ನೈರ್ಮಲ್ಯದಿಂದ ಕೂಡಿದ ಮನೆಯಲ್ಲಷ್ಟೇ ಆರೋಗ್ಯವಂತ ಕುಟುಂಬ ವಾಸಿಸುತ್ತದೆ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಹವಾಮಾನ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಮನೆಯನ್ನು ರೋಗಾಣುಮುಕ್ತವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯ. ಏಕೆಂದರೆ ಅದರ ನೇರ ಪರಿಣಾಮ ಆರೋಗ್ಯದ ಮೇಲಾಗುತ್ತದೆ. ಯಾವುದೇ ಒಂದು ವಿಶೇಷ ದಿನವಷ್ಟೇ ಅಲ್ಲ, ಪ್ರತಿದಿನ ಮನೆಯ ಸ್ವಚ್ಛತೆ ಕಾಯ್ದುಕೊಂಡು ಹೋಗುವುದು ಅತ್ಯವಶ್ಯ.  ಇದರಿಂದ ನೀವು ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು, ವೈರಲ್ ಫ್ಲ್ಯೂ ಮುಂತಾದವುಗಳಿಂದ ದೂರ ಇರಬಹುದಾಗಿದೆ. ಮನೆಯಲ್ಲಿ ಮಕ್ಕಳು ಅಥವಾ ಹಿರಿಯರು ಯಾರಾದರೂ ಇದ್ದರೆ, ಮನೆಯನ್ನು ರೋಗಾಣು ಮುಕ್ತಗೊಳಿಸುವುದು ಅತ್ಯವಶ್ಯಕ. ಇದು ನಿಮ್ಮನ್ನು ವೈದ್ಯರಿಂದ ದೂರ ಇಡಲು ನೆರವಾಗುತ್ತದೆ.

ಇಂಟೀರಿಯರ್‌ ಡಿಸೈನರ್‌ ಸುಜಾತಾ ಹೀಗೆ ಹೇಳುತ್ತಾರೆ, ``ಮನೆಯನ್ನು ರೋಗಾಣು ಮುಕ್ತಗೊಳಿಸುವುದು ಮುಖ್ಯ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಕಾರದ ರೋಗಾಣುಗಳು ನಮ್ಮ ಸುತ್ತಮುತ್ತಲು ಉತ್ಪತ್ತಿಯಾಗುತ್ತಿವೆ. ಅದರಿಂದ ವೈರಲ್ ಫ್ಲ್ಯೂ ಉಂಟಾಗುತ್ತದೆ. ಇವುಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇದ್ದರೆ ಇವು ಪ್ರಾಣಕ್ಕೆ ಆಪತ್ತು ಸಹ ತಂದೊಡ್ಡಬಹುದು.

ಕೆಲವು ಟಿಪ್ಸ್ ಅನುಸರಿಸುವುದರ ಮೂಲಕ ನೀವು ಮನೆಯನ್ನು ರೋಗಾಣು ಮುಕ್ತಗೊಳಿಸಬಹುದು :

ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಮನೆಯನ್ನು ದಿನ ಅಷ್ಟಿಷ್ಟು ಸ್ವಚ್ಛಗೊಳಿಸುವುದರಿಂದ ಮನೆ ಸಂಪೂರ್ಣವಾಗಿ ರೋಗಾಣು ಮುಕ್ತಗೊಳ್ಳಬಹುದು. ನೆಲ ಒರೆಸಲು ಆ್ಯರೋಮಾಯುಕ್ತ ನೀಲಗಿರಿ ತೈಲವನ್ನು ಬೆರೆಸಿ. ಇದರ ಜೊತೆಗೆ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ.

ನೆಲ ಒರೆಸಿದ ಬಟ್ಟೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿ. ಅದರಿಂದ ಅದು ದುರ್ವಾಸನೆ ಮುಕ್ತವಾಗುವುದು.

ಅಡುಗೆಮನೆ ಮತ್ತು ಕೋಣೆಗಳಿಗಾಗಿ ಬೇರೆ ಬೇರೆ ಮಾಪ್‌ಗಳನ್ನು ಇಡಿ. ಅದರಿಂದ ಮನೆ ನಿರ್ಮಲವಾಗಿ ಇರುತ್ತದೆ. ಮನೆ ಸ್ವಚ್ಛಗೊಳಿಸುವ ನೀರಿನಲ್ಲಿ  ಫ್ಲೋರ್‌ ಕ್ಲೀನರ್‌ ಲಿಕ್ವಿಡ್‌ನ್ನು ಬೆರೆಸಿ. ಎಲ್ಲಕ್ಕೂ ಹೆಚ್ಚಿನ ರೋಗಾಣುಗಳು ಉತ್ಪತ್ತಿಯಾಗುವುದು ಕೋಣೆಗಳ ನೆಲದ ಮೇಲೆ.

ಅಡುಗೆಮನೆ ಇದು ಯಾವುದೇ ಮನೆಯ ವಿಶೇಷ ಭಾಗ. ಅಲ್ಲಿ ರೋಗಾಣುಗಳು ಬಹಳ ಸುಲಭವಾಗಿ ಜನ್ಮ ತಳೆಯುತ್ತವೆ. ಇಂತಹ ಸ್ಥಿತಿಯಲ್ಲಿ ಅಡುಗೆ ತಯಾರಿಸಿದ ಬಳಿಕ ಅಡುಗೆಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಊಟ ಮಾಡಿದ ಬಳಿಕ ಮುಸುರೆ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಮನೆಕೆಲಸದವಳು ಸ್ವಚ್ಛಗೊಳಿಸುತ್ತಾಳೆ ಎಂದರೆ ಆ ಪಾತ್ರೆಗಳ ಕೊಳೆ ನೀರನ್ನೆಲ್ಲ ಹೊರಗೆಸೆದು, ಆ ಪಾತ್ರೆಗಳನ್ನು ಸೋಪ್‌ ನೀರಿನಲ್ಲಿ ನೆನೆಸಿಡಿ. ಕೊಳೆ ಪಾತ್ರೆಗಳಲ್ಲಿ ರೋಗಾಣುಗಳು ಬಹುಬೇಗ ಆಕರ್ಷಿತಾಗುತ್ತವೆ.

ಎಲ್ಲಿ ಹೆಚ್ಚು ತೇವಾಂಶ ಇರುತ್ತದೊ ಅಲ್ಲಿ ಬ್ಯಾಕ್ಟೀರಿಯಾ, ಫಂಗಸ್‌ ಮತ್ತು ಇತರೆ ರೋಗಾಣುಗಳು ಬಹುಬೇಗ ಹುಟ್ಟಿಕೊಳ್ಳುತ್ತವೆ. ಅಷ್ಟೇ ಅಲ್ಲ, ಬೇರೆ ಜಾಗಗಳಿಗೂ ಪಸರಿಸುತ್ತವೆ. ತೇವಾಂಶವಿರುವ ಜಾಗ ಸ್ವಚ್ಛಗೊಳಿಸಿದ ಬಳಿಕ ಫ್ಯಾನ್‌ ಹಾಕಿ ತೇವಾಂಶ ದೂರ ಓಡಿಸಿ.

ಹಾಸಿಗೆ ಹಾಗೂ ಟವೆಲ್‌ಗಳನ್ನು ಬಿಸಿನೀರು ಮತ್ತು ಡಿಟರ್ಜೆಂಟ್‌ನಿಂದ ಆಗಾಗ ಸ್ವಚ್ಛಗೊಳಿಸಿ. ಏಕೆಂದರೆ ಅವು ರೋಗಾಣು ಮುಕ್ತವಾಗಿರಬೇಕು.

ಪರದೆ ಮತ್ತು ಫ್ಯಾನ್‌ಗಳನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿ. ಏಕೆಂದರೆ ಅವು ರೋಗಾಣು ಮುಕ್ತವಾಗಿರಬೇಕು. ಇವುಗಳ ಮೇಲೆ ಧೂಳು ಮಣ್ಣು ಬಹುಬೇಗ ಜಮೆಗೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ