ಮುಟ್ಟು, ಹುಡುಗಿಯರು ಹಾಗೂ ಮಹಿಳೆಯರಲ್ಲಿ ಉಂಟಾಗುವ ಒಂದು ಸಾಮಾನ್ಯ ಪ್ರಕ್ರಿಯೆ. ಈ ಅವಧಿಯಲ್ಲಿ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆ ಉಂಟಾಗುತ್ತದೆ.
ಅದು ದೈಹಿಕ ಹಾಗೂ ಮಾನಸಿಕ ರೂಪದಲ್ಲಿ ಪ್ರಭಾವ ಬೀರುವ ಕಾರಣದಿಂದ ಅದೇ ಒತ್ತಡಕ್ಕೆ ಕಾರಣವಾಗಬಹುದು. ಬೇರೆ ಕೆಲವು ಕಾರಣಗಳು ಸಹ ಅದಕ್ಕೆ ಹೊಣೆಯಾಗಿರುತ್ತವೆ.
ಅದೆಷ್ಟೋ ಮಹಿಳೆಯರು ಮುಟ್ಟು ಶುರುವಾಗುವ ಮುಂಚೆ ಅಥವಾ ಋತುಸ್ರಾವದ ಸಮಯದಲ್ಲಿ ಎಂತಹ ಸ್ಥಿತಿಯಿಂದ ಸಾಗುತ್ತಾರೆಂದರೆ, ಆಗ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಕೂಡ ಉಂಟಾಗಬಹುದು. ಒತ್ತಡ, ಚಿಂತೆ ಹಾಗೂ ಸಿಡಿಮಿಡಿತನ ಇವು ಜೀವನ ಮತ್ತು ಸಂಬಂಧಗಳ ಮೇಲೂ ಪ್ರಭಾವ ಬೀರಬಹುದು.
ಪೀರಿಯಡ್ಸ್ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಉಂಟಾದರೆ, ಅದನ್ನು ಸಾಮಾನ್ಯ ಸ್ಥಿತಿ ಎಂದು ಹೇಳಲಾಗುತ್ತದೆ. ಪ್ರಿಮೆನ್ ಸ್ಟ್ರುವಲ್ ಸಿಂಡ್ರೋಮ್ ಗೆ ಈಸ್ಟ್ರೋಜನ್ ಪ್ರೊಜೆಸ್ಟರಾನ್ ಹಾರ್ಮೋನುಗಳ ಪ್ರಮಾಣದಲ್ಲಿ ಏರುಪೇರು ಉಂಟಾಗುವುದೇ ಮುಖ್ಯ ಕಾರಣ.
ಸಾಮಾನ್ಯವಾಗಿ ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಒತ್ತಡಗ್ರಸ್ತರಾಗುವ ಸಾಧ್ಯತೆ ಹೆಚ್ಚು. ಅದು ಮುಟ್ಟಿನ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಬಹುದು. ಏಕೆಂದರೆ ಇದೂ ಹಾರ್ಮೋನ್ ರೋಲರ್ ಕೋಸ್ಟರ್ ಆಗಿದ್ದು, ಅದು ಮೆದುಳಿನಲ್ಲಿರುವ ನ್ಯೂರೊಟ್ರಾನ್ಸ್ ಮೀಟರ್ಸ್ ಅದರಲ್ಲೂ ಸೆರೊಟೋನಿನ್ ಮತ್ತು ಡೋಪಾಮೈನ್ ಗಳ ಮೇಲೆ ಪ್ರಭಾವ ಬೀರುತ್ತದೆ. ಅದರಿಂದಾಗಿ ಮನಸ್ಥಿತಿ ಹದಗೆಡುತ್ತದೆ. ಇದರ ಹೊರತಾಗಿ ಯಾವ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ಮೊದಲ ಸಲ ಪೀರಿಯಡ್ಸ್ ಗೂ ಮುಂಚೆ ಹೊಟ್ಟೆಯಲ್ಲಿ ವಿಪರೀತ ನೋವು ಅಥವಾ ರಕ್ತಸ್ರಾವ ಉಂಟಾಗಿರುತ್ತದೋ, ಅವರಿಗೆ ಪ್ರತಿಸಲದ ಮುಟ್ಟಿನ ಮುಂಚೆ ನೋವು ಉಂಟಾಗಬಹುದೆಂಬ ಕಾರಣದಿಂದ ಚಿಂತಿತರಾಗುತ್ತಾರೆ. ಅದೇ ಒತ್ತಡಕ್ಕೆ ಕಾರಣವಾಗಬಹುದು.
ಈ ಲಕ್ಷಣಗಳು ನಿಮ್ಮ ದೈನಂದಿನ ಜೀವನವನ್ನು ಪ್ರಭಾವಿಗೊಳಿಸಬಹುದಾಗಿದೆ. ಅವುಗಳಲ್ಲಿ ಸಿಡಿಮಿಡಿತನ ಅಥವಾ ಕ್ರೋಧದ ಭಾವನೆ, ನಿರಾಸೆ, ಒತ್ತಡ ಅಥವಾ ಚಿಂತೆಯ ಭಾವನೆ ಮೂಡ್ ಸ್ವಿಂಗ್ ಅಥವಾ ಮೇಲಿಂದ ಮೇಲೆ ಅತ್ತುಬಿಡಬೇಕೆಂಬ ಭಾವನೆ ಬಂದುಬಿಡುವುದು, ಯೋಚಿಸಲು ಅಥವಾ ಗಮನ ಕೇಂದ್ರೀಕರಿಸಲು ಸಮಸ್ಯೆ ಉಂಟಾಗುವಿಕೆ, ದಣಿವು ಅಥವಾ ಕಡಿಮೆ ಶಕ್ತಿ, ಹೆಚ್ಚೆಚ್ಚು ತಿನ್ನಬೇಕೆಂಬ ಇಚ್ಛೆ ಉಂಟಾಗುವಿಕೆ, ಭಾವನೆಗಳನ್ನು ಕೇಂದ್ರೀಕರಿಸಲು ಸಮಸ್ಯೆ ಉಂಟಾಗುವಿಕೆ, ದೈಹಿಕ ಲಕ್ಷಣಗಳಾದ ಹೊಟ್ಟೆ ಊದಿಕೊಂಡಂತಾಗುವುದು, ಸ್ತನಗಳು ಮೃದುವಾದಂತೆ ಅನಿಸುವುದು, ತಲೆನೋವು, ಕೀಲುಗಳಲ್ಲಿ ನೋವು ಇವೆಲ್ಲ ಅದರಲ್ಲಿ ಸೇರಿವೆ.
ಹದಿಹರೆಯದವರಿಗೂ ಅತಿ ಹೆಚ್ಚಿನ ಒತ್ತಡದ ಅನುಭವ ಉಂಟಾಗಬಹುದು. ಅವರಿಗೆ ಮಾಂಸಖಂಡಗಳಲ್ಲಿ ಎಳೆತದ ಅನುಭವ, ಹೊಟ್ಟೆನೋವು, ಕೀಲುಗಳಲ್ಲಿ, ಸೊಂಟದಲ್ಲಿ ನೋವು ಹಾಗೂ ದಣಿವು ಉಂಟಾಗಬಹುದು. ಈ ಬದಲಾವಣೆ ಅವರ ಯೌವನ ಕಾಲದಲ್ಲಿ ಉಂಟಾಗುವ ಬದಲಾವಣೆಗೆ ಸಂಬಂಧಪಟ್ಟಿರುತ್ತವೆ.
ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ಹಾರ್ಮೋನುಗಳು ಪೀರಿಯಡ್ಸ್ ಸಂಬಂರ್ಧದಲ್ಲಿ ದುರಸ್ತಿಯ ಕೆಲಸ ಮಾಡುತ್ತವೆ. ಅವುಗಳ ಏರುಪೇರಿನಿಂದಾಗಿ ನಿಮ್ಮ ಹಸಿವು, ಪಚನ ಶಕ್ತಿ ಮತ್ತು ಶಕ್ತಿಯ ಮಟ್ಟದಲ್ಲಿ ಪ್ರಭಾವ ಬೀರಬಹುದು. ಅದರಿಂದ ಮಾನಸಿಕ ಕಾರ್ಯ ವ್ಯವಸ್ಥೆಯ ಮೇಲೂ ಪ್ರಭಾವ ಉಂಟಾಗಬಹುದು. ಪೀರಿಯಡ್ಸ್ ನ ಸಂದರ್ಭದಲ್ಲಿ ಒತ್ತಡ ಮೂಡ್ ಡಿಸಾರ್ಡರ್ ಆಗಿದ್ದು, ಅದರಿಂದ ಪೀರಿಯಡ್ಸ್ ಸಂದರ್ಭದಲ್ಲಿ ಶೇ.5 ರಷ್ಟು ಮಹಿಳೆಯರು ತೊಂದರೆಗೀಡಾಗುತ್ತಾರೆ.