ಪ್ರ : ನನ್ನ ಮುಖದ ಮೇಲೆ ಸಣ್ಣ ಸಣ್ಣ ಎಳ್ಳಿನಂಥ ಗಂಧೆಗಳು ಉಂಟಾಗಿವೆ. ಇದರಿಂದ ಮುಖದ ಸೌಂದರ್ಯ ಹಾಳಾಗಿದೆ. ಲೇಸರ್‌ ಚಿಕಿತ್ಸೆ ಪಡೆದು ಇದರಿಂದ ಮುಕ್ತಿ ಹೊಂದಬಹುದೆ?

ಉ : ಎಲ್ಲಕ್ಕೂ ಮೊದಲು ಇಂಥ ಗಂಧೆಗಳು ಆಗಿರುವುದೇಕೆ ಎಂದು ತಿಳಿದುಕೊಳ್ಳಿ. ಇವುಗಳಲ್ಲಿ ಹಲವು ಪ್ರಕಾರಗಳಿವೆ. ಮುಖ್ಯ 2 ಪ್ರಕಾರ ಎಂದರೆ ಹುಟ್ಟಿನಿಂದ ಬಂದುದು, ಎರಡನೆಯದು ತಾನಾಗಿ ಮುಖದ ಮೇಲೆ ಆಗುವಂಥದ್ದು. ಹುಟ್ಟಿನಿಂದ ಬಂದ ಗಂಧೆಗಳನ್ನು ಮನೆಮದ್ದಿನಿಂದ ವಾಸಿ ಮಾಡುವುದು ಕಷ್ಟದ ಕೆಲಸ. ಆದರೆ ತಾನಾಗಿ ಹುಟ್ಟಿಕೊಂಡ ಗಂಧೆಗಳು ನಿಧಾನವಾಗಿ ಮನೆಮದ್ದಿನಿಂದ ವಾಸಿಯಾಗುತ್ತವೆ. ಆದರೆ ಈ ಉಪಾಯಗಳನ್ನು ಅನುಸರಿಸುವ ಮುನ್ನ ನೀವು ತುಸು ಧೈರ್ಯವಹಿಸಿ ಮುನ್ನಡೆಯಬೇಕು. ಈ ಸಮಸ್ಯೆಗೆ ಪರಿಹಾರ ಹೊಸ ಟೆಕ್ನಿಕ್‌, ಆಧರಿಸಿದ ಕಾರ್ಬನ್‌ ಡೈಆಕ್ಸೈಡ್‌ ಫ್ರಾಕ್ಷನ್‌ ಲೇಸರ್‌ ಮೆಶೀನ್‌ನಿಂದ ಆಗುತ್ತದೆ. ಇದಕ್ಕಾಗಿ ತಿಂಗಳಿಗೆ 1 ಸಿಟಿಂಗ್‌ ಬೇಕಾಗುತ್ತದೆ. 4-5 ತಿಂಗಳಲ್ಲಿ ಇಂಥ ಗುಳ್ಳೆ, ಗಂಧೆಗಳು ದೂರವಾಗುತ್ತವೆ. ಈ ವಿಧಾನದಲ್ಲಿ ಲೇಸರ್‌ ಕಿರಣಗಳು ನಿಮ್ಮ ಗಂಧೆಯ ಭಾಗದ ಚರ್ಮದ ಜೀವಕೋಶಗಳ ತೇವಾಂಶವನ್ನು ಹೀರಿಕೊಂಡು ಡೆಲ್ವೇರ್ ಮಾಡುತ್ತದೆ. ಈ ಕಾರಣದಿಂದಾಗಿ ಜೀವಕೋಶಗಳ ಅಂತರ್ಜಲ ತಾತ್ಕಾಲಿಕವಾಗಿ ಬಾಷ್ಪೀಕೃತಗೊಳ್ಳುತ್ತದೆ ಅಥವಾ ಸ್ವಲ್ಪ ಹೊತ್ತಿನ ನಂತರ ತಾನಾಗಿ ನಷ್ಟವಾಗುತ್ತದೆ.

ಪ್ರ : ನನಗೀಗ 23 ವರ್ಷಗಳು. ನನ್ನ ಮುಖದ ಬಲಭಾಗದಲ್ಲಿ ಒಂದು ವೈಟ್‌ ಸ್ಪಾಟ್‌ ಉಂಟಾಗಿದೆ. ಅದನ್ನು ಹೇಗೆ ತೆಗೆದುಹಾಕುವುದು ಎಂದು ದಯವಿಟ್ಟು ತಿಳಿಸುವಿರಾ?

ಉ : ಎಲ್ಲಕ್ಕೂ ಮೊದಲು ಚರ್ಮತಜ್ಞರ ಬಳಿ ಹೋಗಿ ಇದನ್ನು ತಪಾಸಣೆ ಮಾಡಿಸಿ. ನಿಮ್ಮ ವೈಟ್‌ ಸ್ಪಾಟ್‌ ಚಿಂತಾಜನಕ ಸ್ಥಿತಿಯಲ್ಲಿ ಇಲ್ಲವಾದರೆ, ಮನೆಮದ್ದಿನಿಂದಲೇ ಅದರಿಂದ ಮುಕ್ತಿ ಪಡೆಯಿರಿ. ಎಷ್ಟೋ ಸಲ ಇಂಥ ಬಿಳಿ ಭಾಗಗಳು ಬ್ಯಾಕ್ಟೀರಿಯಾ ಯಾ ಫಂಗಸ್‌ ಇನ್‌ಫೆಕ್ಷನ್‌ನಿಂದಲೂ ಆಗಿರುತ್ತವೆ. ಈ ಬಿಳಿ ಕಲೆಗಳ ಮೇಲೆ ನಿಯಮಿತವಾಗಿ ಜೇನು ಸವರಿ ನೋಡಿ. ಜೇನಿನಲ್ಲಿ ಆ್ಯಂಟಿ ಫಂಗಲ್ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಅಡಗಿವೆ. ಜೇನನ್ನು ಈ ಕಲೆಗಳ ಮೇಲೆ ಸವರುವುದರಿಂದ ಹೆಚ್ಚಿನ ಲಾಭವಿದೆ. ನೀವು ಜೇನಿಗೆ ಚಂದನದ ಪುಡಿ, ಅರಿಶಿನ, ಅಕ್ಕಿಹಿಟ್ಟು ಬೆರೆಸಿ ಹಚ್ಚಿದರೆ ಇದು ಇನ್ನಷ್ಟು ಉತ್ತಮ ಪರಿಣಾಮ ನೀಡುತ್ತದೆ.

ಪ್ರ : ನನಗೀಗ 26ರ ಹರೆಯ. ನಾನು ಉತ್ತಮ ಗೌರವರ್ಣ ಹೊಂದಿದ್ದೇನೆ, ಹೀಗಾಗಿ ಮುಖದ ಚರ್ಮ ತುಸು ಪಿಂಕಿಶಿ ಟೋನ್‌ಹೊಂದಿದೆ. ನನ್ನ ಮುಖಕ್ಕೆ ತಕ್ಕಂತೆ ನನಗೆ ಫೌಂಡೇಶನ್‌ ಕ್ರೀಂ ಸಿಗುತ್ತಿಲ್ಲ. ನಾನು ಬೇರೆ ಬೇರೆ ಬಣ್ಣದ ಫೌಂಡೇಶನ್‌ ಕ್ರೀಂ ಮಿಕ್ಸ್ ಮಾಡಿ ಬಳಸಬಹುದೇ?

ಉ : ನೀವು ಅಕಸ್ಮಾತ್‌ ತಪ್ಪಾದ ಫೌಂಡೇಶನ್‌ ಕ್ರೀಂ ಕೊಂಡಿದ್ದು, ಅದನ್ನು ವಾಪಸ್ಸು ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದರೆ, ಅದನ್ನು ಬೇರೆಯದರ ಜೊತೆ ಮಿಕ್ಸ್ ಮಾಡಿ ಬಳಸಿಕೊಳ್ಳಬಹುದು. ನಿಮ್ಮ ಬಳಿ ಡಾರ್ಕ್‌ ಫೌಂಡೇಶನ್‌ ಇದ್ದರೆ, ಅದನ್ನು ಲೈಟ್ ಮಾಡಲು ಮಾಯಿಶ್ಚರೈಸರ್‌, ಪ್ರೈಮರ್‌, ಲೈಟ್‌ ಫೌಂಡೇಶನ್‌, ಕನ್ಸೀಲರ್‌ ಯಾ ಫಿನಿಶಿಂಗ್‌ ಫೌಂಡೇಶನ್‌ಗಳನ್ನು ಮಿಕ್ಸ್ ಮಾಡಿ. ಅದೇ ನಿಮ್ಮ ಬಳಿ ಲೈಟ್‌ ಫೌಂಡೇಶನ್‌ ಇದ್ದರೆ ಅದನ್ನು ಡಾರ್ಕ್‌ಗೊಳಿಸಲು ಬ್ಲಶರ್‌ ಯಾ ಕನ್ಸೀಲರ್‌, ಬ್ರಾನ್ಝರ್‌, ಡಾರ್ಕ್ ಫೌಂಡೇಶನ್‌ ಯಾ ಟಿಂಟೆಡ್‌ ಮಾಯಿಶ್ಚರೈಸರ್‌ ಬೆರೆಸಿಕೊಳ್ಳಿ. ನೀವು ಯೆಲ್ಲೋ ಸ್ಕಿನ್‌ ಟೋನ್‌ ಬಯಸಿದರೆ ಇದಕ್ಕೆ ಚಿಟಕಿ ಅರಿಶಿನ ಬೆರೆಸಿಕೊಳ್ಳಿ. ಪಿಂಕ್‌ ಟೋನ್‌ಗಾಗಿ ಪಿಂಕಿಶ್‌ ಬ್ರೌನ್‌, ಬ್ಲಶರ್‌ ಯಾ ಕೋಕೋ ಪೌಡರ್‌ ಬೆರೆಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ