ಪುಟ್ಟ ಕಂದಮ್ಮನಿಗೆ ತಾಯಿಯ ಹಾಲು ಉತ್ತಮ ಆಹಾರವಾಗಿರುತ್ತದೆ. ಮಗುವಿಗೆ 6 ತಿಂಗಳು ತುಂಬಿದ ನಂತರ ಅದರ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಂಪೂರ್ಣ ಆಹಾರ ಅವಶ್ಯಕವಾಗುತ್ತದೆ. ಶಿಶುರೋಗ ತಜ್ಞರಾದ ಡಾ. ಆಶಿಶ್‌ ಮಾಥುರ್‌ ಅವರು ಪುಟ್ಟ ಮಕ್ಕಳಿಗೆ ಅಗತ್ಯವಾದ ಸಂಪೂರ್ಣ ಆಹಾರದ ಬಗ್ಗೆ ಹೀಗೆ ಹೇಳುತ್ತಾರೆ,

``ಮಗುವಿಗೆ 6 ತಿಂಗಳಾದಾಗ ಅದಕ್ಕೆ ಪ್ಯಾಕ್ಡ್ ಫುಡ್‌ ಬದಲು ಅನ್ನ, ಬೇಳೆ ಕಟ್ಟು, ತರಕಾರಿ ಸೂಪ್‌, ನುಚ್ಚಿನ ಗಂಜಿ, ಹಣ್ಣುಗಳು ಮುಂತಾದ ಪೌಷ್ಟಿಕ ಆಹಾರವನ್ನು ಕೊಡಬೇಕು. ಕ್ರಮೇಣ ಆಹಾರದ ಪ್ರಮಾಣವನ್ನು ಹೆಚ್ಚಿಸಿ.''

ಆದರೆ ಸಮಯ ಹಾಗೂ ತಿಳಿವಳಿಕೆಯ ಅಭಾವದಿಂದಾಗಿ ಮಕ್ಕಳಿಗೆ ಇವುಗಳನ್ನು ಹೇಗೆ ಕೊಡಬೇಕೆಂಬುದು ಮಹಿಳೆಯರಿಗೆ ಗೊತ್ತಿರುವುದಿಲ್ಲ. ಮಕ್ಕಳು ಪ್ರಾರಂಭದಲ್ಲಿ ಕೊಟ್ಟಿದ್ದನ್ನೆಲ್ಲ ತಿನ್ನುವುದಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಮಕ್ಕಳಿಗೆ ಬೇರೆ ಬೇರೆ ರುಚಿಗಳ ಜ್ಞಾನ ಹೊಂದಲು ಒಂದಿಷ್ಟು ಸಮಯ ಹಿಡಿಯುತ್ತದೆ. ಒಮ್ಮೆ ರುಚಿ ಹತ್ತಿದರೆ ಮಗು ಕೊಟ್ಟಿದ್ದನ್ನು ಸಂತೋಷವಾಗಿ ತಿನ್ನುತ್ತದೆ. ಸ್ವಲ್ಪ ಸಹನೆಯಿಂದಿದ್ದರೆ `ಮಗು ತಿನ್ನುವುದಿಲ್ಲ` ಎಂಬ ದೂರು ಪೋಷಕರಿಂದ ಬರುವುದಿಲ್ಲ.

ಹಣ್ಣುಗಳು

`ಮಕ್ಕಳಿಗೆ ಆಯಾ ಕಾಲದಲ್ಲಿ ದೊರೆಯುವ ಎಲ್ಲ ಹಣ್ಣುಗಳನ್ನು ಕೊಡಿ' ಎಂದು ಡಾ. ಆಶಿಶ್‌ ಮಾಥುರ್‌ ಹೇಳುತ್ತಾರೆ. ಪ್ರಾರಂಭದಲ್ಲಿ ಸುಲಭವಾಗಿ ಮ್ಯಾಶ್‌ ಆಗುವಂತಹ ಬಾಳೆ, ಪರಂಗಿ, ಮಾವು, ಸಪೋಟ ಮುಂತಾದ ಹಣ್ಣುಗಳನ್ನು ಕೊಡಬಹುದು. ಇವುಗಳನ್ನು ತುರಿದು ಅಥವಾ ಮಿಕ್ಸಿಯಲ್ಲಿ ಬ್ಲೆಂಡ್‌ ಮಾಡಬಹುದು. ಮಗು ಈ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡ ಮೇಲೆ ಸೇಬು, ಸೀಬೆ ಮುಂತಾದವನ್ನೂ ಮೆತ್ತಗೆ ಮಾಡಿ ತಿನ್ನಿಸಬಹುದು. ಮಾವು, ಸಪೋಟ, ಮೊದಲಾದ ಹಣ್ಣುಗಳ ಸಿಪ್ಪೆ ತೆಗೆದು ಮ್ಯಾಶ್‌ ಮಾಡಬೇಕು. ಕಿತ್ತಳೆ ದ್ರಾಕ್ಷಿ, ಕರ್ಬೂಜ, ದಾಳಿಂಬೆ ಹಣ್ಣುಗಳನ್ನು ಮಿಕ್ಸಿಗೆ ಹಾಕಿ ಆ ಹಣ್ಣಿನ ರಸವನ್ನು ಕುಡಿಸಬಹುದು. ಕಿತ್ತಳೆ, ಮೂಸಂಬಿ ಮೊದಲಾದ ಸಿಟ್ರಸ್‌ ಹಣ್ಣುಗಳನ್ನು ಹಾಲು ಕುಡಿಸಿದ ಒಂದು ಗಂಟೆಯ ನಂತರವೇ ಕೊಡಿ. 2-3 ಬಗೆಯ ಹಣ್ಣುಗಳನ್ನು ಸೇರಿಸಿಯೂ ಕೊಡಬಹುದು.

ಆಹಾರ

ಪ್ರಾರಂಭದಲ್ಲಿ ಮಗುವಿಗೆ ಗಂಜಿ, ಬೇಳೆ ಕಟ್ಟು, ತರಕಾರಿ ಸೂಪ್‌ಗಳನ್ನು ಕೊಡಬಹುದು. ಅದಕ್ಕೆ ಸ್ವಲ್ಪ ತುಪ್ಪ ಸೇರಿಸುವುದು ಒಳ್ಳೆಯದು. ಅದನ್ನು ತಿನ್ನುವ ಅಭ್ಯಾಸ ಮಾಡಿಕೊಂಡ ಮೇಲೆ ಅಕ್ಕಿ, ಬೇಳೆ, ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ ಮ್ಯಾಶ್‌ ಮಾಡಿ ಕೊಡಬಹುದು. ಮಗುವಿಗೆ ಈ ಸಮಯದಲ್ಲಿ ಕ್ಯಾಲ್ಶಿಯಮ್, ಪ್ರೋಟೀನ್‌ ಮತ್ತು ಐರನ್‌ ಅವಶ್ಯಕತೆ ಇರುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಮಗುವಿಗೆ ಏನೇನು ಕೊಡಬೇಕೆಂಬುದನ್ನು ನಿಶ್ಚಯಿಸಿ. ಸೋಯಾಬೀನ್‌ ಮತ್ತು ಮಶ್‌ರೂಮ್ ನಲ್ಲಿ ಪ್ರೋಟೀನ್‌ ಅಂಶ ಹೆಚ್ಚಾಗಿರುವುದರಿಂದ ಇವನ್ನು ಮಿಕ್ಸ್ ಮಾಡಿ ಅಕ್ಕಿಯ ಜೊತೆ ಸೇರಿಸಿ ಬೇಯಿಸಬಹುದು. ಸೋಯಾಬೀನ್‌ ಚಂಕ್ಸ್ ಪ್ಯಾಕೆಟ್‌ಗಳು ಅಂಗಡಿಯಲ್ಲಿ ದೊರೆಯುತ್ತವೆ. ಇದನ್ನು ಹುರಿದು, ಪುಡಿ ಮಾಡಿಕೊಂಡು ಬೇಳೆಯ ಜೊತೆಯಲ್ಲಿ ಬೇಯಿಸಬಹುದು ಅಥವಾ ಹಾಲು, ಸಕ್ಕರೆ ಸೇರಿಸಿ ಸಿಹಿ ಪದಾರ್ಥವನ್ನಾಗಿ ತಯಾರಿಸಬಹುದು.

ಡ್ರೈ ಫ್ರೂಟ್ಸ್ ನಲ್ಲಿಯೂ ಪ್ರೋಟೀನ್‌ ಮತ್ತು ಐರನ್‌ ಅಧಿಕವಾಗಿರುತ್ತದೆ. ಬಾದಾಮಿ ಮತ್ತು ಇತರೆ ಡ್ರೈ ಫ್ರೂಟ್ಸ್ ನ್ನು ಬಾಣಲೆಯಲ್ಲಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ ಡಬ್ಬಿಯಲ್ಲಿ ಇಟ್ಟುಕೊಳ್ಳಿ. ಮಗುವಿಗೆ ಅಥವಾ ಹಲ್ವಾ ತಯಾರಿಸುವಾಗ ಅದಕ್ಕೆ  2 ಚಮಚದಷ್ಟು ಈ ಮಿಶ್ರಣವನ್ನು ಸೇರಿಸಬಹುದು. ಬೇಸಿಗೆ ಕಾಲದಲ್ಲಿ ಕಸ್ಟರ್ಡ್‌ ಅಥವಾ ಪುಡಿಂಗ್‌ನಂತಹ ಸಿಹಿ ತಿನಿಸುಗಳನ್ನು ಸಹ ಈ ಮಿಶ್ರಣ ಬಳಸಿ ತಯಾರಿಸಬಹುದು. ಮಗುವಿಗೆ ವರ್ಷ ತುಂಬುವವರೆಗೆ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಕೊಡಬೇಕೆಂಬುದನ್ನೂ ನೆನಪಿನಲ್ಲಿಡಿ. 1 ವರ್ಷವಾದ ನಂತರ ಹಾಲು ಅಥವಾ ಗಂಜಿಗೆ ಜೇನುತುಪ್ಪವನ್ನು ಸೇರಿಸಬಹುದು. ಅದಕ್ಕೆ ಮುನ್ನ ಮಗುವಿಗೆ ಜೇನುತುಪ್ಪದಿಂದ ಇನ್‌ಫೆಕ್ಷನ್‌ ಆಗುವ ಸಂಭವಿರುತ್ತದೆ. ಹೆಚ್ಚಿನ ಕ್ಯಾಲ್ಶಿಯಮ್ ಒದಗಿಸಲು ಹಾಲಿನ ಜೊತೆಗೆ ಮೊಸರು ಮತ್ತು ಪನೀರ್‌ನ್ನು ಆಗಾಗ್ಗೆ ಕೊಡುವುದು ಒಳ್ಳೆಯದು. ಮನೆಯಲ್ಲೇ ತಯಾರಿಸಿದ ಮೊಸರು ಒಂದು ಉತ್ತಮ ಆಹಾರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ