ಗರ್ಭಾವಸ್ಥೆ ಮಹಿಳೆಯೊಬ್ಬಳ ಜೀವನದ ಪ್ರಮುಖ ಘಟ್ಟ. ಒಂದು ವೇಳೆ ನಿಮ್ಮ ಗರ್ಭಾವಸ್ಥೆ ಸಾಮಾನ್ಯವಾಗಿದ್ದರೆ, ಆ ಅವಧಿಯಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ಮುಂದುವರಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಅವಧಿಯಲ್ಲಿ ನೀವು ಹೆಚ್ಚು ಎಚ್ಚರದಿಂದ ಇರಬೇಕಾದುದು ಅತ್ಯವಶ್ಯ. ಕೆಲಸದ ಅವಧಿಯಲ್ಲಿ ಕೆಲವು ಉಪಾಯಗಳನ್ನು ಅನುಸರಿಸುವುದರ ಮೂಲಕ ಈ ಅವಧಿಯನ್ನು ಸಹನೀಯ ಆಗಿಸಿಕೊಳ್ಳಬಹುದು. ಗರ್ಭಾವಸ್ಥೆಯಲ್ಲಿ ಕೆಲಸ ಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಸೂಕ್ತ ಉಪಾಯ ಅನುಸರಿಸುವುದರ ಮೂಲಕ ನೀವು ಈ ಅವಸ್ಥೆಯಲ್ಲಿ ಉದ್ಯೋಗ ಹಾಗೂ ಖಾಸಗಿ ಜೀವನದ ನಡುವೆ ಸೂಕ್ತ ಸಮತೋಲನ ಸಾಧಿಸಬಹುದು.

ಮೊದಲ 3 ತಿಂಗಳು

ಗರ್ಭಾವಸ್ಥೆಯ ಮೊದಲ 3 ತಿಂಗಳಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುತ್ತವೆ. ಈ ಅವಧಿಯಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆಗಳ ಅರ್ಥ ನಿಮಗೆ ದಣಿವಾಗಲಿದೆ ಎಂದು. ಯಾವುದೇ ವಿಶೇಷ ಕಾರಣವಿಲ್ಲದೆ ನೀವು ಅಳುವ  ಸಾಧ್ಯತೆಗಳು ಕೂಡ ಉಂಟು. ಹಾರ್ಮೋನ್‌ ಬದಲಾವಣೆಗಳಿಂದಾಗಿ ನನಗೆ ಈ ರೀತಿ ಆಗುತ್ತಿದೆ ಎಂದು ನಿಮಗೆ ನೀವೇ ಹಾಗೂ ಇತರರಿಗೂ ಅದನ್ನು ಹೇಳಲು ಪ್ರಯತ್ನಿಸುವಿರಿ. ಇದು ನಿಮಗೆ ಸೂಕ್ತ ದಿಸೆಯಲ್ಲಿ ಸಾಗಲು ದಾರಿ ಮಾಡಿಕೊಡುತ್ತದೆ.

ಪೋಷಕ ಆಹಾರಗಳಾದ ತರಕಾರಿ, ಹಣ್ಣು, ಪನೀರ್‌, ಬೇಳೆಕಾಳು, ಸೋಯಾ, ಹಾಲು ಹಾಗೂ ಮೊಟ್ಟೆ ಇವನ್ನು ಸೇವಿಸಿ. ಏಕೆಂದರೆ ಇವು ಉದ್ಯೋಗಸ್ಥರಾಗಿರುವ ಗರ್ಭಿಣಿಯರಿಗೆ ತುಂಬಾ ಸೂಕ್ತ. ಗರ್ಭಿಣಿಯರು ದಿನಕ್ಕೆ ಕನಿಷ್ಠ 4 ಸಲವಾದರೂ ಕ್ಯಾಲ್ಶಿಯಂಯುಕ್ತ ಆಹಾರ ಸೇವಿಸಬೇಕು.

ಆಹಾರ ಹೇಗಿರಬೇಕು?

ಗರ್ಭಿಣಿಯರು ತಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿಯನ್ನು ಸರಿಯಾಗಿ ಕಾಪಾಡಿಕೊಂಡು ಹೋಗಲು ವೈದ್ಯರು ಸೂಚಿಸಿದ ಒಮೇಗಾ 3 ಸಪ್ಲಿಮೆಂಟ್ಸ್ ಸೇವಿಸುವುದು ಅತ್ಯಂತ ಮುಖ್ಯ. ಇವೆಲ್ಲ ಸಂಗತಿಗಳು ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಉಪಯುಕ್ತ. ಪ್ರತಿ 2 ಗಂಟೆಗೊಮ್ಮೆ ಹಣ್ಣುತರಕಾರಿಗಳನ್ನೊಳಗೊಂಡ ಆಹಾರವನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಇರಿ. ಏಕೆಂದರೆ ಹಸಿವು ಆದಾಗ ಅಥವಾ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ವಾಂತಿ ಬರಬಹುದು.

ನೀವು ಗಂಭೀರ ಮಾರ್ನಿಂಗ್‌ ಸಿಕ್‌ನೆಸ್‌ನಿಂದ ಬಳಲುತ್ತಿರುವಿರಾದರೆ, ಅದಕ್ಕೆ ಔಷಧಿಗಳು ಲಭ್ಯವಿವೆ. ಕೆಲವು ನೈಸರ್ಗಿಕ ಉಪಾಯಗಳನ್ನು ಅನುಸರಿಸಬಹುದು. ಇದರ ಹೊರತಾಗಿ ಗರ್ಭಿಣಿಯರು ನಿಯಮಿತವಾಗಿ ಸಾಕಷ್ಟು ನೀರು, ನಿಂಬೆ ಪಾನಕ, ಎಲೆಕ್ಟ್ರಾಲ್ ಕುಡಿದು ದೇಹವನ್ನು ನಿರ್ಜಲೀಕರಣ ಆಗದಂತೆ ತಡೆಯಬಹುದು. ಹಣ್ಣುಗಳು, ರಸ ಅಥವಾ ಸಪ್ಲಿಮೆಂಟ್ಸ್ ನಿಂದ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ `ಸಿ' ದೊರೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಮಲಗುವ ಅಭ್ಯಾಸ ಬದಲಿಸಬೇಕು

ಆರೋಗ್ಯಕರ ದೇಹಕ್ಕೆ ಗರ್ಭಾವಸ್ಥೆ ಎನ್ನುವುದು ಕ್ಲಿಷ್ಟಕರ ಸಮಯ ಎನ್ನಬಹುದು. ಗರ್ಭಾವಸ್ಥೆಯುದ್ದಕ್ಕೂ ನಿಮಗೆ ದಣಿವಿನ ಅನುಭೂತಿ ಆಗಬಹುದು. ಅದರಲ್ಲೂ ವಿಶೇಷವಾಗಿ ಪ್ರಥಮ ಹಾಗೂ ಕೊನೆಯ ತ್ರೈಮಾಸಿಕದಲ್ಲಿ. ನಿಮಗೆ ಸಾಧ್ಯವಾದರೆ ಹಗಲು ಹೊತ್ತು 1-2 ಗಂಟೆ ನಿದ್ರಿಸಿ. ಮೊದಲ ತ್ರೈಮಾಸಿಕದಲ್ಲಿ ಮೂತ್ರಕೋಶದ ಮೇಲೆ ಬೀಳುವ ಒತ್ತಡದ ಅರ್ಥ ನೀವು ಮೇಲಿಂದ ಮೇಲೆ ಮೂತ್ರಕ್ಕೆ ಹೋಗಬೇಕಾಗಿ ಬರುತ್ತದೆ. ಆ ಅವಧಿಯಲ್ಲಿ ನಿದ್ರೆಗೆ ಉಂಟಾದ ಅಡಚಣೆಯನ್ನು ಕಡಿಮೆ ಮಾಡಿಕೊಳ್ಳಲು ಹೆಚ್ಚು ಹೊತ್ತಿನ ತನಕ ನಿದ್ರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ