ಮನೆಯ ಸ್ವಚ್ಛತೆ ನೀವು ಮಾಡಿಯೇ ಇರುತ್ತೀರಿ. ಆದರೆ ಅನೇಕ ಸಣ್ಣ ಸಣ್ಣ ವಸ್ತುಗಳು, ಜಾಗ ನಿಮ್ಮ ಕಣ್ಣಿಗೆ ಬೀಳದೇ ಹೋಗುತ್ತವೆ. ಅಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಅನೇಕ ರೀತಿಯ ಬ್ಯಾಕ್ಟೀರಿಯಾಗಳಿವೆ. ಇವನ್ನು ದೂರ ಮಾಡಲು ಪ್ರತಿದಿನ ಸ್ವಚ್ಛತೆಗೆ ವಿಶೇಷ ಗಮನ ಕೊಡಬೇಕು. ಇದಕ್ಕೆ ಚಿಂತಿಸುವ ಅಗತ್ಯವೇನಿಲ್ಲ. ಮನೆಯ ಎಲ್ಲ ಜಾಗಗಳನ್ನು ಬ್ಯಾಕ್ಟೀರಿಯಾ ಫ್ರೀ ಆಗಿಡುವ ಸುಲಭ ವಿಧಾನಗಳನ್ನು ನಾವು ತಿಳಿಸುತ್ತೇವೆ. ಅವನ್ನು ಅನುಸರಿಸಿ ನೀವು ಹಾಗೂ ನಿಮ್ಮ ಕುಟುಂಬ ಹೇಗೆ ಹ್ಯಾಪಿ ಹ್ಯಾಪಿಯಾಗಿ ಹೆಲ್ದಿ ಲೈಫ್‌ ಲೀಡ್‌ ಮಾಡಬಹುದೆಂದು ನೋಡಿ.

Untitled-2

  1. ಕಿಚನ್‌ನಲ್ಲಿ ಸಿಂಕ್‌ನ್ನು ಸ್ವಚ್ಛಗೊಳಿಸಲು ಸಾಬೂನು, ನೀರು ಅಥವಾ ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೆನ್ಸರ್‌ ಉಪಯೋಗಿಸುವುದು ಉತ್ತಮ. ಬರೀ ನೀರಿನಿಂದ ಬ್ಯಾಕ್ಟೀರಿಯಾ ಸಾಯುವುದಿಲ್ಲ. ಅವನ್ನು ಸಾಯಿಸಲು ಬ್ಲೀಚ್‌ನೊಂದಿಗೆ ಅಗತ್ಯ ಕ್ಲೆನ್ಸರ್ ಉಪಯೋಗಿಸಬೇಕು.
  2. ಸಿಂಕ್‌ನ್ನು ಬ್ಯಾಕ್ಟೀರಿಯಾ ಫ್ರೀ ಆಗಿಡಲು ವಾರದಲ್ಲಿ ಕನಿಷ್ಠ 2 ಬಾರಿ 1 ಚಮಚ ಬ್ಲೀಚ್‌ ನೀರಿನಲ್ಲಿ ಬೆರೆಸಿ ಉಂಡೆ ಮಾಡಿ ಸಿಂಕ್‌ನ್ನು ಸ್ಕ್ರಬ್‌ ಮಾಡಿ. ಕಿಚನ್‌ನ ಕೊಳೆಯಲ್ಲಿ ನಿಯಮಿತವಾಗಿ 1 ಕಪ್‌ ವಿನಿಗರ್‌ ಹಾಕುವುದರಿಂದ ಬ್ಯಾಕ್ಟೀರಿಯಾ ನಾಶವಾಗುತ್ತದೆ.
  3. ಕಿಚನ್‌ನಲ್ಲಿ ಉಪಯೋಗಿಸುವ ವುಡನ್‌ ಕಟಿಂಗ್‌ ಬೋರ್ಡ್‌ ಪ್ಲಾಸ್ಟಿಕ್‌ ಕಟಿಂಗ್‌ ಬೋರ್ಡ್‌ಗಿಂತ ಹೆಚ್ಚು ಸುರಕ್ಷಿತವೆಂದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಏಕೆಂದರೆ ವುಡನ್‌ ಬೋರ್ಡ್‌ ಮೇಲೆ ಬ್ಯಾಕ್ಟೀರಿಯಾ 3 ನಿಮಿಷಗಳ ಒಳಗೆ ಸಾಯುತ್ತವೆ. ಆದರೆ ಪ್ಲಾಸ್ಟಿಕ್‌ ಬೋರ್ಡ್‌ನಲ್ಲಿ ಬ್ಯಾಕ್ಟೀರಿಯಾ ರಾತ್ರಿಯಿಡೀ ಇರುತ್ತವೆ ಹಾಗೂ ಅವುಗಳ ಸಂಖ್ಯೆ ಸತತವಾಗಿ ಹೆಚ್ಚುತ್ತಿರುತ್ತದೆ. ಮರದಲ್ಲಿ ಬ್ಯಾಕ್ಟೀರಿಯಾ ಸಾಯುವ ವಿಶೇಷತೆ ಇದ್ದು ಪ್ಲಾಸ್ಟಿಕ್‌ನಲ್ಲಿ ಇರುವುದಿಲ್ಲ.
  4. ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಬಾಥ್‌ ರೂಮ್ ನ ನೆಲದಲ್ಲಿ ಇರುವಷ್ಟು ಬ್ಯಾಕ್ಟೀರಿಯಾ ಟಾಯ್ಲೆಟ್‌ ಸೀಟ್‌ನಲ್ಲಿಯೂ ಇರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಫ್ಲಶ್‌! ಏಕೆಂದರೆ ಫ್ಲಶ್‌ ಮಾಡುವಾಗ (ಶೌಚಕ್ಕೆ ಸಂಬಂಧಿಸಿದ) ಸೂಕ್ಷ್ಮ ಫ್ಯಾಕ್ ಅಂಶ ಗಾಳಿಯಲ್ಲಿ ಹರಡಿ ನೆಲದ ಮೇಲೆ ಬೀಳುತ್ತದೆ. ಅಲ್ಲಿನ ತೇವ ಅವನ್ನು ಬ್ಯಾಕ್ಟೀರಿಯಾ ರೂಪದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಫ್ಲಶ್‌ ಮಾಡುವಾಗೆಲ್ಲ ಟಾಯ್ಲೆಟ್‌ ಸೀಟ್‌ನ ಮುಚ್ಚಳ ಹಾಕಿ.
  5. ಹ್ಯಾಂಡ್‌ ಟವೆಲ್‌ನ್ನು ಪ್ರತಿ 2 ದಿನಕ್ಕೊಮ್ಮೆ ಬದಲಿಸಿ. ಅದನ್ನು ಡಿಟರ್ಜೆಂಟ್‌ನಿಂದ ಒಗೆದ ನಂತರ 1 ನಿಂಬೆರಸ ಬೆರೆಸಿದ 1 ಬಕೆಟ್‌ ನೀರಿನಲ್ಲಿ 15 ನಿಮಿಷ ನೆನೆಸಿಡಿ. ನಂತರ ಅದನ್ನು ಹಿಂಡಿ ಒಣಗಿಸಿ.
  6. ಬಾಥ್‌ ರೂಮ್ ನ ಕಾರ್ಪೆಟ್‌ ಅಲ್ಲದೆ ಬಾಗಿಲಿನ ಚಿಲಕ, ವಾಶ್‌ ಬೇಸಿನ್‌, ನಲ್ಲಿ, ಶವರ್‌, ಬಾಥ್‌ ಟಬ್‌, ಬಕೆಟ್‌ ಇತ್ಯಾದಿಗಳನ್ನು ದಿನ ಸ್ವಚ್ಛಗೊಳಿಸಿ. ಅದಕ್ಕೆ ಗ್ಲಾಸ್‌ ಕ್ಲೀನ್‌ ಮತ್ತು ವಿನಿಗರ್‌ ಉಪಯೋಗಿಸಿ.
  7. ಬಾಥ್‌ ರೂಮ್ ನ ಕಾರ್ಪೆಟ್‌ನ್ನು ಕೀಟಾಣುರಹಿತವಾಗಿಡಲು ವಾರಕ್ಕೊಮ್ಮೆ ಬ್ಲೀಚ್‌ಯುಕ್ತ ಕ್ಲೆನ್ಸರ್‌ ಉಪಯೋಗಿಸಿ ರಗ್‌ಗಳನ್ನು ಸ್ವಚ್ಛವಾಗಿ ಒಣಗಿಸಿ ಇಡಿ. ಏಕೆಂದರೆ ತೇವದಲ್ಲಿ ಕೀಟಾಣುಗಳು ಬೇಗನೆ ಉತ್ಪತ್ತಿಯಾಗುತ್ತವೆ.
  8. ಮನೆಯಲ್ಲಿ ದುರ್ವಾಸನೆ ಇದ್ದರೆ ಬೇಕಿಂಗ್‌ ಸೋಡ ಉಪಯೋಗಿಸಿ. ದುರ್ವಾಸನೆ ದೂರವಾಗುತ್ತದೆ. ಏಕೆಂದರೆ ಬೇಕಿಂಗ್‌ಸೋಡ ದುರ್ವಾಸನೆ ಹೀರಿಕೊಳ್ಳುತ್ತದೆ. ಒಮ್ಮೊಮ್ಮೆ ಕಾರ್ಪೆಟ್‌ನಲ್ಲೂ ತೇವಾಂಶ ಉತ್ಪನ್ನವಾಗುತ್ತದೆ. ಆಗ ಬೇಕಿಂಗ್‌ ಸೋಡ ಸಿಂಪಡಿಸಿ ರಾತ್ರಿಯೆಲ್ಲಾ ಬಿಟ್ಟು ಬೆಳಗ್ಗೆ ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ.
  9. ಗಾಳಿಯಲ್ಲಿರುವ ಸೂಕ್ಷ್ಮ ಕೀಟಾಣುಗಳನ್ನು ಕೊಲ್ಲಲು 2-3 ತೊಟ್ಟು ಲವಂಗದಿಂದ ತಯಾರಿಸಿದ ಎಸೆನ್ಶಿಯಲ್ ಆಯಿಲ್‌ನ್ನು ಬೆರೆಸಿ ಸಿಂಪಡಿಸಿ. ನೀಮ್ ಆಯಿಲ್ ‌ಕೂಡ ಬ್ಯಾಕ್ಟೀರಿಯಾ ದೂರವಿಡಲು ಸಹಕಾರಿ. 1 ದೊಡ್ಡ ಚಮಚ ನೀವ್‌ ಆಯಿಲ್‌ನ್ನು 1 ಕಪ್ ನೀರಿನಲ್ಲಿ ಬೆರೆಸಿ ಕಿಚನ್‌ ಮತ್ತು ಬಾಥ್‌ ರೂಮಿನ ಸ್ವಚ್ಛತೆಗೆ ಉಪಯೋಗಿಸಬಹುದು.

Untitled-1

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ