ಮಳೆಗಾಲದಲ್ಲಿ ಕಣ್ಣುಗಳ ಬಗ್ಗೆ ಸರಿಯಾಗಿ ಗಮನಹರಿಸದೇ ಇದ್ದರೆ, ಅವುಗಳಲ್ಲಿ ಹಲವು ಬಗೆಯ ಸಮಸ್ಯೆಗಳು ಉದ್ಭವಿಸಬಹುದು. ಕಣ್ಣುಗಳಲ್ಲಿ ಊತ, ಕೆಂಪಾಗುವಿಕೆ, ಸೋಂಕು ಅವುಗಳಲ್ಲಿ ಮುಖ್ಯವಾಗಿವೆ. ಕಂಜೆಕ್ಟಿವೈಟಿಸ್‌, ಐ ಸ್ಟೈ, ಡ್ರೈ ಐಸ್‌ ಜೊತೆ ಜೊತೆಗೆ ಕಾರ್ನಿಯಲ್ ಅಲ್ಸರ್‌ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಮಳೆಗಾಲದಲ್ಲಿ ಉಂಟಾಗುವ ಕಣ್ಣಿನ ಕೆಲವು ಸಮಸ್ಯೆಗಳೆಂದರೆ :

ಕಂಜೆಕ್ಟಿವೈಟಿಸ್‌ : ಕಣ್ಣಿನಲ್ಲಿ ಒಂದು ಬಗೆಯ ಊತ ಉಂಟಾಗುವುದನ್ನು ಕಂಜೆಕ್ಟಿವೈಟಿಸ್‌ ಎಂದು ಕರೆಯಲಾಗುತ್ತದೆ. ಆ ಕಾರಣದಿಂದ ಕಣ್ಣುಗಳಲ್ಲಿ ಉರಿಯ ಅನುಭವವಾಗುತ್ತದೆ. ಜೊತೆಗೆ ಕಣ್ಣುಗಳಿಂದ ನೀರಿನಂತಹ ದ್ರವ ಒಸರುತ್ತದೆ.

ಕಾರಣ : ಫಂಗಸ್‌ ಅಥವಾ ಈ ವೈರಸ್‌ನ ಸೋಂಕು, ಗಾಳಿಯಲ್ಲಿರುವ ಧೂಳು, ಪರಾಗಕಣ, ಮೇಕಪ್‌ ಉತ್ಪನ್ನಗಳು ಇದಕ್ಕೆ ಕಾರಣವಾಗಬಹುದು.

ಚಿಕಿತ್ಸೆ : ಒಂದು ವೇಳೆ ನೀವು ಕಂಜೆಕ್ಟಿವೈಟಿಸ್‌ನ ತೊಂದರೆಯಿಂದ ಬಳಲುತ್ತಿದ್ದರೆ ಗಾಢವರ್ಣದ ಗ್ಲಾಸೆಸ್‌ ಧರಿಸಿ, ನಿಮ್ಮ ಕಣ್ಣುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ ದಿನಕ್ಕೆ ಕನಿಷ್ಠ 3-4 ಸಲವಾದರೂ ಕಣ್ಣುಗಳಿಗೆ ತಣ್ಣೀರಿನ ಸಿಂಪರಣೆ ಮಾಡಿಕೊಳ್ಳಿ. ತಣ್ಣೀರಿನ ಸಿಂಪರಣೆಯಿಂದ ಕಣ್ಣುಗಳು ರೋಗಾಣು ಮುಕ್ತವಾಗುತ್ತವೆ. ನಿಮ್ಮ ವೈಯಕ್ತಿಕ ಉಪಯೋಗ ಟವೆಲ್‌, ಕೈವಸ್ತ್ರ ಮುಂತಾದವುಗಳನ್ನು ಬೇರಾರಿಗೂ ಉಪಯೋಗಿಸಲು ಕೊಡಬೇಡಿ.

ಒಂದು ವೇಳೆ ಸಾಕಷ್ಟು ಎಚ್ಚರಿಕೆ ವಹಿಸಿದ ಬಳಿಕ ಸೋಂಕು ಹತೋಟಿಗೆ ಬರದೇ ಇದ್ದಲ್ಲಿ ಈಜಲು ಹೋಗುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ. ಕಂಜೆಕ್ಟಿವೈಟಿಸ್‌ ನಿಯಂತ್ರಣಕ್ಕೆ ಬರಲು ಹಲವು ದಿನಗಳೇ ಬೇಕಾಗಬಹುದು. ನೀವು ಯಾರಾದರೂ ನೇತ್ರ ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ ಉಪಾಯವಾಗಿದೆ.

ಕಾರ್ನಿಯಲ್ ಅಲ್ಸರ್‌ : ಕಣ್ಣಿನ ಪಾಪೆಗಳ ಮೇಲ್ಭಾಗದಲ್ಲಿರುವ ತೆಳ್ಳನೆಯ ಪರದೆ ಅಥವಾ ಪದರವನ್ನು `ಕಾರ್ನಿಯಾ' ಎಂದು ಹೇಳಲಾಗುತ್ತದೆ. ಇದರಲ್ಲಿ ಹೂವಿನ ಪೊರೆ ಕಾಣಿಸಿಕೊಂಡಾಗ, ಅದನ್ನು ಕಾರ್ನಿಯಲ್ ಅಲ್ಸರ್‌ ಎನ್ನುತ್ತಾರೆ. ಇದರಿಂದ ಕಂಗಳಲ್ಲಿ ಬಹು ನೋವು ಕಾಣಿಸುತ್ತದೆ. ಒಮ್ಮೊಮ್ಮೆ ಕೀವು ಬಂದು, ದೃಷ್ಟಿ ಮಂಜಾಗುತ್ತದೆ.

ಕಾರಣ : ಬ್ಯಾಕ್ಟೀರಿಯಾ, ಫಂಗಸ್‌, ವೈರಸ್‌ನ ಸೋಂಕು.

ಚಿಕಿತ್ಸೆ : ಇದು ಕಂಗಳಿಗೆ ಸಂಬಂಧಿಸಿದ ಒಂದು ಗಂಭೀರ ಸಮಸ್ಯೆ, ನೇತ್ರ ತಜ್ಞರನ್ನು ಕಂಡು ತಕ್ಷಣ ಚಿಕಿತ್ಸೆ ಪಡೆಯಬೇಕು.

ಡ್ರೈ ಐಸ್‌ : ಈ ಸಮಸ್ಯೆ ಕಾಡಿದಾಗ ಒಂದೇ ಸಮನೆ ಕಣ್ಣೀರು ಜಿನುಗ ತೊಡಗುತ್ತದೆ. ಕೊನೆಗೆ ಅದು ಬತ್ತಿದಂತಾಗಿ ಕಂಗಳು ಡ್ರೈ ಆಗುತ್ತವೆ. ಸಮಯಕ್ಕೆ ಸರಿಯಾಗಿ ಕಂಗಳು ನೀರು ಸುರಿಸುತ್ತಿದ್ದರೆ, ಅವು ಸ್ವಚ್ಛಗೊಂಡು ದೃಷ್ಟಿ ನಿಚ್ಚಳವಾಗಿರುತ್ತದೆ. ಈ ಸಮಸ್ಯೆ ಎಲ್ಲಾ ಋತುಗಳಲ್ಲಿಯೂ ಎದುರಾಗುತ್ತದೆ. ಮಳೆಗಾಲದಲ್ಲಿ ಇದರ ಕಾಟ ಹೆಚ್ಚು.

ಕಾರಣ : ಹೊರಗಿನ ಗಾಳಿ, ಧೂಳು, ಮಾಲಿನ್ಯತೆ ಹೆಚ್ಚಿರುವ ವಾತಾರಣದಲ್ಲಿ ಕೆಲಸ.

ಚಿಕಿತ್ಸೆ : ಇದಕ್ಕೆ ಉತ್ತಮ ಚಿಕಿತ್ಸೆ ಎಂದರೆ ವೈದ್ಯರು ಹೇಳುವ ಐ ಡ್ರಾಪ್ಸ್ ಬಳಕೆ. ಆಗಲೂ ಸಮಸ್ಯೆ ಮುಂದುವರಿದರೆ ನೇತ್ರತಜ್ಞರನ್ನು ಭೇಟಿಯಾಗಿ.

ಐ ಸ್ಟೈ : ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುವ ಕಂಗಳನ್ನು ಕಾಡುವ ಸಮಸ್ಯೆ. ಇದು ಕಣ್ಣಿನ ರೆಪ್ಪೆಗಳ ಮೇಲೆ ಮೂಡುವ ಸಣ್ಣ ಗುಳ್ಳೆಯಾಗಿದ್ದು, ಕ್ರಮೇಣ ಊದುತ್ತಾ ಒಡೆದು, ಒಳಗಿನ ಕೀವು (ತುಸು ರಕ್ತ ಸೇರಿ) ಹೊರಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ