ಪ್ರ : ನಾನು ಎಂದೂ ಅಪ್ಪರ್ಲಿಪ್ಸ್ ಮಾಡಿಸಿಕೊಂಡಿಲ್ಲ. ಅದನ್ನು ಮಾಡಿಸಿಕೊಳ್ಳುವ ಸುರಕ್ಷಿತ ವಿಧಾನ ಯಾವುದು?

ಉ : ಲಿಪ್‌ ಹೇರ್‌ ನ್ನು ನಿವಾರಿಸುವುದು ಸ್ವಲ್ಪ ನೋವುದಾಯಕವಾಗಿರುತ್ತದೆ. ಆದರೆ ಅದನ್ನು ನಿವಾರಿಸುವುದು ಅತ್ಯವಶ್ಯ. ಒಂದು ವೇಳೆ ಅದನ್ನು ನಿವಾರಿಸದಿದ್ದರೆ ಮುಖದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಅಪ್ಪರ್‌ ಲಿಪ್ಸ್ ಮಾಡಿಸಿಕೊಳ್ಳುವಾಗ ನೋವಿನ ಅನುಭವ ಆಗುತ್ತಿದ್ದರೆ, ಕೆಲವು ಮನೆ ಉಪಾಯ ಅನುಸರಿಸಬಹುದು. 2 ನಿಂಬೆಹಣ್ಣಿನ ರಸ ಹಿಂಡಿಕೊಂಡು ಅದರಲ್ಲಿ ಸ್ವಲ್ಪ ನೀರು ಹಾಗೂ ಸಕ್ಕರೆ ಮಿಶ್ರಣ ಮಾಡಿಕೊಳ್ಳಿ. ಅದು ತೆಳ್ಳಗಾಗುವ ತನಕ ಹಾಗೆಯೇ ಕಲಕುತ್ತಾ ಇರಿ. ಬಳಿಕ ಅದನ್ನು ತುಟಿಗಳ ಮೇಲೆ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ಮುಖವನ್ನು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಪ್ರ : ನನ್ನದು ಗೋಧಿ ವರ್ಣ. ನನ್ನ ಮುಖದಲ್ಲಿ ಮೊಡವೆಯ ಕಪ್ಪು ಕಲೆಗಳಿವೆ. ಅವನ್ನು ಹೋಗಲಾಡಿಸಲು ಯಾವುದಾದರೂ ಮನೆ ಮದ್ದು ತಿಳಿಸಿ.

ಉ : ಒಂದು ವೇಳೆ ಕಲೆಗಳು ಗಂಭೀರವಾಗಿದ್ದು, ತುಂಬಾ ವರ್ಷಗಳಿಂದ ಉಳಿದಿದ್ದರೆ, ಅವನ್ನು ಹೋಗಲಾಡಿಸಲು ಯಾರಾದರೂ ತಜ್ಞರ ಸಲಹೆಯ ಅಗತ್ಯವಿದೆ. ಮುಖದ ಕಲೆಗಳನ್ನು ಹೋಗಲಾಡಿಸಲು ಆ್ಯಪ್‌ ವಿನಿಗರ್‌ ಮಾಸ್ಕ್ ಬಳಸಬಹುದು. ಇದರಲ್ಲಿ ಆ್ಯಂಟಿ ಬಯಾಟಿಕ್ಸ್ ಗುಣವಿರುತ್ತದೆ. ಅದು ಮೊಡವೆಗಳನ್ನು ನಿವಾರಿಸುತ್ತದೆ. ಅದರಲ್ಲಿ ಆ್ಯಂಟಿ ಇನಫ್ಲೇಮೆಟರಿ ಅಂಶ ಕೇವಲ ಮೊಡವೆಗಳ ಊತವನ್ನಷ್ಟೇ ಕಡಿಮೆ ಮಾಡುವುದಿಲ್ಲ. ಕೆಂಪಗಾಗಿರುವುದನ್ನು ತಿಳಿವರ್ಣಕ್ಕೆ ತರುತ್ತದೆ. ಅದರಿಂದ ತ್ವಚೆ ಸ್ವಲ್ಪ ಶುಷ್ಕಗೊಳ್ಳುತ್ತದೆ. ಹಾಗಾಗಿ ಲೇಪನದ ಬಳಿಕ ತಕ್ಷಣವೇ ಮಾಯಿಶ್ಚರೈಸರ್‌ ಹಚ್ಚಿ. 1 ಚಮಚ ಆ್ಯಪಲ್ ವಿನಿಗರ್‌, 2 ಚಮಚ ಜೇನುತುಪ್ಪ ಅಗತ್ಯಕ್ಕೆ ಅನುಸಾರ ನೀರು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮೊಡವೆಗಳ ಕಲೆಗಳ ಮೇಲೆ ಲೇಪಿಸಿ 10-15 ನಿಮಿಷಗಳ ಕಾಲ ಹಾಗೆಯೇ ಇರಿಸಿ ನಂತರ ತೊಳೆಯಿರಿ. ಇದನ್ನು ನೀವು ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಅನುಸರಿಸಬಹುದು.

ಪ್ರ : ನನ್ನ ವಯಸ್ಸು 32.  ನಾನು ಎಂದೂ ಅಪ್ಪರ್ಲಿಪ್ಸ್ ಮಾಡಿಸಿಕೊಂಡಿಲ್ಲ. ಇದನ್ನು ಮಾಡಿಸಿಕೊಳ್ಳುವ ಸರಿಯಾದ ವಿಧಾನ ಯಾವುದು?

ಉ : ಲಿಪ್‌ ಹೇರ್‌ ನ್ನು ನಿವಾರಿಸಿಕೊಳ್ಳುವುದು ಸ್ವಲ್ಪ ಕಷ್ಟಕರ. ಆದರೆ ಅದನ್ನು ನಿವಾರಿಸುವುದು ಅಷ್ಟೇ ಅತ್ಯವಶ್ಯಕ. ನಿಮಗೂ ಅಪ್ಪರ್‌ ಲಿಪ್‌ ಮಾಡಿಸಿಕೊಳ್ಳುವಾಗ ತೀವ್ರ ನೋವು ಉಂಟಾಗುತ್ತದೆ ಎಂದಾದರೆ, ನೀವು ಅದಕ್ಕೆ ಕೆಲವು ಮನೆ ಉಪಾಯಗಳನ್ನು ಅನುಸರಿಸಬಹುದು. ನಿಂಬೆಹಣ್ಣಿನ ರಸ ಹಿಂಡಿಕೊಂಡು, ಅದರಲ್ಲಿ ಸ್ವಲ್ಪ ಸಕ್ಕರೆ ಮಿಶ್ರಣ ಮಾಡಿಕೊಳ್ಳಿ. ಅದು ತೆಳ್ಳಗಾಗುವ ತನಕ ಅದನ್ನು ಮಿಶ್ರಣ ಮಾಡಬೇಕು. ಈಗ ಆ ಪೇಸ್ಟ್ ನ್ನು ನಿಮ್ಮ ತುಟಿಯ ಮೇಲ್ಭಾಗದಲ್ಲಿ ಲೇಪಿಸಿ. 15 ನಿಮಿಷಗಳ ಬಳಿಕ ನೀರಿನಿಂದ ಮುಖ ತೊಳೆದುಕೊಳ್ಳಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ