`ಕೌಟುಂಬಿಕ ದೌರ್ಜನ್ಯ' ಅಂದರೆ ಮನೆಯ ಸದಸ್ಯರಿಂದಲೇ ನಡೆಯಲ್ಪಡುವ ಹಿಂಸೆ ಎಂದು ಹೇಳಲಾಗುತ್ತದೆ. ಗಂಡ ಹೆಂಡತಿಯ ಮೇಲೆ ಕೈ ಮಾಡುವುದನ್ನೇ ಸಾಮಾನ್ಯವಾಗಿ ಕೌಟುಂಬಿಕ ದೌರ್ಜನ್ಯ ಎಂದು ಹೇಳುತ್ತಾರೆ. ಭಾರತೀಯ ಕುಟುಂಬಗಳಲ್ಲಿ ಹೆಂಡತಿಯರಂತೂ ಹಿಂಸೆಗೆ ತುತ್ತಾಗುತ್ತಲೇ ಇರುತ್ತಾರೆ. ಅಷ್ಟು ಮಾತ್ರವಲ್ಲ, ಹೆಣ್ಣುಮಕ್ಕಳು ಕೂಡ ಕುಟುಂಬದವರ ದೌರ್ಜನ್ಯಕ್ಕೆ ನಲುಗುತ್ತಿದ್ದಾರೆ.

ಭಾರತದ ಕುಟುಂಬ ವ್ಯವಸ್ಥೆಯಲ್ಲಿ ಗಂಡು ಹೆಣ್ಣಿನ ನಡುವೆ ಸಾಕಷ್ಟು ಭೇದಭಾವ ಅನುಸರಿಸಲಾಗುತ್ತದೆ. ಕುಟುಂಬದಲ್ಲಿ ಮಗ ಹುಟ್ಟಿದರೆ ಅವನನ್ನು ವಂಶೋದ್ಧಾರಕ, ವೃದ್ಧಾಪ್ಯದಲ್ಲಿ ನಮ್ಮ ಊರುಗೋಲಾಗುವವ ಎಂದೆಲ್ಲ ಹೇಳಲಾಗುತ್ತದೆ. ಅದೇ ಹುಡುಗಿ ಹುಟ್ಟಿದರೆ ಅವಳನ್ನು ಹೊರೆ ಎಂದು ಭಾವಿಸಲಾಗುತ್ತದೆ. ಅವಳಿಂದ ಮಾಡಬಾರದ ಕೆಲಸಗಳನ್ನು ಮಾಡಿಸಲಾಗುತ್ತದೆ. ಹಾಗೊಮ್ಮೆ ಅವಳು ಆ ಕೆಲಸ ಮಾಡಲು ಹಿಂದೇಟು ಹಾಕಿದರೆ ಅವಳಿಗೆ ಹಿಂಸೆ ಕೂಡ ನೀಡಲಾಗುತ್ತದೆ. ಅಷ್ಟೇ ಅಲ್ಲ, ಅವಳಿಗೆ ಓದಲು ಅವಕಾಶ ಮಾಡಿಕೊಡದೇ ಇರುವುದು, ಒಂದು ವೇಳೆ ಅವಕಾಶ ಕೊಟ್ಟರೂ ಅವಳಿಗೆ ಬೇಕಾದ ಕೋರ್ಸ್‌ ಕೊಡಿಸದೆ ಇರುವುದು, ಇಚ್ಛೆ ಇಲ್ಲದೆ ಇದ್ದರೂ ಮದುವೆಯ ಬಂಧನದಲ್ಲಿ ಸಿಲುಕಿಸುವುದು ಕೂಡ ಹಿಂಸೆಯ ರೂಪಗಳೇ ಆಗಿವೆ.

ಹಿಂಸೆಯ ರೂಪ ದೇಹದ ಮೇಲೆ ಬಾಹ್ಯವಾಗಿ ಗೋಚರಿಸದೆ ಇದ್ದರೂ, ಆಂತರಿಕ ಮನಸ್ಸು ಮೆದುಳಿನ ಮೇಲೆ ಅದೆಷ್ಟು ಗಾಢವಾಗಿ ಬೇರೂರುತ್ತದೆ ಎಂದರೆ, ಹುಡುಗಿ ಆ ನೋವನ್ನು ಜೀವನವಿಡೀ ಮರೆಯುವುದಿಲ್ಲ.

ವಿಭಿನ್ನ ಹಿಂಸೆಗಳು

ಲೈಂಗಿಕ ಹಿಂಸೆ : ಮನೆ ಹೆಣ್ಣುಮಕ್ಕಳಿಗೆ ಅದೇ ಮನೆಯ ಕೆಲವರು ಇಲ್ಲವೇ ಮನೆಗೆ ಬಂದ ಸಂಬಂಧಿಕರು ದೈಹಿಕ ಶೋಷಣೆ ಮಾಡುತ್ತಾರೆ. ಹುಡುಗಿಯರು ಈ ವಿಷಯವನ್ನು ಬಾಯ್ಬಿಟ್ಟು ಹೇಳುವ ಸ್ಥಿತಿಯಲ್ಲೂ ಇರುವುದಿಲ್ಲ. ಜೀವನವಿಡೀ ಅವರಿಗೆ ಅದೊಂದು ಕಹಿ ನೆನಪಾಗಿ ಕಾಡುತ್ತದೆ.

8 ವರ್ಷದ ಕೀರ್ತನಾಳ ಮೇಲೆ ಅವಳ ದೊಡ್ಡಪ್ಪನ ಮಗನೇ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದ. ಸಂಕೋಚದಿಂದ ಅವಳು ಈ ವಿಷಯವನ್ನು ತನ್ನ ತಂದೆತಾಯಿಯ ಮುಂದೆ ಹೇಳಲಿಲ್ಲ. ಮದುವೆಯ ಬಳಿಕ ಅವಳಿಗೆ ಗಾಬರಿ ಹೋಗಿಲ್ಲ. ಗಂಡ ಅವಳ ಜೊತೆ ಸಂಬಂಧ ಬೆಳೆಸಲು ಪ್ರಯತ್ನಿಸಿದರೆ ಸಾಕು, ಅವಳ ದೇಹ ಬೆವರುಮಯವಾಗುತ್ತದೆ. ಅವಳು ಗಂಡನ ಜೊತೆ ಬೆರೆಯಲು ಆಗುವುದೇ ಇಲ್ಲ.

ತಿಳಿವಳಿಕೆಯುಳ್ಳ ಪತಿ ಅವಳನ್ನು ಕೌನ್ಸೆಲರ್‌ ಬಳಿ ಕರೆದುಕೊಂಡ ಹೋದ. ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಅವಳ ಮನಸ್ಸಿನ ಮೇಲೆ ಇನ್ನೂ ಹಾಗೆಯೇ ಉಳಿದಿದೆ ಎಂದು ವೈದ್ಯರು ಹೇಳಿದರು. ಅದೇ ಕಾರಣದಿಂದ ಪತಿಯ ಜೊತೆ ಸಮಾಗಮದಿಂದ ದೂರ ಉಳಿಯುತ್ತಿದ್ದಳು. ಅನೇಕ ಸಲದ ಕೌನ್ಸೆಲಿಂಗ್‌ ಬಳಿಕ ಅವಳು ವಾಸ್ತವ ಜಗತ್ತಿಗೆ ಮರಳಿದಳು.

ಗರ್ಭದಲ್ಲಿಯೇ ಹಿಂಸೆ : ಹುಡುಗಿಯರು ಜನಿಸುವ ಮುನ್ನವೇ ದೌರ್ಜನ್ಯಕ್ಕೆ ತುತ್ತಾಗಿರುತ್ತಾರೆ. ಕೆಲವು ವರ್ಷಗಳ ಹಿಂದಿನ ತನಕ ಪೋಷಕರು ತಮಗೆ ಹುಟ್ಟುವ ಮಗು ಹೆಣ್ಣೊ ಗಂಡೋ ಎಂಬುದನ್ನು ಅಲ್ಟ್ರಾಸೌಂಡ್‌ ಮೂಲಕ ಕಂಡುಹಿಡಿದು ಗರ್ಭದಲ್ಲಿ ಹೆಣ್ಣಿದೆ ಎಂಬುದು ಖಾತ್ರಿಯಾದರೆ ಅದನ್ನು ಹೊಟ್ಟೆಯಲ್ಲಿಯೇ ಹೊಸಕಿ ಹಾಕುತ್ತಿದ್ದರು. 2011ರ ಜನಗಣತಿಯ ಅಂಕಿಅಂಶಗಳನ್ನು ಗಮನಿಸಿದಾಗ 1000 ಪುರುಷರಿಗೆ ಮಹಿಳೆಯರ ಸಂಖ್ಯೆ 933 ಮಾತ್ರ ಆಗಿರುವುದು ಈ ಸಂಗತಿಯನ್ನು ಮತ್ತಷ್ಟು ಖಾತ್ರಿಗೊಳಿಸಿತು. ಸರ್ಕಾರ ಕಾನೂನಿನ ಮೂಲಕ ಗರ್ಭಸ್ಥ ಶಿಶುವಿನ ಹತ್ಯೆ ತಡೆಯಲು, ಸಾಕಷ್ಟು ಪ್ರಯತ್ನಿಸುತ್ತಿದೆ. ಈ ಪ್ರವೃತ್ತಿ ಬಹಿರಂಗವಾಗಿ ನಿಂತಿದೆ. ಆದರೆ ಕೆಲವು ಕಡೆ ಕದ್ದು ಮುಚ್ಚಿ ನಡೆಯುತ್ತಲೇ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ