ನಾವು ಮೂವರು ಅಕ್ಕ ತಂಗಿಯರು. ಅಪ್ಪ ಅಮ್ಮ ನಮ್ಮನ್ನು ಚೆನ್ನಾಗಿ ಓದಿಸಿದ್ದಾರೆ. ಅವರಿಗೆ ಮೂವರು ಹೆಣ್ಣುಮಕ್ಕಳೆಂದು ಎಂದೂ ಬೇಸರವಾಗಿಲ್ಲ. ನಮ್ಮ ಚಿಕ್ಕಮ್ಮನಿಗೆ ಒಬ್ಬಳೇ ಮಗಳಿದ್ದು ಅವಳ ಮದುವೆಗೆ ನಾವು ಹೋಗಿದ್ದೆವು. ಮೂವರು ಹೆಣ್ಣುಮಕ್ಕಳಿದ್ದೂ ನಮ್ಮ ಅಮ್ಮ ಹೇಗೆ ಸಂತೋಷವಾಗಿರುತ್ತಾರೆಂದು ಚಿಕ್ಕಮ್ಮನಿಗೆ ಅಸೂಯೆಯಾಗುತ್ತಿತ್ತು.

ಚಿಕ್ಕಮ್ಮ ಮಗಳನ್ನು ಬೀಳ್ಕೊಡುವಾಗ ಅಳುತ್ತಾ ಬೀಗರಿಗೆ ಕೈಮುಗಿದು ಹೇಳಿದರು, ``ನನ್ನ ಒಬ್ಬಳೇ ಮಗಳನ್ನು ಬಹಳ ಮುದ್ದಿನಿಂದ ಬೆಳೆಸಿದ್ದೇನೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳಿ.''

ನಮ್ಮ ಅಮ್ಮ ಅವರಿಗೆ ಧೈರ್ಯ ಹೇಳುತ್ತಾ, ``ಒಂದಲ್ಲಾ ಒಂದು ದಿನ ಮಗಳನ್ನು ಅತ್ತೆ ಮನೆಗೆ ಕಳುಹಿಸಲೇಬೇಕು. ಎಲ್ಲ ಸರಿಹೋಗುತ್ತೆ,'' ಎಂದರು.

ಅದಕ್ಕೆ ಚಿಕ್ಕಮ್ಮ, ``ಅಕ್ಕಾ, ನಿಮಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಒಬ್ಬಳೇ ಮಗಳಿರೋ ಕಷ್ಟ ನಿಮಗೇನು ಗೊತ್ತು?'' ಎಂದರು.

ಬೀಗರು ಕೊಂಚ ಹಾಸ್ಯ ಮನೋಭಾವದವರು. ಅವರು ಚಿಕ್ಕಮ್ಮನ ಮಾತು ಕೇಳಿ, ``ನೋಡೀಮ್ಮಾ, ನನಗೆ 3 ಗಂಡು ಮಕ್ಕಳು. ದೊಡ್ಡ ಸೊಸೆ ಮನೆ ಸಾಮಾನು ತರೋಕೆ ನನ್ನನ್ನೇ ಮಾರ್ಕೆಟ್‌ಗೆ ಕಳಿಸ್ತಾಳೆ. ಎರಡನೇ ಸೊಸೆ ಸಮಯಕ್ಕೆ ಸರಿಯಾಗಿ ಊಟ ಕೊಡಲ್ಲ. ಇನ್ನು ನಿಮ್ಮ ಮಗಳು ಬಂದು ನನ್ನನ್ನು ಮನೇಲಿ ಇರೋಕೆ ಬಿಡ್ತಾಳೋ ಇಲ್ವೋ ನೋಡಬೇಕು. ನೀವು ಸಾಕಿ ಬೆಳೆಸಿ ನಮಗೆ ಕೊಟ್ರಿ. ಆದರೆ ಜೀವನವಿಡೀ ನಾವು ನಿಭಾಯಿಸಬೇಕು. ನೀವ್ ಯಾಕೆ ಅಳ್ತಿದ್ದೀರಿ? ಅಳಬೇಕಾದವರು ನಾವು,'' ಎಂದರು.

ಅದನ್ನು ಕೇಳಿ ಎಲ್ಲರೂ ನಗತೊಡಗಿದರು. ಅಲ್ಲಿನ ವಾತಾರಣ ಹಗುರವಾಯಿತು.

- ವಸಂತ ಶರ್ಮಾ, ದಾವಣಗೆರೆ.

 ನನ್ನ ದೆಹಲಿ ಗೆಳತಿಯ ಮದುವೆಯಲ್ಲಿ ನಡೆದ ಘಟನೆ. ಅವಳ ಕೂದಲು ಚಿಕ್ಕದಾಗಿತ್ತು. ಉದ್ದವಾದ ಕೂದಲನ್ನು ಅವಳಿಂದ ಸಂಭಾಳಿಸಲು ಆಗುತ್ತಿರಲಿಲ್ಲ. ಮದುವೆಯ ಫೋಟೋಗಳಲ್ಲಿ ತನ್ನ ಗಿಡ್ಡ ಜಡೆ ಕಾಣಿಸಬಾರದು, ಉದ್ದ ಕೂದಲಿನ ಭಾರತೀಯ ನಾರಿಯಂತೆ ತಾನು ಕಾಣಿಸಬೇಕು ಎಂದು ಅವಳಿಗೆ ಆಸೆಯಿತ್ತು. ಪಾರ್ಲರ್‌ನಲ್ಲಿ ಚೌರಿಯನ್ನು ಜಡೆಗೆ ಸೇರಿಸಿ ಸೆಟ್‌ ಮಾಡಲಾಯಿತು. ಅದರ ಮೇಲೆ ಅವಳು ಲೆಹಂಗಾದ ಸೆರಗು ಪಿನ್‌ ಮಾಡಿದಳು.

ಮದುವೆ ಹಾಗೂ ಸಪ್ತಪದಿಯ ನಂತರ ಹುಡುಗನ ಕಡೆಯವರು ವಧುವನ್ನು ಒತ್ತಾಯದಿಂದ ತಮ್ಮ  ಜೊತೆ ನರ್ತಿಸಲು ಕರೆದುಕೊಂಡು ಹೋದರು. ಎಲ್ಲರೂ ಕುಣಿಯುತ್ತಿದ್ದರು. ವಧು ಕೂಡ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಳು. ಆಗಲೇ ಯಾರದೋ ಕಾಲಿನ ಕೆಳಗೆ ಅವಳ ಲೆಹಂಗಾ ಸಿಕ್ಕಿಕೊಂಡಿತು. ಲೆಹಂಗಾ ಹಾಗೂ ಸೆರಗು ಜಗ್ಗಿದಾಗ ಸೆರಗು ತಲೆಯಿಂದ ಜಾರಿ ಬಿತ್ತು. ಚೌರಿಯನ್ನು ಸೆರಗಿಗೆ ಸೆಟ್‌ ಮಾಡಿದ್ದು ಅದೂ ಜಾರಿ ಕೆಳಗೆ ಬಿದ್ದುಬಿಟ್ಟಿತು. ಅದನ್ನು ಕಂಡು ಎಲ್ಲರೂ ಸ್ತಬ್ಧರಾದರು.

ಅವಳ ಚಿಕ್ಕ ತಲೆಗೂದಲನ್ನು ಕಂಡು ಎಲ್ಲರೂ ನಗತೊಡಗಿದರು. ಆದರೂ ಡ್ಯಾನ್ಸ್ ಮುಂದುವರಿಯಿತು. ಮದುವೆಯ ನಂತರದ ಎಲ್ಲ ಶಾಸ್ತ್ರಗಳ ಫೋಟೋನಲ್ಲಿ ಅವಳ ಕೂದಲು ಚಿಕ್ಕದಾಗಿತ್ತು. ಆದರೆ ಮದುವೆ ಹಾಗೂ ಸಪ್ತಪದಿಯ ಸಮಯದ ಫೋಟೋಗಳಲ್ಲಿ ಉದ್ದವಾದ ಕೂದಲಿತ್ತು. ಅದರಿಂದಾಗಿ ಅವಳು ಅರ್ಧಭಾಗದಲ್ಲಿ ಭಾರತೀಯ ಮಹಿಳೆಯಂತೆ ಕಾಣುತ್ತಿದ್ದಳು. ಇನ್ನರ್ಧ ಭಾಗದಲ್ಲಿ ಕತ್ತರಿಸಿದ ಕೂದಲಿನಿಂದ ವಧು ಒಬ್ಬಳೇ ಎಂದು ಗುರುತಿಸಲು ಆಗುತ್ತಿರಲಿಲ್ಲ. ಈಗಲೂ ಅವಳ ಮದುವೆಯ ಆಲ್ಬಂ ನೋಡಿದಾಗ ನಮಗೆ ನಗು ಉಕ್ಕುತ್ತಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ