಿತಕರವಾಗಿರುತ್ತದೆ. ಊಟದಲ್ಲಿ ಹಸಿರು ಚಟ್ನಿ ಆಹಾರದಲ್ಲಿನ ಮಲ್ಟಿ ವಿಟಮಿನ್‌ನ ಕೊರತೆಯನ್ನು ನೀಗಿಸುತ್ತದೆ.

BEETROOTBENEFITS-1202x1620

 

ಡೆಲೀಶಿಯಸ್ಡಿನ್ನರ್‌ : ಚಳಿಗಾಲದ ರಾತ್ರಿಯಲ್ಲಿ ಬೇಗ ಆಹಾರ ಸೇವನೆ ಮಾಡಿ. ಮಧ್ಯಾಹ್ನಕ್ಕಿಂತ ರಾತ್ರಿಯ ಊಟ ಭಾರ ಎನಿಸದಂತೆ ನೋಡಿಕೊಳ್ಳಿ. ಅನ್ನ ಬೇಳೆ ಸೇವಿಸಬಹುದು. ಮಲಗುವ ಮುಂಚೆ 2-3 ಗಂಟೆ ಪೂರ್ವ ಊಟ ಮುಗಿಸಿ. ಮಲಗುವ ಮುಂಚೆ ಅರಿಶಿನ ಅಥವಾ ಶುಂಠಿ ಬೆರೆಸಿದ 1 ಗ್ಲಾಸ್‌ ಬಿಸಿ ಹಾಲು ಕುಡಿಯಿರಿ.

ನಿರೋಗಿಯಾಗಿರುವ ಟಿಪ್ಸ್

ಕೆಲವು ಸುಲಭ ಹಾಗೂ ಮನೆ ಉಪಾಯಗಳನ್ನು ಅನುಸರಿಸುವುದರ ಮೂಲಕ ನಾವು ಆರೋಗ್ಯದಿಂದಿರಬಹುದು. ಚಳಿಗಾಲ ಶುರುವಾಗುತ್ತಿದ್ದಂತೆ ಕೆಮ್ಮು, ಶೀತ ಹಾಗೂ ನೆಗಡಿ ಬರಬಹುದು. ಸಾಮಾನ್ಯವಾಗಿ ಜನರು ರೋಗ ಬಂದ ಬಳಿಕ ತಮ್ಮ ಆಹಾರ ಹಾಗೂ ಇತರೆ ಚಟುವಟಿಕೆಗಳಲ್ಲಿ ಬದಲಾವಣೆ ತಂದುಕೊಳ್ಳಲು ನೋಡುತ್ತಾರೆ. ರೋಗ ಬರುವ ಮುನ್ನವೇ ಹವಾಮಾನಕ್ಕನುಸಾರ ಆಹಾರ ಸೇವನೆ ಮಾಡಬೇಕು. ಏಕೆಂದರೆ ಚಳಿಗಾಲದಲ್ಲಿ ದೇಹ ಆರೋಗ್ಯದಿಂದ ಇರಬೇಕು ಹಾಗೂ ನಿರೋಗಿ ಆಗಿರಬೇಕು.

ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸು ವಿಧಾನಗಳು ಬಹು ಸುಲಭವಾಗಿವೆ. ಸಾಕಷ್ಟು ನಿದ್ರೆ ಮಾಡಿರಿ ಹಾಗೂ ಆಹಾರ ವಿಧಾನವನ್ನು ಸರಿಯಾಗಿಟ್ಟುಕೊಳ್ಳಿ. ಚಳಿಗಾಲದಲ್ಲಿ ಬೇರೆ ಬೇರೆ ಪ್ರಕಾರದ ಪೋಷಕಾಂಶಗಳು ಹಾಗೂ ಗಿಡಮೂಲಿಕೆಗಳ ಸೇವನೆಯಿಂದ ನಿಮ್ಮನ್ನು ನೀವು ಆರೋಗ್ಯಕರ ಹಾಗೂ ಹಲವು ಬಗೆಯ ವೈರಾಣು ರೋಗಗಳಿಂದ ರಕ್ಷಿಸಿಕೊಳ್ಳಬಹುದು. ಈ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿಡುವಂತಹ ಆಹಾರಗಳ ಅವಶ್ಯಕತೆ ಇರುತ್ತದೆ. ಒಂದು ವೇಳೆ ನಿಮಗೆ ಆಸ್ತಮಾ, ಮಧುಮೇಹ, ಅತಿರಕ್ತದೊತ್ತಡದಂತಹ ಸಮಸ್ಯೆಗಳಿದ್ದರೆ, ಚಳಿಗಾಲದಲ್ಲಿ ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನಕೊಡಿ. ಚಳಿಗಾಲದಲ್ಲಿ ಆರೋಗ್ಯದಿಂದಿರಲು ನಿಮ್ಮ ಆಹಾರದಲ್ಲಿ ವಿಶೇಷ ಪ್ರಕಾರದ ಹಣ್ಣುಗಳು ಹಾಗೂ ತರಕಾರಿಗಳನ್ನು ಬಳಸಿ ರೋಗಗಳಿಂದ ದೂರ ಇರಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ