- ಎನ್. ಅಂಜಲಿ
ಹೆಂಡತಿ ಉದ್ಯೋಗಸ್ಥೆಯಾಗಿ ಇರಬಹುದು ಅಥವಾ ಹೋಂಮೇಕರ್, ಮನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಅವಳ ಪಾತ್ರವೇನೂ ಕಡಿಮೆಯಾಗಿರುವುದಿಲ್ಲ. ಆದರೆ ನಂಬಿಕೆ, ತಿಳಿವಳಿಕೆ ಹಾಗೂ ಸಮಾನತೆ ಕುರಿತಂತೆ ಸಮತೋಲನ ಹದಗೆಟ್ಟಾಗ ನಿಮ್ಮ ನಡುವೆ ತಪ್ಪು ಕಲ್ಪನೆ ಉಂಟಾಗುತ್ತದೆ. ಆ ಬಳಿಕ ಎಂದೂ ಮುಗಿಯದ ನಾವು ನೀವು ಎಂಬ ವೈರತ್ವ ಏರ್ಪಡುತ್ತದೆ.
ಇಲ್ಲಿ ನಾವು ಕೆಲವು ಸಂಗತಿಗಳ ಬಗ್ಗೆ ಚರ್ಚಿಸುತ್ತಿದ್ದು, ಅವುಗಳಿಂದ ದೂರ ಇರುವುದರ ಮೂಲಕ ನೀವು ನಿಮ್ಮ ದಾಂಪತ್ಯ ಜೀವನವನ್ನು ಸುಖಿಯಾಗಿಟ್ಟುಕೊಳ್ಳಬಹುದು.
ಒಬ್ಬ ಹುಡುಗಿ ಮದುವೆಯ ಬಳಿಕ ಹೊಸ ಮನೆ, ಹೊಸ ವಾತಾರಣ ಹಾಗೂ ಹೊಸ ಜನರನ್ನು ಎದುರಿಸಬೇಕಾಗಿ ಬರುತ್ತದೆ. ಹೀಗಾಗಿ ಆ ಬಹಳಷ್ಟು ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ತನ್ನನ್ನು ತಾನು ಹೊಸ ವಾತಾವರಣಕ್ಕೆ ಒಗ್ಗಿಸಿಕೊಳ್ಳುವುದು ಅಲ್ಲಿನ ಜನರ ಅಭ್ಯಾಸಗಳು, ರೀತಿನೀತಿಗಳು, ಕಾನೂನುಗಳು, ಆಹಾರದ ವಿಧಿವಿಧಾನಗಳು ಮುಂತಾದವನ್ನು ತಿಳಿದುಕೊಳ್ಳಬೇಕು. ಅವರ ದಿನಚರಿಗನುಗುಣವಾಗಿ ನಿಮ್ಮ ದಿನಚರಿಯನ್ನು ನಿರ್ಧರಿಸಿಕೊಳ್ಳಿ. ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆದರೆ ಆಕೆಗೆ ತನ್ನ ಪತಿ ಜತೆಗೆ ಮಧುರ ಸಂಬಂಧ ವರ್ಧಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಗಂಡಹೆಂಡತಿ ನಡುವಿನ ಸಂಬಂಧ ವಿಶ್ವಾಸ ಹಾಗೂ ತಿಳಿವಳಿಕೆಯ ಆಧಾರದಿಂದ ನಡೆಯುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಮತ್ತೊಂದು ಹೊಸ ಶಬ್ದ ಸಮಾನತೆ ಕೂಡ ಅದರೊಂದಿಗೆ ಸೇರಿಕೊಂಡಿದೆ.
ಯಾವಾಗಲೂ ನಾವೇ ಸರಿ ಎಂದುಕೊಳ್ಳಬೇಡಿ. ಕೆಲವು ಯುವತಿಯರಿಗೆ ನಾನು ಮಾಡಿದ್ದೇ ಸರಿ, ಮಾತನಾಡಿದ್ದೇ ಸರಿ ಎಂಬ ತಪ್ಪುಕಲ್ಪನೆಯಿರುತ್ತದೆ. ಒಂದು ವೇಳೆ ಗಂಡ ಯಾವುದಾದರೊಂದು ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮದೇ ಆದ ರೀತಿಯಲ್ಲಿ ಆ ಕೆಲಸ ಮಾಡಿ ಎಂದು ಅವರ ಮೇಲೆ ಒತ್ತಡ ತರುವುದು ಸರಿಯಲ್ಲ. ಆ ನಿಮ್ಮ ಯೋಚನೆಯನ್ನು ಬದಲಿಸಿಕೊಳ್ಳಬೇಕು. ನಿಮ್ಮ ಗಂಡ ಅಥವಾ ಆತನ ಕುಟುಂಬದವರ ಯೋಚನೆ ಮತ್ತು ನಡೆ ನಿಮಗಿಂತ ಭಿನ್ನವಾಗಿ ಸರಿಯಾದದ್ದಾಗಿರಬಹುದು. ನೀವು ಅದನ್ನು ಗಮನಿಸಿ ಅನುಸರಿಸಿಕೊಂಡು ಹೋಗುವುದರಲ್ಲಿಯೇ ಜಾಣತನವಿದೆ. ಕಡ್ಡಿಯನ್ನು ಗುಡ್ಡ ಮಾಡಬೇಡಿ
ಅವಿವಾಹಿತ ಜೋಡಿಗಳು ಪರಸ್ಪರ ಸಾಕಷ್ಟು ಪ್ರಶ್ನೆಗಳನ್ನು ಮಾಡುತ್ತಾರೆ. ಯಾವುದೇ ಬೇಸರ ಇಲ್ಲದೆ, ದಣಿವಿಲ್ಲದೆ ಅದಕ್ಕೆ ವಿವರಣೆ ಕೊಡುತ್ತಿರುತ್ತಾರೆ. ಆದರೆ ವೈವಾಹಿಕ ಜೀವನದಲ್ಲಿ ಹೀಗಾಗುವುದಿಲ್ಲ. ನಿಮ್ಮ ಅಗಣಿತ ಪ್ರಶ್ನೆಗಳು ಹಾಗೂ ಯಾವುದೇ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ನೀವು ಕಡ್ಡಿಯನ್ನೇ ಗುಡ್ಡ ಮಾಡುವುದು ನಿಮ್ಮ ಕೆಟ್ಟ ಅನುಭವ ಅನಿಸುವಂತಾಗಬಾರದು. ನೀವು ಅವರ ಮೊದಲಿನ ಗರ್ಲ್ ಫ್ರೆಂಡೂ ಅಲ್ಲ, ಅವರು ನಿಮ್ಮ ಬಾಯ್‌ಫ್ರೆಂಡೂ ಅಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ಸಂಗಾತಿಯ ಸಾಂಗತ್ಯಕ್ಕೆ ಮಹತ್ವ ಕೊಡಿ. ಗಂಡ ಎದುರಿಗೆ ಇದ್ದಾಗ ಬೇರೆಯವರನ್ನು ಗಂಡನಿಗಿಂತ ಮಿಗಿಲು ಎಂಬಂತೆ ತೋರಿಸಿಕೊಳ್ಳಲು ಹೋಗಬೇಡಿ. ನೀವು ಹೀಗೇನಾದರೂ ಮಾಡಿದರೆ ನಿಮ್ಮ ಖುಷಿಯ ಜೀವನದಲ್ಲಿ ವಿರಸಕ್ಕೆ ಸ್ಥಾನ ಕೊಡುತ್ತಿದ್ದೀರಿ ಎಂದರ್ಥ. ಉದಾಹರಣೆಗೆ ನಿಮ್ಮ ಗಂಡ ಯಾವುದೋ ಒಂದು ಸಿನಿಮಾ ನೋಡಲು ಯೋಜನೆ ಹಾಕಿಕೊಂಡಿದ್ದಾರೆ. ಅದೇ ಸಮಯದಲ್ಲಿ ನಿಮ್ಮ ತಾಯಿ ಫೋನ್ ಮಾಡಿ, ``ಶಾಪಿಂಗ್ ಮಾಲ್ಗೆ ಖರೀದಿಗೆ ಹೊಗೋಣ್ವಾ?''