ಪ್ರೆಗ್ನೆನ್ಸಿಯಿಂದ ಲ್ಯಾಕ್ಟೇಶನ್‌ವರೆಗಿನ ಸ್ಥಿತಿವರೆಗೂ ತಾಯಿ ಅನೇಕ ದೈಹಿಕ ಹಾರ್ಮೋನ್ ಬದಲಾವಣೆಗಳನ್ನು ಹೊಂದುತ್ತಾಳೆ.
ಇಂಥ ಸಂದರ್ಭದಲ್ಲಿ ಆ ದೇಹಕ್ಕೆ ಎಲ್ಲಾ ಅತ್ಯಗತ್ಯ ಪೋಷಕಾಂಶಗಳು ದೊರಕದಿದ್ದರೆ, ಅವಳ ಆರೋಗ್ಯ ಹದಗೆಟ್ಟೀತು. ಸ್ತ್ರೀರೋಗ ಪ್ರಸೂತಿ ತಜ್ಞರು ಈ ಕುರಿತು ನೀಡುವ ಸಲಹೆಗಳು :
ಗರ್ಭವತಿ ಆದಾಗ ಈ ಸ್ಥಿತಿಯಲ್ಲಿ ಆಕೆ ತನ್ನ ಆರೋಗ್ಯದ ಜೊತೆ ಜೊತೆಗೆ ತನ್ನ ಗರ್ಭಸ್ಥ ಶಿಶುವಿನ ಬಗ್ಗೆಯೂ ಚಿಂತಿತಳಾಗುತ್ತಾಳೆ. ಹಾಗಾಗಿ ಅವಳ ಆಹಾರದಲ್ಲಿ ಈ ಅಂಶಗಳು ಇರಲೇಬೇಕು :
ಫಾಲಿಕ್ ಆ್ಯಸಿಡ್ : ಎಷ್ಟು ಸಾಧ್ಯವೋ ವಿಟಮಿನ್ಸ್ ನಿಮ್ಮ ಆಹಾರದಲ್ಲಿ ಇರಲೇಬೇಕು. ಇದಕ್ಕಾಗಿ ಹಸಿರು ಎಲೆಗಳ ತರಕಾರಿ ಅಂದ್ರೆ ಎಲೆಕೋಸು, ವಿವಿಧ ಸೊಪ್ಪು (ಮುಖ್ಯ ಸಬ್ಬಸಿಗೆ ಸೊಪ್ಪು), ಬೀನ್ಸ್, ಇಡೀ ಕಾಳು, ಹಾಲು, ನಚ್ಸ್ ಹೆಚ್ಚು ಸೇವಿಸಿ. ಎಷ್ಟೋ ಸಲ ಆ ದೇಹಕ್ಕೆ ಇದರ ಪ್ರಮಾಣದ ಎಷ್ಟು ಅಗತ್ಯವಿದೆಯೋ ಅದು ಸಿಗದೆ ಅಪೂರ್ಣ ಎನಿಸುತ್ತದೆ, ಹೀಗಾಗಿ ಫಾಲಿಕ್ ಆ್ಯಸಿಡ್ ಮಾತ್ರೆ ಸೇವಿಸಬೇಕಾಗುತ್ತದೆ. ಮುಖ್ಯ 3-6ನೇ ತಿಂಗಳಲ್ಲಿ ಸೇವಿಸಿ.
ಕ್ಯಾಲ್ಶಿಯಂ : ಇದೊಂದು ಅಪೂರ್ವ ಖನಿಜ, ಇದರಿಂದಾಗಿ ಮಗುವಿನ ಹಲ್ಲುಮೂಳೆ ಗಟ್ಟಿ ಆಗುತ್ತದೆ. ಗರ್ಭವತಿ ಇದನ್ನು ಧಾರಾಳ ಸೇವಿಸದಿದ್ದರೆ ಮಗುವಿಗೆ ಇದರ ಕೊರತೆ ಕಾಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಹಸಿರು ತಾಜಾ ತರಕಾರಿ (ಸಲಾಡ್ ರೂಪದಲ್ಲಿ), ಸೋಯಾ, ಟೋಫು, ನಟ್ಸ್ ಸೇವಿಸಬೇಕು.
ಲಿಕ್ವಿಡ್ : ದೇಹದಲ್ಲಿ ಎಂದೂ ನೀರಿನ ಕೊರತೆ ಕಾಡದಂತೆ ಎಚ್ಚರವಹಿಸಿ. ಇದಕ್ಕಾಗಿ ಧಾರಾಳ ಕಾದಾರಿದ ನೀರು, ಎಳನೀರು, ನೀರಿನಂಶ ಹೆಚ್ಚಿದ ಕಲ್ಲಂಗಡಿ, ಮೂಸಂಬಿ, ಕಿತ್ತಳೆಹಣ್ಣು, ಸೌತೇಕಾಯಿ, ಬೂದುಗುಂಬಳ ಇತ್ಯಾದಿ ಸೇವಿಸಿ.
ಹಾಲಿನ ಉತ್ಪನ್ನಗಳು : ಈ ಸಂದರ್ಭದಲ್ಲಿ ಧಾರಾಳ ಹಾಲು, ಮೊಸರು, ಮಜ್ಜಿಗೆ, ಪನೀರ್ ಇತ್ಯಾದಿ ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾದ ವಿಟಮಿನ್ಸ್, ಕ್ಯಾಲ್ಶಿಯಂ, ಪ್ರೋಟೀನ್ ಧಾರಾಳ ಲಭ್ಯ.
ನಟ್ಸ್ : ಒಮೇಗಾ-3 ಫ್ಯಾಟಿ ಆ್ಯಸಿಡ್ಸ್ ಹಾಗೂ ಇತರ ಹೆಲ್ದಿ ಫ್ಯಾಟ್ಸ್ ನ ಮೂಲ ಸ್ರೋತವಾದ್ದರಿಂದ ಮಗುವಿನ ಮೆದುಳಿನ ವಿಕಾಸದಲ್ಲಿ ಹೆಚ್ಚು ಲಾಭಕಾರಿ. ಹೀಗಾಗಿ ಬಾದಾಮಿ, ಪಿಸ್ತಾ, ಗೋಡಂಬಿ, ಅಖರೋಟ್ ಇತ್ಯಾದಿ ಧಾರಾಳ ಸೇವಿಸಿ.
ಹಣ್ಣು : ಆಯಾ ಋತುವಿನ ಎಲ್ಲಾ ಹಣ್ಣು ಗಳನ್ನೂ ಅಗತ್ಯ ಸೇವಿಸಿ. ಇದರಿಂದ ದೇಹಕ್ಕೆ ಅಗತ್ಯ ಹೈಡ್ರೇಶನ್ ಲಭ್ಯ. ತೀರಾ ಜಾಸ್ತಿ ಬೇಡ.
ಗರ್ಭಾವಸ್ಥೆ ಮತ್ತು ಕಬ್ಬಿಣಾಂಶ ಈ ಮೇಲಿನ ಎಲ್ಲಾ ಪೋಷಕಾಂಶಗಳ ಜೊತೆ ಜೊತೆಗೆ ಗರ್ಭಿಣಿ ಐರನ್ ಪ್ರಮಾಣ ಸೂಕ್ತವಾಗಿ ಹೊಂದಿರಬೇಕಾದುದು ಅತ್ಯಗತ್ಯ. ವಿಶೇಷವಾಗಿ ಗರ್ಭಿಣಿ ಮತ್ತು ಶಿಶುವಿನ ಆರೋಗ್ಯ ಹದಗೆಡದಿರಲು ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶವಿರುವ ಆಹಾರ ಸೇವಿಸೀಬೇಕು.
ಇದರ ಮಹತ್ವವೇನು
ದೇಹದಲ್ಲಿ ಕಬ್ಬಿಣಾಂಶದ ಪಾತ್ರ : ಐರನ್ ರಕ್ತದ ಹಿಮೋಗ್ಲೋಬಿನ್ನಿನ ಪ್ರಧಾನ ಅಂಶ. ಇದು ದೇಹಕ್ಕೆ ಎಲ್ಲೆಡೆ ಆಮ್ಲಜನಕ ಒದಗಿಸಿ, ಹೆಚ್ಚಿನ ಶಕ್ತಿಯನ್ನೂ ನೀಡುತ್ತದೆ. ಇಷ್ಟು ಮಾತ್ರವಲ್ಲ, ಇದು ದೇಹದ ರೋಗ ನಿರೋಧಕ (ಇಮ್ಯುನಿಟಿ) ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರ ಕೊರತೆಯಿಂದ ಸದಾ ಸುಸ್ತು, ಸಂಕಟ ತಪ್ಪಿದ್ದಲ್ಲ. ಪ್ರೆಗ್ನೆನ್ಸಿ ಕಾರಣ ಕೆಳಗಿನ ಈ ರೋಗಗಳು ಕಾಡಬಹುದು.