ವಾಕಿಂಗ್‌ ಹೊರಡುವುದು ಎಲ್ಲಾ ವ್ಯಾಯಾಮಗಳಲ್ಲೇ ಅನುಪಮ. ಹೀಗಾಗಿ ಅಮೆರಿಕಾದ ಈ 5 ನಗರಗಳನ್ನು ನೀವು ನಡೆದಾಡುತ್ತಲೇ ಆನಂದವಾಗಿ ವಿಹರಿಸುವುದು ಮೇಲು.

ಫಿಲಡೆಲ್ಛಿಯಾ (ಪೆನ್ಸಿಲ್ವೇನಿಯಾ)

ಇದನ್ನು ನಡೆದಾಡುತ್ತಾ ನೋಡಬಹುದಾದ ಅಮೆರಿಕಾದ ಟಾಪ್‌ 10 ನಗರಗಳಲ್ಲಿ ನಂ.1 ಎಂದು ಘೋಷಿಸಲಾಗಿದೆ. ಫಿಲಡೆಲ್ಛಿಯಾ ನಗರ ತಲುಪುವುದು ಹಾಗೂ ಅಲ್ಲಿ ನಡೆದಾಡುತ್ತಾ ನಗರ ಸಂಚಾರ ಮಾಡುವುದು ಅತಿ ಸುಲಭ. ಅಮೆರಿಕಾದಲ್ಲಿ ಅತಿ ಹೆಚ್ಚು ನಡೆದಾಡುತ್ತಾ ನೋಡುವ ಊರುಗಳಲ್ಲಿ ಇದು ಅಗ್ರಗಣ್ಯ ಎಂದು ಸತತ ಕೇಳಿಬರುತ್ತಿರುತ್ತದೆ.

ನೀವು ಫಿಲಡೆಲ್ಛಿಯಾ ನಗರ ತಲುಪಿದಾಗ ನಿಮಗೆ ಅನೇಕ ಮಹಾನಗರಗಳಲ್ಲಿ ಸುತ್ತಾಡಿದ ಅನುಭವ ಆಗುತ್ತದೆ. ಇದರಲ್ಲಿ ಎಂದಿನ ರೆಸ್ಟುರಾ, ಪಾರ್ಕ್‌, ಕೆಫೆಗಳಲ್ಲಿ ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಿ. ಅದು ನಿಮ್ಮನ್ನು ಈ ನಗರಕ್ಕೇ ಅಂಟಿಕೊಳ್ಳುವಂತೆ ಮಾಡುತ್ತದೆ. ಇಲ್ಲಿ 4-5 ನಿಮಿಷ ನಡೆಯುಷ್ಟರಲ್ಲಿ 6,109 ಹೋಟೆಲ್ ಕೋಣೆಗಳು, 10-12 ನಿಮಿಷ ನಡೆಯುವಷ್ಟರಲ್ಲಿ 9,863 ಹೋಟೆಲ್ ಕೋಣೆಗಳು, ಪೆನ್ಸಿಲ್ವೇನಿಯಾ ಕನ್ವೆನ್ಶನ್‌ ಸೆಂಟರ್‌ನಿಂದ 15 ನಿಮಿಷ ನಡೆದಾಗ 11,460 ಹೋಟೆಲ್ ಕೋಣೆಗಳು ಸಿಗುತ್ತವೆ. ಈ ನಗರದಲ್ಲಿ ಯಾವ ವ್ಯಕ್ತಿಯೇ ಆಗಲಿ 685 ಕಿ.ಮೀ.ನಷ್ಟು ಉದ್ದಕ್ಕೆ ಚಲಿಸಿ ಸೈಕಲ್‌ನಲ್ಲಿ ಎಷ್ಟೋ ಪ್ರವಾಸಿ ತಾಣಗಳನ್ನು ಗಮನಿಸಬಹುದು. ಸೆಲೆಕ್ಟ್ ಗ್ರೇಟರ್‌ ಪ್ರಕಾರ, ಅಮೆರಿಕಾದ ಯಾವುದೇ ರಾಜ್ಯದಲ್ಲಿ, ಪ್ರತಿ ವರ್ಗ ಮೈಲಿಗೆ ಫಿಲಡೆಲ್ಛಿಯಾ ನಗರ ಎಲ್ಲಕ್ಕೂ ಹೆಚ್ಚಿನದೆಂದು ಘೋಷಿಸಲಾಗಿದೆ.

ಸಿಯೇಟ್‌ (ವಾಷಿಂಗ್ಟನ್‌)

ನೀವು ಕೆಲಸದ ಸಲುವಾಗಿ ಅಥವಾ ಪ್ರವಾಸದ ಮೋಜುಮಸ್ತಿಗಾಗಿಯೇ ಹೊರಟಿದ್ದರೂ ಸರಿ, ಪೆಸಿಫಿಕ್‌ ನಾರ್ತ್‌ವೆಸ್ಟ್ ನಲ್ಲಿರುವ ಸಿಯೇಟ್‌ ಒಂದು ಪ್ರಗತಿಪರ ಹಾಗೂ ನಡೆದಾಡಲು ಯೋಗ್ಯವಾದ ನಗರವೆನಿಸಿದೆ. ಇಲ್ಲಿ ಅನೇಕ ಫುಟ್‌ಪಾತ್‌ಗಳಿದ್ದು, ಅಲ್ಲಿ ಸುಖಾಸುಮ್ಮನೆ ನಡೆದಾಡುತ್ತಾ, ಎಂಜಾಯ್‌ ಮಾಡಬಹುದಾದ ಸ್ಥಳಗಳಲ್ಲಿ ಪ್ರಮುಖವಾದುದು ಬೆವಾರ್ಡ್‌. ಇಲ್ಲಿನ ನಿವಾಸಿಗಳು ತಮ್ಮ ದೈನಂದಿನ ಕೆಲಸಗಳಿಗಾಗಿ ಅಂಗಡಿ, ಪಾರ್ಕು, ಶಾಲೆ, ಮಾರ್ಕೆಟ್‌, ಆಫೀಸಿಗೆ ಹೋಗಿಬರಲು ಕಾರನ್ನು ಬಳಸುವುದೇ ಇಲ್ಲ. ಕ್ಯಾಪಿಟಲ್ ಹಿಲ್‌ನ ರಸ್ತೆಗಳು, ಮೂಲಿ ಥಿಯೇಟರ್‌ ಕೆಫೆ, ಬಾರ್‌, ರೆಸ್ಟುರಾ ಹಾಗೂ ಮ್ಯೂಸಿಕ್‌ ನೈಟ್‌ಕ್ಲಬ್ಬುಗಳೆಲ್ಲ ಸದಾ ಜನರಿಂದ ತುಂಬಿ ತುಳುಕುತ್ತಿರುತ್ತದೆ.

ಈ ನಗರದ ನಿವಾಸಿಗಳು ಅತ್ಯಧಿಕ ಕಾಫಿಪ್ರಿಯರು. ಇಲ್ಲಿ ಪ್ರತಿ 1000 ನಾಗರಿಕರಿಗೆ 2.5 ಕಾಫಿ ಶಾಪ್ಸ್ ಲಭ್ಯವಿದೆ.

ಬೋಸ್ಟನ್‌ (ಮೆಸಾಚುಸೆಟ್ಸ್)

ಇದು ಎಂಥ ನಗರವೆಂದರೆ ಯಾವ ವ್ಯಕ್ತಿಯೇ ಆಗಲಿ ನಡಿಗೆ, ಟ್ರಾಲಿ, ಬೈಕ್‌, ದೋಣಿಗಳಲ್ಲಿ ಪ್ರವಾಸ ಮಾಡಬಹುದು. ಈ ನಗರ  ಎಲ್ಲಾ ಅಭಿರುಚಿಯ ವ್ಯಕ್ತಿಗಳು, ಸಣ್ಣ ಮಕ್ಕಳಿಗೂ ಸಹ ಸುತ್ತಾಡಲು ಪ್ರೋತ್ಸಾಹಿಸುತ್ತದೆ. ಇವುಗಳಲ್ಲಿ ಐತಿಹಾಸಿಕ ಸ್ಥಳ, ಊಟ ತಿಂಡಿ, ವಾಸ್ತುಶಿಲ್ಪ, ಸಿನಿಮಾ, ಹಾರ್ಬರ್‌, ದ್ವೀಪಗಳು ಪ್ರಮುಖ. ಈ ಕಾರಣಗಳಿಗಾಗಿಯೇ ಈ ನಗರವನ್ನು ನಡೆದಾಡುತ್ತಾ ನೋಡಬೇಕು.

ಬೋಸ್ಟನ್‌ನಲ್ಲಿ ಬಾಡಿಗೆಗೆ ಸೈಕಲ್ ಸಿಗುವ ಹಳೆಯ ಪದ್ಧತಿ ಈಗಲೂ ಜೀವಂತ. ಅದನ್ನು ಯಾರು ಯಾರೊಂದಿಗಾದರೂ ಶೇರ್‌ ಮಾಡಿಕೊಳ್ಳಬಹುದು. ಹೀಗೆ ನೀವು ಹ್ಯಾಚ್‌ಶೆಲ್, ಬೋಸ್ಟನ್‌ ಯೂನಿರ್ಸಿಟಿ ಬ್ರಿಜ್‌ ಇತ್ಯಾದಿ ಎಲ್ಲಿಗಾದರೂ ಹೋಗಬಹುದು. ಇಡೀ ಪಾರ್ಕಿನಲ್ಲಿ ಇದಕ್ಕೆಂದೇ ಮಾರ್ಗಗಳು ಪ್ರತ್ಯೇಕ. ಉದಾ : 3.6 ಕಿ.ಮೀ. ಉದ್ದದ ಸರ್ಕೀಟ್‌ ಪಾಥ್‌ಲೂಪ್‌. ಇನ್ನೊಂದು ಆಕರ್ಷಣೆ ಸೌತ್‌ ಬೇ ಹಾರ್ಬರ್‌ ಟ್ರೇಲ್‌, ಇದು 5.6 ಕಿ.ಮೀ. ಉದ್ದವಿದೆ. ಇಲ್ಲಿ ಸೀಪೋರ್ಟ್‌ ಡಿಸ್ಟ್ರಿಕ್ಟ್ ನಿಂದ ಬೋಸ್ಟನ್‌ ಹಾರ್ಬರ್‌ಗೆ ಸುಲಭವಾಗಿ ಹಾದುಹೋಗಬಹುದು.

ಕೇಂಬ್ರಿಜ್‌ನಿಂದ ಬೆಡ್‌ಪೇರ್ಡ್‌ವರೆಗೂ 16.7 ಕಿ.ಮೀ. ಉದ್ದಕ್ಕೆ ಬೈಕ್‌ ಮಾರ್ಗವಿದೆ, ಇದು ಒಂದು ಹಳೆಯ ರೈಲ್ವೆ ಹಳಿಯ ಬದಿಯಲ್ಲೇ ಚಲಿಸುತ್ತದೆ. ಇಲ್ಲಿ ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸುವಂತಿಲ್ಲ ಹಾಗೂ ಸೈಕಲ್ ಸವಾರರೂ ಸುರಕ್ಷತಾ ಕ್ರಮ ಕೈಗೊಳ್ಳಬೇಕು.

ಬೋಸ್ಟನ್‌ನ ಸಾರ್ಜನಿಕ ಸಂಚಾರ ಪ್ರಣಾಲಿ ಎಂದರೆ ಸಬ್‌ವೇ, ಬಸ್‌, ಟ್ರಾಲಿ ಕಾರ್‌ ಹಾಗೂ ದೋಣಿ ಸೇವೆಗಳು. ಇದು ಗ್ರೇಟರ್‌ ಬೋಸ್ಟನ್‌ ಮಾತ್ರವಲ್ಲದೆ, ಬೇರೆ ಏರಿಯಾಗಳಲ್ಲೂ ಲಭ್ಯ. ಸಬ್‌ವೇನ ಎಲ್ಲಾ ಸ್ಟಾಪ್‌ಗಳಲ್ಲೂ ಕೆಂಪು, ಹಸಿರು, ನೀಲಿ, ಕಿತ್ತಳೆ, ಸಿಲ್ವರ್‌ ಲೈನ್ಸ್ ಎಂದು ಕೋಡ್‌ ಮಾಡಿರುತ್ತಾರೆ. ಇದರ ಹೊರತಾಗಿ ನೀವು ನಗರವಿಡೀ ಓಡಾಡಲು ನಿಮ್ಮ ಲಗೇಜ್‌ ಹೊರಲು ಬಯಸದಿದ್ದರೆ, 1 ದಿನದ ಬಾಡಿಗೆಗೆ ಅದನ್ನು ಅಂಗಡಿಯಲ್ಲೇ ಇರಿಸಬಹುದು.

ಮಿನಿಯಾಪೊಲಿಸ್‌ (ಮಿನೆಸೋಟಾ)

ಇಲ್ಲಿ ನೀವು ಮನಬಂದ ಎಲ್ಲಾ ಜಾಗಗಳಿಗೂ ಹೋಗಲು ಆಗುವುದಿಲ್ಲ. ಇದೊಂದು ಚಿಕ್ಕ ನಗರವಾಗಿದ್ದು, ನೀವು ಎಲ್ಲಿದ್ದೀರಿ ಎಂಬುದು ಅಂಥ ಮುಖ್ಯವೇನಲ್ಲ. ಯಾವುದೇ ಜಾಗಕ್ಕೆ ಹೋಗಲು ಸುಲಭವಾಗಿ, ಬೇಗ ಹೋಗಲು ಅನೇಕ ಆಯ್ಕೆಗಳಿವೆ.

ಈ ನಗರದಲ್ಲಿ ಲೈಟ್‌ ರೈಲು, ಬಸ್ಸು, ಟ್ಯಾಕ್ಸಿ, ಲಿಫ್ಟ್ ನೀಡುವ ಬೈಕ್‌ ಎಲ್ಲ ಇದೆ. ರಸ್ತೆ ಮಾರ್ಗವಂತೂ ಅವಾರ್ಡ್‌ ನೀಡುವಷ್ಟು ಯೋಗ್ಯವಾಗಿವೆ. ಇಡೀ ನಗರದಲ್ಲಿ ಬೈಕ್‌ ಸೇವೆ ಸುವ್ಯವಸ್ಥಿತವಾಗಿದೆ. ಆದರೆ ಓಡಾಡಲು ಅತ್ಯುತ್ತಮ ವಿಧಾನ ಎಂದರೆ ನಡಿಗೆ. ಉಚಿತ ಬಸ್‌ ಸೇವೆ ಸಹ ಉಂಟು. ನಿಕೋಲೇಟ್‌ ಮಾಲ್‌ನಿಂದ ಸೆಂಟ್ರಲ್ ಸಿಟಿವರೆಗೂ ಲಭ್ಯ. ಜೊತೆಗೆ ನೀಲಿ/ಹಸಿರು ಲೈನಿನ ಮೆಟ್ರೋ ರೈಲು ಸೇವೆಯನ್ನೂ ಬಳಸಿಕೊಳ್ಳಬಹುದು.

ಲೈಟ್‌ ರೈಲು ಮಾರ್ಗ

ಈ ನಗರವನ್ನು ಏರ್‌ಪೋರ್ಟ್‌, ಮಾಲ್‌ ಆಫ್‌ ಅಮೆರಿಕಾ, ಸೇಂಟ್‌ ಪಾಲ್ ಅಲ್ಲದೆ ಇನ್ನಿತರ 43 ಸಿಟಿ ತಾಣಗಳೊಂದಿಗೆ ಸಂಪರ್ಕ ಹೊಂದಿದೆ. ಹಲವಾರು ಕಿರು ತೊರೆಗಳೊಂದಿಗೆ ಪ್ರಮುಖವಾದ ಮಿಸಿಸಿಪಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಈ ನಗರ ಎಲ್ಲೆಲ್ಲೂ ಹಸಿರುಮಯ! ಇದು ನಡಿಗೆ ಪ್ರಿಯರಿಗೆ ನಿಜಕ್ಕೂ ವರದಾನವೇ ಸರಿ!

ಶಿಕಾಗೋ (ಇಲಿನಾಯ್ಸ್)

ಈ ನಗರವಂತೂ ಬಲು ಸುಲಭವಾಗಿ ನ್ಯಾವಿಗೇಟ್‌ ಮಾಡಬಹುದಾದ ಡೌನ್‌ಟೌನ್‌ ಗ್ರಿಡ್‌ ಜೊತೆ ನಡಿಗೆಯಲ್ಲೇ ಸುತ್ತಾಡಬಹುದಾದ ನಗರವಾಗಿದೆ. ಈ ನಗರವನ್ನು ಮ್ಯಾಡಿಸನ್‌ ಹೆದ್ದಾರಿಯು ಉತ್ತರದಕ್ಷಿಣ ಭಾಗವಾಗಿ ಬೇರ್ಪಡಿಸುತ್ತದೆ. ಅದೇ ರೀತಿ ಸ್ಟೇಟ್‌ ಹೆದ್ದಾರಿ ಇದನ್ನು ಪೂರ್ವಪಶ್ಚಿಮವಾಗಿ ಬೇರ್ಪಡಿಸಿದೆ. ಸ್ಟೇಟ್‌, ಮ್ಯಾಡಿಸನ್‌ ಇಂಟರ್‌ ಸೆಕ್ಷನ್‌ ಶಿಕಾಗೋದ ಅಡ್ರೆಸ್‌ ಗ್ರಿಡ್‌ ಸಿಸ್ಟಮ್ ನ ಉತ್ಪತ್ತಿಯ ಪ್ರತೀಕ. ಇಷ್ಟು ಮಾತ್ರವಲ್ಲ, ಈ ನಗರವನ್ನು ನ್ಯಾಶನಲ್ ಆರ್ಗನೈಝೇಶನ್‌ ಫಾರ್‌ ಡಿಸೆಬಿಲಿಟಿ ಮೂಲಕ  ವಿಕಲಚೇತನರಿಗೆ ಅನುಕೂಲ ಒದಗಿಸುವ ಅಮೆರಿಕಾದ ಅತ್ಯುತ್ತಮ ನಗರಗಳಲ್ಲಿ ಪ್ರಮುಖವೆನಿಸಿದೆ. ಅವರಿಗಾಗಿ ಹೆಚ್ಚಿನ ವಾಹನಗಳನ್ನು ಒದಗಿಸಿ, ಗಮ್ಯ ತಲುಪಿಸುತ್ತದೆ.

ಇಷ್ಟು ಮಾತ್ರವಲ್ಲದೆ, ಶಿಕಾಗೋ ನಗರವಿಡೀ ಬೈಕ್‌ ಶೇರಿಂಗ್‌ ವ್ಯವಸ್ಥೆಯ ಮೂಲಕ ಸ್ಥಳೀಯರು, ಪ್ರವಾಸಿಗರನ್ನು ಸುತ್ತಾಡಿಸಲು ಅದ್ಭುತ ಯೋಜನೆ ರೂಪಿಸಿದೆ. ಜೊತೆಗೆ ಅತ್ಯಧಿಕ ಬಾಡಿಗೆ ಸೈಕಲ್ ಸೇವೆ ಕೂಡ. ಒಂದು ಸುಂದರ ನಗರವನ್ನು ಕಾಪಾಡಿಕೊಳ್ಳಲು ಅದರ ಪರಿಸರ ಸಂರಕ್ಷಣೆ ಎಷ್ಟು ಮುಖ್ಯ ಎಂಬುದು ಇದರಿಂದ ತಿಳಿಯುತ್ತದೆ. ಜೊತೆಗೆ ನಾಗರಿಕರಿಗೆ ಕಡಿಮೆ ಖರ್ಚಿನಲ್ಲಿ ಕೆಲಸ ಆಗುತ್ತದೆ. ಇಲ್ಲಿ 225 ಮೈಲಿಗೂ ಹೆಚ್ಚಿನ ಉದ್ದನೇ ಬೈಕ್‌ ಮಾರ್ಗ, 13000ಕ್ಕೂ ಹೆಚ್ಚಿನ ಬೈಕ್‌ ಯಾರ್ಕ್ ಇವೆ. 28 ಬಗೆಯ ವೈಡ್ ಬಸ್‌ ಮಾರ್ಗ, 8 ರೈಲು ಮಾರ್ಗಗಳು ಶಿಕಾಗೋದ 146 ಸ್ಟೇಷನ್‌ಗಳಲ್ಲಿ ಸೇವೆ ನೀಡುತ್ತಿವೆ.

ಇದು 2 ಮಹಾನ್‌ ಏರ್‌ಪೋರ್ಟ್‌ಗಳನ್ನು ಹೊಂದಿದ್ದು, ಸಾವಿರಾರು ಫ್ಲೈಟ್‌ ಮಾರ್ಗವಿದ್ದು, 6 ಫಸ್ಟ್ ಗ್ರೇಡ್‌ ರೈಲ್ವೆ ಟ್ರಾಕ್‌ ಇದೆ. ಪ್ರಮುಖ ರಾಜಮಾರ್ಗಗಳ ಒಂದು ವಿಶಾಲ ತಂತ್ರಾಂಶದೊಂದಿಗೆ ವ್ಯಾಪಕ ಏರ್‌ಲೈನ್ಸ್ ಜೊತೆ ಲೋಕಲ್ ಇಂಟರ್‌ ನ್ಯಾಷನಲ್ ವಾಯುವಿಹಾರಕ್ಕೂ ಅತಿ ಹೆಚ್ಚಿನ ಅನುಕೂಲ ಒದಗಿಸುವ ನಗರ ಎನಿಸಿದೆ.

– ಸುಶೀಲಾ ಸುನೀಲ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ