ಕಲರ್‌ ಅಲ್ಲ… ಫಿಗರ್‌ ಗಮನಿಸಿ : ಇದೀಗ ಈ ಮಾಡೆಲ್‌ ಕಲರ್‌ ಗಮನಿಸಬೇಡಿ, ಕಪ್ಪುಬಿಳುಪು ಎಂಥ ಹುಡುಗಿಯರೇ ಆದರೂ ಅವರು ಹಾಟ್‌  ಸೆಕ್ಸೀ ಆಗಿರಬಲ್ಲರು. ಡಚ್‌ ಉತ್ಪಾದಕರು ವಿಶೇಷವಾಗಿ ಆಫ್ರಿಕನ್‌ ಫ್ಯಾಷನ್‌ ಶೃಂಖಲೆ ರೂಪಿಸಿದ್ದಾರೆ. ಬಣ್ಣ ಹೇಗಿದ್ದರೇನು… ಸೌಂದರ್ಯ ಎಂಬುದು ಎಲ್ಲಿದ್ದರೂ ಶೋಭಿಸುತ್ತದೆ!

ಈಗ ಮೀಡಿಯಾ ಸಹ ಸೂತ್ರದ ಬೊಂಬೆ : ಆಸ್ಟ್ರೇಲಿಯನ್‌ನ ಮೀಡಿಯಾ ಮುರ್ಡೋಕ್‌ ಇಂಗ್ಲೆಂಡ್‌ನ ಸ್ಕೈ ಟಿ.ವಿ. ಖರೀದಿಸಿದೆ, ಹೀಗಾಗಿ ಬಹುಮಂದಿಗೆ ಕೆಲವೇ ಜನರ ಕೈಗೊಂಬೆ ಆಗಲಿರುವ ಮೀಡಿಯಾ ಬಗ್ಗೆ ಆಕ್ಷೇಪಗಳಿವೆ. ಹೀಗಾಗಿ ಈ ಕೋಪವನ್ನು ಪಾರ್ಲಿಮೆಂಟ್‌ ಮುಂದೆ, ಹೀಗೆ ಮೀಡಿಯಾ ಮತ್ತು ಬ್ರಿಟಿಷ್‌ ಪ್ರೈಮ್ ಮಿನಿಸ್ಟರ್‌ ಥೆರೇಸಾರ ಮುಖವಾಡಗಳಿಂದ ಪ್ರದರ್ಶಿಸಲಾಗಿದೆ. ಇಡೀ ವಿಶ್ವದ ಮೀಡಿಯಾದ ಶಕ್ತಿ ಇದೀಗ ಕೆಲವೇ ಕೈಗಳ ಕಪಿಮುಷ್ಟಿಗೆ ಸಿಲುಕಲಿದೆ… ಆದರೆ ಶ್ರೀಸಾಮಾನ್ಯರು ಅಸಹಾಯಕರಾಗಿದ್ದಾರೆ.

ನಿಷ್ಠಾಂತರು ಯಾರು? :  ಈ ಹೋಟೆಲ್‌ಗೆ ನೀವು ಕಾಫಿ ಕುಡಿಯಲು ಹೋಗುವಾಗ ಜೊತೆಗೆ ಫ್ರೆಂಡ್ಸ್ ಕರೆದೊಯ್ಯುತ್ತೀರೋ ಇಲ್ಲವೋ, ಇಲ್ಲಿನ ಮಾಲೀಕಳ ನಾಯಿಗಳಂತೂ ಖಂಡಿತಾ ನಿಮ್ಮ ಫ್ರೆಂಡ್ಸ್ ಆಗುತ್ತವೆ! ಫ್ರಾನ್ಸ್ ನಗರದ ಒಂದು ಖ್ಯಾತ ಕೆಫೆಯ ಮಾಲೀಕಳಾದ ಓಫಿಲಿ ಪಾಲೋನ್‌ ತನ್ನಿಷ್ಟದ 9 ಬಗೆಯ ನಾಯಿಗಳನ್ನು ಸಾಕಿಕೊಂಡಿದ್ದಾಳೆ. ಇವು ಹೋಟೆಲಿಗೆ ಬರುವ ಎಲ್ಲಾ ಗ್ರಾಹಕರನ್ನೂ ಆಕರ್ಷಿಸುತ್ತವೆ. ಈಕೆ ಪ್ರಕಾರ, ಮಾನವರು ಪ್ರಾಣಿಗಳ ಮಧ್ಯೆ ಆತ್ಮೀಯತೆ ಹೆಚ್ಚಬೇಕು. ಗಂಡುಹೆಣ್ಣಿನ ನಡುವಿನ ಆಕರ್ಷಣೆ ಬಗ್ಗೆ…. ಅದಕ್ಕೆ ಆಕೆ ಏನೂ ಹೇಳುತ್ತಿಲ್ಲ.

ಅಪಾಯಕಾರಿ ಸೆಲ್ಛಿ : ಇತ್ತೀಚೆಗೆ ಫೋಟೋ ಅಂದ್ರೆ ಸೆಲ್ಛಿ ಅಂತ ಆಗಿಹೋಗಿದೆ. ಮೊಬೈಲ್‌ ದೆಸೆಯಿಂದ ಸೆಲ್ಛಿ ಕ್ರೇಝ್ ಎಷ್ಟು ಹೆಚ್ಚಿದೆ ಎಂದರೆ, ಇದು ಸಿನಿಮಾ ಥಿಯೇಟರ್‌ಗಳಲ್ಲಿ ರಾಷ್ಟ್ರಗೀತೆಯ ಪ್ರಸಾರದಂತೆ ಆಗಿಹೋಗಿದೆ. ಆದರೆ ಸೆಲ್ಛಿಗಳ ಆಯುಷ್ಯ ಕೆಲವು ಘಂಟೆ ಅಥವಾ ದಿನಗಳಷ್ಟೇ ಎಂಬುದು ಎಲ್ಲರಿಗೂ ಗೊತ್ತು. ಎಷ್ಟೇ ಕಷ್ಟಪಟ್ಟು ತೆಗೆದಿದ್ದರೂ ಅದನ್ನು ಡಿಲೀಟ್‌ ಮಾಡುವ, ಮತ್ತೆ ಹೊಸತನ್ನು ಕ್ಲಿಕ್ಕಿಸುವ! ಇದರ ದುರುಪಯೋಗದ ಕಂಕಣ ತೊಟ್ಟವರು ಬೇಕೆಂದೇ ಹುಡುಗಿಯರ ಜೊತೆಗಿನ ಸೆಲ್ಛಿಗಳನ್ನು ತಿಂಗಳು, ವರ್ಷ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಸೆಲ್ಛಿ ಮೋಸ, ಕಪಟ, ಅಪಾಯಕಾರಿ ಜಾಲ ಎಂಬುದನ್ನು ಹೆಣ್ಣುಮಕ್ಕಳು ನಿರ್ಲಕ್ಷಿಸಬಾರದು.

ನೀನು ನೋಡಿದ್ದು ಸಾಕು… ನನಗೂ ತೋರಿಸು! : ನಮ್ಮಲ್ಲಿ ಪುರಾತನ ದೇವಾಲಯಗಳಿದ್ದ ಕಡೆ ಕೋತಿಗಳಿಗೆ ಬರವೇ? ಭಾರತದಾದ್ಯಂತ ಇದು ಮಾಮೂಲಿ ವಿಷಯವೇ! ನಮ್ಮಲ್ಲಿ ಮಾತ್ರವಲ್ಲ… ಸಾವಿರಾರು ಮೈಲಿಗಳಾಚೆಯ ಕಾಂಬೋಡಿಯಾದ ಅತಿ ಪ್ರಾಚೀನ ಅಂಕೋರ್‌ವಾಟ್‌ ದೇವಾಲಯದಲ್ಲೂ ಪ್ರವಾಸಿಗರ ತಲೆಯೇರಿ ಕೋತಿಗಳೇ ಗೈಡ್‌ ಆಗುತ್ತವೆ. ಈ ಮಂದಿರ 711ನೇ ಶತಮಾನದ ಮಧ್ಯೆ ಕಟ್ಟಿದ್ದೆಂದು ಅಂದಾಜಿಸುತ್ತಾರೆ. ನಂತರ ನಾಶಗೊಂಡು ಕಾಡುಪಾಲಾಗಿತ್ತು. ಫ್ರೆಂಚ್‌ ಸರ್ಕಾರ ಕಾಂಬೋಡಿಯಾ ಮೇಲೆ ಆಳ್ವಿಕೆ ನಡೆಸುವಾಗ ಇದನ್ನು ಸಂಶೋಧಿಸಿ, ನಮ್ಮಲ್ಲಿನ ಪುರಾತನ ಮಂದಿರಗಳಷ್ಟೇ ಪ್ರಾಚೀನವಾಗಿದೆ ಎಂದು ಸಾರಿತು.

14 ವರ್ಷಗಳಲ್ಲಿ ಕೇವಲ ಒಂದೇ ಶಬ್ದ : ಅಂತೂ ಓದು ಕಲಿತ ಈ ಕತ್ತೆ ಕ್ಷಮಿಸಿ ಸೀ ಲಯನ್‌, ಸಾಧಿಸಿದ್ದು ಇಷ್ಟೆ. ಎಷ್ಟೇ ಕಲಿಸಿದರೂ ಈ ಸೀ ಲಯನ್‌ ಮಾತ್ರ ಕೇವಲ ಒಂದೇ ಚೀನೀ ಶಬ್ದವನ್ನು ಮಾತ್ರ ಬರೆಯಲು ಕಲಿತಿದೆ. ಅನಕ್ಷರಸ್ಥ ಮಾನವರಿಗಿಂತ ಈ ಪ್ರಾಣಿ ಇಷ್ಟಾದರೂ ಕಲಿತಿದೆಯಲ್ಲ ಅಂತ ಜನ ಚಪ್ಪಾಳೆ ತಟ್ಟುತ್ತಿದ್ದಾರೆ.

ಸೆರೆಮನೆಯಾದರೆ ಮನರಂಜನೆಗೆ ಕೊರತೆಯೇ? :  ಜೇಲು ಸೇರಿದ ಮಾತ್ರಕ್ಕೆ ಜೀವನವೇ ಮುಗಿದುಹೋಯಿತೆಂದು ಹತಾಶರಾಗಬೇಕಿಲ್ಲ. ಇತ್ತೀಚೆಗೆ ಫಿಲಿಪೀನ್ಸ್ ನ ಮನಿಲಾ ಜೇಲಿನಲ್ಲಿ ಗಂಡು ಕೈದಿಗಳು ಹೆಂಗಸರ ವೇಷ ಧರಿಸಿ ಬ್ಯೂಟಿ ಪೆರೇಡ್‌ ನಡೆಸಿದಾಗ ಮನರಂಜನೆ ಗಮ್ಮತ್ತಾಗಿತ್ತು. ಬಿಕಿನಿ ಧರಿಸಿ ಬಂದಾಗಲಂತೂ ಪ್ರೋತ್ಸಾಹದ ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿತ್ತು. ಜೇಲಾದರೇನು…. ಮಾನವ ಜೀವಿಗಳು ಮೋಜು ಮಸ್ತಿ ಮಾಡಲು ಹಿಂಜರಿಯುವುದಿಲ್ಲ.

TAGS :

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ