ನಾವು ತುಳಸಿಯನ್ನು ಕೇವಲ ಒಂದು ಗಿಡ ಎಂದು ಗುರುತಿಸುತ್ತೇವೆ. ಪವಿತ್ರ, ಪೂಜಾರ್ಹ ಆದ ತುಳಸಿ ಅಷ್ಟೇ ಆರೋಗ್ಯವರ್ಧಕ, ಔಷಧಿಗಳ ಗಣಿ ಎಂದು ಗೊತ್ತೇ? ಇದರ ಬೇರು, ಕಡ್ಡಿಗಳು, ಎಲೆ, ಬೀಜ, ಹೂ ಎಲ್ಲ ಬಹೂಪಯೋಗಿ, ಬಹುಮೂಲ್ಯ ಎನಿಸಿದೆ. ನಿಜಕ್ಕೂ ಇದು ಪ್ರಕೃತಿಯ ವರದಾನ ಎಂದರೆ ಉತ್ಪ್ರೇಕ್ಷೆಯಲ್ಲ. ಇದರ ಆ್ಯಂಟಿ ಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿಫಂಗಲ್ ಗುಣಗಳು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತವೆ. ಇದು ನಮ್ಮ ಇಮ್ಯೂನ್‌ಸಿಸ್ಟಮ್ ನ್ನು ಸಶಕ್ತಗೊಳಿಸುತ್ತದೆ. ಜೊತೆಗೆ ನೆಗಡಿ, ಕೆಮ್ಮು, ಜ್ವರ ಇತ್ಯಾದಿಗಳಿಂದ ರಕ್ಷಿಸುತ್ತದೆ. ಇದರ ರಸದಲ್ಲಿ ಥೈಮೋಲ್ ‌ಅಂಶಗಳನ್ನು ಕಾಣಬಹುದು, ಅದು ತ್ವಚೆಯ ಸೋಂಕಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ತುಳಸಿ ಗಿಡದಲ್ಲಿ ಹಲವು ವಿಧಗಳಿವೆ :

ಶ್ರೀ ತುಳಸಿ ಕೃಷ್ಣ ತುಳಸಿ/ಶ್ಯಾಮ ತುಳಸಿ    ರಾಮ ತುಳಸಿ ಹರಿ ತುಳಸಿ

ರೋಗಗಳಿಂದ ನಿವಾರಣೆ

ಗಂಟಲು ಮತ್ತು ಉಸಿರಾಟದ ತೊಂದರೆಗಳ ಸೋಂಕು, ಮೂಗಿನ ಗಾಯಗಳು, ಕಿವಿನೋವು, ಮೂತ್ರದ ಸಮಸ್ಯೆಗಳು, ಕರುಳಿನ ತೊಂದರೆಗಳು, ಮಾಮೂಲಿ ಅಥವಾ ವಿಷಮಶೀತ ಜ್ವರ, ಕೆಮ್ಮು, ಉಬ್ಬಸ ಇತ್ಯಾದಿಗಳಿಗೆ ತುಳಸಿ ರಸ ಸಿದ್ದೌಷಧವೇ ಸರಿ.

ತ್ವಚೆ ಮತ್ತು ಕೂದಲಿಗೂ

ಇದರಲ್ಲಿ ದಟ್ಟವಾಗಿ ಅಡಗಿರುವ ಆ್ಯಂಟಿಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿ ಫಂಗಲ್ ಗುಣಗಳು ನಮ್ಮ ರಕ್ತವನ್ನು ಪರಿಶುದ್ಧಗೊಳಿಸುತ್ತದೆ. ಇದರಿಂದ ಮೊಡವೆಗಳು ಹಾಗೂ ಕಲೆಗುರುತುಗಳ ಕಾಟ ತಪ್ಪುತ್ತದೆ, ಸ್ವಸ್ಥ ಮತ್ತು ಹೊಳೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ಇದು ಕೂದಲು ಉದುರುವಿಕೆಯನ್ನೂ ತಡೆಯುತ್ತದೆ. ಇದರ ಒಣಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ, ಅದರ ಬುಡ ಭದ್ರವಾಗಿ ಕೂದಲು ಉದುರುವಿಕೆ ನಿಯಂತ್ರಿಸಬಹುದು. ಇದರ ಎಲೆಗಳ ರಸ ತೆಗೆದು, ಅಷ್ಟೇ ಪ್ರಮಾಣದ ನಿಂಬೆರಸ ಬೆರೆಸಿ ತುರಿಕೆ, ಕಜ್ಜಿ, ಕೀವು ಗುಳ್ಳೆಗಳಿಗೆ ಹಚ್ಚುವುದರಿಂದ ಎಷ್ಟೋ ಉಪಶಮನ ಸಿಗುತ್ತದೆ. ಮುಖಕ್ಕೆ ಹಚ್ಚಿ, ಒಣಗಿಸಿ ತೊಳೆಯುವುದರಿಂದ ಹೊಳಪು ಮೂಡುತ್ತದೆ.

ರಕ್ತದ ಶುದ್ಧೀಕರಣ

ತುಳಸಿ ಎಲೆಗಳು ಔಷಧಿ ಗುಣಗಳಿಂದ ಸಮೃದ್ಧವಾಗಿದೆ. ತುಳಸಿ ಎಲೆಗಳ ನಿಯಮಿತ ಸೇವನೆಯಿಂದ ರಕ್ತದ ಅಶುದ್ಧ ಅಂಶಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ದೇಹದಲ್ಲಿ ಸ್ಛೂರ್ತಿ ತುಂಬಿಕೊಳ್ಳುತ್ತದೆ. ಇಷ್ಟು ಮಾತ್ರವಲ್ಲ, ತುಳಸಿ ಎಲೆಗಳು ಬಾಯಲ್ಲಿ ನ್ಯಾಚುರಲ್ ಮೌತ್‌ ಫ್ರೆಶ್‌ನರ್‌ನ ಕೆಲಸವನ್ನೂ ಮಾಡುತ್ತದೆ. ಟೀ ಜೊತೆ ಕುದಿಸಿ ಕುಡಿದರಂತೂ ನೆಗಡಿ, ಕೆಮ್ಮು ಮಂಗಮಾಯ!

ಒತ್ತಡ ದೂರವಿರಿಸುತ್ತದೆ

ತುಳಸಿ ಎಲೆಗಳಲ್ಲಿ ಒತ್ತಡ ನಿರೋಧಕ ಗುಣಗಳು ಅಖಂಡವಾಗಿವೆ. ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದ ಅಂಶವೆಂದರೆ, ತುಳಸಿ ರಸ ನಮ್ಮನ್ನು ಉದ್ವಿಗ್ನತೆ, ಒತ್ತಡಗಳಿಂದ ಸಂಪೂರ್ಣ ಮುಕ್ತಗೊಳಿಸುತ್ತದೆ ಎಂಬುದು. ಜೊತೆಗೆ ಸುಸ್ತುಸಂಕಟಗಳನ್ನೂ ಉಪಶಮನಗೊಳಿಸುತ್ತದೆ. ಇದರಿಂದ ದೇಹದ ರೋಗನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ 100% ಯಾವುದೇ ಸೈಡ್ ಎಫೆಕ್ಟ್ಸ್ ಇರುವುದಿಲ್ಲ.

ತುಳಸಿಯ ಗುಣಕಾರಿ ಅಂಶಗಳ ಲಾಭ ಪಡೆಯುವುದು ಈಗ ಇನ್ನೂ ಸುಲಭ, ಏಕೆಂದರೆ ಆರ್ಗ್ಯಾನಿಕ್‌ ಇಂಡಿಯಾದ ಗ್ರೀನ್‌ ಟೀ ಜೊತೆ ಇದರ ಇತರ ಉತ್ಪನ್ನಗಳಲ್ಲೂ ತುಳಸಿಯನ್ನು ಬಳಸಲಾಗುತ್ತಿದೆ.

- ಪ್ರತಿನಿಧಿ 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ