ಸಂಕ್ರಾಂತಿ ಹಬ್ಬ ನಿಸರ್ಗದ ಹಬ್ಬವಾಗಿದೆ. ಪುಷ್ಯಮಾಸದಲ್ಲಿ ಸೂರ್ಯನು ಮಕರರಾಶಿಗೆ ಪ್ರವೇಶಿಸುತ್ತಾನೆ. ಅದಕ್ಕಾಗಿ ಈ ಹಬ್ಬಕ್ಕೆ ಮಕರ ಸಂಕ್ರಾಂತಿ ಎನ್ನುತ್ತಾರೆ. ಮುಂದಿನ ಶುಭ ಕಾರ್ಯಾರಂಭಕ್ಕೆ ಸೂರ್ಯನ ಪಥಚಲನೆಯ ಈ ಹಬ್ಬ ಪ್ರಮುಖವಾದುದು.  ಪ್ರಪಂಚಕ್ಕೆ ಬೆಳಕು ಶಾಖ ನೀಡುವ ಮೂಲಕ ಸೂರ್ಯ ಜನಪದರ ನಿಜ ದೈವ. ಜಗತ್ತಿನ ಎಲ್ಲಾ ಕಡೆಯಲ್ಲೂ ಸೂರ್ಯೋಪಾಸನೆ ನಡೆಯುತ್ತಿದೆ. ಸೂರ್ಯ ಆರೋಗ್ಯದ ಅಧಿದೇವತೆ. ಬೆಳಗಿನ ಹೊತ್ತಿನಲ್ಲಿ ಮಾಡುವ ಸೂರ್ಯ ನಮಸ್ಕಾರದಿಂದ ದೇಹ ಶಕ್ತಿಯುತವಾಗುತ್ತದೆ. ಈ ರೀತಿ ಜಗತ್ತಿಗೆ ಬೆಳಕು ನೀಡುವ ಸೂರ್ಯನ ಚಲನೆಗೆ ಸಂಬಂಧಿಸಿದ ದಿನದ ಹಬ್ಬವೇ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಪ್ರಸಿದ್ಧವಾಗಿದೆ. ಸಂಸ್ಕೃತದಲ್ಲಿ ಸಂಕ್ರಮಣ ಎಂದರೆ ಪಾದ ಚಲನೆ. ದೈವಸ್ಥಿತವಾಗಿ ನಡೆಯುವ ಚಲನೆಯೇ ಸಂಕ್ರಾಂತಿ. ಸಂಕ್ರಾಂತಿ ಎಂದರೆ ಸಮ್ಯಕ್‌+ ಕ್ರಾಂತಿ. ಸೂರ್ಯನ ಮಕರ ರಾಶಿ ಪ್ರವೇಶವೇ ಸಂಕ್ರಾಂತಿ. ಮಕರ ಎಂದರೆ ಮೊಸಳೆ, ಕ್ರಾಂತಿ ಎಂದರೆ ಬದಲಾವಣೆ. ಮಕರ ವಾಸ್ತವ ಪ್ರಪಂಚದ ಪ್ರತಿಬಿಂಬ. ಮಕರ ಸಂಕ್ರಮಣ ಎಂದರೆ ವಾಸ್ತವ ಪ್ರಪಂಚದ ಬಂಧನದಿಂದ ಹೊರಬರುವುದು. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗುತ್ತಾನೆ. ಸೂರ್ಯ ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸಿದ ಈ ಸಂದರ್ಭವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ. ಕೆಲವರು ಇದನ್ನು `ಬೋಗಿಹಬ್ಬ,' `ಸುಗ್ಗೀಹಬ್ಬ' ಎಂದೂ ಕರೆಯುತ್ತಾರೆ.

`ತಮಸೋಮಾ ಜ್ಯೋತಿರ್ಗಮಯ' ಎಂದರೆ ಕತ್ತಿಯಿಂದ ಬೆಳಕಿನ ಕಡೆಗೆ ಪ್ರಯಾಣ ಮಾಡುವ ಈ ಸುದಿನ ಕತ್ತಲೆಯು ನಿಧಾನವಾಗಿ ಕಡಿಮೆಯಾಗಿ ಹಗಲು ಅಧಿಕವಾಗಿರುತ್ತದೆ. ಪುರಾಣ ಪುಣ್ಯ ಕಥೆಗಳಲ್ಲಿ ಸಂಕ್ರಾಂತಿಯ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ದೇವರು ಮಲಗಿದ್ದವನು ಈ ದಿನ ಏಳುತ್ತಾನೆ. ಈ ಶುಭ ದಿವಸದಿಂದ ಒಳ್ಳೆಯ ಕೆಲಸವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಇದನ್ನು `ಉತ್ತರಾಯಣ' ಪುಣ್ಯಕಾಲ ಅಥವಾ `ದೇವಾಯನ ಕಾಲ' ಎಂದು ಕರೆಯುತ್ತಾರೆ.

ನಮ್ಮ ಪಂಚಾಂಗಗಳಲ್ಲಿ ಸಂಕ್ರಾಂತಿ ದೇವತೆಯ ರೂಪ, ಜನನ, ಅಲಂಕಾರ, ಆಹಾರ, ಉಡುಪು, ಪ್ರಯಾಣ ಮಾಡುವ ದಿಕ್ಕು. ಕುಡಿಯುವ ನೀರು, ಹೆಸರು ಇದರಿಂದಾಗುವ ಫಲಗಳು ಎಲ್ಲವನ್ನೂ ವಿವರವಾಗಿ ತಿಳಿಸುತ್ತಾರೆ. ಇದು ದೇವತೆಗಳು ಮತ್ತು ಮನುಷ್ಯರು ಇಬ್ಬರಲ್ಲೂ ವಿಶಿಷ್ಟವಾದ ಹಬ್ಬ ಎಂದು ಇದರಿಂದ ತಿಳಿಯುತ್ತದೆ.

ಸಂಕ್ರಾಂತಿ ಹಬ್ಬದಂದು ದೇವರಿಗರ್ಪಿಸುವ ಆ ಸಂಕ್ರಾಂತಿಯಲ್ಲಿ ಎಳ್ಳುಬೆಲ್ಲ ಕರ್ಮದ ಹೊರೆಯನ್ನು ಕಿರಿದಾಗಿಸಿ (ಎಳ್ಳು) ದೈವೀಗುಣ ಮೈಗೂಡಿಸಿಕೊಳ್ಳುವ (ಬೆಲ್ಲ), ಪ್ರಕೃತಿಗಾಗಿ ಹಂಬಲಿಸುತ್ತ (ಕಬ್ಬು) ತಾಳ್ಮೆಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ಸಂದೇಶವನ್ನು ಬಿಂಬಿಸುತ್ತದೆ.

ಪ್ರಾದೇಶಿಕ ವಿಭಿನ್ನತೆ

ಮಕರ ಸಂಕ್ರಾಂತಿ ಒಂದು ರಾಷ್ಟ್ರೀಯ ಹಬ್ಬ. ಈ ಸಂಕ್ರಾಂತಿ ಹಬ್ಬವನ್ನು ಭಾರತವಲ್ಲದೆ, ವಿದೇಶಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಗ್ರೀಕರು ಸಂಕ್ರಾಂತಿಯನ್ನು `ಬೆಕನ್‌' ಎಂಬ ಹೆಸರಿನಿಂದ ಆಚರಿಸಿದರೆ, ರೋಮ್ ನಲ್ಲಿ  `ಬ್ಯಾಕಿನ್‌ ಡೇ' ಎಂಬ ಹೆಸರಿನಿಂದ ಆಚರಿಸುತ್ತಾರೆ. ಈಜಿಫ್ಟ್ ನಲ್ಲಿ `ನಮ್ ಫೆಸ್ಟಿವ್‌' ಎಂಬ ಹೆಸರಿನಿಂದ ಆಚರಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ