ಕೇವಲ ನೆನಪುಗಳಷ್ಟೇ ಉಳಿದಿವೆ : ಎರಡನೇ ವಿಶ್ವ ಯುದ್ಧದಲ್ಲಿ ಯಾರು ತಮ್ಮ ಪೂರ್ವಜರನ್ನು ಕಳೆದುಕೊಂಡಿದ್ದಾರೋ, ಅವರನ್ನು ಇಂದಿಗೂ ಮರೆತಿಲ್ಲ. ತಮ್ಮ ಮೃತ ಸೈನಿಕ ಸಂಬಂಧಿಕರ ಫೋಟೋಗಳನ್ನು ಪ್ರದರ್ಶಿಸುತ್ತಾ, ರಷ್ಯಾದಲ್ಲಿ ಇತ್ತೀಚೆಗಷ್ಟೆ ಮದರ್‌ ಹೋಮ್ ಲ್ಯಾಂಡ್‌ ಸ್ಟ್ಯಾಚ್ಯು ಎದುರು ಲಕ್ಷಾಂತರ ಮಂದಿ ಪ್ರದರ್ಶನ ನಡೆಸಿದರು, ಹುತಾತ್ಮರನ್ನು ಸ್ಮರಿಸಿದರು.

ಮಾಯವಾಗುತ್ತಿರುವ ಸಾಂಪ್ರದಾಯಿಕ ಡ್ರೆಸ್‌ : ಸಾಂಪ್ರದಾಯಿಕ ಉಡುಗೆಗಳ ಯುಗ ಈಗ ಮಾಯವಾಗಿದೆ. ಜನ ಈಗ ಇದನ್ನು ಕೊಳ್ಳುವ ಬದಲು ಬಾಡಿಗೆಗೆ ಪಡೆಯುತ್ತಿದ್ದಾರೆ. ಹಿಂದೆಲ್ಲ ಜಪಾನಿನಲ್ಲಿ ಕಿಮೋನೋ, ಸಾಮಾನ್ಯ ಮಹಿಳೆಯ ಉಡುಗೆ ಆಗಿದ್ದುದು, ಇದೀಗ ಕೇವಲ ಮದುವೆಗಳಲ್ಲಿ ಮಾತ್ರ ಧರಿಸುವ ದಿರಿಸಾಗಿದೆ. ಮದುವೆಗೆ ಬರುವವರೂ ಸಹ ಇದನ್ನು ಬಾಡಿಗೆಗೆ ಕೊಂಡು ಧರಿಸಿ ಬರುತ್ತಾರೆ. ಪತಿ ಬಗ್ಗೆಯೇ ಭರವಸೆ ಇಲ್ಲದಿರುವಾಗ ಅಂಥ ಡ್ರೆಸ್‌ಗೆ ಏಕಷ್ಟು ಖರ್ಚು ಮಾಡಬೇಕು? ಮುಂದೆ ಇನ್ನೊಂದು ಮದುವೆ ಅಟೆಂಡ್‌ ಮಾಡಿದರೆ ಅದಕ್ಕೂ ಹೀಗೇ ಬಾಡಿಗೆಗೆ ಕೊಂಡರಾಯಿತು.

ಧರ್ಮ ರಕ್ಷಣೆಗಾಗಿ ನಡೆದ ನಾಟಕ :  ಈಗ ದಲಿತರು ಎಲ್ಲದಕ್ಕೂ ಮುಖ್ಯರಾಗುತ್ತಾರೆ, ಅದನ್ನು ಜಗಜ್ಜಾಹೀರು ಗೊಳಿಸಲೆಂದೇ ಹೈದರಾಬಾದಿನಲ್ಲಿ ಇತ್ತೀಚೆಗೆ ಪೂಜಾರಿಯೊಬ್ಬರು ಒಬ್ಬ ದಲಿತನನ್ನು ಭುಜದ ಮೇಲೆ ಹೊತ್ತು ಮಂದಿರದ ಗರ್ಭಗುಡಿಯವರೆಗೂ ಪ್ರವೇಶಿಸಿದರು. ಇದರ ಬಗ್ಗೆ ಎಲ್ಲೆಲ್ಲೂ ಪ್ರಶಂಸೆಯ ಚರ್ಚೆ ನಡೆಯಿತು. ಆದರೆ ನಮ್ಮ ಸಮಾಜದಲ್ಲಿ ದಲಿತರ ಕುರಿತಾದ ಭೇದಭಾವ ಕಡಿಮೆ ಆಗಿಲ್ಲ. ಇಂಥ ವಿಷಯದಲ್ಲಿ ಸಮಾಜ ಆಮೆಯಂತೆ ನಡೆಯುತ್ತದೆ.

ಇದೀಗ ಗೋಟ್‌ ಯೋಗ :  ಯೋಗ ಕಲಿಸುವ ಸ್ಟಂಟ್‌ ಬಾಝಿಗಳು ಮೂಲ ಯೋಗ ದೇಶವಾದ ಭಾರತಕ್ಕಿಂತ ಇನ್ನೋಶ್‌ನಲ್ಲಿ ಒಂದು ಕೈ ಮುಂದಾಗಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದ ಒಂದು ಯೋಗ ಕೇಂದ್ರದಲ್ಲಿ `ಗೋಟ್‌ ಯೋಗ’ ಅಂದರೆ ಮೇಕೆ ಜೊತೆ ಯೋಗ ಕಲಿಸುತ್ತಾರೆ. ಮೇಕೆಗೂ….ಯೋಗಕ್ಕೂ ಸಂಬಂಧವೇ? ಆದರೆ ಅನೇಕ ಮೇಕೆಗಳನ್ನು ಹೊಂದಿದ್ದ ಒಂದು ಫಾರ್ಮ್ ನ ಒಡತಿ ತನ್ನ ಫಾರ್ಮ್ ನಲ್ಲಿ ಯೋಗ ಕ್ಲಾಸ್‌ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಜನರ ಮಧ್ಯೆ ಮೇಕೆಗಳನ್ನು ಬಿಟ್ಟಾಗ, ಯೋಗ ಮಾಡುತ್ತಿದ್ದವರಿಗೆ ಹೊಸ ಹುರುಪು ಬಂತು. ಈ ರೀತಿ ಮೇಕೆ ಮಂದಿ ನಡುವಿನಿಂದ ನುಸುಳಿಕೊಂಡು ಆಚೆ ಬರುವ ಪ್ರಕ್ರಿಯೆ ಗೋಟ್‌ ಯೋಗ ಎಂದು ಜನಪ್ರಿಯಗೊಂಡಿತು. ಬೇಕೆಂದೇ ಈಗ ಎಲ್ಲರೂ ಹೀಗೆ ಮಾಡುತ್ತಿದ್ದಾರೆ. ಇದಕ್ಕೆ ತರ್ಕ ಕಾರಣಗಳಿಲ್ಲ.

ನೀವು ಟ್ರೈ ಮಾಡಿ ನೋಡಿ! : ಅಬ್ಬಬ್ಬಾ….! ಗೌನ್‌ ಅಂದ್ರೆ ಹೀಗಿರಬೇಕು, ಇದರ ಮುಂದೆ ಕಾರ್ಪೆಟ್‌ ಕೂಡ ಚಿಕ್ಕದಾಯಿತು. ಸಾಮಾನ್ಯವಾಗಿ ಹಾಲಿವುಡ್‌ನ ಅವಾರ್ಡ್‌ ಫಂಕ್ಷನ್‌ಗಳಲ್ಲಿ ಸ್ಟಂಟ್‌ ಬಾಝಿ ನಟಿಯರು ಹೀಗೆ ಮಾಡುತ್ತಾರೆ, ಆಗ ಅವರ ಫೋಟೋ ಎಲ್ಲಾ ಅಂತಾರಾಷ್ಟ್ರೀಯ ದೈನಿಕಗಳಲ್ಲೂ ರಾರಾಜಿಸುತ್ತದೆ. ಕಳೆದ ಮೇ ತಿಂಗಳಲ್ಲಿ ನಿಕ್ಕಿ ಮಿನಾಜ್‌ ಎಂಬ ನಟಿ ನ್ಯೂಯಾರ್ಕ್‌ನಲ್ಲಿ  ಮಾಡಿದ್ದೂ ಇದನ್ನೇ!

ಹುಚ್ಚರಿಗೇನೂ ಕೊರತೆ ಇಲ್ಲ : ಯೂರೋಪಿನ ಮಂದಿ ಹಾಡುಹಗಲೇ ರಸ್ತೆ, ಮ್ಯೂಸಿಯಂಗಳಲ್ಲಿ ಬೆತ್ತಲೆ ತಿರುಗುವುದನ್ನು ದೊಡ್ಡ ಕ್ರಾಂತಿಕಾರಿ ಪ್ರಕ್ರಿಯೆ ಎಂದು ಭಾವಿಸುತ್ತಾರೆ. ಕಳೆದ ಮೇ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ 20-25 ಯುವಕಯುವತಿಯರ ಒಂದು ತಂಡ ದಿನವಿಡೀ ಮಾಡಿದ್ದೂ ಇದನ್ನೇ! ರಾತ್ರಿ ಸಂಗ್ರಹಾಲಯಕ್ಕೂ ಹೀಗೆ ಹೊರಟರಂತೆ. ಇವರ ವಾದವೆಂದರೆ ಹುಟ್ಟುವಾಗಲೂ, ಸಾಯುವಾಗಲೂ ಇಲ್ಲದ ವಸ್ತುಗಳು ಬದುಕಿರುವಾಗ ಏಕೆ? ಅವು ನಕಲಿ, ಅನಾವಶ್ಯಕ ಎನ್ನುತ್ತಾರೆ.

ನಶೆಗೆ ಬ್ಯಾನ್‌ ಅತ್ಯಗತ್ಯ : ಮಾರಿಜುವಾನಾ ಅಥವಾ ಗಾಂಜಾ ಕೆಲವು ದೇಶಗಳಲ್ಲಿ ಈಗ ಕಾನೂನುಬಾಹಿರವಲ್ಲ. ನಮ್ಮ ದೇಶದಲ್ಲಂತೂ ಬಾಬಾ, ಫಕೀರರಿಗೆ ಇದಿಲ್ಲದಿದ್ದರೆ ಆಗುವುದೇ ಇಲ್ಲ. ಯೂರೋಪ್‌, ಅಮೆರಿಕಾದಲ್ಲಂತೂ ಇದು ಅತಿ ಸಾಧಾರಣ. ಈ ನಶೆ ಕೊನೆಯಲ್ಲಿ ವ್ಯಕ್ತಿಯನ್ನು ಬರ್ಬಾದ್‌ ಮಾಡಿಬಿಡುತ್ತದೆ. ಎಲ್ಲಿಯವರೆಗೂ ತಮ್ಮ ಜೇಬು ತುಂಬಿರುತ್ತದೋ, ಗ್ರಾಹಕರು ಇದನ್ನು ದಲ್ಲಾಳಿಗಳ ಜೇಬಿಗೆ ವರ್ಗಾಯಿಸುತ್ತಲೇ ಇರುತ್ತಾರೆ. ಈಗ ಈ ದಲ್ಲಾಳಿಗಳು ಇದನ್ನು ಕಾನೂನುಬದ್ಧ ಮಾಡಲು ಬೇಡಿಕೆ ಮುಂದಿಟ್ಟಿದ್ದಾರೆ. ಸಮಾಜ, ಸರ್ಕಾರ ಇದಕ್ಕೆ ನಿಷೇಧ ಹೇರಲೇಬೇಕು. ಈ ನಶೆ ಮುಂದೆ ಅನೇಕ ಅಪರಾಧಗಳಿಗೆ ನಾಂದಿ ಹಾಡುತ್ತದೆ.

TAGS : ಸುದ್ದಿ ಸಮಾಚಾರ, ಕೇವಲ ನೆನಪು, ಸಾಂಪ್ರದಾಯಿಕ ಡ್ರೆಸ್, ಧರ್ಮ ರಕ್ಷಣೆಗೆ ನಾಟಕ, ಗೋಟ್ ಯೋಗ, ಅತಿ ಉದ್ದದ ಗೌನ್, ಹುಚ್ಚರಿಗೆ ಕೊರತೆ ಇಲ್ಲ, ನಶೆಗೆ ಬ್ಯಾನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ