ಗ್ರೀನ್ ಟೀ ಅಂದರೆ ವೇಟ್ ಲಾಸ್. ಹೆಚ್ಚಿನ ಮಹಿಳೆಯರು ಯೋಚಿಸುವುದೇನೆಂದರೆ, ಗ್ರೀನ್ ಟೀ ಸೇವನೆ ಕೇವಲ ತೂಕ ಕಡಿಮೆ ಮಾಡಿಕೊಳ್ಳಲು ಉಪಯೋಗಿಸಲಾಗುತ್ತದೆ ಎಂದು. ಆದರೆ ವಾಸ್ತವ ಸಂಗತಿ ಹಾಗಿಲ್ಲ. ಗ್ರೀನ್ ಟೀ ಕೇವಲ ಸ್ಲಿಮ್ ಆಗಲು ಅಷ್ಟೇ ನೆರವಾಗುವುದಿಲ್ಲ, ಅದು ವೈರಸ್ ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡಲು ಶಕ್ತಿ ನೀಡುತ್ತದೆ.
ಬ್ಯೂಟಿ ಕ್ಲಿನಿಕ್‌ನ ಗುಂಜನ್ ಗೌಡ ಅವರ ಪ್ರಕಾರ, ಗ್ರೀನ್ ಟೀ ಬ್ಯೂಟಿ ಮತ್ತು ಹೆಲ್ತ್ ಗೆ ಒಂದು ರೀತಿಯಲ್ಲಿ ವರದಾನದಂತಿದೆ. ಅದು ಹೇಗೆ ಎಂಬುದನ್ನು ನೋಡಿ.
ಗ್ರೀನ್ ಟೀಯ ಬ್ಯೂಟಿ ಸೀಕ್ರೆಟ್ಸ್ ಆ್ಯಕ್ನೆ ಟ್ರೀಟ್ : ಗ್ರೀನ್ ಟೀಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿರುತ್ತವೆ. ಅವುಗಳಿಂದಾಗಿ ಆ್ಯಕ್ನೆಯ ಸೂಕ್ತ ಚಿಕಿತ್ಸೆ ಸಾಧ್ಯವಾಗುತ್ತದೆ. ಗ್ರೀನ್ ಟೀ ಆ್ಯಕ್ನೆ ಹುಟ್ಟುಹಾಕುವ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡುತ್ತದೆ ಮತ್ತು ಆ್ಯಕ್ನೆಯ ಕೆಂಪು ಕಲೆಗಳನ್ನು ಕಡಿಮೆಗೊಳಿಸುತ್ತದೆ. ಆ್ಯಕ್ನೆಯಿಂದ ಮುಕ್ತಿ ಕಂಡುಕೊಳ್ಳಲು ಒಂದು ಗ್ರೀನ್ ಟೀ ಬ್ಯಾಗ್‌ನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿ. ಆ ನೀರು ತಂಪಾದ ಬಳಿಕ ಟೀ ಬ್ಯಾಗ್‌ನ್ನು ಹೊರತೆಗೆದು ಮುಖಕ್ಕೆ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ. ಹೀಗೆ ನಿಯಮಿತ ಮಾಡುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮ ಗೋಚರಿಸುತ್ತದೆ.
ಬೆಸ್ಟ್ ಸ್ಕ್ರಬ್ : ಮಣ್ಣು ಧೂಳಿನ ಸಂಪರ್ಕಕ್ಕೆ ಬರುವುದರಿಂದ ತ್ವಚೆಯ ರಂಧ್ರಗಳು ಮುಚ್ಚುತ್ತವೆ. ಮುಚ್ಚಿದ ರಂಧ್ರಗಳನ್ನು ತೆರೆಯಲು ಸ್ಕ್ರಬ್ ಮಾಡುವ ಅಗತ್ಯ ಉಂಟಾಗುತ್ತವೆ. ಗ್ರೀನ್ ಟೀ ಒಂದು ಒಳ್ಳೆಯ ಸ್ಕ್ರಬ್ ಆಗಿದ್ದು, ಅದನ್ನು ಒದ್ದೆ ಮಾಡಿ ಗೋಲಾಕಾರದಲ್ಲಿ ಮೆಲ್ಲಮೆಲ್ಲನೆ ಸ್ಕ್ರಬ್ ಮಾಡುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ.
ಅಲರ್ಜಿಗೆ ಚಿಕಿತ್ಸೆ : ಗ್ರೀನ್ ಟೀಯಲ್ಲಿ ಇರುವ ಇಜಿಸಿಜಿ ಪ್ರತಿಯೊಂದು ಬಗೆಯ ತ್ವಚೆಯ ಅಲರ್ಜಿಯಿಂದ ಮುಕ್ತಿ ಕಂಡುಕೊಳ್ಳಲು ನೆರವಾಗುತ್ತದೆ. ತ್ವಚೆಯ ಅಲರ್ಜಿ ಇದ್ದಲ್ಲಿ ಗ್ರೀನ್ ಟೀ ಸೇವನೆ ನಿಮಗೆ ಲಾಭಕರವಾಗಿ ಪರಿಣಮಿಸುತ್ತದೆ.
ಕಣ್ಣಿನ ಸಮಸ್ಯೆಗಳ ನಿವಾರಣೆ : ಗ್ರೀನ್ ಟೀಯಲ್ಲಿ ಟ್ಯಾನಿನ್ ಇರುತ್ತದೆ. ಅದು ಊತ ಮತ್ತು ದಣಿವಿನಿಂದ ಮುಕ್ತಿ ದೊರಕಿಸಿಕೊಳ್ಳಲು ಪರ್ಫೆಕ್ಟ್ ಆಗಿದೆ. ಅದಕ್ಕಾಗಿ ಗ್ರೀನ್ ಟೀ ಬ್ಯಾಗ್‌ನ್ನು ಒದ್ದೆ ಮಾಡಿ 15 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಅದರಿಂದ ಡಾರ್ಕ್ ಸರ್ಕಲ್ಗಳು ಮಂದಾಗುತ್ತವೆ.
ಸನ್ಬರ್ನ್ನಿಂದ ರಕ್ಷಣೆ : ಸನ್‌ಸ್ಕ್ರೀನ್ ಲೇಪಿಸಿಕೊಂಡ ಬಳಿಕ ಸನ್‌ಬರ್ನ್ ಸಮಸ್ಯೆ ನಿವಾರಣೆಯಾಗದಿದ್ದರೆ ನೀರಿನಲ್ಲಿ ಚಹಾದ ಕೆಲವು ಎಲೆಗಳನ್ನು ಹಾಕಿ. ಇದರಿಂದ ಸನ್‌ಬರ್ನ್‌ನಿಂದ ಉಂಟಾಗುವ ತುರಿಕೆ ಹಾಗೂ ಉರಿಯಿಂದ ಮುಕ್ತಿ ದೊರಕುತ್ತದೆ.
ಸ್ಕಿನ್ ಸಮಸ್ಯೆಯಲ್ಲಿ ಪರಿಣಾಮಕಾರಿ : ವಯಸ್ಸು ಹೆಚ್ಚುತ್ತಾ ಹೋದಂತೆ ತ್ವಚೆ ಸಡಿಲವಾಗಿ ಫೈನ್ ಲೈನ್ಲ್ ಹಾಗೂ ಸುಕ್ಕುಗಳು ಉಂಟಾಗುತ್ತವೆ. ಆದರೆ ಗ್ರೀನ್ ಟೀಯ ಆ್ಯಂಟಿ ಏಜಿಂಗ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಈ ತೆರನಾದ ಸಮಸ್ಯೆಗಳನ್ನು ನಿವಾರಿಸಿ ತ್ವಚೆಗೆ ಮೆರುಗು ನೀಡುತ್ತವೆ.