ರಿಯಾ ಒಬ್ಬ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದು ಕೆಲಸದಲ್ಲಿರುವ ಕ್ರಿಯಾಶೀಲ ಯುವತಿ. ಕೆಲವು ದಿನಗಳ ಹಿಂದಿನವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಇತ್ತೀಚೆಗೆ ಒಂದು ದಿನ ಅವಳಿಗೆ ಇದ್ದಕ್ಕಿದ್ದಂತೆ ಎದೆಯಲ್ಲಿ ಉರಿ ಉರಿ ಆಯ್ತು. ಊಟದ ನಂತರ ಹೊಟ್ಟೆ ಉಬ್ಬರಿಸಿಕೊಂಡಂತೆ ಆಯ್ತು. ಮತ್ತೆ ಮತ್ತೆ ಟಾಯ್ಲೆಟ್‌ಗೆ ಹೋಗಿಬರುವಂತೆ ಆಯ್ತು. ಈ ಎಲ್ಲದರಿಂದ ಚಿಂತೆಗೊಳಗಾದ ರಿಯಾ, ಮತ್ತೆ ಮತ್ತೆ ಯೋಚಿಸಿದ ಒಂದೇ ವಿಚಾರವೆಂದರೆ, ನಿನ್ನೆ ನಾನು ಅಂಥ ವಿಶೇಷ ಏನು ತಿಂದೆ?

ನಮ್ಮ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ನಾವು ಅದನ್ನು ನಮ್ಮ ಊಟತಿಂಡಿ ಜೊತೆ ಹೋಲಿಸಿ ನೋಡುವುದು ಸಹಜ ವಿಚಾರ. ಆದರೆ ಹೊಟ್ಟೆಯ ಎಲ್ಲಾ ತೊಂದರೆಗಳೂ ಕೇವಲ ಊಟ ತಿಂಡಿಗೆ ಸಂಬಂಧಿಸಿದ್ದು ಮಾತ್ರ ಎಂದು ಬಿಲ್‌ಕುಲ್‌ ತಿಳಿಯಬಾರದು. ಮತ್ತೆ…..? ಅದಕ್ಕೆ ಬ್ಯಾಕ್ಟೀರಿಯಾ ಸಹ ಕಾರಣ ಆಗಬಹುದು.

ಎಂತೆಂಥ ರೋಗಗಳು?

ಅಸಿಡಿಟಿ : ನಮ್ಮ ಜಠರದಲ್ಲಿರುವ ಆ್ಯಸಿಡ್‌ ಆಹಾರವನ್ನು ಜೀರ್ಣಗೊಳಿಸಲು ನೆರವಾಗುತ್ತದೆ. ಆದರೆ ಎಷ್ಟೋ ಸಲ ಈ ಆ್ಯಸಿಡ್‌ ಅಗತ್ಯಕ್ಕಿಂತ ಹೆಚ್ಚಾಗಿ ತಯಾರಾಗಿರುತ್ತದೆ. ಆಗ ಹೊಟ್ಟೆಯಲ್ಲಿ ಆಹಾರ ಕಡಿಮೆ, ಆಮ್ಲವೇ ಜಾಸ್ತಿ ಎಂದಾಗಿಬಿಡುತ್ತದೆ. ಇದರ ಪರಿಣಾಮವೇ ಅಸಿಡಿಟಿ. ಹೆಚ್ಚು ಗಾಢ ಮಸಾಲೆಯುಕ್ತ ಕೊಬ್ಬಿನಂಶದ ಆಹಾರ ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ಇದರ ಹೊರತಾಗಿ ಸಮಯಕ್ಕೆ ಸರಿಯಾಗಿ ಆಹಾರ ಸ್ವೀಕರಿಸದಿದ್ದಾಗಲೂ ಸಹ ಅಸಿಡಿಟಿ ಹೆಚ್ಚುತ್ತದೆ. ಹೆಚ್ಚಿನ ಟೆನ್ಶನ್‌ ಕೂಡ ಅಸಿಡಿಟಿಗೆ ಮೂಲ ಎನ್ನುತ್ತಾರೆ ತಜ್ಞರು.

ಚಿಕಿತ್ಸೆ : ಅಸಿಡಿಟಿಯ ರೋಗಿಗಳು ಬೆಳಗ್ಗೆ ಎದ್ದ ತಕ್ಷಣ ಬರಿ ಹೊಟ್ಟೆಯಲ್ಲಿ ಧಾರಾಳ 2-3 ಲೋಟ ನೀರು ಕುಡಿಯಬೇಕು. ಜೊತೆಗೆ ಊಟ ಆದ ಮೇಲೆ ಬಾಳೆ, ಕರ್ಬೂಜಾ, ಪರಂಗಿಹಣ್ಣು ಅಥವಾ ಸೌತೇಕಾಯಿ ಸೇವಿಸಬೇಕು. ಅಸಿಡಿಟಿಗಂತೂ ಕರ್ಬೂಜಾ ರಾಮಬಾಣ. ಹಾಗೆಯೇ ಪ್ರತಿದಿನ ಎಳನೀರಿನ ಸೇವನೆ ಸಹ ಒಳ್ಳೆಯದು.

ಗ್ಯಾಸ್‌ ಟ್ರಬಲ್ : ಬಹಳ ಹೊತ್ತಿನವರೆಗೂ ಆಹಾರ ಸೇವಿಸದೆ ಹಾಗೆ ಇದ್ದುಬಿಟ್ಟರೆ ಹೊಟ್ಟೆಯಲ್ಲಿ ಗ್ಯಾಸ್‌ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್‌ ತುಂಬಿಕೊಂಡರೆ ಇತರ ಅಂಗಗಳಿಗೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಗ್ಯಾಸ್‌ ಟ್ರಬಲ್ ಕಾಣಿಸಿಕೊಂಡ ತಕ್ಷಣ ಅದಕ್ಕೆ ಚಿಕಿತ್ಸೆ ಪಡೆಯಿರಿ.

ಚಿಕಿತ್ಸೆ : ಗ್ಯಾಸ್‌ ಟ್ರಬಲ್ ಆದಾಗ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುತ್ತಿರಬೇಕು. ಜೊತೆಗೆ ನಿಂಬೆ ಪಾನಕ ಕೂಡ. ಒಂದು ನಿಂಬೆಹಣ್ಣು ಹಿಂಡಿಕೊಂಡು, ಅದಕ್ಕೆ ಅರ್ಧ ಲೋಟ ನೀರು, ತುಸು ಬ್ಲ್ಯಾಕ್‌ ಸಾಲ್ಟ್, 1-2 ಚಿಟಕಿ ಅಡುಗೆ ಸೋಡ ಬೆರೆಸಿ, ಕದಡಿ, ತಕ್ಷಣ ಕುಡಿಯಿರಿ. ಇದಕ್ಕಾಗಿ ಯೋಗಾಭ್ಯಾಸದ ಜನಪ್ರಿಯ ಪವನಮುಕ್ತಾಸನ ಮಾಡುವುದೂ ಒಳ್ಳೆಯದು.

ಮಲಬದ್ಧತೆ : ಕನಿಷ್ಠ ನೀರಿನ ಸೇವನೆಯೇ ಇದಕ್ಕೆ ಮೂಲ. ಮಲಬದ್ಧತೆ ಕಾಡಿದರೆ ಹಸಿವು ಇರುವುದಿಲ್ಲ. ಸಂಡಾಸಿಗೆ ಹೋದಾಗ ಬಲು ಹಿಂಸೆ ಆಗುತ್ತದೆ.

ಚಿಕಿತ್ಸೆ : ಇದರಿಂದ ಪಾರಾಗಲು ಹೆಚ್ಚಾಗಿ ತಾಜಾ ಹಸಿ ತರಕಾರಿ ಸೇವನೆ ಒಳ್ಳೆಯದು. ಅದರಲ್ಲಿನ ನಾರಿನಂಶ ಮಲವಿಸರ್ಜನೆಗೆ ಸಹಕಾರಿ. ಜೊತೆಗೆ ಹಣ್ಣು ಹಂಪಲು, ತೌಡು ಸಹಿತ ಗೋದಿಹಿಟ್ಟು, ಪಾಲಿಶ್‌ ಮಾಡದ ಅಕ್ಕಿ ಸೇವಿಸುತ್ತಿರಬೇಕು.

ವಾಂತಿ : ಮತ್ತೆ ಮತ್ತೆ ವಾಂತಿ ಆಗುವಿಕೆ, ಹೊಟ್ಟೆ ತೊಳೆಸುವಿಕೆ, ನುಲಿಯುವಿಕೆ ಹೊಟ್ಟೆಯಲ್ಲಿ ಏನೋ ಸಮಸ್ಯೆ ಆಗಿದೆ ಎಂಬುದರ ಸೂಚನೆ. ಹೀಗಾದಾಗ ಹೊಟ್ಟೆಯ ಆ ರೋಗದ ಪತ್ತೆಹಚ್ಚಿ ಚಿಕಿತ್ಸೆ ಮಾಡಿಸಬೇಕು. ಇದನ್ನು ನಿರ್ಲಕ್ಷಿಸಿದರೆ ಮುಂದೆ ಅಪಾಯಕಾರಿ ರೋಗಕ್ಕೆ ದಾರಿ ಆಗುತ್ತದೆ.

ಚಿಕಿತ್ಸೆ : ವಾಂತಿ ಹೆಚ್ಚುತ್ತಿರುವಾಗ ಕಾದಾರಿದ ನೀರು, ಗಂಜಿ, ಇಡ್ಲಿ ಮೊದಲಾದ ಲಘು ಆಹಾರ ಮಾತ್ರ ಸೇವಿಸಿ. ಚೆನ್ನಾಗಿ ಕಿವುಚಿದ ಮೃದು ಅನ್ನಕ್ಕೆ ಮೊಸರು ಬೆರೆಸಿ ಸೇವಿಸಬೇಕು. ಪುದೀನಾ ಶರಬತ್ತು ಸಹ ಪರಿಣಾಮಕಾರಿ.

ಭೇದಿ : ಸಾಮಾನ್ಯವಾಗಿ ಸೀಸನ್‌ ಬದಲಾದಾಗ ಭೇದಿ ಆಗುವಿಕೆ ಕಾಣಿಸುತ್ತದೆ. ಜೊತೆಗೆ ಹಳಸಿದ ಆಹಾರ, ಕೊಳೆತ ಪದಾರ್ಥ ಬೆರೆತ ಊಟ ತಿಂಡಿಯೂ ಕಾರಣ. ಇದರಿಂದ ಬಹಳ ಸುಸ್ತು ಉಂಟಾಗುತ್ತದೆ.

ಚಿಕಿತ್ಸೆ : ಹೆಚ್ಚು ಕಾದಾರಿದ ನೀರು, ಬಾರ್ಲಿ ನೀರು ಕುಡಿಯಿರಿ. ಖಾರರಹಿತ ಹೆಸರುಬೇಳೆ ಖಿಚಡಿ ಒಳ್ಳೆಯದು. ಚಪಾತಿ ಬದಲು ಬ್ರೋಕನ್‌ ವೀಟ್‌ ಅನ್ನ ಬಳಸಿರಿ. ಎಲ್ಲದರ ಜೊತೆ ಮೊಸರು ಇರಲಿ. ರವೆ ಗಂಜಿ, ಬಾಳೆಹಣ್ಣು ಸಹ ಇದರ ನಿವಾರಣೆಗೆ ಸಹಾಯಕ. ಕಾಫಿ ಬದಲು ಟೀ ಬೆಟರ್‌.

ಉತ್ತಮ ಆರೋಗ್ಯಕ್ಕಾಗಿ ಉಪಾಯಗಳು

– ಮೊಸರು, ಕಲ್ಲಂಗಡಿ ಹಣ್ಣು, ಕರ್ಬೂಜಾ, ಪಾಲಕ್‌ ಮತ್ತು ಇತರ ಸೊಪ್ಪುಗಳು, ಕ್ಯಾರೆಟ್‌, ಸೇಬು, ಸಿಪ್ಪೆ ಸಮೇತ ಅನ್ಯ ನಾರಿನಂಶ ಇರುವ ಹಣ್ಣು ತರಕಾರಿ ಸೇವಿಸಿ. ಇದರಿಂದ ಕರುಳು ಬ್ಯಾಲೆನ್ಸ್ಡ್ ಆಗಿರುತ್ತದೆ.

– ಆದಷ್ಟೂ ಚಿಂತೆ, ಟೆನ್ಶನ್‌ಗೆ ಒಳಗಾಗಬೇಡಿ. ಇದರಿಂದ ಅಜೀರ್ಣ, ಗ್ಯಾಸ್‌, ಭೇದಿ ಆಗುತ್ತದೆ. ಲಘು ವ್ಯಾಯಾಮ, ವಾಕಿಂಗ್‌, ಯೋಗ ರೂಢಿಸಿಕೊಳ್ಳಿ.

ಮನೆಮದ್ದಿನ ಜೊತೆ ಮತ್ತೊಂದು ಆಯ್ಕೆ

ಹಲವು ದಶಕಗಳಿಂದ ವಿಶ್ವಾಸಾರ್ಹ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಟೊಮಾಫಿಟ್‌ ಬಳಸಿರಿ ಹಾಗೂ ಇದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಬೈ ಬೈ ಹೇಳಿ. ಈ ಔಷಧಿ ನಿಮ್ಮ ಹೊಟ್ಟೆಯನ್ನು ಪರ್ಫೆಕ್ಟ್ ಫಿಟ್‌ ಆಗಿರಿಸುತ್ತದೆ. ಜೊತೆಗೆ ಗ್ಯಾಸ್ಟ್ರೈಟಿಸ್‌ ರೋಗಕ್ಕಂತೂ ಇದು ಅಮೃತ ಸಮಾನ. ಅಸಿಡಿಟಿ, ಹೊಟ್ಟೆ ಉಬ್ಬರ, ಗ್ಯಾಸ್‌, ಅಜೀರ್ಣ, ಹೊಟ್ಟೆ ನೋವು, ಡಯೇರಿಯಾ, ಮಲಬದ್ಧತೆ, ವಾಂತಿಭೇದಿ, ಹುಳಿತೇಗು…. ಇತ್ಯಾದಿ ಎಲ್ಲಾ ರೋಗಗಳಿಂದಲೂ ಇದು ಮುಕ್ತಿ ಕೊಡಿಸುತ್ತದೆ. ಮೊದಲ ಸಲದ ಸೇವನೆಯಿಂದಲೇ ಹೆಚ್ಚಿನ ಲಾಭವಿದೆ. ಡಯಾಬಿಟೀಸ್‌ ರೋಗಿಗಳು ಸಹ ಇದನ್ನು ಸೇವಿಸಬಹುದು ಎಂಬುದು ಪ್ಲಸ್‌ ಪಾಯಿಂಟ್‌, ಏಕೆಂದರೆ ಇದು ಶುಗರ್‌ಫ್ರೀ.

–  ಪ್ರತಿನಿಧಿ

ಎಚ್ಚರಿಕೆ ವಹಿಸುವುದು ಮುಖ್ಯ

– ಪೋಷಕಾಂಶಭರಿತ ಆಹಾರ ಸೇವಿಸಿ, ವ್ಯಾಯಾಮ ಮಾಡಿ.

– ಧೂಮಪಾನ, ಮದ್ಯಪಾನ ನಿಲ್ಲಿಸಿಬಿಡಿ.

– ದೊಡ್ಡ ಕರುಳು, ಲಿವರ್‌ ಕ್ಯಾನ್ಸರ್‌ ಪರೀಕ್ಷೆ ಸಹ ಮಾಡಿಸ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ