ಯು.ಎಸ್‌.ನ ಪ್ರಿನ್ಸ್ ಟನ್‌ ಯೂನಿವರ್ಸಿಟಿಯ ನ್ಯೂರೋಸೈನ್ಸ್ ಇನ್‌ಸ್ಟಿಟ್ಯೂಟ್‌ನ ಅಧ್ಯಯನದಂತೆ ನಮ್ಮ ಸುತ್ತಮುತ್ತಲಿನ ವಾತಾವರಣ ಕೊಳೆಯಾಗಿ ಅವ್ಯವಸ್ಥಿತವಾಗಿದ್ದರೆ ನಾವು ಏಕಾಗ್ರತೆಯಿಂದ ಕೆಲಸ ಮಾಡು, ಹೊಸ ವಿಚಾರಗಳನ್ನು ಆಲೋಚಿಸುವ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಒಂದು ಚಿಕ್ಕ ಮಗು ಒಂದೇ ಸಮನೆ ``ಟಾಫಿ....ಟಾಫಿ....ಟಾಫಿ....ನನಗೆ ಟಾಫಿ ಬೇಕು'' ಎಂದು ಹಟ ಮಾಡುತ್ತಿದ್ದಾಗ ನಮ್ಮ ಮೂಡ್‌ ಹಾಳಾಗುವಂತೆ ಕೊಳೆ, ಕಸವಿದ್ದರೂ ನಮ್ಮ ಮೂಡ್‌ ಹಾಳಾಗುತ್ತದೆ.

ಆದ್ದರಿಂದ ನಮ್ಮ ಮೆದುಳನ್ನು ಶಾಂತವಾಗಿಟ್ಟು, ಅದನ್ನು ಕೇಂದ್ರೀಕರಿಸಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾದರೆ, ನಮ್ಮ ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿಟ್ಟುಕೊಳ್ಳಬೇಕು.

ನಾನು ಚಿಕ್ಕವಳಿದ್ದಾಗ ನಮಗೆ ಒಬ್ಬ ಮೆಡಿಟೇಶನ್‌ ಟೀಚರ್‌ ಮೈತ್ರಿ ಮೇಡಂ ಇದ್ದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವರ ಬಳಿ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಿದ್ದರು. ಏಕಾಗ್ರತೆಯ ಕೊರತೆ ಅಥವಾ ನೆನಪಿನ ಶಕ್ತಿ ಕಡಿಮೆ ಎಂದು ಯಾರಾದರೂ ಹೇಳಿದಾಗ ಇದರ ಬಗ್ಗೆ ಮೈತ್ರಿ ಮೇಡಂ ಒಂದೇ ಪ್ರಶ್ನೆ ಕೇಳುತ್ತಿದ್ದರು, `ನಿಮ್ಮ ಮನೆ ಅಥವಾ ಓದುವ ಕೊಠಡಿಯನ್ನು ಕಡೆಯ ಬಾರಿ ಯಾವಾಗ ಸ್ವಚ್ಛಗೊಳಿಸಿದ್ದೆ?'

ಅವರು ಹೇಳುತ್ತಿದ್ದುದು ನೂರಕ್ಕೆ ನೂರು ನಿಜ ಎಂದು ನನಗೆ ಈಗ ತಿಳಿಯುತ್ತಿದೆ. ನಾನು ಏನಾದರೂ ಮಾಡಲು ಹೊರಟಾಗ ಅಥವಾ ಏಕಾಗ್ರತೆ ಹೊಂದಲು ವಿಫಲಳಾದಾಗ ನನ್ನ ಸುತ್ತಮುತ್ತ ನೋಡುತ್ತೇನೆ. ನನ್ನ ಮಾನಸಿಕ ಸ್ಥಿತಿ ನನ್ನ ಮನೆಯಂತೆಯೇ ಅವ್ಯವಸ್ಥಿತವಾಗಿದೆ ಎಂದು ತಿಳಿಯುತ್ತದೆ. ಕೂಡಲೇ ನಾನು ಮನೆಯನ್ನು ಸ್ವಚ್ಛಗೊಳಿಸತೊಡಗುತ್ತೇನೆ. ಆಶ್ಚರ್ಯವೆಂದರೆ, ಆಗ ನನ್ನ ಮೆದುಳೂ ಸ್ವಚ್ಛವಾಗುತ್ತದೆ ಹಾಗೂ ಕೇಂದ್ರೀಕೃತವಾಗುತ್ತದೆ.

ಲೇಖಕ ಬೆರಿ ಎ. ಡೆನಿಸ್‌ ತಮ್ಮ ಪುಸ್ತಕ `ದಿ ಚೌಚಕಿ ಚಾಲೆಂಜ್‌'ನಲ್ಲಿ ಹೀಗೆ ಬರೆಯುತ್ತಾರೆ. ಚೌಚಕಿ ಎಂದರೆ ಆಗಾಗ್ಗೆ ಸಂಗ್ರಹವಾಗುವ ಏನೂ ಉಪಯೋಗವಿಲ್ಲದಿರುವ ವಸ್ತುಗಳು. ನಾವು ಕೊಂಚ ಸಮಯ ತೆಗೆದುಕೊಂಡು ಈ ಹಳೆಯ ಕೆಲಸಕ್ಕೆ ಬಾರದ ವಸ್ತುಗಳನ್ನು ಎಸೆಯುವುದು ಹಾಗೂ ಸುತ್ತಮುತ್ತ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರೆ ನಮ್ಮ ಮೆದುಳು ಹೆಚ್ಚು ರಚನಾತ್ಮಕವಾಗುತ್ತದೆ. ಶಾಂತಿ ಮತ್ತು ಏಕಾಗ್ರತೆ ಸಿಗುತ್ತದೆ. ಹೊಸ ವಿಚಾರಗಳನ್ನು ಆಲೋಚಿಸಬಹುದು.

ಮನೆ ಕಸದಿಂದ ತುಂಬಿದ್ದರೆ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಆಶ್ಚರ್ಯಕರವಾದರೂ ವಾಸ್ತವವಾಗಿದೆ.

ಮನೆಯಲ್ಲಿ ಹೆಚ್ಚು ಕಸ ಕಡ್ಡಿ ಹರಡಿದ್ದರೆ ನಮ್ಮ ಮೆದುಳಿನ ಕಾರ್ಯ ವಿಧಾನ ನಿಧಾನವಾಗುತ್ತದೆ, ಸಿಕ್ಕುಗಳುಂಟಾಗುತ್ತದೆ. ಹೊಸ ವಿಚಾರಗಳನ್ನು ಆಲೋಚಿಸುವ ಶಕ್ತಿ ಕಡಿಮೆಯಾಗುತ್ತದೆ. ಉತ್ಸಾಹ ಕುಂದುತ್ತದೆ ಮತ್ತು ಮೆದುಳಿನ ಮೇಲೆ ಒತ್ತಡ ಹೆಚ್ಚುತ್ತದೆ ಎಂದು ಡೆನಿಸ್‌ ಹೇಳುತ್ತಾರೆ.

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, ಶೇ.69ರಷ್ಟು ಜನ ತಮ್ಮ ಮನೆ ಕಸದಿಂದ ಕೂಡಿದ್ದು, ಅವ್ಯವಸ್ಥಿತವಾಗಿದ್ದರೆ ತಮ್ಮ ಮೆದುಳು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಸ್ವಚ್ಛ ಮನೆ ಸ್ವಸ್ಥ ಶರೀರ

ನಿಮ್ಮ ಮನೆ ನಿಮ್ಮ ಜೀವನಶೈಲಿಯ ಕನ್ನಡಿಯಾಗಿದೆ. ಕಸವಿರುವ ಒಂದು ಮನೆ ಅಸ್ವಸ್ಥ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಮನೆಯಲ್ಲಿ ಕಸ ತುಂಬಿದ್ದರೆ ಹಾಳುಮೂಳು ತಿಂಡಿಗಳನ್ನು ಹೆಚ್ಚು ತಿನ್ನುತ್ತೀರಿ. ಅದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ