ಪ್ರ : ನನಗೀಗ 20ರ ವಯಸ್ಸು. ಒಂದು ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದೇನೆ. ನಾನು ಕಳೆದ 2 ವರ್ಷಗಳಿಂದ ಮತ್ತೊಂದು ಕಡೆ ಖಾಸಗಿ ನೌಕರಿಯಲ್ಲಿರುವ ಹುಡುಗನನ್ನು ಪ್ರೇಮಿಸುತ್ತಿದ್ದೇನೆ. 22ರ ಆತ ಮಧ್ಯಮ ವರ್ಗಕ್ಕೆ ಸೇರಿದವನು. ನಮ್ಮ ಮನೆಯವರೇ ಅವರಿಗಿಂತ ಅನುಕೂಲಸ್ಥರು. ಶಿಕ್ಷಣದಲ್ಲಿ ಆಸಕ್ತಿ ಇಲ್ಲದ ಕಾರಣ ನಂತರ ನಾನು  ಈ ಸೇಲ್ಸ್ ಕೆಲಸಕ್ಕೆ ಬಂದೆ. ನಮ್ಮ ಮದುವೆಗೆ ಜಾತಿ ಅಡ್ಡಗೋಡೆ ಆಗಿದೆ. ಅವರ ರೀತಿ ನೀತಿ, ಮಾಂಸಾಹಾರದ ಪದ್ಧತಿಯನ್ನು ನಮ್ಮ ಮನೆಯವರು ಖಂಡಿತಾ ಒಪ್ಪುವುದಿಲ್ಲ. ಹಿರಿಯರ ಅನುಮತಿಯಿಂದ ಈ ಸಂಬಂಧ ಕುದುರದು, ಎರಡೂ ಕಡೆ ಖಂಡಿತಾ ವಿರೋಧವಿದೆ. ಆದರೆ ನಾವು ಪರಸ್ಪರ ಬಿಟ್ಟಿರಲಾರೆವು. ನಮ್ಮ ಮದುವೆಗೆ ಏನಾದರೂ ದಾರಿ ತೋರಿಸುವಿರಾ?

ಉ : ಇಂದಿನ ಆಧುನಿಕ ಕಾಲದಲ್ಲಿ ಇಂಥ ಅಂತರ್ಜಾತೀಯ ಪ್ರೇಮ ವಿವಾಹಗಳು ಅಪರೂಪವೇನಲ್ಲ. ಆದರೂ, ಇಬ್ಬರೂ ಆದಷ್ಟೂ ನಿಮ್ಮ ಮನೆಯವರನ್ನು ಒಪ್ಪಿಸಲು ಪ್ರಯತ್ನಿಸಿ 100% ಇಬ್ಬರೂ ಒಪ್ಪದಿದ್ದರೆ ನೀವಾಗಿ ಮನೆ ಬಿಟ್ಟು, ರೆಜಿಸ್ಟರ್ಡ್‌ ಮದುವೆ ಆಗಬಹುದು. ನಿಮ್ಮಿಬ್ಬರ ವಯಸ್ಸು ಕಾನೂನುರೀತ್ಯಾ ಸರಿಯಾಗಿದೆ, ಅದಕ್ಕೆ ಅಡ್ಡಿಯಿಲ್ಲ. ಹುಡುಗನಿಗೆ 21, ಹುಡುಗಿಗೆ 18 ತುಂಬಿರಬೇಕಾದ್ದು ಮುಖ್ಯ.

ಅದಕ್ಕಿಂತಲೂ ಮುಖ್ಯವಾಗಿ ನೀವಿಬ್ಬರೂ ಏಕಾಂತದಲ್ಲಿ ಕುಳಿತು ಈ ಮದುವೆಯಿಂದ ಮುಂದೆ ಬರಬಹುದಾದ ಎಲ್ಲಾ ವಿಧದ ತೊಂದರೆಗಳ ಬಗ್ಗೆ ಯೋಚಿಸಿ. ಎರಡೂ ಕಡೆ ನಯಾ ಪೈಸೆ ಸಹಾಯ ಸಿಗುವುದಿಲ್ಲ. ಆರ್ಥಿಕ, ಸಾಮಾಜಿಕ ಅಭದ್ರತೆ ನಿಮ್ಮನ್ನು ಕಾಡಬಹುದು. ಇಬ್ಬರೂ ಕಡೆಯ ಬಂಧು ಬಾಂಧವರು ಸಹ ನಿಮ್ಮನ್ನು ಆದರಿಸಲಾರರು ಎಂಬುದನ್ನು ನೆನಪಿಡಿ.

ಇರುವ ಕಡೆ ಬಿಟ್ಟು ನಿಮ್ಮಿಬ್ಬರ ಕೆಲಸಕ್ಕೂ ಬಹಳ ದೂರ ಆಗದಂಥ ಕಡೆ ಬಾಡಿಗೆ ಮನೆ ಮಾಡಿ. ಇಂದಿನ ತುಟ್ಟಿಯ ದಿನಗಳಲ್ಲಿ ನಿಮ್ಮಿಬ್ಬರ ಸಂಬಳ ಕೂಡಿ ಬಾಡಿಗೆ, ಮನೆ ಖರ್ಚು, ಮುಂದೆ ಮಗುವಾದರೆ ಹೆಚ್ಚಿನ ಖರ್ಚು.... ಎಲ್ಲವನ್ನೂ ನಿಭಾಯಿಸಲು ಸಾಧ್ಯವೇ ಯೋಚಿಸಿ. ಮತ್ತೊಂದು ಮುಖ್ಯ ವಿಚಾರ, ಎರಡೂ ಕಡೆ ವಿರೋಧಿಸಿ ಮದುವೆ ಆಗುತ್ತಿದ್ದೀರಿ. ನಿಮ್ಮಿಬ್ಬರಿಗೂ ಹಿರಿಯರ ಮಾರ್ಗದರ್ಶನ ಇರುವುದಿಲ್ಲ. ಏನೇ ಆದರೂ, ಎಂಥ ಸಮಸ್ಯೆ ಎದುರಾದರೂ ಒಬ್ಬರನ್ನೊಬ್ಬರು ಬಿಟ್ಟುಕೊಡಬಾರದು. ಸಮಾಜದಲ್ಲಿ ದಿವಿನಾಗಿ ಬಾಳಿ ಸೈ ಎನಿಸಿಕೊಳ್ಳಬೇಕು. ಆತ ಮಾಂಸಾಹಾರಿ, ನೀವು ಅದನ್ನು ಬೇಯಿಸಿ ಕೊಡಲಾರಿರಿ. ಅದಕ್ಕೆ ಹೋಟೆಲ್ ವ್ಯವಸ್ಥೆ ಇರಲಿ. ಹೀಗೆ ಪ್ರತಿ ಸಂದರ್ಭದಲ್ಲೂ ಏನೋ ಒಂದು ವಿಧವಾಗಿ ಪ್ಯಾಚ್‌ ಅಪ್‌ ಮಾಡಿಕೊಳ್ಳಿ. ಓಡಿಹೋಗಿ ಮದುವೆ ಆಗುವುದು ಮುಖ್ಯವಲ್ಲ, ಆ ಸಂಬಂಧ ಶಾಶ್ವತವಾಗಿ ಉಳಿಯುವಂತೆ ಬದುಕಿ, ಬಾಳಿ ತೋರಿಸಬೇಕು. ಇಷ್ಟೂ ವಿಚಾರಗಳನ್ನು ಪರಸ್ಪರ ಯಾವ ರಹಸ್ಯ ಇಟ್ಟುಕೊಳ್ಳದೆ ಇಬ್ಬರೂ ಹಂಚಿಕೊಳ್ಳಿ. ಎಲ್ಲಾ ವಿಧದಲ್ಲೂ ಗೆಲ್ಲಬಲ್ಲೆ ಎಂಬ ಧೈರ್ಯ ಮೂಡಿದಾಗ ಮಾತ್ರ ಮುಂದುವರಿಯಿರಿ, ಅವಸರದ ನಿರ್ಧಾರ ಖಂಡಿತಾ ಸರಿಯಲ್ಲ.

ಪ್ರೇಮ ವಿವಾಹವಾದ್ದರಿಂದ ಆರಂಭದಲ್ಲಿ ಎಲ್ಲ ಬಲು ಸೊಗಸು ಎನಿಸುತ್ತದೆ. 1 ವರ್ಷ ಕಳೆದು ಹಳತಾದಾಗ, ಪ್ರತಿಯೊಂದರಲ್ಲೂ ದೋಷ ಕಾಣಿಸುವುದು ಸಹಜ. ಇಂಥ ವಿಷಯವನ್ನು ಇಬ್ಬರೂ 100 ಸಲ ಆಲೋಚಿಸಿ ನಂತರ ಮದುವೆಯ ನಿರ್ಧಾರಕ್ಕೆ ಬನ್ನಿ. ಹುಡುಗಿಯಾಗಿ ನೀವು ಅವನು ಮುಂದೆ ಮೋಸ ಮಾಡುವುದಿಲ್ಲ ತಾನೇ ಎಂದು 100 ಬಾರಿ ಆಲೋಚಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ