ಹೀಲ್ ಅಂದರೆ ಎತ್ತರದ ಹಿಮ್ಮಡಿಯ ಚಪ್ಪಲಿ, ಶೂ ಧರಿಸುವುದರಿಂದ ನೀವು ಎತ್ತರವೇನೋ ಕಾಣುತ್ತೀರಿ ಸರಿ. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿಲ್ಲ ತಾನೇ ಎಂದು ಗಮನಿಸುವುದು ಅತ್ಯಗತ್ಯ.

ಹೀಲ್‌ನ ಫ್ಯಾಷನ್‌ ನಿತ್ಯ ನಿರಂತರವಾಗಿದೆ. ಎತ್ತರ ಕಡಿಮೆ ಇರುವ ಮಹಿಳೆಯರು ಹೈಹೀಲ್‌ ಫುಟ್‌ವೇರ್‌ಗಳನ್ನೇ ಆಯ್ಕೆ ಮಾಡುತ್ತಾರೆ. ಏಕೆಂದರೆ ತಾವು ಎತ್ತರವಾಗಿ ಸುಂದರವಾಗಿ ಕಾಣಬೇಕೆನ್ನುವುದೇ ಅವರ ಅಪೇಕ್ಷೆಯಾಗಿರುತ್ತದೆ. ಆದರೆ ಕೆಲವೊಮ್ಮೆ ಅವರು ಹೀಲ್ ಆಯ್ಕೆಯಲ್ಲಿ ತಪ್ಪು ಮಾಡಿಬಿಡುತ್ತಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಹೀಲ್‌ನ ಆಯ್ಕೆ ಫುಟ್‌ವೇರ್‌ ಎಕ್ಸ್ ಪರ್ಟ್‌ ಡಾಟ್‌ಕಾಮ್ ಕಂಪನಿಯ ಡೈರೆಕ್ಟರ್‌ ದೇವೇಂದ್ರ ಹೇಳುವುದೇನೆಂದರೆ, ``ಎತ್ತರ ಹಾಗೂ ತೂಕಕ್ಕನುಗುಣವಾಗಿ ಹೀಲ್‌ನ ಆಯ್ಕೆ ಮಾಡದಿದ್ದರೆ, ಅದು ಒಂದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು.''

ಎತ್ತರ ಕಡಿಮೆ ಇರುವವರು ಯಾವಾಗಲೂ ಹಗುರವಾದ, ಮಧ್ಯಮ ಎತ್ತರದ ಫುಟ್‌ವೇರ್‌ನ್ನು ಆಯ್ಕೆ ಮಾಡಬೇಕು. ಹೆಚ್ಚು ಎತ್ತರವಿರುವವರಿಗೆ ತೆಳ್ಳನೆಯ ಹಾಗೂ ಅಗಲ ತಳದ ಸೋಲ್ ಇರುವ ಶೂ-ಚಪ್ಪಲಿ ಧರಿಸುವ ಆಯ್ಕೆಗಳಿರುತ್ತವೆ. ಸ್ಥೂಲಕಾಯದವರಿಗೆ ಅಗಲ ತಳದ ಸೋಲ್ ಇರುವ ಹೀಲ್ಸ್ ಧರಿಸಲು ದೇವೇಂದ್ರ ಸಲಹೆ ನೀಡುತ್ತಾರೆ.

ಹೀಲ್ಸ್ ಕೂಡ ಅವಶ್ಯ

ಹೀಲ್ಸ್ ಧರಿಸದೇ ಇದ್ದರೆ ಕಾಲುಗಳು ಅತ್ಯಂತ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆ ಅಷ್ಟೆ. ಬಾಲಾಜಿ  ಆ್ಯಕ್ಷನ್‌ ಮೆಡಿಕಲ್ ಇನ್‌ಸ್ಟಿಟ್ಟೂಟ್‌ನ ಸೀನಿಯರ್‌ ಆರ್ಥೋಪೆಡಿಕ್‌ ಹಾಗೂ ಜಾಯಿಂಟ್‌ ರೀಪ್ಲೇಸ್‌ಮೆಂಟ್‌ ಕನ್ಸಲ್ಟೆಂಟ್‌ ಡಾ. ಸುಜಾತಾ ಹೇಳುವುದೇನೆಂದರೆ, ಅತ್ಯಂತ ಫ್ಲ್ಯಾಟ್‌ ಆಗಿರುವ ಚಪ್ಪಲಿ-ಶೂ ಧರಿಸಬಾರದು. ಏಕೆಂದರೆ ಅದರಿಂದ ಹಿಮ್ಮಡಿಯ  ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ನಿಮ್ಮ ಎತ್ತರ ಎಷ್ಟೇ ಇರಬಹುದು. 1.3 ಸೆಂ.ಮೀ. ನಿಂದ 2 ಸೆಂ.ಮೀ. ಎತ್ತರದ ಹೀಲ್ಸ್ ಇರುವ ಚಪ್ಪಲಿ ಶೂ ಧರಿಸುವುದು ಕಾಲುಗಳ ದೃಷ್ಟಿಯಿಂದ ಸುರಕ್ಷಿತ.

ಹೀಲ್ಸ್ ನಲ್ಲಿ ಆಗುತ್ತಿರುವ ಬದಲಾವಣೆ

ಕಾಲಕ್ಕೆ ತಕ್ಕಂತೆ ಎಲ್ಲ ಸಂಗತಿಗಳೂ ಹೇಗೆ ಬದಾಗುತ್ತಿವೆಯೊ, ಅದೇ ರೀತಿ ಫುಟ್‌ವೇರ್‌ ಫ್ಯಾಷನ್‌ ಕೂಡ ಮಗ್ಗಲು ಬದಲಿಸುತ್ತಿದೆ. ಇದರ ಬದಲಾವಣೆಯ ಪರಿಣಾಮ ಎಲ್ಲಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಫುಟ್‌ವೇರ್‌ನ ಹೀಲ್ಸ್ ನಲ್ಲಿಯೇ ಗೋಚರಿಸುತ್ತದೆ.

ಫುಟ್‌ವೇರ್‌ ಎಕ್ಸ್ ಪರ್ಟ್‌ ಡಾಟ್‌ಕಾಮ್ ನ ದೇವೇಂದ್ರ ಈ ಕುರಿತಂತೆ ಚರ್ಚಿಸುತ್ತ, ಮೊದಲು ಫ್ಯಾಷನ್‌ನ್ನು  ಗಮನದಲ್ಲಿಟ್ಟುಕೊಂಡು ಹೀಲ್ಸ್ ನ್ನು ರೂಪಿಸಲಾಗುತ್ತಿತ್ತು. ಆದರೆ ಈಗ ಗ್ರಾಹಕರ ಸೌಕರ್ಯಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ಮೊದಲಿಗಿಂತ ಈಗ ಹೀಲ್ಸ್ ನ ಎತ್ತರ ಹಾಗೂ ಸೋಲ್‌ನ ಅಗಲದ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತದೆ. ಫುಟ್‌ವೇರ್‌ನಲ್ಲಿ ಎಷ್ಟು ಎತ್ತರ ಹೀಲ್‌ ಇರುತ್ತೊ, ಅಷ್ಟೇ ಅಗಲದ ಸೋಲ್ ಕೂಡ ಇರುತ್ತವೆ.

ಸೂಕ್ತವಾಗಿ ಹೊಂದಾಣಿಕೆಯಾಗದ ಹೀಲ್ಸ್ ಧರಿಸುವುದರಿಂದ ಮಂಡಿ, ಹಿಮ್ಮಡಿ ಹಾಗೂ ಸೊಂಟದಲ್ಲಿ ತೊಂದರೆ ಉಂಟಾಗುತ್ತದೆ ಎಂದು ವೈದ್ಯರು ಕಳೆದ ಅನೇಕ ವರ್ಷಗಳಿಂದ ಮಹಿಳೆಯರಿಗೆ ಎಚ್ಚರಿಸುತ್ತಲೇ ಬಂದಿರುತ್ತಾರೆ.

ಅಗಲವಾದ ಹೀಲ್‌ ಕಾಲುಗಳಿಗೇನೋ ಸರಿ, ಆದರೆ ಮಂಡಿಗಳಿಗೆ ಎಳ್ಳಷ್ಟೂ ಸರಿಯಿಲ್ಲ. ಹಾರ್ವರ್ಡ್ ನ ಡಾ. ಕೆಂಗನ್‌ ಪ್ರಕಾರ, ಎತ್ತರದ ಹೀಲ್ ಅದು ಸ್ಥೂಲಕಾಯ ಅಥವಾ ಸಪೂರ ಕಾಯದ ಮಹಿಳೆಯರ ಮಂಡಿ, ಹಿಮ್ಮಡಿ ಹಾಗೂ ಕಾಲುಗಳಲ್ಲಿ ಸಮಸ್ಯೆಯನ್ನುಂಟು ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ