ಪೀರಿಯಡ್ಸ್ ಸಂದರ್ಭದಲ್ಲಿ ಸಾಮಾನ್ಯವಾಗಿ ಉಂಟಾಗುವ ನೋವಿಗೆ ಮೆನ್‌ಸ್ಟ್ರುಯೆಲ್ ಪೇನ್‌ ಎಂದು ಹೇಳಲಾಗುತ್ತದೆ. ವೈದ್ಯ ಭಾಷೆಯಲ್ಲಿ ಅದನ್ನು ಡಿಸ್ಮೆನೊರಿಯಾ ಎಂದು ಕರೆಯುತ್ತಾರೆ. ಕೆಲವು ಸಲ ಈ ನೋವು ಅತ್ಯಂತ ತ್ರಾಸದಾಯಕವಾಗುವುದೂ ಉಂಟು. ರಕ್ತಸ್ರಾವ ಕಡಿಮೆಯಾದಂತೆ ನೋವು ನಿಧಾನವಾಗಿ ಇಳಿಯುತ್ತದೆ. ನೋವು ಯಾವುದಾದರೂ ಕಾಯಿಲೆಗೆ ಕಾರಣವಾದರೆ ಅದನ್ನು ಸೆಕೆಂಡರಿ ಡಿಸ್ಮೆನೊರಿಯಾ ಎನ್ನುತ್ತಾರೆ.

ಸೆಕೆಂಡರಿ ಡಿಸ್ಮೆನೊರಿಯಾಗೆ ಕೆಲವು ಕಾರಣಗಳಿರಬಹುದು.  ಎಂಡೊಮೆಟ್ರಿಯಾಸಿಸ್‌ ಯೂಟರಿನ್‌ ಫೈಬ್ರಾಯಿಡ್ಸ್ ಮತ್ತು ಸೆಕ್ಶುಯಲಿ ಟ್ರಾನ್ಸ್ಮಿಟೆಡ್‌ ಡಿಸೀಸ್‌ (ಸೆಕ್ಸ್ ಮೂಲಕ ಹರಡುವ  ರೋಗ) ಎಂಡೊಮೆಟ್ರಿಯಾಸಿಸ್‌ ಸಮಸ್ಯೆಯು ಅನುಂಶಿಕವಾಗಿರಬಹುದು. ಒಂದು ಕುಟುಂಬದಲ್ಲಿ ತಾಯಿಗೆ ಈ ಕಾಯಿಲೆ ಇದ್ದರೆ ಅವಳ ಹೆಣ್ಣುಮಕ್ಕಳಲ್ಲಿ ಶೇ.8ರಷ್ಟು ಮಂದಿಗೆ ಇದು ಉಂಟಾಗುವ ಸಾಧ್ಯತೆ ಇರುತ್ತದೆ. ಸೋದರಿಯರಲ್ಲಿ ಶೇ.6ರಷ್ಟು ಮತ್ತು ಚಿಕ್ಕಮ್ಮನ ಮಕ್ಕಳಲ್ಲಿ ಶೇ.7ರಷ್ಟು ಈ ಕಾಯಿಲೆ ಕಂಡುಬರುವ ಭಯ ಇರುತ್ತದೆ. ಮತ್ತೊಂದು ಅಂಶವೆಂದರೆ, ಎಂಡೊಮೆಟ್ರಿಯಾಸಿಸ್‌ನಿಂದ ಪ್ರಭಾವಿತರಾದ ಶೇ.30-40 ರೋಗಿಗಳಲ್ಲಿ ಬಂಜೆತನದ ಸಮಸ್ಯೆಯೂ ಕಂಡುಬರುತ್ತದೆ.

ಮುಟ್ಟು ಸಾಮಾನ್ಯವಾಗಿ 37 ದಿನಗಳ ಅಧಿಯದ್ದಾಗಿರುತ್ತದೆ. ಅದು ಕ್ರಮಬದ್ಧವಾಗಿ ಆಗುವಾಗ ಕೆಲವು ಮಹಿಳೆಯರು ತಮ್ಮ ಪೀರಿಯಡ್ಸ್ ನ ತಾರೀಖನ್ನು ಗೊತ್ತು ಮಾಡಿಕೊಂಡು ಬಿಟ್ಟಿರುತ್ತಾರೆ. ಈ ಕಾಲದಲ್ಲಿ ಕೆಲವರಿಗೆ ಅಧಿಕ ರಕ್ತಸ್ರಾವವಾಗುವುದುಂಟು. ಹದಿಹರೆಯದ ಯುವತಿಯರಲ್ಲಿ ಈ ಸಮಸ್ಯೆಗೆ ಹಾರ್ಮೋನ್‌ ವ್ಯತ್ಯಾಸ ಕಾರಣವಾಗುತ್ತದೆ. ಆದರೆ ಇತರೆ ಮಹಿಳೆಯರಿಗೆ ಇದಕ್ಕೆ ಬೇರೆಯೇ ಕಾರಣಗಳಿರಬಹುದು.

ಅನಿಯಮಿತ ಮುಟ್ಟಿನಿಂದಾಗಿ ಕೂದಲು ಉದುರುವುದು, ತಲೆನೋವು, ಶರೀರದಲ್ಲಿ ಸೆಳೆತ ಮುಂತಾದ ತೊಂದರೆಗಳಾಗಬಹುದು. ಇದಲ್ಲದೆ ಸಿಟ್ಟು, ಕೋಪ ಸಹ ಉಂಟಾಗಬಹುದು. ಆದ್ದರಿಂದ ಮುಟ್ಟು ಕ್ರಮ ತಪ್ಪಿದಾಗ ಉದಾಸೀನ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಕಾರಣಗಳು : ಅತಿಯಾದ ರಕ್ತಸ್ರಾವಕ್ಕೆ ಕೆಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ  ಹಾರ್ಮೋನ್‌ ಬದಲಾವಣೆಯೂ ಒಂದು. ಈ ಹಾರ್ಮೋನ್‌ ಬದಲಾವಣೆ ಯೌವನಾವಸ್ಥೆ, ಗರ್ಭಾವಸ್ಥೆ ಅಥವಾ ರಜೋನಿವೃತ್ತಿಯು ಕಾರಣವಾಗಬಹುದು. ಥೈರಾಯಿಡ್‌ ಸಮಸ್ಯೆಯೂ ಇದಕ್ಕೆ ಮತ್ತೊಂದು ಕಾರಣವಾಗಿರಬಹುದಾಗಿದೆ.

ಲಿವರ್‌ ಈಸ್ಟ್ರೊಜಿನ್‌ ಮತ್ತು ಪ್ರೊಜೆಸ್ಟೆರಾನ್‌ನ ಮೆಟಬಾಲಿಸಮ್ನಿಂದ ಮಾಸಿಕ ಚಕ್ರ ನಿಯಮಿತವಾಗಿರುತ್ತದೆ. ಮದ್ಯಪಾನ ಲಿವರ್‌ನ್ನು ಘಾಸಿಗೊಳಿಸುವುದರಿಂದ ಅದರ ಪ್ರಭಾವ ಮಾಸಿಕ ಚಕ್ರದ ಮೇಲೆ ಉಂಟಾಗುತ್ತದೆ.

ಮುಟ್ಟು ತಡವಾಗಿ ಆಗುವುದು ಅಥವಾ ಆಗದೇ ಇರಲು ಆಹಾರ ಅಥವಾ ಶರೀರದ ತೂಕ ಕಾರಣವಾಗುತ್ತದೆ. ಅಪೌಷ್ಟಿಕ ಆಹಾರ ಅಥವಾ ಅತಿಯಾದ ಶರೀರ ತೂಕದಿಂದಾಗಿ ಹಾರ್ಮೋನ್‌ ಸ್ರಾವದ  ಪ್ರಮಾಣ ಬದಲಾಗುವುದರಿಂದ ಮುಟ್ಟು ಏರುಪೇರಾಗುತ್ತದೆ.

ಇದಲ್ಲದೆ ಥೈರಾಯಿಡ್‌ ಹಾರ್ಮೋನ್‌ಗಳು ಹೆಚ್ಚು ಕಡಿಮೆಯಾಗುವುದೂ ಸಹ ಮುಟ್ಟು ಅನಿಯಮಿತವಾಗಲು ಕಾರಣವಾಗುತ್ತದೆ. ಮಾನಸಿಕ ಒತ್ತಡ ಇದಕ್ಕೆ ಮತ್ತೊಂದು ಕಾರಣ. ನಿಮ್ಮ ರಕ್ತದಲ್ಲಿ ಕಾರ್ಟಿಸೋಲ್‌ನ ಅಂಶ ಹೆಚ್ಚಾಗಿದ್ದರೆ ಮುಟ್ಟು ಬದಲಾಗುತ್ತದೆ. ಕೆಲವರಲ್ಲಿ ಮೆನೊಪಾಸ್‌ ಹತ್ತಿರ ಬಂದಂತೆ ಅದು ಕ್ರಮ ತಪ್ಪುವುದುಂಟು.

ಲಕ್ಷಣಗಳು : ಎಂಡೋಮೆಟ್ರಿಯಾಸಿಸ್‌ನ ಸಾಮಾನ್ಯ ಲಕ್ಷಣವೆಂದರೆ, ಹೊಟ್ಟೆ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಬಂಜೆತನದ ದೂರು ಇರುತ್ತದೆ. ಹೊಟ್ಟೆಯ ಕೆಳಭಾಗದಲ್ಲಿನ ನೋವು ಸಾಧಾರಣವಾಗಿ ಪೀರಿಯಡ್ಸ್ ಅವಧಿಯಲ್ಲಿ ಇರುತ್ತದೆ. ಕೆಲವು ಸಲ ಈ ನೋವು ಪೀರಿಯಡ್ಸ್ ಮೊದಲು ಅಥವಾ ಆಮೇಲೆಯೂ ಬರಬಹುದು. ಕೆಲವು ಮಹಿಳೆಯರಿಗೆ ಶಾರೀರಿಕ ಸಂಪರ್ಕದ ವೇಳೆಯಲ್ಲಿ, ಮೂತ್ರ ವಿಸರ್ಜನೆ ಅಥವಾ ಮಲ ವಿಸರ್ಜನೆಯ ಸಮಯದಲ್ಲಿಯೂ ಈ ನೋವಿನ ಅನುಭವ ಆಗುವುದುಂಟು.

ವಯಸ್ಸು : ಎಂಡೋಮೆಟ್ರಿಯಾಸಿಸ್‌ನ ಸಮಸ್ಯೆಯು ಯೌವನ ಕಾಲದಲ್ಲಿ ಅಂದರೆ ಮುಟ್ಟು ಆರಂಭವಾದಾಗ ಎದುರಾಗುತ್ತದೆ. ಹೆಚ್ಚಿನ ಮಹಿಳೆಯರಲ್ಲಿ  ಇದು 25-30 ವರ್ಷ ವಯಸ್ಸಿನವರಲ್ಲಿ ಕಂಡುಬರುತ್ತದೆ. ಕೆಲವು 11 ವರ್ಷದ ಬಾಲಕಿಯರೂ ಈ ತೊಂದರೆಯನ್ನು ಅನುಭವಿಸುತ್ತಾರೆ. ಮೆನೊಪಾಸ್‌ ಸಮಯದಲ್ಲಿಯೂ ಈ ಸಮಸ್ಯೆ  ಎದುರಾಗಬಹುದು. ಬಹಳ ಕಡಿಮೆ ಮಂದಿಗೆ ಪೋಸ್ಟ್ ಮೆನೋಪಾಸ್‌ ಸಮಯದಲ್ಲಿ ಈ ತೊಂದರೆ ಉಂಟಾಗುತ್ತದೆ.

ಎಚ್ಚರಿಕೆ : ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ನೀವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನವಿರಿಸಬೇಕು. ಹೆಚ್ಚಿನ ತೊಂದರೆಯಾದರೆ, ಮುಖ್ಯವಾಗಿ ಟೀನ್‌ಏಜ್‌ ಹುಡುಗಿಯರಿಗೆ ಈ ಸಮಸ್ಯೆ ಉಂಟಾದರೆ, ಸ್ತ್ರೀರೋಗ ತಜ್ಞರನ್ನೂ ಸಂಪರ್ಕಿಸಿ. ಇಲ್ಲವಾದರೆ ಮುಂದೆ ಅದು ಮತ್ತಷ್ಟು ತೊಂದರೆಗಳಿಗೆ ಕಾರಣವಾಗಬಹುದು.

ಪರಿಣಾಮ : ಎಂಡ್ರೊಮೆಟ್ರಿಯಾಸಿಸ್‌ನಿಂದ ದೈನಂದಿನ ಜೀವನ ಪ್ರಭಾವಕ್ಕೊಳಗಾಗುತ್ತದೆ. ರಕ್ತದ ಕೊರತೆಯಿಂದ ಅನೀಮಿಯಾ ಉಂಟಾಗಬಹುದು. ಭಾರತೀಯ ಮಹಿಳೆಯರು ಹೆಚ್ಚಾಗಿ ಅನೀಮಿಯಾಗೆ ಗುರಿಯಾಗಿರುತ್ತಾರೆ. ಅತಿಯಾದ ರಕ್ತಸ್ರಾವ ಹಾರ್ಮೋನ್‌ ಬದಲಾವಣೆ, ತೂಕ ಹೆಚ್ಚಳ ಮತ್ತು ಗರ್ಭಧಾರಣೆಯ ಅಸಮರ್ಥತೆಗೆ ಕಾರಣವಾಗುತ್ತದೆ.

ಪರಿಹಾರ : ಸಮಸ್ಯೆ ಕಂಡುಬಂದಾಗ ತಜ್ಞರ ಅಭಿಪ್ರಾಯ ಪಡೆಯಬೇಕು. ಹಾರ್ಮೋನ್‌ ಬದಲಾವಣೆಯು ಔಷಧದಿಂದ ಸರಿಯಾಗಬಲ್ಲದು. ಹಾರ್ಮೋನ್‌ ಬದಲಾವಣೆಯಿಲ್ಲದೆ ಅತಿಯಾದ ರಕ್ತಸ್ರಾವಕ್ಕೆ ಫೈಬ್ರಾಯಿಡ್ಸ್, ಇಂಜೆಕ್ಷನ್‌ ಇತ್ಯಾದಿ ಸಹ ಕಾರಣವಾಗಬಲ್ಲದು. ಕ್ಯಾನ್ಸರ್‌ನ ಕಾರಣದಿಂದಲೂ ಸಮಸ್ಯೆ ತಲೆದೋರಿರಬಹುದು.

ಚಿಕಿತ್ಸೆ : ಎಂಡೊಮೆಟ್ರಿಯಾಸಿಸ್‌ನ ಚಿಕಿತ್ಸೆಯು ಔಷಧಿ ಮತ್ತು ಸರ್ಜರಿ ಎರಡರಿಂದಲೂ ಸಾಧ್ಯವಾಗುತ್ತದೆ. ನೋವಿನಿಂದ ಮುಕ್ತವಾಗಲು ಔಷಧಿಗಳನ್ನು ಕೊಡಲಾಗುತ್ತದೆ. ಸರ್ಜರಿಯ ಅವಶ್ಯಕತೆ ಇದ್ದರೆ, ಲ್ಯಾಪ್ರೊಸ್ಕೋಪಿ ಮಾಡಲಾಗುತ್ತದೆ. ಇದರಲ್ಲಿ ಅನೆಸ್ತೇಶಿಯಾ ಕೊಟ್ಟ ನಂತರ ಒಂದು ಚಿಕ್ಕ ಟೆಲಿಸ್ಕೋಪ್‌ನ್ನು ಹೊಟ್ಟೆಗೆ ತಲುಪಿಸಿ ಸರ್ಜರಿಯ ಮೂಲಕ ಸಮಸ್ಯೆಯನ್ನು ನಿವಾರಿಸಲಾಗುತ್ತದೆ. ಈ ಚಿಕಿತ್ಸೆಯ ಉದ್ದೇಶವೆಂದರೆ ನೋವನ್ನು ದೂರ ಮಾಡುವುದರೊಂದಿಗೆ ಬಂಜೆತನಕ್ಕೂ ಮುಕ್ತಿ ದೊರಕಿಸುವುದಾಗಿರುತ್ತದೆ.

ಭರವಸೆ : ಇಂತಹ ಸಮಸ್ಯೆಗಳಿಗೆ ಇನ್‌ವಿಟ್ರೊ ಫರ್ಟಿಲೈಸೇಷನ್‌ (ಐವಿಎಫ್‌) ಪ್ರೊಸೀಜರ್‌ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ. ಮುಖ್ಯವಾಗಿ ಬಂಜೆತನದಿಂದ ಬಳಲುತ್ತಿರುವವರಿಗೆ ಇದು ಬಹಳ ಲಾಭದಾಯಕ. ಐವಿಎಫ್‌ ಟೆಕ್ನಿಕ್‌ನಿಂದ ಲ್ಯಾಬ್‌ನಲ್ಲಿ ಸ್ಪರ್ಮ್ ಮತ್ತು ಎಗ್‌ಗಳನ್ನು ಒಂದುಗೂಡಿಸಿ. ಅದರಿಂದ ಉತ್ಪತ್ತಿಯಾದ ಭ್ರೂಣವನ್ನು ಮಹಿಳೆಯ ಗರ್ಭಕೋಶದೊಳಗೆ ಇರಿಸಲಾಗುತ್ತದೆ.

– ಡಾ. ರಾಧಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ