ಬೇಸಿಗೆಯ ಕಾಲದಲ್ಲಿ ಸ್ಕಿನ್‌ ಸಾಕಷ್ಟು ನಾಜೂಕು ಮತ್ತು ಸಂವೇದನಾಶೀಲವಾಗುತ್ತದೆ. ಈ ಋತುವಿನಲ್ಲಿ ಸ್ಕಿನ್‌ ಬಿಸಿಲಿಗೆ ಬೀಳುವುದರಿಂದ, ಹಲವಾರು ಸಮಸ್ಯೆಗಳು ಕಾಣಿಸುತ್ತವೆ. ಹೀಗಾಗಿ ಅದನ್ನು ನಿರ್ಲಕ್ಷಿಸಿದರೆ, ನಿಮ್ಮ ಸೌಂದರ್ಯಕ್ಕೆ ಕೇಡು ತಪ್ಪಿದ್ದಲ್ಲ. ಹಾಗಿದ್ದರೆ ಬೇಸಿಗೆಯ ಈ ಚರ್ಮದ ಸಮಸ್ಯೆಗಳಿಗೆ ಪರಿಹಾರವೇನು? ಬನ್ನಿ, ತಜ್ಞರ ಸಲಹೆ ಪಡೆಯೋಣ.

ಸನ್‌ಬರ್ನ್‌

ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳ ಅತ್ಯಧಿಕ ಸಂಪರ್ಕದಿಂದ ಉಂಟಾಗುವ ಸಮಸ್ಯೆ ಆಗಿದೆ. ಈ ಕಿರಣಗಳು ಸತತವಾಗಿ ನಮ್ಮ ಚರ್ಮಕ್ಕೆ ಸೋಕುವುದರಿಂದ, ಚರ್ಮ ಅತಿ ಶುಷ್ಕ, ನಿರ್ಜೀವ, ಸುಕ್ಕುಮಯ ಆಗುತ್ತದೆ. ತೀವ್ರ ಗಂಭೀರ ಸ್ವರೂಪದ ಸನ್‌ಬರ್ನ್‌ಗಳಿಂದ ಚರ್ಮದಲ್ಲಿ ಬೊಕ್ಕೆಗಳೇಳುತ್ತವೆ, ಒಮ್ಮೊಮ್ಮೆ ಬಿರುಕೂ ಬಿಡಬಹುದು.

ಸನ್‌ಬರ್ನ್‌ಗೆ ಮನೆಮದ್ದು : ಇದಕ್ಕೆ ಸುಲಭಾಗಿ ಮನೆಯಲ್ಲೇ ಮದ್ದು ಮಾಡಬಹುದು. ಬಿಸಿಲಿನಿಂದ ಮನೆಗೆ ಹೋದ ತಕ್ಷಣ ಮೊದಲು ತಣ್ಣೀರಿನಲ್ಲಿ ಸ್ನಾನ ಮಾಡಿ. ನಂತರ ಹೊರಮೈ ಮೇಲೆ ಅಲ್ಲಲ್ಲಿ ತಣ್ಣೀರು ಪಟ್ಟಿಗಳನ್ನು ಹಾಕಬೇಕು. ಇದು ಉರಿ ಮತ್ತು ನೋವನ್ನು ಎಷ್ಟೋ ಪಟ್ಟು ನಿವಾರಿಸುತ್ತದೆ.

ಡೀಹೈಡ್ರೇಶನ್‌ ಆಗದಿರಲು

– ಸನ್‌ಬರ್ನ್‌ ಕಾರಣ ಮೈ ಮೇಲೆ ಅಲ್ಲಲ್ಲಿ ಕಪ್ಪು ಪ್ಯಾಚ್‌ಗಳಾಗಿದ್ದರೆ, ಅದರ ಮೇಲೆ ಐಸ್‌ನಿಂದ ಉಜ್ಜುವುದರಿಂದ ಅಂಥ ಗುರುತು ಹೋಗುತ್ತದೆ.

– ಆಲೂ ನೋವು ನಿವಾರಕ ಕೆಲಸ ಮಾಡುವುದರಿಂದ ಹಸಿಯಾದ ಆಲೂವನ್ನು ಚರ್ಮದ ಮೇಲೆ ಲಘುವಾಗಿ ಉಜ್ಜುವುದರಿಂದ ಉರಿ, ಕೆರೆತ, ನವೆ, ಹಿಂಸೆ ದೂರವಾಗುತ್ತದೆ. ಆಲೂ ಬಿಲ್ಲೆಗಳಾಗಿಸಿ ಅದನ್ನು ಚರ್ಮದ ಮೇಲೆ ಮತ್ತೆ ಮತ್ತೆ ಒತ್ತುವುದರಿಂದ ಹಿತವೆನಿಸುತ್ತದೆ. ಇದರ ಸಿಪ್ಪೆ ಹೆರೆದು, ಹಸಿ ಆಲೂ ಪೇಸ್ಟ್ ಮಾಡಿ, ಹತ್ತಿಯ ನೆರವಿನಿಂದ ಸನ್‌ಬರ್ನ್‌ ಆದ ಭಾಗಗಳಿಗೆ ಹಚ್ಚಿರಿ.

– ಪುದೀನಾ ಎಲೆಗಳನ್ನು ಅರೆದು, ರಸ ಬೇರ್ಪಡಿಸಿ. ಇದನ್ನು ಸನ್‌ಬರ್ನ್‌ ಭಾಗಗಳಿಗೆ ಲೇಪಿಸಿ. ಇದು ಹಿಂಸೆ ತಗ್ಗಿಸುತ್ತದೆ. ಹಾಗೆಯೇ ಅರ್ಧ ಕಪ್‌ ಉದ್ದಿನ ಬೇಳೆಯನ್ನು ತಣ್ಣಗಿನ ಮೊಸರಿನಲ್ಲಿ ನೆನೆಸಿ, ನುಣ್ಣಗೆ ಅರೆದು ಆ ಭಾಗಕ್ಕೆ ಹಚ್ಚುವುದರಿಂದ ಲಾಭವಿದೆ.

ವೈದ್ಯಕೀಯ ಚಿಕಿತ್ಸೆ  : ವಿಟಮಿನ್‌ `ಈ’ ಒಂದು ಬಗೆಯ ಆ್ಯಂಟಿಆಕ್ಸಿಡೆಂಟ್‌ ಆಗಿದ್ದು, ಇದು ಸೋಂಕನ್ನು ನಿವಾರಿಸುತ್ತದೆ. ಸನ್‌ಬರ್ನ್‌ ಕಾರಣ ನೀವು ಸಪ್ಲಿಮೆಂಟ್‌ ಆಗಿ ವಿಟಮಿನ್‌ ಈ ಸೇವಿಸಬಹುದು. ಜೊತೆಗೆ ದೈನಂದಿನ ಆಹಾರದಲ್ಲಿ ವಿಟಮಿನ್‌ `ಈ’ ಹೆಚ್ಚಾಗಿರುವ ಪದಾರ್ಥ ಸೇವಿಸಬೇಕು.

– ಚರ್ಮಕ್ಕೆ ಯಾವ ಬಗೆಯ ಸಾಬೂನು ಸಹ ಬೇಡ. ಮುಖ ತೊಳೆಯುವಾಗ, ಟೀ ಟ್ರೀ ಅಂಶಗಳು ಇರುವಂಥ ಫೇಸ್‌ವಾಶ್‌ ಅಥವಾ ಲೋಶನ್‌ ಬಳಸಿರಿ. ನಂತರ ಚರ್ಮವನ್ನು ಮತ್ತಷ್ಟು ತಂಪುಗೊಳಿಸಲು ಕ್ಯಾಲಮೈನ್‌ ಲೋಶನ್‌ ಸಹ ಬಳಸಬಹುದು.

– ಸನ್‌ಬರ್ನ್‌ ಹೆಚ್ಚಾಗಿದೆ ಎನಿಸಿದರೆ, ಡರ್ಮಟಾಲಜಿಸ್ಟ್ ಮೊದಲು ಆ್ಯಂಟಿ ಅಲರ್ಜಿ ಔಷಧಿ ನೀಡುತ್ತಾರೆ. ಆಗ ಉರಿ, ಊತಗಳು ಕಡಿಮೆ ಆಗುತ್ತವೆ. ಬರ್ನ್ಸ್ ಕಡಿಮೆ ಆದನಂತರ ಹೈಡ್ರೋಫೇಶಿಯಲ್ ನಿಂದ ಸ್ಕಿನ್‌ಗೆ ಆಕ್ಸಿಜನ್‌ ಒದಗಿಸಲಾಗುತ್ತದೆ.

ಪ್ರಿಕ್ಲೀ ಹೀಟ್‌ಗೆ ನೀಡಿ ಟ್ರೀಟ್‌

ಬೇಸಿಗೆಯಲ್ಲಿ ಹೆಚ್ಚಿಗೆ ಬೆವರುವುದು ಸರ್ವೇ ಸಾಧಾರಣ ವಿಷಯ. ಬೆವರು ಮುಖದಲ್ಲಿ ಜಿನುಗುತ್ತಿರುವಾಗ, ಚರ್ಮ ಡಲ್ ಅನಿಸುತ್ತದೆ. ಆಮೇಲೆ ಬೆವರಿನ ಕಾರಣ ಮುಖದಲ್ಲಿ ಸಣ್ಣ ಸಣ್ಣ ಗುಳ್ಳೆ ಕಾಣಿಸಬಹುದು. ಇದರಿಂದ ಚರ್ಮಕ್ಕೆ ಇರಿಟೇಶನ್‌ ತಪ್ಪಿದ್ದಲ್ಲ.

ಪ್ರಿಕ್ಲೀ ಹೀಟ್‌ಗೆ ಮನೆಮದ್ದು :  ಇದಕ್ಕೆ ಬೇಕಿಂಗ್‌ ಸೋಡ ಎಲ್ಲಕ್ಕಿಂತಲೂ ಉತ್ತಮ. 1 ಚಮಚ ಬೇಕಿಂಗ್‌ ಸೋಡಕ್ಕೆ ತಣ್ಣೀರು ಬೆರೆಸಿರಿ. ನಂತರ ಇದರಲ್ಲಿ ಅದ್ದಿಕೊಂಡ ಒಂದು ಚಿಕ್ಕ ತೆಳು ಕರ್ಚೀಫ್‌ನ್ನು ಪ್ರಭಾವಿತ ಭಾಗಗಳ ಮೇಲೆ 10 ನಿಮಿಷ ಇರಿಸಬೇಕು. ಆಗ ನವೆ, ಕಡಿತ, ಊತ ಕಡಿಮೆ ಆಗುತ್ತದೆ.

ಸೈಜ್‌ ಝೀರೋದ ಕೊಡುಗೆ ಅನೆರೆಕ್ಸಿಯಾ

– ಪ್ರಿಕ್ಲೀ ಹೀಟ್‌ ಮೇಲೆ ತಣ್ಣೀರು ಹೆಚ್ಚು ಪರಿಣಾಮಕಾರಿ. ಒಂದು ತೆಳು ಬಟ್ಟೆಯಲ್ಲಿ ಕೆಲವು ಐಸ್‌ ತುಂಡು ಇರಿಸಿ, ಬಾಧಿತ ಜಾಗದ ಮೇಲಿರಿಸಿ. ಹೀಗೆ ಪ್ರತಿ 5-6 ಗಂಟೆಗಳಿಗೊಮ್ಮೆ ಮಾಡುತ್ತಿರಬೇಕು. ಹೀಗೆ ಮಾಡುವುದರಿಂದ ಗುಳ್ಳೆಗಳು ಹರಡುವುದು ಕಡಿಮೆಯಾಗಿ, ನೋವು ಸಹ ದೂರಾಗುತ್ತದೆ.

– ಚಂದನಕ್ಕೆ ದೇಹದ ಉಷ್ಣತೆ ತಗ್ಗಿಸುವ ಸಾಮರ್ಥ್ಯವಿದೆ. ಜೊತೆಗೆ ಇದು ವೇಗವಾಗಿ ಆ ಕೆಲಸ ಮಾಡುತ್ತದೆ. ಅರ್ಧ ಕಪ್‌ ಚಂದನದ ಪುಡಿಗೆ ಅರ್ಧ ಕಪ್‌ ಗುಲಾಬಿ ಜಲ ಬೆರೆಸಿ, ಅಗತ್ಯವಿದ್ದ ಕಡೆ ಹಚ್ಚಿಕೊಂಡು ನಿಧಾನವಾಗಿ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಹೀಗೆ ಪ್ರತಿದಿನ 2-2 ಸಲ ಮಾಡಿ. ಇದು ಬಹಳ ಲಾಭಕಾರಿ. ಪ್ರಿಕ್ಲೀ ಹೀಟ್‌ ಆದಾಗ, ಕೇವಲ ಕಾಟನ್‌ ಬಟ್ಟೆ ಧರಿಸುವುದು ಲೇಸು. ಡೀಹೈಡ್ರೇಶನ್‌ಗೆ ಸಿಲುಕದಿರಲು ಧಾರಾಳ ಬಾರ್ಲಿ ನೀರು, ಎಳನೀರು ಕುಡಿಯುತ್ತಿರಬೇಕು.

ವೈದ್ಯಕೀಯ ಚಿಕಿತ್ಸೆ : ಪ್ರಿಕ್ಲೀ ಹೀಟ್‌ಗಾಗಿ ಹೈಡ್ರೋಫೇಶಿಯಲ್ ಟ್ರೀಟ್‌ಮೆಂಟ್‌ ಮಾಡುತ್ತಾರೆ. ಇದು 3-4 ಹಂತಗಳಲ್ಲಿ ನಡೆಯುತ್ತದೆ. ಮೊದಲು ಸ್ಕಿನ್‌ ಟೈಟ್‌ನಿಂಗ್‌ ಮಾಡುತ್ತಾರೆ. ಅದಾದ ಮೇಲೆ ಟಾಕ್ಸಿನ್‌ ರಿಮೂವ್, ಆಮೇಲೆ ಆಕ್ಸಿಜನೈಸೇಷನ್‌, ಕೊನೆಯಲ್ಲಿ ವಿಟಮಿನ್‌ `ಸಿ’ ಇನ್‌ಫ್ಯೂಸ್‌ ಮಾಡಲಾಗುತ್ತದೆ.

ರೊಸೇಸಿಯಾ

ಇದೊಂದು ಸಾಧಾರಣ ಚರ್ಮ ಸಮಸ್ಯೆ ಆಗಿದ್ದು, ಸಾಮಾನ್ಯವಾಗಿ 30+ನವರಿಗೆ ಆಗುತ್ತದೆ. ಈ ಕಾರಣ ಮೂಗು, ಕೆನ್ನೆ, ಗಲ್ಲಗಳ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಂಡು, ಸ್ಕಿನ್‌ ಡ್ರೈ ಆಗುತ್ತದೆ.

ರೊಸೇಸಿಯಾಗಾಗಿ ಮನೆ ಮದ್ದು  :  ರೊಸೇಸಿಯಾವನ್ನು ನೈಸರ್ಗಿಕವಾಗಿಯೇ ತಗ್ಗಿಸಬಹುದು. ಇದಕ್ಕಾಗಿ 2 ಕಪ್‌ ಗ್ರೀನ್‌ ಟೀ ರೆಡಿ ಮಾಡಿ, ತಣ್ಣಗಾಗಲು ಅರ್ಧ ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ. ನಂತರ ತೆಳು ಬಟ್ಟೆಯನ್ನು ಇದರಲ್ಲಿ ಅದ್ದಿಕೊಂಡು ಅಗತ್ಯ ಇರುವ ಕಡೆ ಒತ್ತಿಹಿಡಿಯಿರಿ. ಇದರಿಂದ ಬಹಳ ಪ್ರಯೋಜನವಿದೆ.

– ಈ ಸಮಸ್ಯೆಗೆ ಆ್ಯಪಲ್ ಮಾಸ್ಕ್ ಒಂದು ಉತ್ತಮ ಉಪಾಯ ಎನಿಸಿದೆ. ಇದಕ್ಕಾಗಿ ಒಂದು ಸೇಬಿನ ಸಿಪ್ಪೆ ಹೆರೆದು, ತಣ್ಣನೆಯ ಹಾಲಿನೊಂದಿಗೆ ಅದರ ಪೇಸ್ಟ್ ರೆಡಿ ಮಾಡಿ. ಈ ಪೇಸ್ಟ್ ಅನ್ನು ಮುಖ ಮತ್ತಿತರ ಭಾಗಗಳಿಗೆ ಸವರಿ, 20 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ವೈದ್ಯಕೀಯ ಚಿಕಿತ್ಸೆ  : ಇದು ಮನೆಮದ್ದಿಗೆ ಜಗ್ಗದಿದ್ದರೆ ಕೆಮಿಕಲ್ ಪೀಲ್, ಗ್ಲೈಕೋಲಿಕ್‌ ಪೀಲ್, ಫೋಟೋ ಫೇಶಿಯಲ್ ಮೂಲಕ ಸವರಿ ಮಾಡಬಹುದು. ಕೆಮಿಕಲ್  ಪೀಲ್ ಒಂದು ಉತ್ತಮ ಚಿಕಿತ್ಸೆ ಆಗಿದ್ದು, ಡೆಡ್‌ ಸ್ಕಿನ್‌ ತೊಲಗಿಸಿ, ಸ್ಕಿನ್‌ನ್ನು ಸ್ಮೂತ್‌ಗೊಳಿಸುತ್ತದೆ. ಇದೇ ತರಹ ಗ್ಲೈಕೋಲಿಕ್‌ ಪೀಲ್ ನಲ್ಲಿ ಸ್ಕಿನ್‌ನ ಮೇಲ್ಭಾಗದಲ್ಲಿ ಜಮೆಗೊಂಡ ಕೊಳೆಯನ್ನೂ ನಿವಾರಿಸಬಹುದಾಗಿದೆ.

ಆ್ಯಕ್ನೆಯ ಸಮಸ್ಯೆಗಳು

ತ್ವಚೆಯಲ್ಲಿ ತೈಲೀಯ ಗ್ರಂಥಿಗಳು ಅಧಿಕ ಸಕ್ರಿಯಗೊಂಡು, ಅನಿಯಮಿತವಾಗಿ ಕೆಲಸ ಮಾಡತೊಡಗುತ್ತದೆ. ಅತಿ ಹೆಚ್ಚಿನ ಪ್ರಮಾಣದ ತೈಲೀಯ ಗ್ರಂಥಿಗಳ ಸ್ರವಿಸುವಿಕೆಯಿಂದಾಗಿ ತ್ವಚೆಯ ರೋಮರಂಧ್ರಗಳು ಓಪನ್‌ ಆಗುತ್ತವೆ. ಇದರೆ ಪರಿಣಾಮವಾಗಿ ಬ್ಲಾಕ್‌ಹೆಡ್ಸ್ ಮತ್ತು ಆ್ಯಕ್ನೆಗಳ ಸಮಸ್ಯೆ ಹುಟ್ಟುತ್ತದೆ.

ಮನೆ ಮದ್ದು  : ಆ್ಯಕ್ನೆಗಾಗಿ ಸೌತೆಯ ಫೇಸ್‌ಮಾಸ್ಕ್ ಬಹು ಉಪಯೋಗಿ ಅನಿಸುತ್ತದೆ. ಓಟ್‌ಮೀಲ್ ಜೊತೆ ಸಿಪ್ಪೆ ಹೆರೆದ ಸೌತೆಹೋಳು ಮೊಸರು, ಬೆರೆಸಿ ಪೇಸ್ಟ್ ತಯಾರಿಸಿ. ನಂತರ ಇದನ್ನು ಆ್ಯಕ್ನೆಯ ಭಾಗಕ್ಕೆ ಸವರಿಕೊಳ್ಳಿ. ಅರ್ಧ ಗಂಟೆ ಹಾಗೇ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ಈ ಫೇಸ್‌ಮಾಸ್ಕ್ ಚರ್ಮವನ್ನು ರಿಜೂವಿನೇಟ್‌ ಮಾಡುತ್ತದೆ, ಆ ಮೂಲಕ ಆ್ಯಕ್ನೆ ತಂತಾನೇ ಸರಿಹೋಗುತ್ತದೆ.

– ಆ್ಯಕ್ನೆ ನಿವಾರಣೆಗೆ ಅರಿಶಿನ ಒಂದು ರಾಮಬಾಣ. 2 ಚಮಚ ಕಡಲೆಹಿಟ್ಟಿಗೆ ಅರ್ಧರ್ಧ ಚಮಚ ಅರಿಶಿನ, ಚಂದನ, ಬಾದಾಮಿ ಎಣ್ಣೆ ಬೆರೆಸಿ ಪೇಸ್ಟ್  ಮಾಡಿಡಿ. ಇದನ್ನು ಮುಖ ಮತ್ತಿತರ ಭಾಗಗಳಿಗೆ ಹಚ್ಚಿಕೊಂಡು, 15 ನಿಮಿಷ ಬಿಟ್ಟು, ತುಸು ತಣ್ಣೀರಿನಿಂದ ನಿಧಾನವಾಗಿ ತೊಳೆಯಿರಿ.

– ಜೇನುತುಪ್ಪ ಸಹ ಆ್ಯಕ್ನೆಗೆ ಪರಿಣಾಮಕಾರಿ. ಇದಕ್ಕೆ ನಿಂಬೆರಸ ಬೆರೆಸಿಕೊಂಡು ಮುಖಕ್ಕೆ ಸವರಿಕೊಳ್ಳಿ. ಚೆನ್ನಾಗಿ ಒಣಗಿದ ಮೇಲೆ ತುಸು ಬಿಸಿ ನೀರಿನಿಂದ ಮುಖ ತೊಳೆಯಿರಿ.

ವೈದ್ಯಕೀಯ ಚಿಕಿತ್ಸೆ  : ಆ್ಯಕ್ನೆಗಾಗಿ ಓವರ್‌ ಪಿಲ್ಸ್ ಸಹ ನೀಡುತ್ತಾರೆ. ಇತ್ತೀಚೆಗೆ ಬೇರೆ ಬೇರೆ ತರಹದ ಸ್ಕಿನ್‌ ಪ್ರಾಡಕ್ಟ್ಸ್ ಬಳಸುವುದರಿಂದಲೂ ಆ್ಯಕ್ನೆ ಸರಿಪಡಿಸಬಹುದಾಗಿದೆ. ಉದಾ…. ಸ್ಪೆಷಲ್ ಆ್ಯಕ್ನೆ ಫೇಸ್‌ವಾಶ್‌, ಆ್ಯಕ್ನೆ ಬೇಬಿ ಕ್ರೀಂ, ಆ್ಯಕ್ನೆ ಸ್ಪಾಟ್‌ ಕನ್ಸೀಲರ್‌, ಆ್ಯಕ್ನೆ ಪೀಲ್‌, ಕೆಮಿಕಲ್ ಪೀಲ್‌ ಮತ್ತು ಲೇಸರ್‌ ಲೈಟ್‌ ಟ್ರೀಟ್‌ಮೆಂಟ್‌ಗಳೂ ಉಂಟು. ಈ ಚಿಕಿತ್ಸೆಗಳಿಂದ ಆ್ಯಕ್ನೆಗಳನ್ನು ಸುಲಭವಾಗಿ ನಿವಾರಿಸಬಹುದು. ಸ್ಯಾಲಿಸಿಲಿಕ್‌ ಆ್ಯಸಿಡ್‌ ಸಹ ಮುಖದ ಚರ್ಮಕ್ಕೆ ಬಲು ಉಪಕಾರಿ. ಹೀಗಾಗಿ  ಸ್ಯಾಲಿಸಿಲಿಕ್‌ ಆ್ಯಸಿಡ್‌ಯುಕ್ತ ಫೇಸ್‌ವಾಶ್‌ ಮತ್ತು ಕ್ರೀಂ ಬಳಸಿರಿ.

ಬಾಡಿ ಓಡರ್

ನಮ್ಮ ದೇಹದಿಂದ 2 ಬಗೆಯ ಬೆವರು ಹೊಮ್ಮುತ್ತದೆ. ಮೊದಲನೆಯದು ಆ್ಯಕ್ರೈನ್‌, ಇದು ತಿಳಿಯಾಗಿದ್ದು ದುರ್ಗಂಧರಹಿತ ಆಗಿರುತ್ತದೆ ಹಾಗೂ ಇದು ಇಡೀ ದೇಹದ ಎಲ್ಲಾ ಭಾಗಗಳಿಂದಲೂ ಹೊಮ್ಮುತ್ತದೆ. ಇದು ದೇಹದ ಆಂತರಿಕ ಉಷ್ಣತೆಯನ್ನು ಕಾಪಾಡುತ್ತದೆ. ಎರಡನೆಯದು ಆ್ಯಪೊಕ್ರೈನ್‌, ಇದು ತುಸು ಗಟ್ಟಿ ದ್ರವವಾಗಿದ್ದು ಸೊಂಟ, ಕಂಕುಳ ಭಾಗದಿಂದ ಹೆಚ್ಚಾಗಿ ಸ್ರವಿಸಲ್ಪಡುತ್ತದೆ. ಇದು ಸಹ ದುರ್ಗಂಧರಹಿತ ಆಗಿರುತ್ತದೆ, ಆದರೆ ಬ್ಯಾಕ್ಟೀರಿಯಾ ಅಟ್ಯಾಕ್‌ ಆದಾಗ ದುರ್ಗಂಧ ಹೊರಸೂಸುತ್ತದೆ.  ಬೇಸಿಗೆಯಲ್ಲಿ ನಿಮ್ಮ ಮೈ ಹೆಚ್ಚು ದುರ್ಗಂಧದ ಬೆವರು ಹರಿಸಿದರೆ ಈ ಉಪಾಯಗಳನ್ನು ಅನುಸರಿಸಿ :

– ನಿಂಬೆ ಬ್ಯಾಕ್ಟೀರಿಯಾಗೆ ವೈರಿ. ರಸಭರಿತ ನಿಂಬೆಹಣ್ಣನ್ನು 2 ಹೋಳು ಮಾಡಿ, ಕಂಕುಳ ಭಾಗಕ್ಕೆ ಚೆನ್ನಾಗಿ ಉಜ್ಜಿಕೊಳ್ಳಿ. ಸ್ವಲ್ಪ ಹೊತ್ತು ಹಾಗೇ ಇರಿ, ನಂತರ ತಣ್ಣೀರಿನಿಂದ ತೊಳೆಯಿರಿ.

ನೀವು ಮನೆಯಲ್ಲಿದ್ದು, ನಿಮ್ಮ ಬಳಿ ಡಿಯೋಡರೆಂಟ್‌ ಇಲ್ಲದಿದ್ದರೆ, 1 ಕಪ್‌ ತಣ್ಣೀರಿಗೆ ತುಸು ಹೈಡ್ರೋಜನ್‌ ಪೆರಾಕ್ಸೈಡ್‌ ಬೆರೆಸಿರಿ. ಇದಕ್ಕೆ ತೆಳು ಕರ್ಚೀಫ್‌ ಅದ್ದಿ, ಕಂಕುಳ ಭಾಗಕ್ಕೆ ಒತ್ತಿರಿ. ಆಗ ದುರ್ಗಂಧ  ದೂರವಾಗುತ್ತದೆ.

ಬ್ರೆಸ್ಟ್ ಫೀಡಿಂಗ್‌ ಈ ಲಾಭಗಳಿಗಾಗಿ

ವೈದ್ಯಕೀಯ ಚಿಕಿತ್ಸೆ : ಡಿಯೋಡರೆಂಟ್‌  ಆ್ಯಂಟಿ ಪರ್ಸ್‌ಪಿರೆಂಟ್‌ ಇಂಥ ಚಿಕಿತ್ಸೆ ಒದಗಿಸಬಲ್ಲ, ಬಾಡಿ ಓಡರ್‌ ತಗ್ಗಿಸಬಲ್ಲವು. ಆ್ಯಂಟಿಪರ್ಸ್‌ಪಿರೆಂಟ್‌ನಲ್ಲಿ ಅಲ್ಯುಮಿನಿಯಂ ಕ್ಲೋರೈಡ್‌ ಇದ್ದು, ದೇಹದ ದುರ್ಗಂಧಯುಕ್ತ ಬೆವರನ್ನು ತಡೆಗಟ್ಟುತ್ತದೆ. ಬೋಟೋಕ್ಸ್ ಟ್ರೀಟ್‌ಮೆಂಟ್‌ ಮೂಲಕ ಬೆವರಿನ ದುರ್ಗಂಧವನ್ನು ತಡೆಗಟ್ಟಬಹುದು.

– ಎನ್‌. ಅಂಕಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ