ಬದುಕಲು ಅಸಲಿ ಆನಂದ : ನಿಮ್ಮ ಕಾಲೋನಿಯ ಅಥವಾ ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ಮನೆಗಳವರನ್ನು ಸೇರಿಸಿಕೊಂಡು ಬರಿದೇ ಭಜನೆ ನಡೆಸಬೇಡಿ. ಬದಲಿಗೆ ದೊಡ್ಡದಾದ ಹಾಲ್‌ ನೋಡಿ, ಎಲ್ಲರನ್ನೂ ಕೂಡಿಸಿ ನಕ್ಕು ನಲಿಯುವ ಡ್ಯಾನ್ಸ್ ಪಾರ್ಟಿ ಅರೇಂಜ್‌ ಮಾಡಿ. ಈ ತರಹದ ಕಾರ್ಯಕ್ರಮಗಳು ವಿಶ್ವದ ಎಲ್ಲೆಡೆ ನಡೆಯುತ್ತವೆ. ಜನ ಇದಕ್ಕಾಗಿ ಕಾತರದಿಂದ ಕಾಯುತ್ತಾರೆ. ಯೂರೋಪಿನ ಒಂದು ನಗರದಲ್ಲಿ ನಡೆದ ಪಾರ್ಟಿಯಿದು. ಹೆಂಗಸರಿಗೆ ತಮ್ಮ ಹೊಸ ಹೊಸ ಸೀರೆ, ಡ್ರೆಸ್‌, ಒಡವೆ, ಮೇಕಪ್‌ತೋರಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಬೇಕೇ?

ಭಾವಾತಿರೇಕ ಅಂದ್ರೆ ಹೀಗಿರಬೇಕು : ಇಲ್ಲಿ ಮುಕ್ತವಾಗಿ ನಕ್ಕು ನಲಿಯುತ್ತಿರುವ ಈ ಹುಡುಗಿಯರು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ಸೇರಿದವರು. ಅಲ್ಲಿ ಇವರು ಮಕ್ಕಳಿಗೆ ಪಾಠ ಹೇಳುತ್ತಾರೆ. ಬಾಲಿಯ ವಾಲಂಟಿಯರ್‌ ಪ್ರೋಗ್ರಾಮ್ ಅನೇಕ ಹಿಂದುಳಿದ ಪ್ರದೇಶಗಳ ಮಕ್ಕಳು ಹಾಗೂ ಅವರ ಪೋಷಕರಿಗೆ ತಿಳಿ ಹೇಳುತ್ತಿರುವುದು ಏನೆಂದರೆ, ಹಳೆಯ ತಲೆಮಾರಿನ ವಿಧಿವಿಧಾನ ತೊರೆದು ಹೊಚ್ಚ ಹೊಸ ಜ್ಞಾನ ಪಡೆದುಕೊಳ್ಳಿ ಎಂಬುದು.

ತಸ್ಮಾನಿಯಾ ದ್ವೀಪಕ್ಕೆ ಬನ್ನಿ  :  ನಿಮಗೆ ಬೆಟ್ಟ ಗುಡ್ಡಗಳ ನಡುವೆ ಅಡ್ಡಾಡುವ ಹವ್ಯಾಸವಿದ್ದು, ವಾಕಿಂಗ್‌, ಸೈಕ್ಲಿಂಗ್‌ ಮಾಡಬಲ್ಲಿರಾದರೆ, ಆಸ್ಟ್ರೇಲಿಯಾದ ಹತ್ತಿರವಿರುವ ತಸ್ಮಾನಿಯಾ ದ್ವೀಪಕ್ಕೆ ಬನ್ನಿ. ಇಲ್ಲಿ ಪ್ರತಿ ಕ್ಷಣ ದೃಶ್ಯಗಳು ಬದಲಾಗುತ್ತಲೇ ಇರುತ್ತವೆ. ಇಲ್ಲಿ ಒಮ್ಮೆ ಮರಳು ಕಾಣಿಸಿದರೆ, ಮತ್ತೊಮ್ಮೆ ರೇನ್‌ ಫಾರೆಸ್ಟ್ ಕಾಣಿಸುತ್ತದೆ. ಇನ್ನೊಮ್ಮೆ ಬೆಟ್ಟಗುಡ್ಡಗಳ ದೃಶ್ಯಗಳು. ಪ್ರಾಕೃತಿಕ ಆನಂದ ಸಿಗಬೇಕೆಂದರೆ ಜನ ಕಡಿಮೆ ಇರುವ, ಕೇವಲ ಪ್ರಕೃತಿಸಿರಿ ತುಂಬಿಕೊಂಡಿರುವಂಥ ಜಾಗಕ್ಕೇ ಹೋಗಬೇಕು.

ಇನ್ನೂ ಉಳಿದಿರುವ ಕ್ರೇಝ್ : ಅರ್ನಾಲ್ಡ್ ಸ್ವಾರ್ರ್‌ನೆಗರ್‌ನ ಹೆಸರು ಎಲ್ಲೂ ಅಪರಿಚಿತಲ್ಲ. ಈಗಾಗಲೇ ಆತ ಬಹುತೇಕ ಹಾಲಿವುಡ್ ಸಿನಿಮಾಗಳಲ್ಲಿ ದಾರಾಸಿಂಗ್‌ ತರಹದ  ಪಾತ್ರ ಮಾಡಿದ್ದಾನೆ. ಜನಪ್ರಿಯ ನಟ ಒಂದು ರಾಜ್ಯದ ಗವರ್ನರ್‌, ಮುಖ್ಯಮಂತ್ರಿ ತರಹ ಈತ ಎಲ್ಲೆಲ್ಲೂ ಜನಜನಿತ. ಈತ ರಿಟೈರ್ಡ್‌, ಆದರೆ ಒಮ್ಮೊಮ್ಮೆ ಚಿತ್ರಗಳಲ್ಲಿ ಕಾಣಿಸುತ್ತಾನೆ. ಇತ್ತೀಚೆಗೆ ಈತ ಶುರು ಮಾಡಿದ ಶೋ ಅಂದ್ರೆ `ವಿಶ್ವದ 10 ಅತಿ ಸಶಕ್ತ ಅಥ್ಲೀಟ್ಸ್.’ ಇದರಲ್ಲಿ ಒಬ್ಬ ಸ್ಟ್ರಾಂಗ್‌ಫೈರ್‌ ಫೈಟರ್‌ ಜೊತೆ ಕೈ ಕುಲುಕುತ್ತಿದ್ದಾನೆ. ಈ ಶೋನಲ್ಲಿ ನಮ್ಮ ಖಲೀ ಸಾಹೇಬರು ಇದ್ದಾರೋ ಇಲ್ಲವೋ…. ತಿಳಿಯಲಿಲ್ಲ.

ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ : ಭಾರತದ ಚುನಾವಣಾ ಆಯೋಗ ಮಾತ್ರವೇ ವೋಟರ್‌ಲಿಸ್ಟ್ ನಿಂದ ಮತದಾರರ ಹೆಸರು ಮಂಗಮಾಯ ಮಾಡುತ್ತದೆ ಎಂದುಕೊಳ್ಳಬೇಡಿ. ಅಮೆರಿಕಾದಂಥ ಪರಿಪಕ್ವ ದೇಶದಲ್ಲೂ ಹೀಗೇ ಆಗುತ್ತದೆ. ಇತ್ತೀಚಿನ ಚುನಾವಣೆಯಲ್ಲಿ ಟೆಕ್ಸಾಸ್‌ ಮಹಾನಗರದ ಸಾವಿರಾರು ಮಂದಿ ಮತದಾರರ ಹೆಸರನ್ನು ಕೈಬಿಡಲಾಗಿತ್ತಂತೆ. ಏಕೆಂದರೆ ರಾಷ್ಟ್ರಪತಿ ಟ್ರಂಪ್‌ರ ಸಮರ್ಥಕರು, ಇವರನ್ನು ಅಮೆರಿಕಾಕ್ಕೆ ನುಗ್ಗಿ ಬಂದಿರುವ ಪರದೇಶಿಗಳೆಂದು ದೂರವಿರಿಸಿದ್ದಾರೆ. ಇದರಲ್ಲಿ ವರ್ಷಾಂತರಗಳಿಂದ ಅಮೆರಿಕಾದಲ್ಲೇ ನೆಲೆಸಿರುವ ಮೂಲ ನಿವಾಸಿಗಳ ಹೆಸರೂ ಬಿಟ್ಟುಹೋಗಿದೆ! ಪಾಪ, ಇವರೆಲ್ಲ ಈಗ ಚುನಾವಣಾ ಕಾರ್ಯಾಲಯಗಳಿಗೆ ಎಡತಾಕಿ, ತಮ್ಮ ನಾಗರಿಕತ್ವ ಸಿಂಧು ಎಂದು ನಿರೂಪಿಸಬೇಕಿದೆ. ಅದರಲ್ಲೂ  ಮುಖ್ಯವಾಗಿ ಒಬ್ಬಂಟಿ, ಅವಿವಾಹಿತೆ, ವಿಚ್ಛೇದಿತೆ, ವಿಧವೆಯರ ಸಂಖ್ಯೆ ಹೆಚ್ಚಾಗಿದೆ.

ಮದುವೆ ಸ್ಮರಣೀಯವಾಗಿರಲಿ ಎಂದು : ನಮ್ಮ ಭಾರತೀಯ ಮದುವೆಗಳಲ್ಲಿ ಡ್ಯಾನ್ಸ್ ಧಮಾಕಾ ಇಲ್ಲದಿದ್ದರೆ ಅದೆಂಥ ಮದುವೆ? ಮದುವೆ ಮನೆಗೆ ಬಂದ ಅಣ್ಣತಮ್ಮ, ಅಕ್ಕತಂಗಿ, ನೆಂಟರಿಷ್ಟರು, ಫ್ರೆಂಡ್ಸ್….. ಇತ್ಯಾದಿ ಎಲ್ಲರೂ ಮೆರವಣಿಗೆಯಲ್ಲಿ ಮನಸೋ ಇಚ್ಛೆ ಕುಣಿಯುವವರೇ! ಆದರೆ ವಧೂವರರು ಪಾಪ, ಅಲಂಕೃತರಾಗಿ ಇವರ ಡ್ಯಾನ್ಸ್ ನೋಡುತ್ತಾ ಸುಮ್ಮನೆ ನಿಲ್ಲಬೇಕಷ್ಟೆ. ಫ್ರಾನ್ಸ್ ನಲ್ಲಿ ಇತ್ತೀಚೆಗೆ ನಡೆದ ಈ ವೆಡ್ಡಿಂಗ್‌ ಧಮಾಕಾ ನೋಡಿ. ತನ್ನ ಬೆರಳ ತುದಿಯಲ್ಲೇ ವರನನ್ನು ಹೇಗೆ ಕುಣಿಸಬಲ್ಲೇ ನೋಡಿ ಎನ್ನುತ್ತಿದ್ದಾಳಾ ಈ ವಧು?!

ಪಾಪ್ಯುಲರ್‌ ಶೋ : ಇಂಗ್ಲೆಂಡ್‌ನ ಕಿರುತೆರೆಯಲ್ಲಿ ಅತಿ ಜನಪ್ರಿಯತೆ ಗಳಿಸಿರುವ ಲೈವ್‌ ಡ್ಯಾನ್ಸಿಂಗ್‌ ಶೋ ಎಂದರೆ `ಸ್ಟ್ರಿಕ್ಟ್ಲ್ ಕಮ್ ಡ್ಯಾನ್ಸ್!’ ಈ ಟಿವಿ ಪರ್ಫಾರ್ಮೆನ್ಸ್ ಡ್ಯಾನ್ಸ್ ಕಾಂಪಿಟಿಶನ್‌ನಲ್ಲಿ ಜನ ಮುಗಿಬಿದ್ದು ಭಾಗವಹಿಸುತ್ತಾರೆ. ಯುವ ಜೋಡಿಗಳಿಗೆ ಇಲ್ಲಿ ಡಿಮ್ಯಾಂಡ್‌ ಹೆಚ್ಚು. ಬಾಲ್ ರೂಮ್ ವ್ಯಾಟಿನ್‌ ಡ್ಯಾನ್ಸ್ ನ ಈ ಶೋನಲ್ಲಿ ನಮ್ಮ ಭಾರತೀಯ ಜೋಡಿಗಳೂ ಸಾಕಷ್ಟು ಮಿಂಚುತ್ತಿವೆ!

TAGS : ಸುದ್ದಿ ಸಮಾಚಾರ, ಅಸಲಿ ಆನಂದ,  ಭಾವತಿರೇಕ, ತಸ್ಮಾನಿಯಾ ದ್ವೀಪ,  ಇನ್ನೂ ಉಳಿದ ಕ್ರೇಝ್, ಭಾರತದಂತೆ ಅಮೆರಿಕಾ, ಸ್ಮರಣೀಯ ಮದುವೆ, ಪಾಪ್ಯುಲರ್ ಶೋ

और कहानियां पढ़ने के लिए क्लिक करें...