ಮನೆ ಸ್ವಚ್ಛವಾಗಿದ್ದರೆ ಅದರಿಂದ ಖುಷಿ ಹೊರಹೊಮ್ಮುತ್ತಿರುತ್ತದೆ. ಏಕೆಂದರೆ ಮನೆಯ ಸ್ವಚ್ಛತೆಯ ನೇರ ಸಂಬಂಧ ಅಲ್ಲಿ ವಾಸಿಸುವವರ ಆರೋಗ್ಯದ ಜೊತೆ ನಂಟು ಹೊಂದಿರುತ್ತದೆ.

ಕೆಲವರು ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಮನೆಯು ಸುಂದರವಾಗಿರುವುದಕ್ಕಿಂತ ಅದು ಹೈಜಿನಿಕ್‌ಆಗಿರುವುದು ಮುಖ್ಯ. ಮನೆ ಹೈಜಿನಿಕ್‌ ಆಗಿರಲು ಅಂದರೆ ಕೀಟಾಣುಮುಕ್ತಗೊಳಿಸಲು ನೀವು ದಿನವಿಡೀ ಮನೆಯ ಸ್ವಚ್ಛತೆಯಲ್ಲಿ ನಿರತರಾಗಿರಬೇಕು ಎಂದೇನಿಲ್ಲ. ಮನೆಯ ಯಾವ ಯಾವ ಮೂಲೆಯಲ್ಲಿ ಕೀಟಾಣುಗಳು ಇರುವ ಸಾಧ್ಯತೆ ಇರುತ್ತದೋ ಅಲ್ಲಿ ಸ್ವಚ್ಛತೆಯ ಬಗ್ಗೆ ಸ್ವಲ್ಪ ಹೆಚ್ಚಿನ ಗಮನಕೊಟ್ಟರೆ ಸಾಕು.

ಇಂಡಿಯನ್‌ ಮೆಡಿಕಲ್ ಅಕಾಡೆಮಿ ಮುಖಾಂತರ ದೇಶಾದ್ಯಂತ 1400 ಮನೆಗಳಲ್ಲಿ ನಡೆಸಿದ ಒಂದು ಸಮೀಕ್ಷೆಯ ಮುಖಾಂತರ ನೈರ್ಮಲ್ಯವೆಂಬಂತೆ ಕಂಡುಬರುವ ಮನೆಗಳಲ್ಲಿಯೇ ಸಾಮಾನ್ಯವಾಗಿ ಸೋಂಕು ಕಂಡುಬರುತ್ತದೆ. ಗ್ಲೋಬಲ್ ಹೈಜೀನ್‌ ಕೌನ್ಸಿಲ್ ಮುಖಾಂತರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅಡುಗೆಮನೆಯಲ್ಲಿ  ಬಳಸುವ ಟವೆಲ್‌ಗಳು, ಚಾಕು, ಚಾಪಿಂಗ್‌ಬೋರ್ಡ್‌, ಸಿಂಕ್‌, ನಲ್ಲಿ, ಡಸ್ಟ್ ಬಿನ್‌, ಬಾಗಿಲುಗಳ ಹ್ಯಾಂಡ್‌, ಕಿಚನ್‌ ಕೌಂಟರ್‌, ಮೈಕ್ರೋವೇವ್‌, ಪಾತ್ರೆಗಳ ಸ್ಟ್ಯಾಂಡ್ ಮುಂತಾದವುಗಳ ಮೇಲೆ ಕೀಟಾಣುಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆ ಇರುತ್ತದೆ. ಇವುಗಳ ಸ್ವಚ್ಛತೆಯ ಬಗ್ಗೆ ನೀವು ತೋರಿದ ನಿರ್ಲಕ್ಷ್ಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು.

ರೋಗಾಣು ಮುಕ್ತ ಅಡುಗೆಮನೆ

ಅರಿಜೋನಾ ವಿಶ್ವವಿದ್ಯಾಲಯದ ಮೈಕ್ರೊಬಯಾಲಜಿ ಪ್ರೊಫೆಸರ್‌ ಡಾ. ಚುಕ್‌ಗೆರ್ಬಾ ಅವರ ಪ್ರಕಾರ, ಮನೆಯ ಸ್ವಚ್ಛತೆಯ ವಿಷಯ ಬಂದಾಗ ಟಾಯ್ಲೆಟ್‌ ಸೀಟ್‌ ಒಂದನ್ನೇ ನಾವು ಹೆಚ್ಚು ಸ್ವಚ್ಛ ಮಾಡಲು ಪ್ರಯತ್ನ ಮಾಡುತ್ತೇವೆ. ಆದರೆ ಅಡುಗೆಮನೆಯ ಸ್ವಚ್ಛತೆಯ ಬಗ್ಗೆ ಗಮನ ಕೊಡಲು ಹೋಗುವುದಿಲ್ಲ. ಆದರೆ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ.

ಅಡುಗೆಮನೆ ಸ್ವಚ್ಛವಾಗಿಡುವುದು ಹೇಗೆ?

ಅಡುಗೆಮನೆಯ ಟವೆಲ್ ‌ನಿಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತದೆ. ಆದರೆ ಅದರಲ್ಲಿ ರೋಗಾಣುಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಅದನ್ನು ಪ್ರತಿ ಎರಡು ದಿನಕ್ಕೊಮ್ಮೆ ಬದಲಿಸಿ.

ಅಡುಗೆಮನೆಯಲ್ಲಿ ಮುಸುರೆ ಪಾತ್ರೆಗಳು ಹೆಚ್ಚು ಹೊತ್ತು ಇರದಂತೆ ನೋಡಿಕೊಳ್ಳಿ. ಅದರಲ್ಲಿ ಉಳಿದಿರುವ ಆಹಾರ ಕಣಗಳಲ್ಲಿ ಬ್ಯಾಕ್ಟೀರಿಯಾಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ.

ಅಡುಗೆಮನೆಯಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಕತ್ತರಿಸಿದ ಬಳಿಕ ಚಾಪಿಂಗ್‌ ಬೋರ್ಡ್‌ನ್ನು ಪ್ರತಿದಿನ ಸ್ವಚ್ಛಗೊಳಿಸಿ.

ನಲ್ಲಿಯ ನಾಲ್ಕೂ ಬದಿ, ಸಿಂಕ್‌ ಹಾಗೂ ಪೈಪ್‌ಗುಂಟ ಹೆಚ್ಚಿನ ತೇವಾಂಶ ಇರುತ್ತದೆ. ಅಲ್ಲಿ ನಿಯಮಿತವಾಗಿ ಕೀಟನಾಶಕ ದ್ರಾವಣವನ್ನು ಸಿಂಪಡಿಸಿ. ಏಕೆಂದರೆ ತೇವಾಂಶ ಇರುವ ಜಾಗದಲ್ಲಿ ಬಹುಬೇಗ ಬ್ಯಾಕ್ಟೀರಿಯಾಗಳು ಉದ್ಭವಿಸುತ್ತವೆ.

ಫ್ರಿಜ್‌ನಲ್ಲಿ ಮಾಂಸ, ಡೇರಿ ಪ್ರಾಡಕ್ಟ್ಸ್ ಮತ್ತು ಸಮುದ್ರ ಆಹಾರಗಳನ್ನು ಇತರೆ ಪದಾರ್ಥಗಳಿಂದ ದೂರ ಇಡಿ. ಮಾಂಸ ಹಾಗೂ ತರಿಕಾರಿಗಳನ್ನು ಮುಟ್ಟಿದ ಬಳಿಕ ಚೆನ್ನಾಗಿ ಕೈ ತೊಳೆದುಕೊಳ್ಳಿ.

ಮಿಕ್ಸರ್‌ಗ್ರೈಂಡರ್‌, ಮೈಕ್ರೋವೇವ್ ಮತ್ತು ಸ್ವಿಚ್‌ಬೋರ್ಡ್‌ಗಳನ್ನು  ಸ್ವಚ್ಛವಾಗಿಡಿ.

ಅಡುಗೆಮನೆಯ ಫ್ಲೋರ್‌ಗಳನ್ನು ಡಿಸ್‌ಇನ್‌ಫೆಕ್ಟೆಂಟ್‌ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ.

ಅಡುಗೆಮನೆಗೆ ಪ್ರತ್ಯೇಕವಾದ ಡಸ್ಟ್ ಬಿನ್‌ ಇಡಿ. ಇದರಲ್ಲಿ ಯಾವಾಗಲೂ ಪಾಲಿಥಿನ್‌ ಬ್ಯಾಗ್‌ ಹಾಕಿ. ಇದರಿಂದ ಕಸ ಹೊರಗೆ ಎಸೆಯಲು ಸುಲಭವಾಗುತ್ತದೆ. ಮುಚ್ಚಳವಿರುವ ಡಸ್ಟ್ ಬಿನ್‌ನ್ನೇ ಬಳಸಿ.

ನೀವು ಉದ್ಯೋಗಸ್ಥ ಮಹಿಳೆಯಾಗಿದ್ದು, ಪ್ರತಿದಿನ ಸ್ವಚ್ಛ ಮಾಡಲೂ ಆಗದಿದ್ದರೆ, ತಿಂಗಳಿಗೊಮ್ಮೆಯಾದರೂ ಪೆಸ್ಟ್ ಕಂಟ್ರೋಲ್ ಮಾಡಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ