``ನನ್ನ ಮಗ ಸೊಸೆಯ ಡೈವೋರ್ಸ್‌ಆಗ್ತಿದೆಯೆಂದು ಯಾರು ಹೇಳಿದರು? ಯಾರು ಹೀಗೆ ಸುದ್ದಿ ಹಬ್ಬಿಸಿದ್ದಾರೊ ಅವರದ್ದೇ ಡೈವೋರ್ಸ್‌ಆಗಿ ಹೋಗಲಿ! ಜನ ಎಲ್ಲೆಲ್ಲಿಂದ ಇಂತಹ ಸುದ್ದಿಗಳನ್ನು ತೆಗೆದುಕೊಂಡು ಬರ್ತಾರೊ ಏನೊ? ಮೊದಲು ಅವರು ತಮ್ಮ ಮನೇಲಿ ಏನು ನಡಿತೀದೆ ನೋಡಲಿ, ನಂತರ ಇನ್ನೊಬ್ಬರ ಬಗ್ಗೆ ಮಾತನಾಡಲಿ. ಯಾರಿಗೆ ಏನು ಮಾತಾಡೋದಿದೆಯೊ, ನನ್ನ ಮುಂದೆ ಬಂದು ಮಾತಾಡಬೇಕು. ಬೆನ್ನ ಹಿಂದೆ ಮಾತಾಡೋದ್ರಿಂದ ಏನು ಲಾಭ?''

ಹೀಗೆ ಸ್ವಲ್ಪ ಹೊತ್ತು ಜೋರಾಗಿ ಕೂಗಾಡಿ ಮಾಲಾ ತಮ್ಮ ಮನೆಗೆ ಹೊರಟುಹೋದರು. ಆದರೆ ಸೊಸೈಟಿಯಲ್ಲಿ ಮಾತನಾಡುವವರಿಗೆ ಅವರೊಂದು ಬಿಸಿಬಿಸಿ ವಿಷಯ ಕೊಟ್ಟು ಹೋಗಿದ್ದರು.

``ನಾನಂತೂ ಆ ವಿಷಯ ಕೇಳಿಸಿಕೊಂಡಿದ್ದೆ. ಮೊನ್ನೆಯಷ್ಟೇ ಮಾತಾಡಿದ್ದನ್ನು ಯಾರೋ ಅವರಿಗೆ ಹೋಗಿ ಹೇಳಿರಬಹುದು. ನಿನ್ನೆ ರಾತ್ರಿ ಮಾಲಾ ಹಾಗೂ ಮಗ ಸೊಸೆ ನಡುವೆ ಜೋರು ಜೋರಾಗಿ ಕೂಗಾಟದ ಶಬ್ದ ಕೇಳಿಸಿತ್ತು. ಅವರ ಮನೆಯಲ್ಲಿ ಇದು ದೈನಂದಿನ ಕಥೆ. ಒಮ್ಮೆ ಅತ್ತೆ ಜೋರಾಗಿ ಅರಚಿದರೆ, ಇನ್ನೊಮ್ಮೆ ಸೊಸೆ ಕೂಗಾಡುತ್ತಾಳೆ, ಅತ್ತೆ ಸೊಸೆಯ ನಿಂದೆ ಮಾಡುತ್ತಿದ್ದರೆ, ಸೊಸೆ ಅತ್ತೆಯ ನಿಂದನೆ ಮಾಡುತ್ತಿದ್ದಳು. ಯಾರೂ ಯಾರಿಗೂ ಕಡಿಮೆ ಏನಿಲ್ಲ,'' ಎಲ್ಲರೂ ನೆರೆಮನೆಯ ಮಾಲಾ ವಿರುದ್ಧ ವ್ಯಂಗ್ಯದ ಬಾಣಗಳಿಂದ ಚುಚ್ಚುತ್ತಿದ್ದರು. ಆಶ್ಚರ್ಯದ ಸಂಗತಿಯೆಂದರೆ ಅವರಲ್ಲಿ ಕೆಲವರು ಮಾಲಾರ ಜೊತೆ ಕುಳಿತು ತಿಂಡಿ ತಿನ್ನುತ್ತ ಹರಟೆ ಹೊಡೆಯುತ್ತಿದ್ದರು.

ವೀಣಾ ಹಾಗೂ ನೆರೆಮನೆಯ ರಶ್ಮಿಯ ಕುಟುಂಬದ ನಡುವೆ ಒಳ್ಳೆಯ ಸಂಬಂಧ ಇತ್ತು. ಇಬ್ಬರೂ ತಮ್ಮ ತಮ್ಮ ಕುಟುಂಬಗಳ ಪ್ರತಿಯೊಂದು ಮಾತನ್ನು ಹಂಚಿಕೊಳ್ಳುತ್ತಿದ್ದರು. ಅದೊಂದು ದಿನ ರಶ್ಮಿ ಇನ್ನೊಬ್ಬ ನೆರೆಮನೆಯವಳಿಂದ ಕೆಲವು ಮಾತುಗಳನ್ನು ಕೇಳಿಸಿಕೊಂಡು ದಂಗಾಗಿ ಹೋದಳು. ಕೆಲವು ದಿನಗಳ ಹಿಂದಷ್ಟೇ ಆಕೆ ವೀಣಾಳ ಮುಂದೆ ಮಾತ್ರ ಆ ವಿಷಯ ಹೇಳಿದ್ದಳು. ಯಾರ ಮೇಲೆ ಆಕೆ ನಂಬಿಕೆಯಿಟ್ಟು ತನ್ನ ಅಂತರಂಗದ ವಿಷಯ ಹೇಳಿದ್ದಳೊ ಅದೇ ಗೆಳತಿ ಆ ವಿಷಯವನ್ನು ಬೇರೆಯವರ ಕಿವಿಗೆ ಹಾಕಿದ್ದಳು. ಕ್ರಮೇಣ ರಶ್ಮಿ ಹಾಗೂ ಮನೆಯವರು ವೀಣಾಳ ಮನೆಗೆ ಹೋಗುವುದನ್ನು ನಿಲ್ಲಿಸಿದರು. ವೀಣಾಳ ಒಂದಿಷ್ಟು ನಿರ್ಲಕ್ಷ್ಯತನದ ಪರಿಣಾಮವಾಗಿ ಹಲವು ವರ್ಷಗಳಿಂದ ಇದ್ದ ಮಧುರ ಸಂಬಂಧಕ್ಕೆ ಕಲ್ಲು ಬಿತ್ತು.

ಅಂದಹಾಗೆ, ಯಾವ ಗೆಳತಿಯ ಮುಂದೆ ವೀಣಾ ರಶ್ಮಿಯ ಬಗ್ಗೆ ಅವಹೇಳನಕಾರಿ ವಿಷಯ ಹೇಳಿದ್ದಳೊ, ಅದೇ ಗೆಳತಿ ರಶ್ಮಿಗೆ ಫೋನ್‌ಮಾಡಿ ತಿಳಿಸಿದ್ದಳು.

ಅರ್ಚನಾ ತನ್ನ ಹೊಸ ಮನೆಗೆ ಹೋದಾಗ ನೆರೆಮನೆಯ ಒಬ್ಬಾಕೆ ಮತ್ತೊಬ್ಬ ನೆರೆಮನೆಯ ಮಹಿಳೆಯ ಬಗ್ಗೆ ಎಚ್ಚರಿಸುತ್ತ, ``ನೀನು ಆ ಪಕ್ಕದ್ಮನೆಯವಳ ಬಗ್ಗೆ ಎಚ್ಚರದಿಂದಿರು, ಬಹಳ ಚಾಲಾಕಿ ಅವಳು.''

ಅರ್ಚನಾ ಹೇಳಿದಳು, ``ಹೌದಾ, ಆ ಹಳ್ಳಿಯವಳ ಥರಾ ಗೌನ್‌ ಧರಿಸಿರುತ್ತಾಳಲ್ಲಾ..... ಅವಳಾ?''

``ಹೌದು ಅವಳೇ.'

'ಅರ್ಚನಾ ಸಹಜವಾಗಿ ಹೇಳಿದ ಮಾತು ಅದ್ಹೇಗೆ ಉಪ್ಪು ಖಾರ ಮಸಾಲೆ ರೂಪ ಪಡೆದುಕೊಂಡಿತೊ ಗೊತ್ತೇ ಆಗಲಿಲ್ಲ. ಅದೊಂದು ದಿನ ಅರ್ಚನಾ ತನ್ನ ಮನೆಗೆ ಆ ಮಹಿಳೆಯನ್ನು ಸಮಾರಂಭವೊಂದಕ್ಕೆ ಕರೆದಿದ್ದಳು. ಆಕೆ ಸಮಾರಂಭಕ್ಕೆ ಬಂದು ಅರ್ಚನಾಳ ಮುಂದೆ ನಿಂತು ಹೇಳಿದಳು, ``ನಾವು ಹಳ್ಳಿಯವರು. ಎಂತೆಂಥದೊ ಬಟ್ಟೆ ಧರಿಸ್ತೀವಿ. ನಿಮ್ಮಂಥವರು ನಮ್ಮನ್ನು ಕರೆಯದಿರುವುದೇ ಒಳ್ಳೆಯದು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ