ಆಧುನಿಕ ಸನ್ನಿವೇಶದಲ್ಲಿ ಉಚ್ಚ ವರ್ಗದ ಹಾಗೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ದಿನ ಸಲಾಡ್‌ ತಿನ್ನುವ ಅಭ್ಯಾಸವಾಗಿಬಿಟ್ಟಿದೆ. ಹಲವು ಸ್ತ್ರೀ ಪುರುಷರಿಗೆ ಸಲಾಡ್‌ ಇಲ್ಲದೆ ಊಟ ಅರಗುವುದಿಲ್ಲ. ಆದರೂ ಮಕ್ಕಳು `ಸಲಾಡ್‌' ತಿನ್ನಲು ಹಿಂದುಮುಂದು ನೋಡುತ್ತಾರೆ. ಸಲಾಡ್‌ನ್ನು ಸರಿಯಾದ ರೀತಿಯಲ್ಲಿ ತಯಾರಿಸಿ ಮಕ್ಕಳಿಗೆ ಕೊಟ್ಟರೆ ಅವರೂ ಬಹಳ ಖುಷಿಯಾಗಿ ತಿನ್ನುತ್ತಾರೆ. ಡಾಕ್ಟರ್‌ ಸಹ ಚಿಕ್ಕವರು, ದೊಡ್ಡವರು ಎಲ್ಲರಿಗೂ ಸಲಾಡ್‌ ತಿನ್ನಲು ಸಲಹೆ ನೀಡುತ್ತಾರೆ. ದಪ್ಪಗಿರುವ ಸ್ತ್ರೀ ಪುರುಷರಿಗೆ ಸಲಾಡ್ ಬಹಳ ಲಾಭದಾಯಕ. ಸಲಾಡ್‌ ತಿನ್ನುವುದರಿಂದ ಧಾನ್ಯಗಳು, ತುಪ್ಪ ಮತ್ತು ಎಣ್ಣೆಯಿಂದ ಮಾಡಿದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಅಲ್ಲದೆ, ಎಣ್ಣೆ ತಿಂಡಿಗಳಿಂದ ರಕ್ಷಿಸಿಕೊಳ್ಳಬಹುದು.

ಸಲಾಡ್‌ ತಿನ್ನುವುದರಿಂದ ವಿಟಮಿನ್‌ ಮತ್ತು ಖನಿಜಾಂಶಗಳು ಪ್ರಾಕೃತಿಕ ರೂಪದಲ್ಲಿ ಶರೀರಕ್ಕೆ ಸಿಗುತ್ತವೆ. ವಿಟಮಿನ್‌ ಮತ್ತು ಖನಿಜಾಂಶಗಳು ತರಕಾರಿಗಳಲ್ಲೂ ಪ್ರಾಕೃತಿಕ ರೂಪದಲ್ಲಿರುತ್ತವೆ. ಆದರೆ ತರಕಾರಿಗಳನ್ನು ಬೇಯಿಸುವುದರಿಂದ ವಿಟಮಿನ್‌ ಮತ್ತು ಖನಿಜಾಂಶಗಳು ನಷ್ಟವಾಗುತ್ತವೆ. 100 ಗ್ರಾಂ ಬೀಟ್‌ ರೂಟ್‌ನಲ್ಲಿ ಶೇ.0.8 ಗ್ರಾಂನಷ್ಟು ಖನಿಜಾಂಶಗಳು ಇರುತ್ತವೆ. ಇದನ್ನು ಬೇಯಿಸುವುದರಿಂದ ಖನಿಜಾಂಶಗಳು ನಷ್ಟವಾಗುತ್ತವೆ. 100 ಗ್ರಾಂ ಈರುಳ್ಳಿಯಲ್ಲಿ ಶೇ.0.6 ಗ್ರಾಂ ಖನಿಜಾಂಶವಿರುತ್ತದೆ. ಸಲಾಡ್‌ನಲ್ಲಿ ಈರುಳ್ಳಿ ತಿನ್ನುವುದರಿಂದ ಎಲ್ಲ ಖನಿಜಾಂಶಗಳು ಶರೀರಕ್ಕೆ ಸಿಗುತ್ತವೆ. ಆದರೆ ಬೇಯಿಸುವುದರಿಂದ ಹಾಳಾಗುತ್ತದೆ.

ತರಕಾರಿಗಳನ್ನು ಬೇಯಿಸುವುದರಿಂದ ಕ್ಯಾಲ್ಶಿಯಂ, ಫಾಸ್ಛರಸ್‌, ಫೈಬರ್‌, ವಿಟಮಿನ್‌ ಬಿ ಮತ್ತು ಸಿ ಎಲ್ಲವೂ ನಷ್ಟವಾಗುತ್ತವೆ. ಹೆಚ್ಚಿನ ಮನೆಗಳಲ್ಲಿ ಮೂಲಂಗಿ, ಟೊಮೇಟೊ, ಸೌತೆಕಾಯಿ, ಈರುಳ್ಳಿ, ಬೀಟ್‌ರೂಟ್‌ಗಳೊಂದಿಗೆ ನಿಂಬೆರಸ ಬೆರೆಸಿ ಸಲಾಡ್ ಮಾಡಲಾಗುತ್ತದೆ. ಎಲ್ಲ ತರಕಾರಿಗಳೂ ವಿಟಮಿನ್‌ ಮತ್ತು ಖನಿಜಾಂಶಗಳಿಂದ ತುಂಬಿರುತ್ತವೆ.

ಸಲಾಡ್‌ ರೂಪದಲ್ಲಿ 100 ಗ್ರಾಂ ಟೊಮೇಟೊ ತಿನ್ನುವುದರಿಂದ 20 ಕ್ಯಾಲರಿ ಎನರ್ಜಿ ಸಿಗುತ್ತದೆ. ಟೊಮೇಟೊ ತಿನ್ನುವುದರಿಂದ  ಕ್ಯಾಲ್ಶಿಯಂ ಕೂಡ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಗರ್ಭಿಣಿಯರು ಟೊಮೇಟೊ ಸಲಾಡ್‌ ತಿಂದರೆ ಕಬ್ಬಿಣದ ಕೊರತೆ ಕಡಿಮೆಯಾಗುತ್ತದೆ. ಟೊಮೇಟೋದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಕೂಡ ಸಿಗುತ್ತದೆ.

food

ಸ್ವಚ್ಛಗೊಳಿಸುವುದು ಅತ್ಯಗತ್ಯ

ಟೊಮೇಟೋದಂತೆ ಮೂಲಂಗಿ, ಕ್ಯಾರೆಟ್‌, ಸೌತೆಕಾಯಿ, ಈರುಳ್ಳಿ ಹಾಗೂ ಬೀಟ್‌ರೂಟ್‌ಗಳನ್ನು ಸೇವಿಸಿದರೆ ವಿಟಮಿನ್‌ ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ. ಈ ತರಕಾರಿಗಳ ಸಲಾಡ್‌ ಸೇವಿಸುವುದರಿಂದ ಶರೀರಕ್ಕೆ ಬಹಳಷ್ಟು ಲಾಭ ಸಿಗುತ್ತದೆ. ಆದರೆ ಸರಿಯಾಗಿ ಗಮನಿಸದೆ ಸಲಾಡ್‌ ಮಾಡಿಕೊಂಡು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಸಲಾಡ್‌ ತಿನ್ನುವುದರಿಂದ ತೊಂದರೆಯಾಗುವುದೆಂದು ಯಾರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಸ್ವಚ್ಛತೆಗೆ ಸಂಪೂರ್ಣ ಗಮನ ಕೊಡದಿದ್ದರೆ ಸಲಾಡ್‌ ಲಾಭದಾಯಕವಾಗುವ ಬದಲು ಹಾನಿಕಾರಕವಾಗುತ್ತದೆಂದು ಈಗ ಪ್ರಮಾಣಿಸಲ್ಪಟ್ಟಿದೆ.

ತರಕಾರಿಗಳನ್ನು ಬೆಳೆಸುವಾಗ ವಿವಿಧ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಲಾಗುತ್ತದೆ. ತರಕಾರಿಗಳನ್ನು ಕ್ರಿಮಿಕೀಟಗಳಿಂದ ರಕ್ಷಿಸಲು ಕೀಟನಾಶಕಗಳನ್ನು ಉಪಯೋಗಿಸಲಾಗುತ್ತದೆ. ಕೆಲವರು ಕೊಳಕು ಕಾಲುವೆಗಳ ಬಳಿ ತರಕಾರಿಗಳನ್ನು ಬೆಳೆಸಿ ಅವಕ್ಕೆ ಕೊಳಕು ನೀರನ್ನು ಸಿಂಪಡಿಸುತ್ತಾರೆ. ಆಗ ತರಕಾರಿ ದೂಷಿತವಾಗುತ್ತದೆ.

ಅಂತಹ ತರಕಾರಿಗಳ ಸಲಾಡ್‌ ತಯಾರಿಸುವ ಮೊದಲು ಸ್ವಚ್ಛವಾದ ನೀರಿನಿಂದ ಚೆನ್ನಾಗಿ ತೊಳೆಯದಿದ್ದರೆ ಬಹಳಷ್ಟು ಕೀಟನಾಶಕ ರಾಸಾಯನಿಕಗಳು ಸಲಾಡ್‌ನೊಂದಿಗೆ ಶರೀರದೊಳಗೆ ಸೇರಿ ವಿಷಕಾರಿ ಪರಿಣಾಮ ಉಂಟುಮಾಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ