ಹೆರಿಗೆಯ ಬಳಿಕ ಮಹಿಳೆಗೆ ಎದುರಾಗುವ ಅತಿ ದೊಡ್ಡ ಸವಾಲು ಎಂದರೆ, ತನ್ನ ತೂಕ ಕಡಿಮೆ ಮಾಡಿಕೊಳ್ಳುವುದು. ಗರ್ಭಾವಸ್ಥೆಯಲ್ಲಿ ಹೊಟ್ಟೆ ಹಾಗೂ ನಿತಂಬದ ಗಾತ್ರ ತುಂಬಾ ಜಾಸ್ತಿಯಾಗುತ್ತದೆ. ಮತ್ತೆ ಮೊದಲಿನ ಗಾತ್ರಕ್ಕೆ ತನ್ನ ದೇಹದ ಆಕಾರವನ್ನು ತರಲು ಆಕೆ ಹರಸಾಹಸ ಮಾಡಬೇಕಾಗಿ ಬರುತ್ತದೆ.

ಮದುವೆಯಾದ 3-6 ತಿಂಗಳ ಬಳಿಕ ಮಹಿಳೆ ವ್ಯಾಯಾಮ ಮಾಡಬಹುದು. ಆದರೆ ಮಗುವಿಗೆ ಹಾಲೂಡಿಸುವ ತನಕ ವೇಟ್‌ ಲಿಫ್ಟಿಂಗ್‌ ಮತ್ತು ಪುಶ್‌ಅಪ್ಸ್ ಮಾಡಬಾರದು. ಯಾವುದೇ ಬಗೆಯ ವ್ಯಾಯಾಮ ಅಥವಾ ಡಯೆಟಿಂಗ್‌ ಶುರು ಮಾಡುವ ಮುನ್ನ ವೈದ್ಯರಿಂದ ಅವಶ್ಯವಾಗಿ ಸಲಹೆ ಪಡೆದುಕೊಳ್ಳಬೇಕು.

ಸ್ತನ್ಯಪಾನ : ಮಗುವಿಗೆ ಹಾಲು ಕುಡಿಸುತ್ತ ಇರುವುದರಿಂದ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಹಾಲು ಉತ್ಪತ್ತಿ ಆಗುವ ಸಂದರ್ಭದಲ್ಲಿ ಕ್ಯಾಲೋರಿ ಬರ್ನ್‌ ಆಗುತ್ತಿರುತ್ತದೆ. ಯಾವ ಮಹಿಳೆ ತನ್ನ ಮಗುವಿಗೆ ಹಾಲು ಕುಡಿಸುತ್ತಾ ಇರುತ್ತಾಳೋ, ಆಕೆಯ ದೇಹ ತೂಕ ಬಹುಬೇಗ ಕಡಿಮೆಯಾಗುತ್ತದೆ.

ಸಾಕಷ್ಟು ನೀರು ಸೇವನೆ : ನೀವು ನಿಮ್ಮ ಸೊಂಟವನ್ನು ಪುನಃ ತೆಳ್ಳಗಾಗಿರುವಂತೆ ನೋಡ ಬಯಸುವಿರಾದರೆ, ನೀವು ದಿನಕ್ಕೆ ಕನಿಷ್ಠ 3 ಲೀಟರ್‌ನಷ್ಟು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದಲ್ಲಿನ ಕಲ್ಮಶಗಳೆಲ್ಲ ಹೊರಟುಹೋಗಿ, ದೇಹದ ನೀರಿನ ಸಮತೋಲನ ಕಾಯ್ದುಕೊಂಡು ಹೋಗಲು ನೆರವಾಗುತ್ತದೆ. ಇದರ ಹೊರತಾಗಿ ನೀರು ಕುಡಿಯುವುದರಿಂದ ದೇಹದ ಹೆಚ್ಚುವರಿ ಫ್ಯಾಟ್‌ ಕೂಡ ನಿವಾರಣೆಯಾಗುತ್ತದೆ.

ನಿಂಬೆರಸ ಮತ್ತು ಜೇನುತುಪ್ಪದ ಮಿಶ್ರಣ : ಸಾಧಾರಣ ಬೆಚ್ಚಗಿರುವ ನೀರಿನಲ್ಲಿ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹದಲ್ಲಿನ ಕಲ್ಮಶಗಳು ಹೊರಹೋಗುತ್ತವೆ. ಜೊತೆಗೆ ಕೊಬ್ಬು ಕೂಡ ಬರ್ನ್‌ ಆಗುತ್ತದೆ. ಪ್ರತಿಸಲ ಊಟ ತಿಂಡಿಯ ಸೇವನೆಗೂ ಮುಂಚೆ ಇದನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ ಪಚನಶಕ್ತಿ ಸಮರ್ಪಕವಾಗಿರುತ್ತದೆ ಹಾಗೂ ಫ್ಯಾಟ್‌ ಕೂಡ ಬಹುಬೇಗ ಬರ್ನ್‌ ಆಗುತ್ತದೆ.

ಗ್ರೀನ್‌ ಟೀ ಕುಡಿಯಿರಿ : ಗ್ರೀನ್‌ ಟೀಯಲ್ಲಿ ಎಂತಹ ಕೆಲವು ಘಟಕಗಳು ಇರುತ್ತವೆಂದರೆ, ಅವು ಫ್ಯಾಟ್‌ ಬರ್ನ್‌ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತದೆ. ಅದರಲ್ಲಿರುವ ಮುಖ್ಯ ಘಟಕ ಆ್ಯಂಟಿ ಆಕ್ಸಿಡೆಂಟ್‌. ಅದು ದೇಹದ ಚಯಾಪಚಯ ಪ್ರಕ್ರಿಯೆಗಳಿಗೆ ವೇಗ ನೀಡುತ್ತದೆ. ಹಾಗಾಗಿ ಹಾಲು ಹಾಗೂ ಸಕ್ಕರೆಯ ಚಹಾದ ಬದಲಿಗೆ ಗ್ರೀನ್‌ ಟೀ ಸೇವಿಸಿ. ಇದು ಕೇವಲ ಆರೋಗ್ಯಕರ ಪೇಯ ಅಷ್ಟೇ ಅಲ್ಲ, ತೂಕದ ಮೇಲೆ ನಿಯಂತ್ರಣ ಹೇರಲು ನೆರವಾಗುತ್ತದೆ.

ಆರೋಗ್ಯಕರ ಆಹಾರ ಪದಾರ್ಥ ಆಯ್ಕೆ ಮಾಡಿಕೊಳ್ಳಿ : ಕ್ಯಾಂಡಿ, ಚಾಕ್ಲೇಟ್‌, ಕುಕೀಸ್‌, ಕೇಕ್‌, ಫಾಸ್ಟ್ ಫುಡ್‌ನಂತಹ ಪ್ರೊಸೆಸ್ಡ್ ಫುಡ್‌ಗಳನ್ನು ಹೆಚ್ಚು ಕರಿದ ಪದಾರ್ಥಗಳಾದ ಫ್ರೈಡ್‌ ಚಿಕನ್‌ ನೆಗೆಟ್ಸ್ ಗಳಲ್ಲಿ ಹೆಚ್ಚುವರಿ ಕ್ಯಾಲೋರಿ ಮತ್ತು ಸಕ್ಕರೆ ಅಂಶ ಇರುತ್ತದೆ. ಇವೇ ತೂಕ ಹೆಚ್ಚಿಸಲು ಕಾರಣವಾಗುತ್ತದೆ. ಇವುಗಳಲ್ಲಿ ಪೋಷಕಾಂಶಗಳ ಕೊರತೆ ಇರುತ್ತದೆ. ಇವುಗಳ ಬದಲಾಗಿ ಋತುಮಾನದ ಹಣ್ಣುಗಳು, ಸಲಾಡ್‌, ಮನೆಯಲ್ಲಿಯೇ ತಯಾರಿಸಿದ ಸೂಪ್‌ ಮತ್ತು ಹಣ್ಣುಗಳ ರಸ ಸೇವಿಸಿ.

ಈ ಮನೆ ಉಪಾಯಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. ನೀವು ಮಗುವಿಗೆ ಹಾಲೂಡಿಸುತ್ತಿದ್ದರೆ, ನೀವು ಪ್ರತಿದಿನ 1800 ರಿಂದ 2200 ಕ್ಯಾಲೋರಿಯ ಸೇವನೆ ಮಾಡಬೇಕು. ಏಕೆಂದರೆ ಮಗುವಿಗೆ ಸೂಕ್ತ ಪೋಷಣೆ ಸಿಗಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ