ಮನೆವಾರ್ತೆಯಲ್ಲಿ ಸಾಮಾನ್ಯವಾಗಿ ನಾದಿನಿ ಹಸ್ತಕ್ಷೇಪ ಮಾಡುವುದರಿಂದ ಅತ್ತಿಗೆ ಸಾಕಷ್ಟು ತೊಂದರೆ ಕಿರುಕುಳವನ್ನು ಅನುಭವಿಸಬೇಕಾಗುತ್ತದೆ. ನಾದಿನಿ ತವರಿನಲ್ಲಿಯೇ ಇರಬಹುದು ಅಥವಾ ತನ್ನ ಗಂಡನ ಮನೆಯಲ್ಲಿಯೇ ಇರಬಹುದು. ಅವಳು ಅತ್ತಿಗೆಯ ವಿರುದ್ಧ ತನ್ನ ಅಮ್ಮನ ಕಿವಿ ಊದುತ್ತಿರುತ್ತಾಳೆ. ಅಷ್ಟೇ ಅಲ್ಲ ಅಣ್ಣ, ತಮ್ಮನನ್ನು ಕೂಡ ರೊಚ್ಚಿಗೆಬ್ಬಿಸುತ್ತಿರುತ್ತಾಳೆ. ಇದರ ಕಾರಣ ಇಷ್ಟೆ, ತಂಗಿಯು ತನ್ನ ಅಣ್ಣನ ಮೇಲೆ ತನ್ನದೇ ಸಂಪೂರ್ಣ ಹಕ್ಕು ಎಂದು ಭಾವಿಸುತ್ತಾಳೆ. ತನ್ನದೇ ಹಕ್ಕಿನಿಂದ ಅಣ್ಣನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತಾಳೆ. ಅಣ್ಣ ಏನಾದರೂ ದೂರದರ್ಶಿತ್ವ ಹೊಂದಿರದಿದ್ದರೆ ಅವನು ತನ್ನ ಅಕ್ಕ/ತಂಗಿಯ ಮಾತುಗಳಿಗೆ ಬಲಿಬಿದ್ದು ತನ್ನ ಹೆಂಡತಿಯ ಮೇಲೆ ಸಾಕಷ್ಟು ಅನ್ಯಾಯ ಎಸಗುತ್ತಾನೆ.

ಅತ್ತಿಗೆ ನಾದಿನಿಯ ವಿವಾದಕ್ಕೆ ಏನು ಕಾರಣವಿರಬಹುದು ಎಂದು ನೀವು ಯೋಚಿಸಿದ್ದೀರಾ? ನೀವು ಅದರ ಕಾರಣವನ್ನು ಹುಡುಕುತ್ತ ಹೋದರೆ, ಅದಕ್ಕೆ ಸಿಗುವ ಉತ್ತರ `ನಾನು ಎಂಬ ಅಹಂ!' ಎಲ್ಲಿಯವರೆಗೆ ನಿಮ್ಮೊಳಗೆ ಅಹಂ ಇರುತ್ತದೊ, ಅಲ್ಲಿಯವರೆಗೆ ನಿಮ್ಮ ಸಂಬಂಧ ಎಂಬ ವಾಹನವನ್ನು ಬಹುದೂರದ ತನಕ ಕೊಂಡೊಯ್ಯಲು ಆಗುವುದಿಲ್ಲ.

ಇತ್ತೀಚೆಗೆ ನಡೆದ ಒಂದು ಘಟನೆಯನ್ನು ನೋಡಿ, ಬೆಂಗಳೂರಿನ ಒಂದು ಕುಟುಂಬದ ಅತ್ತಿಗೆ ಹಾಗೂ ನಾದಿನಿ ನಡುವೆ ಚಿಕ್ಕಪುಟ್ಟ ಜಗಳಗಳು ನಡೆಯುತ್ತಲೇ ಇದ್ದವು. ನಾದಿನಿಗೆ ಇದನ್ನು ಸಹಿಸಿಕೊಳ್ಳಲು ಆಗದೇ ಇದ್ದಾಗ ಆಕೆ ಅತ್ತಿಗೆಯ ವಿರುದ್ಧ ಒಂದು ರೀತಿಯ ಸಂಚು ಹೂಡಿದಳು.

ಆಕಸ್ಮಿಕ ಎಂಬಂತೆ ಆಕೆಯ ಅಣ್ಣನಿಗೆ ಅಪರಿಚಿತ ನಂಬರ್‌ವೊಂದರಿಂದ ಕರೆಗಳು ಬರಲು ಆರಂಭವಾದವು. ಫೋನ್‌ ಮಾಡಿದ ವ್ಯಕ್ತಿ `ನಾನು ನಿಮ್ಮ ಹೆಂಡತಿಯ ಪ್ರೇಮಿ. ನಾವು ಈಗಲೂ ಪ್ರೀತಿಸುತ್ತಿದ್ದೇವೆ. ಬೇಕಿದ್ದರೆ ನೀವು ಈಗಲೇ ನಿಮ್ಮ ಪತ್ನಿಯನ್ನು ಕೇಳಿ ನೋಡಿ,' ಎಂದು ಆ ವ್ಯಕ್ತಿ ಹೇಳಿದ. ಆಕೆಯ ಅಣ್ಣ ಅದೆಷ್ಟು ಮುಂಗೋಪಿ ಹಾಗೂ ಸಂದೇಹದ ಸ್ವಭಾವದವನಾಗಿದ್ದನೆಂದರೆ, ಮದುವೆಯಾದ ನಾಲ್ಕೇ ತಿಂಗಳಲ್ಲಿ ಹೆಂಡತಿಗೆ ವಿಚ್ಛೇದನ ಕೊಡುವಂತಹ ಸ್ಥಿತಿ ಉದ್ಭವಿಸಿತು. ಆಕೆ ಈಗ ತನ್ನ ತವರಿನಲ್ಲಿದ್ದಾಳೆ. ಆಕೆ ತನಗಾದ ಅನ್ಯಾಯದ ವಿರುದ್ಧ ಈ ಮಹಿಳಾ ಹೆಲ್ಪ್ ಲೈನ್‌ಮೊರೆ ಹೋದಳು. ತನಿಖೆ ಆರಂಭವಾಗುತ್ತಿದ್ದಂತೆ ನಾದಿನಿಯ ಕರಾಮತ್ತು ಬಯಲಿಗೆ ಬಂತು.

ಚಿಕ್ಕ ಕಾರಣ ದೊಡ್ಡ ವಿವಾದ : ಅತ್ತಿಗೆ ಹಾಗೂ ನಾದಿನಿ ನಡುವೆ ನಡೆಯುವ ಜಗಳಗಳಿಗೆ ಕಾರಣ. ಅತ್ಯಂತ ಸಾಮಾನ್ಯವಾಗಿರುತ್ತದೆ. ಮದುವೆಗೂ ಮುಂಚೆ ಮನೆಯ ಪ್ರತಿಯೊಂದು ವಸ್ತುವಿನ ಮೇಲೂ ನಾದಿನಿಗೆ ಹಕ್ಕು ಇರುತ್ತದೆ. ಆದರೆ ಮದುವೆಯ ಬಳಿಕ ಪರಿಸ್ಥಿತಿ ಬದಲಾಗುತ್ತದೆ. ಈಗ ನಾದಿನಿ ಮನೆಯ ಅತಿಥಿಯಂತಾಗಿ ಬಿಡುತ್ತಾಳೆ. ಅತ್ತಿಗೆ ಮನೆಯ ಯಜಮಾನಿ ಆಗಿಬಿಡುತ್ತಾಳೆ. ಇಂತಹ ಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ನಾದಿನಿಯ ಹಸ್ತಕ್ಷೇಪ ಅತ್ತಿಗೆಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಲ್ಲಿಂದಲೇ ಸಣ್ಣಪುಟ್ಟ ಜಗಳಗಳು ಶುರುವಾಗುತ್ತವೆ.

ಒಂದು ಸಾರ್ವಕಾಲಿಕ ಸತ್ಯವೆಂದರೆ, ನಾವು ಒಮ್ಮಿಲ್ಲೊಮ್ಮೆ ಅಧಿಕಾರ ಹಸ್ತಾಂತರ ಮಾಡಲೇಬೇಕು. ನಾವು ಎಂದೆಂದಿಗೂ ಮಾಲೀಕರಾಗಿ ಕುಳಿತುಕೊಂಡರೆ ನಮಗೆ ಯಾರ ಪ್ರೀತಿವಿಶ್ವಾಸವೂ ದೊರೆಯುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ