ವಿವಾಹದಂಥ ಪವಿತ್ರ ಬಂಧನಕ್ಕೆ ಒಳಗಾಗಿ ಜೀವನದಲ್ಲಿ ಮೇಲೇರ ಬೇಕೆಂದು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಈ ಮದುವೆಯ ದಿನ ಪ್ರತಿ ಹುಡುಗಿಗೂ  ಅತಿ ವಿಶಿಷ್ಟ ಎನಿಸುತ್ತದೆ. ಹೀಗಾಗಿ ತನ್ನ ಮದುವೆ ದಿನ ಅತಿ ಸ್ಮರಣೀಯವಾಗಿರಲಿ ಎಂದು ಅವಳು ಇನ್ನಿಲ್ಲದ ಪ್ರಯಾಸಪಡುತ್ತಾಳೆ.

ಈ ಸಂದರ್ಭದಲ್ಲಿ ನವ ವಧುವಿನ ಲುಕ್ಸ್ ಅವಳ ಉಡುಗೆ ಮತ್ತು ಆಭರಣಗಳಿಗೆ ತಕ್ಕಂತೆ ಇರದಿದ್ದರೆ, ಅದು ಸರಿ ಎನಿಸುವುದಿಲ್ಲ. ಏಕೆಂದರೆ ನವ ವಧುವಿನ ಸೌಂದರ್ಯ ಹೆಚ್ಚಿಸುವಲ್ಲಿ ಇವುಗಳ ಕೊಡುಗೆ ಅಪಾರ. ಈಗ ನವ ವಧುವಿನ ಸ್ಟೈಲ್ ಮತ್ತು ಅವಳ ಆಯ್ಕೆಗಳೆಲ್ಲ ಬದಲಾಗಿವೆ. ಹೀಗಾಗಿ ಜ್ಯೂವೆಲರ್ಸ್‌ ಸಹ ಬೇರೆ ಬೇರೆ ತರಹದ ಆಕರ್ಷಕ ಒಡವೆಗಳನ್ನು ತಯಾರಿಸುವ ಪ್ರಯತ್ನದಲ್ಲಿರುತ್ತಾರೆ. ಮಹಾನಗರಗಳ ಜ್ಯೂವೆಲರಿಯೇ ಆದರೂ ಎಲ್ಲಾ ಕಡೆ ಇನ್ನೂ ಟ್ರೆಡಿಷನಲ್ ಜ್ಯೂವೆಲರಿಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ಸಾಮಾನ್ಯವಾಗಿ ಬೆಂಗಳೂರು, ಮುಂಬೈ, ಚೆನ್ನೈನಂಥ ಕಡೆ ಮದುವೆಗಳಿಗಾಗಿ ತುಸು ಹೆವಿ ಹಾಗೂ ಪಾರ್ಟಿಗಳಿಗಾಗಿ ಫ್ಯಾನ್ಸಿ ಒಡವೆಗಳು ಅಧಿಕ ಮಾರಾಟವಾಗುತ್ತವೆ. ಮಹಾನಗರಗಳ ಎಲ್ಲಾ ಜ್ಯೂವೆಲರಿ ಅಂಗಡಿಗಳಲ್ಲೂ ಹಾಲ್ ಮಾರ್ಕ್‌ ಗುರುತಿನ ಎಲ್ಲಾ ಟ್ರೇಡ್‌ ಮಾರ್ಕಿನ ಒಡವೆಗಳೂ ಮಾರಾಟವಾಗುತ್ತವೆ.

ಇತ್ತೀಚೆಗಂತೂ ಗ್ರಾಹಕರು ಬಲು ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಹಾಲ್ ‌ಮಾರ್ಕಿನ ಮುದ್ರೆ ಇರದ ಆಭರಣಗಳನ್ನು ಅವರು ಕೊಳ್ಳುವುದೇ ಇಲ್ಲ. ಬೆಂಗಳೂರಿನ ಬಹುತೇಕ ಜ್ಯೂವೆಲರಿಗಳಲ್ಲಿ 25 ವರ್ಷಕ್ಕೂ ಹಳೆಯ ಬೇಕಾದಷ್ಟಿವೆ. ಆ ಕಾರಣ, ಗ್ರಾಹಕರಿಗೆ  ಅಂಥ ಜ್ಯೂವೆಲರಿಗಳ ಮೇಲೆ ವಿಶೇಷ ವಿಶ್ವಾಸವಿರುತ್ತದೆ. ಅದನ್ನು ಇವು ಸಹಾ ಕಾಪಿಡುತ್ತವೆ. ಇಷ್ಟು ಮಾತ್ರವಲ್ಲದೆ ಇಲ್ಲಿ ಟ್ರೆಡಿಷನ್‌ ಫ್ಯಾನ್ಸಿ ಮಂಗಳಸೂತ್ರಗಳು, ನೆಕ್ಲೇಸ್‌ಗಳಿಗೂ ಹೆಚ್ಚಿನ ಬೇಡಿಕೆ ಇದೆ. ತನ್ನ ಮದುವೆ ಡ್ರೆಸ್‌ಗೆ ತಕ್ಕಂತೆಯೇ ಒಡವೆಗಳನ್ನು ಆರಿಸುತ್ತಾಳೆ. ವಿವಾಹದ ಆಭರಣಗಳಲ್ಲಿ ವೆರೈಟಿಗಾಗಿ ಗೋಲ್ಡ್ ಡೈಮಂಡ್‌ ಜೊತೆ ಜೊತೆಗೇ ಮುತ್ತು, ಕುಂದಣ, ರತ್ನಖಚಿತ ಆಭರಣಗಳು ಜನಪ್ರಿಯ ಎನಿಸಿವೆ. ದಿನೇದಿನೇ ಹೆಚ್ಚುತ್ತಿರುವ ಬೆಲೆಯೇರಿಕೆ ನೋಡಿಕೊಂಡು ಜನ ತಮ್ಮ ಬಜೆಟ್‌ ಸೆಟ್‌ ಮಾಡುತ್ತಾರೆ. ಹೀಗಾಗಿ ಕಡಿಮೆ ಪ್ರಮಾಣದ ಚಿನ್ನದಲ್ಲಿ ಆಕರ್ಷಕ ಒಡವೆಗಳ ಡಿಸೈನ್‌ ಹೆಚ್ಚಾಗಿರುವಂತೆ ಎಚ್ಚರ ವಹಿಸುತ್ತಾರೆ.

ಬದಲಾಗುತ್ತಿರುವ ಆಯ್ಕೆ

ಈ ವಿಭಿನ್ನ ಜ್ಯೂವೆಲರಿಗಳ ಮಾಲೀಕರ ಒಟ್ಟಾರೆ ಅಭಿಪ್ರಾಯ ಒಂದೇ. ಕಾಲಕ್ಕೆ ತಕ್ಕಂತೆ ಒಡವೆ, ಅವುಗಳ ಡಿಸೈನ್‌ ಎಲ್ಲ ಬದಲಾಗುತ್ತಿವೆ. ಹಿಂದೆಲ್ಲ ಮದುವೆಗಳಲ್ಲಿ ಭಾರಿ ಭಾರಿ ಒಡವೆಗಳ ಮೆರವಣಿಗೆ ಇರುತ್ತಿತ್ತು. ಆದರೆ ಈಗ ಭಾರಿ ಬದಲಿಗೆ ಅಧಿಕ ಆಕರ್ಷಕ ಹಾಗೂ ಫ್ಯಾನ್ಸಿ ಒಡವೆಗಳು ಜನಪ್ರಿಯವಾಗುತ್ತಿವೆ. ಆಗ ಅವು ಮದುವೆ ನಂತರ ದೈನಂದಿನ ಬಳಕೆ, ಶುಭ ಸಮಾರಂಭ, ಪಾರ್ಟಿ ಇತ್ಯಾದಿಗಳಿಗೆ ಬೇಕಾಗುತ್ತವೆ.

ಬ್ರೈಡಲ್ ಒಡವೆಗಳಲ್ಲಿ 2 ಬಗೆ ಒಂದು ಅಚ್ಚಿನಲ್ಲಿ ತಯಾರಾದುದು ಹಾಗೂ ಇನ್ನೊಂದು ಹ್ಯಾಂಡ್‌ಮೇಡ್‌. ಅಚ್ಚಿನಲ್ಲಿ ತಯಾರಾಗುವಂಥ ಹಗುರ ಹಾಗೂ ಲೋ ಬಜೆಟ್‌ನ. ಇವುಗಳ ಡಿಸೈನ್‌ ಸಹ ಸೀಮಿತ ಆಗಿರುತ್ತದೆ. ಆದರೆ ಹ್ಯಾಂಡ್‌ಮೇಡ್‌ನ ಗುಣಮಟ್ಟ ಇದಕ್ಕಿಂತ ಎಷ್ಟೋ ಮೇಲು. ಇದರಲ್ಲಿ ಚಿನ್ನ ತುಸು ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಜೊತೆಗೆ ಲುಕ್ಸ್ ಕೂಡ ಅತ್ಯಾಕರ್ಷಕ. ಮದುವೆಯ ಒಡವೆಗಳಲ್ಲಿ ಹಂಸ, ನವಿಲು, ಹಾವಿನ ಡಿಸೈನ್ಸ್ ನ್ನು ಹೆಚ್ಚು ಇಷ್ಟುಪಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ