ಸಕ್ಕರೆ ರಹಿತ ಆಹಾರ ನಮ್ಮನ್ನು ಕೇವಲ ಗಂಭೀರ ರೋಗಗಳಿಂದಷ್ಟೇ ರಕ್ಷಿಸುವುದಿಲ್ಲ, ಅದು ತೂಕ ಕಡಿಮೆ ಮಾಡಿಕೊಳ್ಳಲು ಕೂಡ ನೆರವಾಗುತ್ತದೆ. ಆದರೆ ಅಂತಹ ಆಹಾರ ಸೇವನೆ ಶುರು ಮಾಡುವ ಮುಂಚೆ ಕೆಲವು ಸಂಗತಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

ಏನಿದು ಶುಗರ್ಫ್ರೀ ಆಹಾರ?

ಶುಗರ್‌ಫ್ರೀ ಆಹಾರದ ಅರ್ಥ ಅದರಲ್ಲಿ ಅಗತ್ಯಕ್ಕಿಂತ ಹೆಚ್ಚು ಅಥವಾ ಅದರಲ್ಲಿ ಅಡಕವಾಗಿರುವ ಸಕ್ಕರೆಯ ಸೇವನೆ ನಿಲ್ಲಿಸುವುದು. ಇದರಲ್ಲಿ ಕಾರ್ಬೋಹೈಡ್ರೇಟ್‌ ಕೂಡ ಸೇರ್ಪಡೆಗೊಂಡಿದೆ. ಪ್ರತಿದಿನ 350 ಕ್ಯಾಲೋರಿಗಿಂತ ಹೆಚ್ಚು ಶುಗರ್‌ ಸೇವನೆ ಮಾಡುವುದರಿಂದ ಮಧುಮೇಹ, ಬೊಜ್ಜು ಹಾಗೂ ಹೃದ್ರೋಗದ ಅಪಾಯ ಹೆಚ್ಚು. ಇದರ ಹೊರತಾಗಿ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಅಂಶ ಸೇವನೆ ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಪ್ರತಿಯೊಂದು ಬಗೆಯ ಸಕ್ಕರೆಯ ಸೇವನೆ ನಿಲ್ಲಿಸುವುದೇ ಶುಗರ್‌ಫ್ರೀ ಆಹಾರ ಎಂದು ಬಹಳಷ್ಟು ಜನ ಯೋಚಿಸುತ್ತಾರೆ. ಅದು ಹಾಗಲ್ಲ. ಕಾಳು ಹಾಗೂ ಹಣ್ಣುಗಳ ಪ್ರಮಾಣ ಕಡಿಮೆಗೊಳಿಸಬೇಕೇ ಹೊರತು ಪೂರ್ತಿ ನಿಲ್ಲಿಸುವುದಲ್ಲ.

ಇದು ಹೇಗೆ ಕೆಲಸ ಮಾಡುತ್ತದೆ?

ಶುಗರ್‌ಫ್ರೀ ಆಹಾರದಿಂದ ಬ್ಲಡ್‌ ಶುಗರ್‌ನಲ್ಲಿ ಆಕಸ್ಮಿಕವಾಗಿ ಬದಲಾವಣೆಗಳು ಆಗುವುದಿಲ್ಲ. ಅದರಲ್ಲಿ ಹೆಚ್ಚು ಗ್ಲೈಸೆಮಿಕ್‌ ಯುಕ್ತ ಆಹಾರ ಪದಾರ್ಥಗಳು ಸೇರ್ಪಡೆಗೊಂಡಿರುತ್ತವೆ. ಅವುಗಳಿಂದಾಗಿ ಬ್ಲಡ್‌ ಶುಗರ್‌ ಹಾಗೂ ಗ್ಲೂಕೋಸ್‌ನ ಮಟ್ಟದ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಕಡಿಮೆ ಗ್ಲೈಸೆಮಿಕ್‌ನಿಂದ ಕೂಡಿದ ಆಹಾರ ಪದಾರ್ಥಗಳು ಪಚನವಾಗಲು ಹೆಚ್ಚು ಕಷ್ಟ. ಅವುಗಳ ಸೇವನೆಯಿಂದ ಮೆಟಬಾಲಿಕ್‌ ರೇಟ್‌ನಲ್ಲಿ ಸುಧಾರಣೆಯಾಗುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ನಿಮ್ಮ ದೇಹದಲ್ಲಿ ಪ್ರೋಟೀನ್‌ ಮತ್ತು ಕೊಬ್ಬಿನಿಂದ ಶಕ್ತಿ ಉತ್ಪನ್ನವಾಗುತ್ತದೆ. ಶುಗರ್‌ಫ್ರೀ ಡಯೆಟ್‌ ಪ್ಲಾನ್‌ ಆಹಾರದಲ್ಲಿ ಹಲವು ಆಹಾರ ಪದಾರ್ಥಗಳನ್ನು ಪರಿಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಕೆಲವನ್ನು ಮಾತ್ರ ಸೇರ್ಪಡೆಗೊಳಿಸಲಾಗುತ್ತದೆ. ಹುಳಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ.

ಏನು ತಿನ್ನಬೇಕು?

ಹೆಚ್ಚು ನಾರಿನಂಶ ಇರುವ ಪದಾರ್ಥಗಳಾದ ಟೊಮೇಟೊ, ಕಂದು ಅಕ್ಕಿ, ಮುಂತಾದವು.

ಆರೋಗ್ಯಕರ ಕೊಬ್ಬು, ಬಾದಾಮಿ, ಆಲಿವ್ ಆಯಿಲ್ ‌ಮುಂತಾದವು.

ಹುಳಿ ಪದಾರ್ಥಗಳು ಅಂದರೆ ಉಪ್ಪಿನಕಾಯಿ, ನಿಂಬೆರಸ, ವಿನಿಗರ್‌, ಟೋಫು.

ಬೇಳೆಗಳು, ಬೀನ್ಸ್, ಮೊಟ್ಟೆ, ಸಾಲ್ಮನ್‌ಫಿಶ್‌ ಮುಂತಾದವು.

ಏನನ್ನು ತಿನ್ನಬಾರದು?

ಜಂಕ್‌ ಫುಡ್‌, ಸಿಹಿ ಪದಾರ್ಥ, ಕ್ಯಾಂಡಿ, ಹಣ್ಣುಗಳ ರಸ.

ರೀಫೈಂಡ್‌ ಆಯಿಲ್‌ನಿಂದ ತಯಾರಿಸಿದ ಪದಾರ್ಥಗಳು.

ಸೋಡಾ ಮತ್ತು ಸಿಹಿ ಪಾನೀಯಗಳು.

ಕಬ್ಬಿನಿಂದ ತಯಾರಿಸಿದ ಸಕ್ಕರೆ ಹಾಗೂ ಟೇಬಲ್ ಶುಗರ್‌

ಶುಗರ್ಫ್ರೀ ಆಹಾರ : ಏನೇನು ಲಾಭ?

ಇದರಿಂದ ತೂಕ ಕಡಿಮೆಯಾಗುತ್ತದೆ. ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ.

ಈ ರೀತಿಯ ಆಹಾರ ಬೊಜ್ಜಿನಿಂದ ರಕ್ಷಿಸುತ್ತದೆ ಹಾಗೂ ಬ್ಲಡ್‌ ಶುಗರ್‌ನ ಮಟ್ಟವನ್ನು ಸಾಮಾನ್ಯವಾಗಿರುತ್ತದೆ. ಬ್ಲಡ್‌ ಶುಗರ್ ಮಟ್ಟದಲ್ಲಿ ಆಕಸ್ಮಿಕವಾಗಿ ಏರಿಳಿತ  ಉಂಟಾಗುವುದಿಲ್ಲ.

ದೀರ್ಘ ಕಾಲದ ತನಕ ಶಕ್ತಿ ದೊರಕಿಸಿ ಕೊಡುತ್ತದೆ. ಸಾಮಾನ್ಯ ಸಕ್ಕರೆ ಸಿಂಪಲ್ ಕಾರ್ಬೋಹೈಡ್ರೇಟ್‌ ಆಗಿರುತ್ತದೆ. ಅದು ಬಹು ಬೇಗನೇ ಪಚನಗೊಳ್ಳುತ್ತದೆ. ಹಾಗೂ ಬಹುಬೇಗ ರಕ್ತದಲ್ಲಿ ವಿಲೀನಗೊಳ್ಳುತ್ತದೆ. ಅದರಿಂದ ಬ್ಲಡ್‌ ಶುಗರ್‌ನ ಮಟ್ಟ ಏರುತ್ತದೆ. ಆದರೆ ಆ ಶರ್ಕರ ಪ್ರಮಾಣ ಚಯಾಪಚಯ ಕ್ರಿಯೆಗೊಳಪಟ್ಟ ಬಳಿಕ ಬ್ಲಡ್‌ ಶುಗರ್‌ ಕಡಿಮೆಯಾಗುತ್ತದೆ. ಶುಗರ್‌ಫ್ರೀ ಪದಾರ್ಥಗಳು ಪಚನಗೊಳ್ಳಲು ಹೆಚ್ಚು ಸಮಯ ತಗಲುತ್ತದೆ. ಇದರಿಂದ ದಿನವಿಡೀ ಬ್ಲಡ್‌ ಶುಗರ್‌ನ ಪ್ರಮಾಣ ಒಂದೇ ರೀತಿಯಲ್ಲಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ