ಬಡವರ ಪ್ರವೇಶಕ್ಕೆ ಅನುಮತಿ ಇಲ್ಲ

ಆಂಧ್ರಪ್ರದೇಶದ ಆಟೋಮೆಕ್ಯಾನಿಕಲ್‌ನ ಪುತ್ರಿ ಐಶ್ವರ್ಯಾ ರೆಡ್ಡಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಎರಡು ವರ್ಷಗಳ ಮುಂಚೆ ಮ್ಯಾಛ್ಸ್ ಆನರ್ಸ್‌ನಲ್ಲಿ ತನ್ನ ಅರ್ಹತೆಗೆ ಅನುಗುಣವಾಗಿ ಪ್ರವೇಶ ಪಡೆದಿದ್ದಳು.

ಆದರೆ ಹಾಸ್ಟೆಲ್‌‌ನಲ್ಲಿ ವಾಸಿಸುವುದು, ದೈನಂದಿನ ಖರ್ಚು ನಿಭಾಯಿಸುವುದು ಅವಳಿಗೆ ದುಬಾರಿಯಾಗಿ ಪರಿಣಮಿಸಿತು. ಅವಳು ಅದನ್ನು ಹೇಗ್ಹೇಗೊ ನಿಭಾಯಿಸಿದಳು. ಕಾಲೇಜು ಮಾತ್ರ ಅವಳಿಗೆ ಹಾಸ್ಟೆಲ್ ‌ಬಿಟ್ಟು ಬೇರೆ ಕಡೆ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿತು.

ಓದಿಗಾಗಿ ಲ್ಯಾಪ್‌ ಟಾಪ್‌ ವ್ಯವಸ್ಥೆ ಕೂಡ ಮಾಡಿಕೊಳ್ಳಬೇಕು ಎಂದು ಅವಳಿಗೆ ತಿಳಿಸಿತು. ಮನೆಯವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಅವಳು ಆತ್ಮಹತ್ಯೆ ಮಾಡಿಕೊಂಡಳು.

ದೇಶದಲ್ಲಿ ಬಡವರು, ಹಿಂದುಳಿದವರು, ದಲಿತರು ಕ್ರಮೇಣ ಮುಂದೆ ಬರುತ್ತಿದ್ದು, ಅವರನ್ನು ತಪ್ಪು ದಾರಿಗೆಳೆಯಲಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಇದು ಕಮ್ಯುನಿಸ್ಟ್ ರೀತಿಯ ಪ್ರಚಾರ. ದೇಶದಲ್ಲಿ ಈಗಲೂ ಬಡವ ಶ್ರೀಮಂತರ ಭೇದಭಾವ ಅಷ್ಟೇ ಅಲ್ಲ ಜಾತಿ, ಧರ್ಮ, ಕ್ಷೇತ್ರ, ಭಾಷೆಯ ಆಧಾರದಲ್ಲಿ ಇಬ್ಭಾಗ ಮಾಡಲಾಗುತ್ತಿದೆ. ಯಾರಾದರೂ ಈ ವ್ಯಾಪ್ತಿ ಉಲ್ಲಂಘಿಸಲು ಪ್ರಯತ್ನಿಸಿದರೆ ಕಂದಾಚಾರಗ್ರಸ್ತ ಸಮಾಜ ಅವರ ಮೇಲೆ ಮುಗಿಬೀಳುತ್ತದೆ.

ಆ ದಾಳಿ ಯಾವುದೇ ರೀತಿಯಲ್ಲಾಗಬಹುದು. ಕಮೆಂಟ್‌ ಮೂಲಕ ಆಗಿರಬಹುದು, ವೇಷಭೂಷಣದಲ್ಲಿ, ಆಹಾರದಲ್ಲಿ ಹೀಗೆ ಯಾವುದರ ಬಗೆಗಾದರೂ ಆಗಿರಬಹುದು. ಹಣದ ಕೊರತೆಯ ಮೂಲಕ ಗೇಲಿ ಮಾಡಲಾಗುತ್ತದೆ. ಶುಲ್ಕವನ್ನು ದಿಢೀರನೇ ಹೆಚ್ಚಿಸಬಹುದು. ಏಕೆಂದರೆ ಕಡಿಮೆ ಹಣವುಳ್ಳವರು ಅಲ್ಲಿ ಇಣುಕಿ ಕೂಡ ನೋಡಬಾರದು ಎನ್ನುವುದಾಗಿರುತ್ತದೆ.

ಐಶ್ವರ್ಯಾ ರೆಡ್ಡಿ ಕೇವಲ ಬಡತನದಿಂದಷ್ಟೇ ತೊಂದರೆಗೊಳಗಾಗಿದ್ದಳು ಎಂದೇನಲ್ಲ, ಆ ವರ್ಗ ಬಡತನದ ಬಗ್ಗೆ ಪರಿಪೂರ್ಣ ಜಾಗರೂಕತೆಯಿಂದಿರುತ್ತದೆ ಮತ್ತು ಕಡಿಮೆ ಖರ್ಚಿನಲ್ಲಿಯೇ ಎಲ್ಲವನ್ನು ನಿಭಾಯಿಸಲು ಕಲಿತುಕೊಳ್ಳುತ್ತದೆ.

ಇವರಿಗೆ ಏನೂ ಗೊತ್ತಿರದಿದ್ದರೆ ಇವರು ಹೇಗೆ ತಾನೇ ಶ್ರೀಮಂತರೊಂದಿಗೆ ಬೆರೆಯಲು ಸಾಧ್ಯ? ಉನ್ನತ ವರ್ಗದ ಮಹಿಳೆಯರು ಹಾಗೂ ಅವರ ಪುತ್ರಿಯರು ಯಾರ ಬಗೆಗಾದರೂ ಮೊದಲ ಭೇಟಿಯಲ್ಲೇ ಅವರ ಜಾತಕವನ್ನೇ ಅರಿತುಬಿಡುತ್ತಾರೆ. ಅವರು ತಮ್ಮಂತೆ ಇರದೇ ಇದ್ದರೆ ಅವರನ್ನು ಅತ್ಯಂತ ಕೀಳಾಗಿ ಕಾಣುತ್ತಾರೆ.

ದೇಶದ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಕಥನಗಳು ಕೂಡ ಪ್ರತಿದಿನದ ಭಾಷಣ, ಪ್ರವಚನದಲ್ಲಿ ಇವನ್ನೇ ಒತ್ತಿ ಒತ್ತಿ ಹೇಳುತ್ತಿವೆ. ಯಾರು ಕೆಳ ಮಟ್ಟದಲ್ಲಿದ್ದಾರೊ, ಅವರು ಅಲ್ಲಿಯೇ ಇರುವಂತೆ ಸರ್ಕಾರದಿಂದ ದಯೆಯ ಭಿಕ್ಷೆ ಬೇಡುವಂತೆ ಮಾಡಲಾಗುತ್ತಿದೆ.

ಆಧಾರ್‌, ಪ್ಯಾನ್‌ ಕಾರ್ಡ್‌ನಂತಹ ಪರಿಚಯ ಪತ್ರಗಳಲ್ಲಿ ಯಾರು, ಎಲ್ಲಿಯವರು ಎನ್ನುವುದು ವಿಳಾಸದಿಂದ, ಮುಖದಿಂದ ಗೊತ್ತಾಗುತ್ತದೆ.

ಲೇಡಿ ಶ್ರೀರಾಮ್ ಕಾಲೇಜು ಮೊದಲಿನಿಂದಲೇ ಆಗರ್ಭ ಶ್ರೀಮಂತರ ಪುತ್ರಿಯರ ಕಾಲೇಜಾಗಿ ಉಳಿದಿದೆ. ದೆಹಲಿಯ ಹೆಸರಾಂತ ಉದ್ಯಮಿ, ಬಟ್ಟೆ ಮಿಲ್‌‌ಗಳ ಮಾಲೀಕ ಶ್ರೀರಾಮ್ ಸ್ಥಾಪಿಸಿದ ಕಾಲೇಜಿಗೆ ಜಾಗ ದೊರೆತದ್ದು ಲಜಪತ್‌ ನಗರದಲ್ಲಿ. ದಕ್ಷಿಣ ದೆಹಲಿಯಲ್ಲಿರುವ ಇಲ್ಲಿ ದೇಶದ ಚುಕ್ಕಾಣಿ ಹಿಡಿದವರ ವರ್ಗವೇ ಇದೆ. ಇವರಿಗೆ ಕೆಳವರ್ಗದವರ, ಬಡವರ ಹಸ್ತಕ್ಷೇಪ ಖಂಡಿತ ಇಷ್ಟವಾಗುವುದಿಲ್ಲ.

ಒಂದು ವೇಳೆ ಆಂಗ್ಲ ಮಾಧ್ಯಮವೆಂಬ ಚೀನಾ ಗೋಡೆಯನ್ನು ಯಾರಾದರೂ ದಾಟಿ ಬಂದರೆ, ಅವರನ್ನು ಪರಕೀಯರು ಎಂದು ತಿಳಿಯಲಾಗುತ್ತದೆ. ಅವರನ್ನು ತಿರಸ್ಕರಿಸಲಾಗುತ್ತದೆ. ಅಂತಹ ಹುಡುಗಿಯರು ಯಾವಾಗಲೂ ಹೆದರಿಕೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಆರ್ಥಿಕ ಹೊಡೆತ ಸಹಿಸದೆ ಮನೆಗೆ ಮರಳಿದ ಆಂಧ್ರದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ತಾಯಿ ತಂದೆ ಪ್ರತಿನಿತ್ಯ ತನ್ನ ಇಳಿಬಿದ್ದ ಮುಖ ನೋಡದಿರಲಿ, ಹತಾಶೆ ಗಮನಿಸದಿರಲಿ ಎನ್ನುವುದೇ ಅವಳ ಇಚ್ಛೆಯಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ