ಈ ವಿಧಾನಗಳನ್ನು ಅನುಸರಿಸಿ, ಹಬ್ಬದ ವೈವಿಧ್ಯಮಯ ತಿಂಡಿಗಳ ಆನಂದ ಪಡೆಯಲು ಟಮಿ ಫಿಟ್‌ ಆಗಿಟ್ಟುಕೊಳ್ಳಿ. ಹಬ್ಬದ ದಿನಗಳಲ್ಲಿ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಹಬ್ಬದ ಮೂಡ್‌ ನ ಜೊತೆ ಜೊತೆಗೆ ಶಾಪಿಂಗ್‌ ಕೂಡ ಜೋರಾಗಿ ನಡೆಯುತ್ತಿರುತ್ತದೆ. ಏನನ್ನೇ ಖರೀದಿಸಲು ಹೋದರೂ, ಅಲ್ಲಿ ಏನಾದರೂ ತಿನ್ನದೇ ಬರುವುದು ಕಷ್ಟ ಎನಿಸುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ಓವರ್‌ ಈಟಿಂಗ್‌ ಮಾಡಿಬಿಡುತ್ತೇವೆ. ಅದು ಕೇವಲ ತೂಕವನ್ನಷ್ಟೇ ಹೆಚ್ಚಿಸುವ ಕೆಲಸ ಮಾಡುವುದಿಲ್ಲ, ಜೊತೆಗೆ ಹೊಟ್ಟೆನೋವು, ಅಸಿಡಿಟಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅದು ಹಬ್ಬದ ಕಳೆಯನ್ನು ಮಂದಗೊಳಿಸುತ್ತದೆ. ಇಂತಹ ಸ್ಥಿತಿಯಲ್ಲಿ ಈ ಆರೋಗ್ಯಕರ ಟಿಪ್ಸ್ ಅನುಸರಿಸಿ :

ನಿಂಬೆ ಪಾನಕದಿಂದ ದಿನವನ್ನು ಆರಂಭಿಸಿ : ಈಗ ಪ್ರತಿಯೊಬ್ಬರೂ ತಮ್ಮನ್ನು ತಾವು ಫಿಟ್‌ ಆಗಿಟ್ಟುಕೊಳ್ಳಲು ಯೋಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಹಬ್ಬದ ದಿನಗಳಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗುವ ಅಪೇಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. ಇಂತಹ ಸ್ಥಿತಿಯಲ್ಲಿ ನಿಂಬೆ ಪಾನಕ ನಿಮ್ಮ ದೇಹವನ್ನು ಡೀಟಾಕ್ಸ್ ಮಾಡುವ ಕೆಲಸವನ್ನು ಮಾಡುತ್ತದೆ. ಅದರಿಂದಾಗಿ ದೇಹದಲ್ಲಿನ ವಿಷಕಾರಿ ಘಟಕಗಳು ಹೊರಗೆ ಹೋಗಿ ನಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆ ಬಲಗೊಳ್ಳುತ್ತದೆ. ಅದರ ಜೊತೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಮುಕ್ತಿ ದೊರಕುತ್ತದೆ.

ಉಪಾಹಾರ ಲೋ ಕ್ಯಾಲೋರಿಯದ್ದಾಗಿರಲಿ : ದೇಹ ವ್ಯವಸ್ಥೆ ಸಮರ್ಪಕವಾಗಿ ನಡೆಯಲು ಇಂಧನದ ಅಗತ್ಯ ಉಂಟಾಗುತ್ತದೆ. ಆ ಇಂಧನ ನಮಗೆ ಆಹಾರದ ಮೂಲಕ ದೊರೆಯುತ್ತದೆ. ಅದಕ್ಕಾಗಿ ನೀವು ಮುಂಜಾನೆ ಉಪಾಹಾರದಲ್ಲಿ ಕಾರ್ಬೊಹೈಡ್ರೇಟ್‌ಗಿಂತಲೂ ಹೆಚ್ಚಾಗಿ ಪ್ರೋಟೀನ್‌ನ ಸೇವನೆ ಮಾಡುವುದು ಅವಶ್ಯ. ಏಕೆಂದರೆ ಪ್ರೋಟೀನ್‌ ರಿಚ್‌ ಬ್ರೇಕ್‌ ಫಾಸ್ಟ್ ಹೆಲ್ದೀ ಆಗಿರುವುದರ ಜೊತೆಗೆ, ನಿಮ್ಮ ಟಮಿಯನ್ನು ಆರೋಗ್ಯದಿಂದ ಇಡುವ ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಮೊಟ್ಟೆಯನ್ನು ಕೂಡ ನಿಮ್ಮ ಬೆಳಗಿನ ಉಪಾಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬಹುದು.

ಊಟದಲ್ಲಿ ನಾರಿನಂಶ ಇರಲಿ : ಹಬ್ಬದ ಸಂದರ್ಭದಲ್ಲಿ ಎಣ್ಣೆ ಪದಾರ್ಥಗಳು ಹಾಗೂ ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೇವೆ. ಈ ಕಾರಣದಿಂದ ತೂಕ ಹೆಚ್ಚುವುದರ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಊಟದಲ್ಲಿ ನಾರಿನಂಶವುಳ್ಳ ಓಟ್ಸ್, ಕಡಲೆ ಕಾಳು, ಮೊಳಕೆಕಾಳು, ಹಣ್ಣುಗಳು, ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಿ. ಇವನ್ನು ಪಚನ ಮಾಡಿಕೊಳ್ಳುವುದು ಸುಲಭ ಹಾಗೂ ಮಲಬದ್ಧತೆಯ ಸಮಸ್ಯೆಯಿಂದಲೂ ದೂರವಿರಬಹುದು.

ಚಹಾ ಕಾಫಿಗೆ ಪರ್ಯಾಯ ಗ್ರೀನ್‌ ಟೀ : ಸಾಕಷ್ಟು ಧಾವಂತದ ಕಾರಣದಿಂದ ದಣಿವಿನಿಂದ ದೂರವಿರಲು ನಾವು ಆಗಾಗ ಚಹಾ ಕಾಫಿಗೆ ಮೊರೆ ಹೋಗುತ್ತೇವೆ. ಅದು ಅಸಿಡಿಟಿಯ ಸಮಸ್ಯೆಯ ಜೊತೆ ಜೊತೆಗೆ ನಮ್ಮ ಪಚನ ವ್ಯವಸ್ಥೆಯನ್ನೂ ಹದಗೆಡಿಸುವ ಕೆಲಸ ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಗ್ರೀನ್‌ ಟೀ ಸೇವಿಸಿ. ಅದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಗುಣವಿರುವುದರಿಂದ ರೋಗಗಳೊಂದಿಗೆ ಹೋರಾಡುವ ಕೆಲಸ ಮಾಡುತ್ತದೆ.

ಸಂಜೆ ಸ್ನ್ಯಾಕ್ಸ್ ಹೆಲ್ದೀ ಆಗಿರಲಿ : ಸಂಜೆ ಆಗುತ್ತಿದ್ದಂತೆಯೇ ಪ್ರತಿಯೊಬ್ಬರಿಗೂ ಹಸಿವು ಆಗತೊಡಗುತ್ತದೆ. ಮಧ್ಯಾಹ್ನ ಆರೋಗ್ಯಕರ ಆಹಾರ ಸೇವಿಸಿ, ಸಂಜೆ ಹೊತ್ತು ನೀವು ಸಮೋಸಾ ಅಥವಾ ಬೇರೆ ಯಾವುದೇ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವಿರಾದರೆ, ನೀವು ಇಡೀ ದಿನ ಮಾಡಿದ ಶ್ರಮಕ್ಕೆ ತಣ್ಣೀರು ಎರಚಿದಂತೆ. ಇಂತಹ ಸ್ಥಿತಿಯಲ್ಲಿ ನೀವು ಹುರಿದ ಕಡಲೆ, ಕಾಳುಗಳು, ಹಣ್ಣುಗಳನ್ನು ಸೇವಿಸುವಿರಾದರೆ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ ಹಾಗೂ ಟಮಿ ಕೂಡ ಫಿಟ್ ಆಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ