ಪ್ರತಿ ಮಹಿಳೆಯ ಹಿರಿದಾಸೆ ಎಂದರೆ ಅವಳು ತನ್ನ ಮನೆ, ಪರಿವಾರವನ್ನು ಆರ್ಥಿಕವಾಗಿಯೂ ಸುಮುಖವಾಗಿ ನಡೆಸಬೇಕೆಂಬುದು. ಆದರೆ ಅವಳು ತನ್ನ ಈ ಆಸೆಯನ್ನು ಈಡೇರಿಸಿಕೊಳ್ಳಬೇಕೆಂದರೆ, ಅವಳು ತನ್ನ ಅಕ್ಯಾಡೆಮಿಕ್ಸ್ ನಲ್ಲಿ ಯಶಸ್ವಿಯಾಗಿದ್ದು, ವೆಲ್ ಸೆಟಲ್ಡ್ ಆಗಿರಬೇಕು. ಈ ಸಲದ ಹೊಸ ವರ್ಷ ಅಧಿಕ ವರ್ಷ ಆಗಿದೆ. ಈ ಲೀಪ್‌ ಇಯರ್‌ ಸಂದರ್ಭದಲ್ಲಿ ನಾವೇಕೆ ಮಹಿಳೆಯರಿಗೆ  ಪ್ರೊಫೆಶನಲ್ ಲೆವೆಲ್‌ನಲ್ಲಿ ಲೀಪ್‌ ಫಾರ್ವರ್ಡ್ ಅಂದರೆ 4 ಹೆಜ್ಜೆ ಇನ್ನೂ ಮುಂದಿರಿ ಎಂದು ಸಲಹೆ ಕೊಡಬಾರದು? ಹೀಗೆ ಮಾಡುವುದರಿಂದ ಮಹಿಳೆಯರಿಗೆ ಫೈನಾನ್ಶಿಯಲಿ ಸೆಟಲ್ ಆಗಲು ಸಹಾಯ ಸಿಗುತ್ತದೆ, ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಜಾಗೃತಗೊಳ್ಳುತ್ತದೆ.

ಮೊದಲ ಹೆಜ್ಜೆ ಕುಕಿಂಗ್

ಅಂದರೆ ಕ್ಯುಲಿನರಿ ಆರ್ಟ್ಸ್ : ಹಿಂದಿನ ಕಾಲದಲ್ಲಿ ಅಡುಗೆ ಮಾಡುವುದೆಂದರೆ ಅದು ಅಪ್ಪಟ ಮನೆಗೆಲಸವಷ್ಟೆ ಎಂಬ ಅಭಿಪ್ರಾಯವಿತ್ತು. ಆದರೆ ಇಂದಿನ ಆಧುನಿಕ ದಿನಗಳಲ್ಲಿ ಕುಕಿಂಗ್‌ ಅಥವಾ ಕ್ಯುಲಿನರಿ ಆರ್ಟ್ಸ್ ಒಂದು ಆಕರ್ಷಕ ಕೆರಿಯರ್‌ ಆಪ್ಶನ್‌ರೂಪದಲ್ಲಿ ಹೊರಹೊಮ್ಮುತ್ತಿದೆ. ನೀತಾ ಮೆಹ್ತಾ, ಪಂಕಜ್‌ ಭದೌರಿಯಾ ಮುಂತಾದ ರಾಷ್ಟ್ರೀಯ ಖ್ಯಾತಿವೆತ್ತರು, ಅಡುಗೆ ಮಾಡುವ ಕಲೆಗೆ ಒಂದು ಸುಸಜ್ಜಿತ ಉದ್ದಿಮೆಯ ರೂಪ ನೀಡಿದ್ದಾರೆ. ಈ ಕ್ಷೇತ್ರವನ್ನು ಪ್ರೊಫೆಶನಲ್ ರೂಪದಲ್ಲಿ ತಮ್ಮದಾಗಿಸಿಕೊಳ್ಳಲು ಯಾವ ಮಹಿಳೆಯೇ ಇರಲಿ, ಕ್ಯುಲಿನರಿ ಆರ್ಟ್ಸ್ ನಲ್ಲಿ ಡಿಪ್ಲೊಮಾ ಹೊಂದಬೇಕು. ಇದರ ಸಲುವಾಗಿ ಕುಕಿಂಗ್‌, ಬೇಕಿಂಗ್‌ ಟೆಕ್ನಿಕ್ಸ್, ಗಾರ್ನಿಶಿಂಗ್‌, ನೈಫ್‌ ಸ್ಕ್ಸಿಲ್‌, ಫುಡ್‌ ಕಾರ್ವಿಂಗ್‌, ಪ್ಲೇಟ್‌ ಡೊಕೋ, ಫುಡ್‌ ಫೋಟೋಗ್ರಫಿ ಜೊತೆ ಜೊತೆಯಲ್ಲೇ ರೆಸ್ಟೋರೆಂಟ್‌ಮ್ಯಾನೇಜ್‌ಮೆಂಟ್‌ನ ತತ್ವಗಳನ್ನೂ ಕಲಿಸಲಾಗುತ್ತದೆ. ಈ ಕೋರ್ಸ್‌ಗಳನ್ನು ಮುಗಿಸಿದ ನಂತರ ಯಾವ ಮಹಿಳೆಯಾದರೂ ಸರಿ, ಕನ್ಸಲ್ಟಿಂಗ್‌ ಡಿಸೈನ್‌ ಪ್ರೊಫೆಶನ್‌, ಫುಡ್‌ಬೆರೇಜ್‌ ಕಂಟ್ರೋಲರ್‌, ಎಂಟರ್‌ ಪ್ರನ್ಯೋರ್‌ ಶಿಪ್‌, ಸೇಲ್ಸ್ ಪರ್ಸನ್‌, ಫುಡ್‌ ಕ್ರಿಟಿಕಲ್ಸ್, ಫುಡ್‌ ರೈಟರ್ಸ್‌, ಫುಡ್‌ ಸ್ಟೈಲಿಸ್ಟ್ ಹಾಗೂ ಫುಡ್‌ ಫೋಟೋಗ್ರಫಿಯ ಕೆಲಸ ಮಾಡಬಹುದು. ಯಾವ ಮಹಿಳೆಯಾದರೂ ಸರಿ, ತನ್ನ ಕುಕಿಂಗ್‌ ಕ್ಲಾಸೆಸ್‌ ಅಥವಾ ಟಿಫಿನ್‌ ಸಿಸ್ಟಮ್ಸ್ ಉದ್ಯಮವನ್ನೂ ಶುರು ಮಾಡಬಹುದು.

ಈ ಕೋರ್ಸ್‌ಗಳ ಮೂಲಕ ಅವರು ಮಲ್ಟಿಟಾಸ್ಕಿಂಗ್‌, ಟೀಂ ಲೀಡರ್‌ ಶಿಪ್‌, ಪೋಷಕಾಂಶಗಳ ನಿಯಂತ್ರಣ, ಮೆನು ವಿಕಾಸಗೊಳಿಸುವಿಕೆ ಇತ್ಯಾದಿ ಕಲಿಯುತ್ತಾರೆ. ಇದು ಅವರನ್ನು ಇತರರಿಗಿಂತ 4 ಹೆಜ್ಜೆ ಮುಂದಿರುವಂತೆ ಮಾಡುತ್ತದೆ. ಬೆಂಗಳೂರಿನಲ್ಲಿ ಇಂದಿರಾನಗರದ ಸ್ಲರ್ಪ್‌ ಸ್ಟುಡಿಯೋ ಕ್ಯುಲಿನರಿ ಸ್ಕೂಲ್, ದೊಮ್ಮಲೂರಿನ ಕೇಕ್‌ ಬೇಕಿಂಗ್‌ ಕ್ಲಾಸೆಸ್‌, ವೈಟ್‌ಫೀಲ್ಡ್ ನ ಶೆಫ್‌ ಹ್ಯಾಪಿ, ಕೋರಮಂಗಲದ ಕುಕಿಂಗ್‌ ಕ್ಯುಲಿನರಿ ಆರ್ಟ್ಸ್ ಸದಾ 4 ಹೆಜ್ಜೆ ಮುಂದಿರಿ ಪ್ರೈ.ಲಿ., ಹೊಸೂರು ರಸ್ತೆಯ ಎಎಸ್‌ಕೆ ಇನ್‌ಸ್ಟಿಟ್ಯೂಟ್‌ ಮುಂತಾದ ಕಡೆ ಇದಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳಿಗೆ ಸೇರಬಹುದು.

ಎರಡನೇ ಹೆಜ್ಜೆ ಫ್ಯಾಷನ್ಡಿಸೈನಿಂಗ್‌ : ಯಾವ ಮಹಿಳೆಗಾದರೂ ಫ್ಯಾಷನ್ನಿನ ಪರಿಜ್ಞಾನವಿದ್ದು, ಆಕೆ ಅದರಲ್ಲಿ ಕ್ರಿಯೇಟಿವ್ ಸ್ಕಿಲ್ಸ್‌ತೋರಿಸಬಯಸಿದರೆ ಆಕೆ ಫ್ಯಾಷನ್‌ ಮಾರ್ಕೆಂಡೈಝಿಂಗ್‌, ಫ್ಯಾಷನ್‌ ಸ್ಟೈಲಿಂಗ್‌, ಫ್ಯಾಷನ್‌ ಕೋ ಆರ್ಡಿನೇಟರ್‌, ಫ್ಯಾಬ್ರಿಕ್‌ಬೈಯರ್‌ ಮುಂತಾದ ಕ್ಷೇತ್ರಗಳಲ್ಲಿ ಪಾರ್ಟ್‌ ಟೈಂ ಕೋರ್ಸ್‌ ಮಾಡಿ ಆ ಕ್ರಿಯೇಟಿವ್ ‌ಕ್ಷೇತ್ರದಲ್ಲಿ ಕೆರಿಯರ್‌ ಮಾಡಿಕೊಳ್ಳಬಹುದು. ಈ ಎಲ್ಲಾ ಕ್ಷೇತ್ರಗಳಲ್ಲೂ ಯಾವ ಮಹಿಳೆಯಾದರೂ 2-3 ಶಾರ್ಟ್‌ ಟರ್ಮ್ ಡಿಪ್ಲೋಮಾ ಕೋರ್ಸ್‌ ಮಾಡಿಕೊಳ್ಳಬಹುದು.

ಇವನ್ನು ಮುಗಿಸಿದ ನಂತರ ಆಕೆ ಕಾಸ್ಟ್ಯೂಮ್ ಡಿಸೈನರ್‌, ಪರ್ಸನಲ್ ಸ್ಟೈಲಿಸ್ಟ್, ಫ್ಯಾಷನ್‌ ಕೋಆರ್ಡಿನೇಟರ್‌ ಹಾಗೂ ಫ್ಯಾಬ್ರಿಕೇಷನ್‌ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು ಅಥವಾ ತನ್ನದೇ ಆದ ಸ್ವಂತ ಉದ್ದಿಮೆ ಅಂದರೆ ಫ್ಯಾಷನ್‌ ಶೋ ಆರ್ಗನೈಸರ್‌, ಗಾರ್ಮೆಂಟ್‌ ಸ್ಟೋರ್‌ ಚೇನ್‌, ಬೊಟಿಕ್‌ ಇತ್ಯಾದಿ ತೆರೆಯಬಹುದು. ನಮ್ಮ ದೇಶದಲ್ಲಿ ಅನೇಕ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕ್ರಿಯೇಟಿವ್ ‌ಕೋರ್ಸ್‌ ಕಲಿಸುತ್ತವೆ.

ಮೂರನೇ ಹೆಜ್ಜೆ ಜ್ಯೂವೆಲರಿ ಡಿಸೈನಿಂಗ್‌ : ಆಭರಣಗಳ ಜೊತೆ ಮಹಿಳೆಯರಿಗೆ ಭಾವನಾತ್ಮಕ ಬೆಸುಗೆ ಇರುತ್ತದೆ. ತಮ್ಮ ಈ ಅಭಿಲಾಷೆಯನ್ನೇ ಮಹಿಳೆಯರು ಆದಾಯದ ಮೂಲವಾಗಿಯೂ ಮಾಡಿಕೊಳ್ಳಬಹುದು. ಕೆರಿಯರ್‌ ಆಪ್ಶನ್‌ ಆಗಿ ಜ್ಯೂವೆಲರಿ ಡಿಸೈನಿಂಗ್‌ ಉದ್ದಿಮೆ ಇಂದಿನ ಯುವತಿಯರ ನಡುವೆ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಅನೇಕ ಡಿಪ್ಲೋಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳಿವೆ. ಜ್ಯೂವೆಲರಿ ಡಿಸೈನಿಂಗ್‌ನ ಕ್ಷೇತ್ರದಲ್ಲಿ ಕ್ರಿಯೇಟಿವ್ ‌ಆಗುವ ಜೊತೆ ಜೊತೆಯಲ್ಲೇ ಪ್ರೊಫೆಶನಲ್ ಬುದ್ಧಿವಂತಿಕೆಯ ಕಾಂಬಿನೇಷನ್ನಿನ ಅಗತ್ಯ ಇದೆ.

ಪಿ.ಯು.ಸಿ. ಪಾಸ್‌ ಆದ ಯುವತಿ ಈ ಕೋರ್ಸ್‌ ಸೇರಬಹುದು. ಕೋರ್ಸ್‌ ಮುಗಿದ ಮೇಲೆ ಫ್ರೀ ಲ್ಯಾನ್ಸರ್‌ ಆಗಿ ಜ್ಯೂವೆಲರಿ ಡಿಸೈನಿಂಗ್‌ ಕೆಲಸ ಮಾಡಬಹುದು. ಹೀಗೆ ಆಕೆ ತನ್ನ ಸಮೀಪದ ಜ್ಯೂವೆಲರಿ ಹೌಸೆಸ್‌ಗೆ ಕೆಲಸ ಮಾಡಬಹುದು, ನಂತರ ದೊಡ್ಡ ಜ್ಯೂವೆಲರಿ ಕಂಪನಿ ಸೇರಬಹುದು.

ಈ ಕುರಿತಾಗಿ ಜ್ಯೂವೆಲರಿ ಡಿಸೈನರ್‌ ಜಿ. ಕೃತಿ ಹೇಳುತ್ತಾರೆ, ಆರಂಭದಲ್ಲಿ ಆಕೆ ಕಾಶಿ ಜ್ಯೂವೆಲರ್ಸ್‌ನಲ್ಲಿ ಮಾರ್ಕೆಟಿಂಗ್‌ ಹೆಡ್‌ನ ಕೆಲಸ ಮಾಡಿದರು. ಅಲ್ಲಿ ಪಿಆರ್‌ ಸ್ಟ್ರಾಟರ್ಜಿ ಪ್ಲ್ಯಾನಿಂಗ್‌ ಕೆಲಸವನ್ನೂ ಮಾಡುತ್ತಿದ್ದರು. ಹಾಗೇ ಮುಂದುವರಿದು ಇಂದು ಆಕೆ ಕೃತಿ ಕೇಝಿಯೋನ್‌ಗೆ ಮಾಲೀಕರಾಗಿದ್ದಾರೆ.

ಕೃತಿ ಹೇಳುತ್ತಾರೆ, ಪ್ರತಿ ಮಹಿಳೆಯೂ ತನ್ನ ಕೆರಿಯರ್‌ ಗ್ರಾಫ್‌ನ್ನು ಮುಂದುವರಿಸಲು, ತನ್ನ ಕ್ವಾಲಿಫಿಕೇಶನ್‌ಹೆಚ್ಚಿಸಿಕೊಳ್ಳುತ್ತಿರಬೇಕು. ಹಾಗೆ ಮಾಡಿ ಆಕೆ ತನ್ನ ಯೋಗ್ಯತೆಯನ್ನು ಹೆಚ್ಚಿಸಿಕೊಳ್ಳುವುದಲ್ಲದೆ, ರಚನಾತ್ಮಕತೆಯನ್ನೂ ಹೆಚ್ಚಿಸಿಕೊಳ್ಳಬೇಕು.

ನಾಲ್ಕನೇ ಹೆಜ್ಜೆ ಬ್ಯೂಟಿ ಬಿಸ್ನೆಸ್ನಲ್ಲಿ ಕೆರಿಯರ್ರೂಪಿಸಿಕೊಳ್ಳಿ : ಇಂದು ಪ್ರತಿಯೊಬ್ಬರೂ ಬ್ಯೂಟಿಫುಲ್ ಸ್ಮಾರ್ಟ್‌ ಆಗಿ ಕಾಣಿಸಿಕೊಳ್ಳಬಯಸುತ್ತಾರೆ. ಈ ಕಾರಣದಿಂದ ಇಂದು ಬ್ಯೂಟಿ  ವೆಲ್‌ನೆಸ್‌ ಇಂಡಸ್ಟ್ರಿ ವೇಗವಾಗಿ ಬೆಳೆಯುತ್ತಿದೆ. ಇಂದು ಇದು ಫೇರ್‌ನೆಸ್‌, ಹೆಲ್ದಿ ಸ್ಕಿನ್‌ ಕ್ರೀಂ ಇತ್ಯಾದಿ ಮೀರಿ ಬ್ಯೂಟಿ ಸೆಲೂನ್‌, ಸ್ಪಾವರೆಗೂ ತಲುಪಿದೆ.

ಈ ಕ್ಷೇತ್ರದಲ್ಲಿ ಕೆರಿಯರ್‌ ರೂಪಿಸಿಕೊಳ್ಳ ಬಯಸುವವರಿಗೆಂದೇ ಅನೇಕ ಅವಕಾಶಗಳಿವೆ. ಯಾವ ಮಹಿಳೆಯೇ ಇರಲಿ ಬ್ಯೂಟೀಷಿಯನ್‌, ಬ್ಯೂಟಿ ಕಲ್ಚರ್‌, ಹೇರ್‌ ಡ್ರೆಸರ್‌ ಹಾಗೂ ಹೆಲ್ತ್ ಸ್ಲಿಂ ಅಸಿಸ್ಟೆಂಟ್‌ಗೆ ಸಂಬಂಧಿಸಿದ ಮಾಹಿತಿಗಳ ಕುರಿತು ಟೆಕ್ನಿಕಲ್ ಕೋರ್ಸ್‌ ಮಾಡಬಹುದು. ಮುಂದೆ ಕಾಸ್ಮೆಟಾಲಜಿಸ್ಟ್, ಮೇಕಪ್‌ ಪ್ರೊಫೆಶನಲ್, ಹೇರ್‌ ಎಕ್ಸ್ ಪರ್ಟ್‌, ನೇಲ್ ‌ಎಕ್ಸ್ ಪರ್ಟ್‌, ಬ್ಯೂಟಿ ಮೇನೇಜರ್‌, ಬ್ಯೂಟಿ ಥೆರಪಿಸ್ಟ್, ಕಲರ್‌ ಥೆರಪಿಸ್ಟ್ ಇತ್ಯಾದಿಗಳಲ್ಲಿ ಕೆರಿಯರ್‌ ರೂಪಿಸಿಕೊಳ್ಳಬಹುದು. ಇದರ ಜೊತೆ ಆಕೆ ಫ್ಯಾಷನ್‌ ಸ್ಟೈಲಿಸ್ಟ್, ಬ್ಯೂಟಿ ಮ್ಯಾಗಝಿನ್‌ ರೈಟರ್‌, ಬ್ಯೂಟಿ ಪ್ರಾಡಕ್ಟ್ ಡಿಸೈನರ್‌, ಬ್ಯೂಟಿ ಬಿಸ್‌ನೆಸ್‌ ಕನ್ಸೆಲ್ಟ್, ಬ್ಯೂಟಿ ಸ್ಕೂಲ್ ‌ಆನರ್‌ ಆಗಿ ಕೆಲಸ ಮಾಡಬಹುದು.

ಬ್ಯೂಟಿ ಎಕ್ಸ್ ಪರ್ಟ್‌ ಶೆಹನಾರ್‌ ಹುಸೇನ್‌, ವಂದನಾ ಲೂಥ್ರಾ, ಭಾರತಿ ತನೇಜಾ ಮುಂತಾದವರು ಈ ಕ್ಷೇತ್ರದಲ್ಲಿ ದಿಗ್ಗಜರೆನಿಸಿದ್ದಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಹೊಸ ವರ್ಷದಲ್ಲಿ ನೀವು ಬೇರೆಯವರಿಗಿಂತ 4 ಹೆಜ್ಜೆ ಮುಂದಿರಲು, ಈ ಕೋರ್ಸಸ್‌ ಹೊರತಾಗಿ ನೀವು ನಿಮ್ಮ ಅಭಿರುಚಿಗೆ ಅನುಸಾರ ಟೂರಿಸಂ ಇಂಡಸ್ಟ್ರಿ, ಸೋಶಿಯಲ್ ವರ್ಕ್‌, ಫುಡ್‌ ನ್ಯೂಟ್ರಿಷನ್‌, ಕ್ಯಾಂಡಲ್ ಮೇಕಿಂಗ್‌, ಚಾಕಲೇಟ್‌ ಮೇಕಿಂಗ್‌, ಗಿಫ್ಟ್ ಪ್ಯಾಕಿಂಗ್‌, ಹೋಂ ಟ್ಯೂಷನ್ಸ್, ಮಾಂಟೆಸರಿ ಇತ್ಯಾದಿ ಉದ್ಯಮಗಳಲ್ಲೂ ತೊಡಗಬಹುದು.

ಎಷ್ಟೋ ಮಹಿಳೆಯರು ತಮ್ಮ ಕೌಟುಂಬಿಕ ಜವಾಬ್ದಾರಿಗಳಿಂದಾಗಿ 9-5 ಹೊತ್ತಿನ ಆಫೀಸ್‌ ಜಾಬ್‌ ಮಾಡಲಾಗದು. ಹೀಗಿರುವಾಗ ಈ ಕೋರ್ಸ್‌ಗಳು ಅವರ ಕೆರಿಯರ್‌ ಗ್ರಾಫ್‌ ಮುನ್ನೇರಲು ಸಹಾಯಕವಾಗಿವೆ. ಈ ಕೋರ್ಸುಗಳನ್ನು ಇವರು ಸಂಜೆ ಅಥವಾ ವೀಕೆಂಡ್ಸ್ ನಲ್ಲೂ ಮಾಡಿಕೊಳ್ಳಬಹುದು. ಕೋರ್ಸ್‌ಗೆ ತಕ್ಕಂತೆ ಫೀಸ್‌ ಬೇರೆ ಬೇರೆ ತರಹ ಇರುತ್ತವೆ. ನಿಮ್ಮ ಪ್ರತಿಭೆ ಬೆಳಗುವ ಈ ಕೋರ್ಸುಗಳು ನಿಮ್ಮನ್ನು ಇತರರಿಗಿಂತ 4 ಹೆಜ್ಜೆ ಮುಂದಿರಿಸಿ, ಪ್ರೊಫೆಶನಲ್ ಲೆವೆಲ್‌ನಲ್ಲಿ ಅಧಿಕ ಸಶಕ್ತರಾಗಿ ಪ್ರಗತಿ ಹೊಂದಲು ನೆರವಾಗುತ್ತದೆ.

ಜಿ. ಲಲಿತಾ.

Tags:
COMMENT