ಆಭರಣ ಕೊಳ್ಳಬಯಸುವ ಗ್ರಾಹಕರು ಸುಲಭವಾಗಿ ತಮ್ಮ ಮನೆಯಲ್ಲೇ ಕುಳಿತು, ಯಾವುದೇ ಬಗೆಯ ಒಡವೆಗಳಿಗೆ ಹಾಯಾಗಿ ಆರ್ಡರ್‌ ನೀಡಬಹುದಾಗಿದೆ, ಆನ್‌ ಲೈನ್‌ ಶಾಪಿಂಗ್‌ನ ಮಜಾ ಪಡೆಯಬಹುದಾಗಿದೆ.

ಅತಿ ಸುಲಭವಾಗಿ ನಿಭಾಯಿಸಬಹುದಾದ, ಈ ಸುರಕ್ಷಿತ ವೆಬ್‌ ಸೈಟ್‌ನಲ್ಲಿ ಹಲವಾರು ಹೊಸ ಫೀಚರ್‌ಗಳಿವೆ. ಇದರ ಮೂಲಕ ಗ್ರಾಹಕರು ಬ್ರೌಸ್‌ ಮಾಡಿ ಜಿ.ಆರ್‌.ಟಿ. ಜ್ಯೂವೆಲರ್ಸ್‌ನಿಂದ ಆನ್‌ ಲೈನ್‌ ಖರೀದಿ ಮಾಡಿ, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಬಳಸಿ ಹಲವಾರು ಯೋಜನೆಗಳಿಗೆ ಪೇಮೆಂಟ್‌ ಮಾಡಬಹುದು. ಈ ವೆಬ್‌ ಸೈಟ್‌ನಲ್ಲಿ ವಿಪುಲ ಒಡವೆಗಳ ಸಂಗ್ರಹವಿದ್ದು, ಗ್ರಾಹಕರು ತಮ್ಮ ಆಯ್ಕೆಯಂತೆ ಆರಿಸಲು ಅದು ಡಿಸ್‌ ಪ್ಲೇ ಮಾಡುತ್ತದೆ. ಈ ಹೇರಳ ಸಂಗ್ರಹದಲ್ಲಿ ಕಿವಿಯೋಲೆ, ಪೆಂಡೆಂಟ್ಸ್, ಉಂಗುರ, ಬಳೆ, ಸರ, ಚೇನ್‌, ಹಾರ, ನೆಕ್ಲೇಸ್‌, ಕಾರ್ಪೊರೇಟ್‌ ಗಿಫ್ಟ್ ಇತ್ಯಾದಿ ಸ್ವರ್ಣಾಭರಣಗಳು ಅಡಗಿವೆ. ಈ ಸಮಸ್ತ ಒಡವೆಗಳನ್ನೂ ರೆಗ್ಯುಲರ್‌ ಡಿಸ್‌ ಪ್ಲೇ ತೋರಿಸುತ್ತಾ ಕಾಲಕ್ರಮೇಣ ಅಪ್‌ ಗ್ರೇಡ್‌ ಮಾಡಲಾಗುತ್ತದೆ.

ಈ ಸೈಟ್‌ನಲ್ಲಿ ಲಭ್ಯವಿರುವ ಗಿಫ್ಟ್ ಫೈಂಡರ್‌ ಬಟನ್‌, ನಿಮ್ಮ  ಪ್ರೀತಿಪಾತ್ರರಿಗೆ ಬೇಕಾದ ಒಡವೆಗಳನ್ನು ಆರಿಸಿಕೊಳ್ಳಲು ನಿಮಗೆ ಅನುಕೂಲ ಒದಗಿಸುತ್ತದೆ. ನಿಮ್ಮ ನೆಂಟರು, ಫ್ರೆಂಡ್ಸ್ ಯಾರಿಗೇ ಆಗಲಿ ಬೇಕಾದುದನ್ನು ಈ ಮೂಲಕ ಆರಿಸಿ ಆರ್ಡರ್‌ ಕೊಟ್ಟರೆ, ನೀವು ಹೇಳಿದ ಸಮಯ ಸಂದರ್ಭಕ್ಕೆ ನೇರವಾಗಿ ಶೋರೂಮ್ ನಿಂದ ಅವರ ಮನೆಬಾಗಿಲಿಗೇ ನಿಮ್ಮ ವೈಯಕ್ತಿಕ ಸಂದೇಶದೊಂದಿಗೆ ಅದು ತಲುಪುತ್ತದೆ. ಗ್ರಾಹಕರು ಯಾವ ಸಂದರ್ಭಕ್ಕೆ ಈ ಆಭರಣ ಬೇಕಾಗುತ್ತದೋ ತಮ್ಮ ಆದ್ಯತೆಗೆ ಅನುಸಾರವಾಗಿ ಹೇಳಬೇಕು. ಅದನ್ನು ಪಡೆಯಲಿರುವ ವ್ಯಕ್ತಿಯ ವಿವರ, ವಿಳಾಸ, ಅವರಿಗೆ ತಲುಪಬೇಕಾದ ಉಡುಗೊರೆ/ಒಡವೆಯ ವಿವರ, ಶುದ್ಧತೆಯ ನಿಖರತೆ ಇತ್ಯಾದಿಗಳನ್ನು ನಿಮ್ಮ ಬಜೆಟ್‌ನೊಂದಿಗೆ ಸೂಚಿಸಬೇಕು. ಈ ಸೈಟ್ ಮೂಲಕ ಆಯ್ಕೆಗೆ ವಿಪುಲ ಅವಕಾಶಗಳಿದ್ದು, ಆನ್‌ ಲೈನ್‌ನಲ್ಲಿ ಸುಲಭವಾಗಿ ಆರ್ಡರ್‌ ನೀಡಬಹುದಾಗಿದೆ. ಇದರಿಂದ ಕೊನೆ ಘಳಿಗೆಯ ಟೆನ್ಶನ್‌ ಇರುವುದಿಲ್ಲ, ಹಾಯಾಗಿ ಖರೀದಿ ಮಾಡಬಹುದಾಗಿದೆ.

ಈ ವೆಬ್‌ ಸೈಟ್‌ ಮೂಲಕ ಗ್ರಾಹಕರು ತಮ್ಮ ಆತ್ಮೀಯರಿಗೆ ರೂ.100/ ರಿಂದ ರೂ.10,000/ದವರೆಗೂ ಇ-ಗಿಫ್ಟ್ ವೌಚರ್ಸ್‌ ಕಳುಹಿಸಿ ಕೊಡಬಹುದಾಗಿದೆ. ಹೀಗೆ ಇ-ಗಿಫ್ಟ್ ವೌಚರ್‌ಗಳನ್ನು ಒಂದೇ ಸಲ ಅನೇಕ ನೆಂಟರಿಷ್ಟರಿಗೆ ಏಕಕಾಲದಲ್ಲಿ ಕಳುಹಿಸಿಕೊಡುವ ಸೌಲಭ್ಯ ಇದೆ.

ಜಿ.ಆರ್‌.ಟಿ ಜ್ಯೂವೆಲರ್ಸ್‌ ಪ್ರಕಾರ, ಈಗ ಅಲ್ಲಿನ ವಿವಿಧ ಉಳಿತಾಯದ ಯೋಜನೆಗಳಿಗೆ ಚಂದಾದಾರರಾಗುವುದು ಭಾರಿ ಸುಲಭ, ಅನುಕೂಲಕರ ಹಾಗೂ ಟೆನ್ಶನ್‌ ಫ್ರೀ!

ಜಿ.ಆರ್‌.ಟಿ ಜ್ಯೂವೆಲರ್ಸ್‌ ತನ್ನ ನೆಚ್ಚಿನ ಗ್ರಾಹಕರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಇದರಿಂದ ಅವರು ಯಾವುದನ್ನಾದರೂ ಆರಿಸಿಕೊಳ್ಳಬಹುದಾಗಿದೆ. ಫ್ಲೆಕ್ಸಿ ಗೋಲ್ಡ್ ಪ್ಲ್ಯಾನ್‌, ಗೋಲ್ಡ್ ಟ್ರೀ ಮುಂತಾದ ಆಯ್ಕೆಗಳಿವೆ. ಈಗಾಗಲೇ ಚಂದಾದಾರರಾಗಿರುವವರು ಅಥವಾ ಹೊಸ ಗ್ರಾಹಕರು, ಈ ವೆಬ್‌ ಸೈಟ್‌ ಮೂಲಕ ತಮ್ಮ ಪಾವತಿಗಳನ್ನು ಪ್ರತಿಮಾಸ ಆನ್‌ ಲೈನ್‌ನಲ್ಲಿ ಕಟ್ಟಬಹುದು. ಹಾಗೆಯೇ ಇಡೀ ವರ್ಷ ಸೇಲ್ ಪ್ರಮೋಷನ್‌ಗಳಲ್ಲಿ ಭಾಗಹಿಸುವುದು ಕೂಡ ಸುಲಭ ಸಾಧ್ಯವಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ  ಬೆಂಗಳೂರಿನ ಜಯನಗರ 4ನೇ ಬ್ಲಾಕ್‌-26651515, ಮಲ್ಲೇಶ್ವರಂ (ಸಂಪಿಗೆ ಥಿಯೇಟರ್‌ ಬಳಿ)  080-22921515.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ