1900ರಲ್ಲಿ ಚೆನ್ನೈನಲ್ಲಿ ಸ್ಥಾಪನೆಗೊಂಡ ಖೇರಾ (ಉಮ್ಮಿಡಿ ಬಂಗಾರು ಜ್ಯೂವೆಲರ್ಸ್) ದ.ಭಾರತದಾದ್ಯಂತ ಆಭರಣ ಮಾರಾಟದಲ್ಲಿ ಜಯಭೇರಿ ಮೊಳಗಿಸಿದೆ. ಇತ್ತೀಚೆಗೆ ಇವರ ವತಿಯಿಂದ `ನವರತ್ನ' ರತ್ನಾಭರಣಗಳ ಸಂಗ್ರಹ ಬಿಡುಗಡೆಗೊಂಡಿತು. ಖೇರಾ ಕ್ರಿಯೇಟಿವ್ ಸೆಂಟರ್‌ನ ಕರಕುಶಲದಿಂದ ರೂಪುಗೊಂಡ ಇದರಲ್ಲಿ ನೆಕ್ಲೇಸ್, ಪೆಂಡೆಂಟ್ಸ್, ಉಂಗುರ, ಬಳೆಗಳ ಭಾರಿ ಸಂಗ್ರಹವಿದೆ. ಇಲ್ಲಿ ಪಚ್ಚೆ, ಹವಳ, ಮುತ್ತು, ಕೆಂಪು ಮೊದಲಾದ ನವರತ್ನಗಳು ಮುಖ್ಯ ಆಭರಣದೊಂದಿಗೆ ಬೆರೆತು ಅಪೂರ್ವ ಶೋಭೆ ಬೀರುತ್ತಿವೆ. ಪ್ರತಿ ಆಭರಣದಲ್ಲೂ ಒಟ್ಟಾಗಿ ನವರತ್ನಗಳು ಅಡಕವಾಗಿರುವುದು ಅನನ್ಯ ಎನಿಸಿದೆ.
ಈ ಸಂಗ್ರಹದ ಕುರಿತಾಗಿ ಸಂಸ್ಥೆಯ ನಿರ್ದೇಶಕ ಉಮ್ಮಿಡಿ ಜಿತೇಂದ್ರ, ``ನಮ್ಮ ಖೇರಾದಲ್ಲಿ ಗ್ರಾಹಕರನ್ನು ಗಮದಲ್ಲಿಟ್ಟುಕೊಂಡು ಪ್ರತಿಯೊಂದನ್ನೂ ಅತಿ ವಿಶಿಷ್ಟವಾಗಿ ರೂಪಿಸುತ್ತೇವೆ. ಈ ಒಡವೆ ಅವರಿಗೆ ಜೀವನವಿಡೀ ಮಧುರ ನೆನಪು ನೀಡುವಂತಿರುತ್ತದೆ. 9 ಬಗೆಯ ರತ್ನಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೇರೆ ಬೇರೆ ರೂಪದಲ್ಲಿ ಸಿಗುತ್ತಿರುತ್ತವೆ. ಆದರೆ ಒಂದೇ ಆಭರಣದಲ್ಲಿ ಎಲ್ಲವನ್ನೂ ಹುದುಗಿಸಿ, ಅತ್ಯದ್ಭುತ ವಿನ್ಯಾಸದಲ್ಲಿ ಒದಗಿಸಲಾಗಿದೆ. ಈ ಆಧ್ಯಾತ್ಮಿಕ ಆಭರಣಗಳ ಸಂಗ್ರಹದಿಂದ ನಿಮಗೆ ಬೇಕಾದುದನ್ನು ಆರಿಸಿ ಸಂಭ್ರಮಿಸಿ,'' ಎಂದರು.
ನವಗ್ರಹಗಳ ಪ್ರತಿರೂಪವಾಗಿರುವ ಈ ನವರತ್ನಗಳು ಧರಿಸಿದವರಿಗೆ ಅಪೂರ್ವ ದಿವ್ಯಶಕ್ತಿ ಅನುಗ್ರಹಿಸುತ್ತವೆ. ಜಂಜಾಟದ ಜೀವನದ ಮಧ್ಯೆ ಆರೋಗ್ಯ ಸುಖ, ಸಮೃದ್ಧಿ ತರಲು ಇದು ಪ್ರೇರಕ.
ಸಂಸ್ಥೆಯ ಮತ್ತೂಬ್ಬ ನಿರ್ದೇಶಕರಾದ ಉಮ್ಮಿಡಿ ಅಮರೇಂದ್ರನ್ ಮಾತನಾಡಿ, `` ನಮ್ಮ ಖೇರಾ ಕ್ರಿಯೇಟಿವ್ ಸೆಂಟರ್ ಸರಿಸಾಟಿಯಿಲ್ಲದ ಚೆಲುವು ಒದಗಿಸಲು ಈ ಸಂಗ್ರಹಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ. ಪ್ರತಿ ಆಭರಣದ ಹಿಂದೆಯೂ ಅಖಂಡ ಆಧ್ಯಾತ್ಮಿಕ ವಿಜ್ಞಾನವೇ ಅಡಗಿದೆ. ಕರಕುಶಲಿಗರು ಹಿಂದಿನ ಟೆಕ್ನಿಕ್ ಬಳಸಿ ಇಂದಿನ ಆಧುನಿಕ ತಂತ್ರಜ್ಞಾನ ಒಪ್ಪುವಂತೆ ವಿನ್ಯಾಸ ರೂಪಿಸಿದ್ದಾರೆ. ಹೀಗಾಗಿಯೇ ತಲೆಮಾರಿನಿಂದ ತಲೆಮಾರಿಗೆ ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಈ ಆಭರಣಗಳ ಪಾತ್ರ ಹಿರಿದು.'' ಎಂದರು.
ಈ ಅನುಪಮ ರತ್ನಾಭರಣಗಳ ಸಂಗ್ರಹದ ದರ್ಶನವೇ ಪ್ರತ್ಯೇಕ ಅನುಭವ ನೀಡುತ್ತದೆ. ಡೇಲಿಯಾ, ಕಿರಿಗಾಮಿಯಂಥ ಅಪೂರ್ವ ಶ್ರೇಣಿಗಳ ಸಂಗ್ರಹ ಇಲ್ಲಿ ಅಡಕವಾಗಿರುವುದೇ ಇದರ ವೈಶಿಷ್ಚ್ಯ. ಇದು ಬೆಂಗಳೂರಿನ ಜಯನಗರದ 4ನೇ ಬ್ಲಾಕ್ ಹಾಗೂ ಚೆನೈನ ಅಣ್ಣಾಸಾಲೈ, ಅಣ್ಣಾನಗರಗಳ ಭವ್ಯ ಮಳಿಗೆಗಳಲ್ಲಿ ಲಭ್ಯ.
ಖೇರಾ 9001-2008 ದೃಢೀಕೃತ ಕಂಪನಿಯಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡು ಬಂದಿದೆ. ಬಂಗಾರದ ಒಡವೆ ಮಾತ್ರವಲ್ಲದೆ ಬೆಳ್ಳಿ, ಪ್ಲಾಟಿನಂ, ವಜ್ರ, ರತ್ನಾಭರಣಗಳ ಅಖಂಡ ಸಂಗ್ರಹವೇ ಇಲ್ಲಿದ್ದು ಸೀಮಾತೀತ, ಕಾಲಾತೀತ ವಿನ್ಯಾಸಗಳ ಅನುಪಮ ಮೌಲ್ಯವುಳ್ಳದ್ದಾಗಿದೆ. ಈ ರತ್ನಾಭರಣಗಳ ಮೂಲಕ ಗ್ರಾಹಕರಿಗೆ ಅತ್ಯಮೂಲ್ಯ ಆಭರಣಜ್ಞಾನ ನೀಡುವುದು ಇವರ ಉದ್ದೇಶ. ವಿಶಿಷ್ಟ ಶಾಪಿಂಗ್ ಅಭರಣಕ್ಕಾಗಿ ಇಂದೇ ಖೇರಾ ಮಳಿಗೆಗೆ ಭೇಟಿ ನೀಡಿ.
ಹೆಚ್ಚಿನ ವಿರಗಳಿಗಾಗಿ ಸಂಪರ್ಕಿಸಿ: ಖೇರಾ ಮಳಿಗೆ, 33ನೇ ಕ್ರಾಸ್, 4ನೇ ಬ್ಲಾಕ್ ಜಯನಗರ, ಬೆಂಗಳೂರು. ಫೋನ್:080 26543727/46445000 .