ಸಮೀಕ್ಷಾಳ ಮದುವೆಯಾಗಿ ಕೇವಲ 4 ತಿಂಗಳಷ್ಟೇ ಆಗಿರುತ್ತದೆ. ಅವಳು ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಮುಂಚೆ ಅವಳು ಒಟ್ಟು ಕುಟುಂಬದಲ್ಲಿ ವಾಸಿಸುತ್ತಿದ್ದುದರಿಂದ ಅವಳಿಗೆ ಕೆಲಸದ ಹೊರೆ ಇರಲಿಲ್ಲ. ಆದರೆ ಮದುವೆಯಾದ 2 ತಿಂಗಳಿನಲ್ಲಿಯೇ ಗಂಡನಿಗೆ ಬೇರೊಂದು ನಗರಕ್ಕೆ ಟ್ರಾನ್ಸ್ ಫರ್‌ ಆಯಿತು. ಸಮೀಕ್ಷಾ ಕೂಡ ತನ್ನ ಗಂಡನ ಜೊತೆ ಹೋಗಬೇಕಾಯಿತು. ಅವಳು ಯಾವ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳೊ, ಆ ಬ್ಯಾಂಕ್‌ ಶಾಖೆ ಆ ನಗರದಲ್ಲಿ ಇತ್ತು. ಹೀಗಾಗಿ ಆಕೆ ಆ ನಗರಕ್ಕೆ ಟ್ರಾನ್ಸ್ ಫರ್‌ ತೆಗೆದುಕೊಂಡು ಹೊರಟಳು.

ಎರಡೂ ಕುಟುಂಬಗಳಿಂದ ದೂರ ಅಪರಿಚಿತ ನಗರದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅವಳಿಗೆ ಆಫೀಸ್‌ ಹಾಗೂ ಕುಟುಂಬ ಎರಡರ ಜವಾಬ್ದಾರಿ ನಿಭಾಯಿಸಬೇಕಿತ್ತು. ಅವಳು ಬಾಲ್ಯದಿಂದಲೇ ಅಮ್ಮಅಪ್ಪ, ಅಜ್ಜಿ ತಾತನ ಜೊತೆ ಬೆಳೆದವಳು. ಹೀಗಾಗಿ ಅವಳು ಏಕಾಂಗಿಯಾಗಿ ಇಷ್ಟೊಂದು ಕೆಲಸಗಳ ಜವಾಬ್ದಾರಿಯನ್ನು ಎಂದೂ ನಿಭಾಯಿಸಿದ ಅಭ್ಯಾಸ ಇರಲಿಲ್ಲ. ಅವಳ ಟೈಮ್  ಮ್ಯಾನೇಜ್‌ಮೆಂಟ್‌ ಅಸ್ತವ್ಯಸ್ತವಾಗತೊಡಗಿತು. ಮನೆ ಹಾಗೂ ಆಫೀಸಿನ ಕೆಲಸ ಕಾರ್ಯಗಳ ನಡುವೆ ಸೂಕ್ತ ಸಮತೋಲನ ಸಾಧಿಸುವುದು ಸಾಧ್ಯವಾಗುತ್ತಿರಲಿಲ್ಲ. ಇದರ ಪ್ರಭಾವ ಕ್ರಮೇಣ ಅವಳ ಆರೋಗ್ಯದ ಮೇಲೂ ಕಂಡುಬರತೊಡಗಿತು.

ಅದೊಂದು ದಿನ ಸಮೀಕ್ಷಾ ಆಫೀಸ್‌ನಲ್ಲಿ ಪ್ರಜ್ಞೆ ತಪ್ಪಿದಳು. ಅವಳನ್ನು ಆಸ್ಪತ್ರೆಗೆ ಸಾಗಿಸಬೇಕಾದ ಪ್ರಸಂಗ ಬಂತು. ಅವಳನ್ನು ಪರೀಕ್ಷಿಸಿದ ವೈದ್ಯರು ಅತ್ಯಧಿಕ ಒತ್ತಡದಿಂದ ಅವಳ ಆರೋಗ್ಯ ಏರುಪೇರಾಯಿತು ಎಂದು ವಿವರಿಸಿದರು.

ಸಮೀಕ್ಷಾ 1 ವಾರ ಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕಾಯಿತು. ಹಲವು ಜನ ಸಂಬಂಧಿಕರು ಹಾಗೂ ಸ್ನೇಹಿತರು ಅವಳನ್ನು ಭೇಟಿಯಾಗಲು ಬಂದರು. ಅದೊಂದು ದಿನ ಅವಳ ಆಪ್ತ ಗೆಳತಿ ನಿರುಪಮಾ ಅವಳನ್ನು ಭೇಟಿಯಾಗಲು ಬಂದಳು. ನಿರುಪಮಾ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಹುದ್ದೆಯಲ್ಲಿದ್ದಾಳೆ. ಅವಳು, ``ನಿನ್ನ ಒತ್ತಡ ಮತ್ತು ಅನಾರೋಗ್ಯಕ್ಕೆ ನೀನು ಸರಿಯಾದ ಟೈಮ್ ಮ್ಯಾನೇಜ್‌ಮೆಂಟ್‌ ಮಾಡದೇ ಇರುವುದೇ ಕಾರಣ. ಉದ್ಯೋಗಸ್ಥ ಮಹಿಳೆ ತನ್ನ ಸಮಯವನ್ನು ಹೇಗೆ ವಿನಿಯೋಗಿಸಿಕೊಳ್ಳಬೇಕೆಂದರೆ, ಅವಳಿಗೆ ಒತ್ತಡ ಹಾಗೂ ಖಿನ್ನತೆಯ ಸ್ಥಿತಿ ಬರಲೇಬಾರದು,'' ಎಂದು ಹೇಳಿದಳು.

ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗಸ್ಥ ಮಹಿಳೆಯರು ಆಫೀಸು ಹಾಗೂ ಮನೆ ಈ ಇಬ್ಬಗೆಯ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿ ಬರುತ್ತದೆ. ಎಲ್ಲ ಕೆಲಸಗಳಲ್ಲೂ ತಮ್ಮನ್ನು ತಾವು ನಂಬರ್‌ ಒನ್‌ ಎಂದು ಸಾಬೀತುಪಡಿಸಲು ಪ್ರಯತ್ನಶೀಲರಾಗಿದ್ದಾರೆ. ಈ ಕಾರಣದಿಂದ ಅವರು ಖಿನ್ನತೆಗೆ ತುತ್ತಾಗುತ್ತಾರೆ. ಗಂಡ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಸಾಮಾಜಿಕ ಜೀವನದಿಂದ ಕೂಡ ದೂರ ಉಳಿಯುತ್ತಾರೆ. ಆಫೀಸ್‌ನಲ್ಲಿ ಮನೆಯ ತೊಂದರೆಗಳು ಹಾಗೂ ಮನೆಯಲ್ಲಿ ಆಫೀಸಿನ ತೊಂದರೆಗಳೊಂದಿಗೆ ಕೆಲಸ ಮಾಡುವುದು ಇಂತಹ ಬಹಳಷ್ಟು ಕಾರಣಗಳು ಅವರ ಜೀವನದ ನೆಮ್ಮದಿಯ ಓಟಕ್ಕೆ ತಡೆಯೊಡ್ಡುತ್ತವೆ. ಅದು ಅವರ ಸೂಪರ್‌ ವುಮನ್‌ ವ್ಯಕ್ತಿತ್ವಕ್ಕೆ ಒಂದು ಪ್ರಶ್ನೆ ಚಿಹ್ನೆಯಾಗಿ ಉಳಿದುಬಿಡುತ್ತದೆ.

ಹೀಗಿರುವಾಗ ಜೀವನದಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿದರೆ ಸೋಲಿಗೆ ಹೆದರುವ ಅಗತ್ಯವೇ ಬಾಧಿಸದು. ಅಂದಹಾಗೆ ಜೀವನದಲ್ಲಿ ಯಶಸ್ಸು ಮುಳ್ಳಿನ ದಾರಿಯಲ್ಲಿ ಸಾಗಿದ ಬಳಿಕವೇ ದೊರಕುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ