ಮಳೆಗಾಲದಲ್ಲಿ ಮಳೆಯ ತುಂತುರು ಹನಿಗಳು ಮನಸ್ಸಿಗೆ ಖುಷಿ ಕೊಡುತ್ತವೆ. ಈ ಹವಾಮಾನ ಎಷ್ಟು ಆಹ್ಲಾದಕರವಾಗಿರುತ್ತದೊ, ಅದು ಅಷ್ಟೇ ರೋಗ ಹರಡುವಂಥದ್ದಾಗಿರುತ್ತದೆ. ಏಕೆಂದರೆ ಈ ಹವಾಮಾನದಲ್ಲಿ ತಂಪು ಇರುವ ಕಾರಣದಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ಬಹುಬೇಗ ಹುಟ್ಟಿಕೊಳ್ಳುತ್ತವೆ. ಅವು ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸಿ ನಮ್ಮನ್ನು ಸೋಂಕಿಗೀಡು ಮಾಡುತ್ತವೆ.
ಹೀಗಾಗಿ ಈ ಹವಾಮಾನದಲ್ಲಿ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚು ಗಮನಕೊಡುವ ಅಗತ್ಯವಿರುತ್ತದೆ. ಇದರಿಂದ ನಾವು ನಮ್ಮ ಹೆಲ್ದೀ ಈಟಿಂಗ್ ಹ್ಯಾಬಿಟ್ ನಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆ ಜೊತೆಗೆ ರೋಗಗಳಿಂದಲೂ ದೂರ ಇರಲು ಸಾಧ್ಯವಾಗಬೇಕು. ಈ ಕುರಿತಂತೆ ನ್ಯೂಟ್ರಿಶಿನಿಸ್ಟ್ ಡಯೇಟಿಶಿಯನ್ ಶೀಲಾ ಹೀಗೆ ಹೇಳುತ್ತಾರೆ :
ಕಪ್ ಆಫ್ ಸೂಪ್
ಮಕ್ಕಳಿರಲಿ, ದೊಡ್ಡವರಿರಲಿ, ಒಬ್ಬರಿಗೆ ಒಂದು ತರಕಾರಿ ಇಷ್ಟವಾದರೆ, ಇನ್ನೊಬ್ಬರಿಗೆ ಅದು ಇಷ್ಟವಾಗುವುದಿಲ್ಲ. ಹೀಗಾಗಿ ಹಸಿವಾದಾಗ ಫಾಸ್ಟ್ ಫುಡ್ ತಯಾರಿಸಲಾಗುತ್ತದೆ. ಇಲ್ಲಿ ಹೊರಗಿನ ಆಹಾರ ತರಿಸಲಾಗುತ್ತದೆ. ಫಾಸ್ಟ್ ಫುಡ್ ನಲ್ಲಿ ಕ್ಯಾಲೋರಿಸ್, ಸೋಡಿಯಂ ಹಾಗೂ ಅನ್ ಹೆಲ್ದೀ ಫ್ಯಾಟ್ಸ್ ಇರುತ್ತದೆ. ಅದರಲ್ಲಿ ನ್ಯೂಟ್ರಿಷನ್ ಮತ್ತು ಫೈಬರ್ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ನಾವು ಒಂದು ಸಲಕ್ಕೆ ಫಾಸ್ಟ್ ಫುಡ್ ನಿಂದ ಎಷ್ಟು ಕ್ಯಾಲೋರಿಸ್ ತೆಗೆದುಕೊಳ್ಳುತ್ತೇವೆ, ಅದು ನಮಗೆ ಇಡೀ ದಿನದ ಅವಶ್ಯಕತೆಯಾಗಿ ಇರುತ್ತದೆ.
ನಿಮಗೆ ಯಾವಾಗಾದರೂ ಫಾಸ್ಟ್ ಫುಡ್ ತಿನ್ನುವ ಬಯಕೆಯಾದರೆ, ಆಗ ನೀವು ವೆಜಿಟೆಬಲ್ ಸೂಪ್ ಹಾಗೂ ಚಿಕನ್ ಸೂಪ್ ನಿಂದ ನಿಮ್ಮ ಹೊಟ್ಟೆಯನ್ನು ದೀರ್ಘ ಹೊತ್ತಿನ ತನಕ ತುಂಬಿಸಿಡಬಹುದಾಗಿದೆ. ಅದು ನಿಮ್ಮನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ.
ತಿಳಿದಿರಬೇಕಾದ ವಿಚಾರ :
ಒಂದು ಕಪ್ ಚಿಕನ್ ಸೂಪ್ ನಲ್ಲಿರುವ ಪೋಷಕಾಂಶಗಳು : 50 ಗ್ರಾಂ ಚಿಕನ್ ನಲ್ಲಿ 64-70 ಕ್ಯಾಲೋರಿಸ್, 7-8 ಪ್ರೋಟೀನ್ ಹಾಗೂ 1 ಗ್ರಾಂ ವಿಟಮಿನ್.
ಒಂದು ಕಪ್ ಕಾರ್ನ್ ಸೂಪ್ ನಲ್ಲಿರುವ ಪೋಷಕಾಂಶಗಳು : ಅರ್ಧ ಕಪ್ ಕಾರ್ನ್ ನಲ್ಲಿ 70-8 ಕ್ಯಾಲೋರಿಗಳು.
1 ಕಪ್ ಟೊಮೇಟೊ ಸೂಪ್ ನಲ್ಲಿರುವ ಪೋಷಕಾಂಶಗಳು : 70-80 ಕ್ಯಾಲೋರಿಸ್.
ಈ ಸಂಗತಿ ಗೊತ್ತಿರಲಿ : ಹೊರಗಿನ ವೆಜಿಟೆಬಲ್ ಸೂಪ್ ನಲ್ಲಿರುವ ಕ್ಯಾಲೋರಿ ಪ್ರಮಾಣ 150-170.
ಗಮನದಲ್ಲಿಡಿ : ಸೂಪ್ ಯಾವಾಗಲೂ ಮನೆಯಲ್ಲಿಯೇ ತಯಾರಿಸಿದಂಥದ್ದಾಗಿರಬೇಕು. ಏಕೆಂದರೆ ಮಾರುಕಟ್ಟೆಯಲ್ಲಿರು ಸೂಪ್ ನ್ನು ರುಚಿ ಹೆಚ್ಚಿಸಲು ಹಾಗೂ ಅದನ್ನು ಇನ್ನಷ್ಟು ದಟ್ಟಗೊಳಿಸಲು ಅದರಲ್ಲಿ ತರಕಾರಿಗಳ ಪ್ರಮಾಣ ಕಡಿಮೆ ಹಾಗೂ ಬಟರ್ ಹಾಗೂ ಕಾರ್ನ್ ಫ್ಲೋರ್ ಸಾಕಷ್ಟು ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಅದು ರಕ್ತದ ಶರ್ಕರದ ಪ್ರಮಾಣವನ್ನು ಹೆಚ್ಚಿಸುವುದರ ಜೊತೆ ಜೊತೆಗೆ, ಹೃದಯದ ಆರೋಗ್ಯವನ್ನು ಹದೆಗೆಡಿಸುವ ಕೆಲಸ ಮಾಡುತ್ತದೆ.
ಫೈಬರ್ಗೆ ಕಾಳುಗಳ ಸಾಂಗತ್ಯ
ಡಯೆಟ್ ನಲ್ಲಿ ಕಾಳುಗಳು ಸೇರ್ಪಡೆಯಾದರೆ, ನೀವು ರೋಗಗಳಿಂದ ದೂರ ಇರಬಹುದು ಎಂದು ಹೇಳಲಾಗುತ್ತದೆ. ಬ್ರೌನ್ ರೈಸ್, ನವಣೆ, ಜೋಳ, ರಾಗಿ, ಅವಲಕ್ಕಿ ಮುಂತಾದವುಗಳಲ್ಲಿ ನಾರಿನಂಶ ಹೇರಳ ಪ್ರಮಾಣದಲ್ಲಿರುತ್ತದೆ. ಅವು ದೀರ್ಘಕಾಲದ ತನಕ ಹೊಟ್ಟೆ ತುಂಬಿಸಿಡುವ ಕೆಲಸ ಮಾಡುತ್ತದೆ. ಅದರ ಜೊತೆ ಜೊತೆಗೆ ಪಚನ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಇದರಲ್ಲಿ ಪ್ರೊಬಯೋಟಿಕ್ ಕೂಡ ಇದ್ದು, ಅವು ಕರುಳಿನಲ್ಲಿ ಗುಡ್ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ.