ಆಧುನಿಕ ಡಿಸೈನರ್‌ಗಳ ಪಂಕ್ತಿಯಲ್ಲಿ ರಿಧಿ ಅಗ್ರಗಣ್ಯರೆನಿಸುತ್ತಾರೆ. ಬಾಲ್ಯದಿಂದಲೇ ಅಪರೂಪದ ಹಾಗೂ ದುಬಾರಿ ಸ್ಟೋನ್ಸ್ ಕಡೆ ಒಲವು ಬೆಳೆಸಿಕೊಂಡು, ಅದನ್ನೇ ಪ್ಯಾಶನ್‌ಆಗಿಸಿಕೊಂಡು ಈ ಕ್ಷೇತ್ರದಲ್ಲಿ ಯಶಸ್ವಿ ಎನಿಸಿದ್ದಾರೆ.

ರಿಧಿಗೆ ತನ್ನ ತಾಯಿ ಶೈಲಾ ಕಪೂರ್‌ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಆಗಿದ್ದಾರೆ. ಆಕೆ ಇವರ ಕೌಟುಂಬಿಕ ಕಂಪನಿ ಕಾಶಿ ಜ್ಯೂವೆಲರ್ಸ್‌ನ ವೈಸ್‌ ಪ್ರೆಸಿಡೆಂಟ್‌. ರಾಷ್ಟ್ರೀಯ ಮಟ್ಟದಲ್ಲಿ ಇದು ಅನೇಕ ಪ್ರಶಸ್ತಿಗಳನ್ನು ಪಡೆದಿದೆ.

ಅಮೆರಿಕಾದಲ್ಲಿ ಮಾಸ್ಟರ್‌ ಆಫ್‌ ಅಕೌಂಟಿಂಗ್‌ ಸೈನ್ಸ್, ಲಂಡನ್‌ನಲ್ಲಿ ಎಂಟರ್‌ ಪ್ರಿನೆರ್‌ ಶಿಪ್‌ ಪ್ರೋಗ್ರಾಂನಲ್ಲಿ ಪದವಿ ಗಳಿಸಿದ ಈಕೆ, ಸುಪ್ರಸಿದ್ಧ ಜೆಮಾಲಾಜಿಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಮೆರಿಕಾದಲ್ಲಿ ಪ್ರವೇಶ ಪಡೆದು ಡೈಮಂಡ್‌ ಗ್ರೇಡಿಂಗ್‌, ಕಲರ್‌ ಸ್ಟೋನ್ ಗ್ರೇಡಿಂಗ್‌ ಮತ್ತು ಜ್ಯೂವೆಲರಿ ಡಿಸೈನಿಂಗ್‌ ಕೋರ್ಸ್‌ಗಳನ್ನು ಮುಗಿಸಿಕೊಂಡರು. ಇಲ್ಲಿ ಬೆಸ್ಟ್ ಡಿಸೈನಿಂಗ್‌ ಅವಾರ್ಡ್‌ ಸಹ ಸಿಕ್ಕಿತು.

ಪ್ರಶಸ್ತಿ ಪುರಸ್ಕಾರಗಳು

ನ್ಯಾಷನಲ್ ಜ್ಯೂವೆಲರಿ ಅವಾರ್ಡ್‌ 2012 ಟ್ರೆಡಿಷನಲ್ ಜ್ಯೂವೆಲರಿ ಆಫ್‌ ದಿ ಇಯರ್‌, ಇಂಡಿಯನ್‌ ಜ್ಯೂವೆಲರ್ಸ್‌ ಚಾಯ್ಸ್ ಡಿಸೈನ್‌ ಅವಾರ್ಡ್‌ 2012 ಬೆಸ್ಟ್ ಕಲರ್‌ ಸ್ಟೋನ್‌ ಜ್ಯೂವೆಲರಿ, ಜೆಮಾಲಾಜಿಕ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಅಮೆರಿಕಾ 2009 ಬೆಸ್ಟ್ ರಿಂಗ್‌ ಡಿಸೈನ್‌, ಸತತ 4 ವರ್ಷ ಆಕೆ ಕಾಶಿ ಜ್ಯೂವೆಲರ್ಸ್‌ ಡಿಸೈನ್‌ನ್ನು ಇಂಡಿಯನ್‌ ಇಂಟರ್‌ ನ್ಯಾಷನಲ್ ಜ್ಯೂವೆಲರಿ, ಮುಂಬೈನಲ್ಲಿ ಪ್ರದರ್ಶಿಸಿ, ಬಾಲಿವುಡ್‌ ನಟಿಯರು ಸೂಪರ್‌ ಮಾಡೆಲ್‌ ಧರಿಸಿ ಪ್ರದರ್ಶಿಸುವಂತೆ ಮಾಡಿದರು.

ಜ್ಯೂವೆಲರಿಯ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದಿಷ್ಟು ಟಿಪ್ಸ್ ಕೊಡ್ತೀರಾ?

ಡೈಮಂಡ್‌ ಜ್ಯೂವೆಲರಿಯನ್ನು ಎಂದೂ ಬ್ಲೀಚ್‌ ಗೊಳಿಸಬೇಡಿ. ಅದರಲ್ಲಿ ಮೌಂಟಿಂಗ್ಸ್ ಇದ್ದರೆ, ಅದರ ಮೇಲೆ ಕಲೆಗಳಾಗಬಹುದು.

ಮುತ್ತಿನ ಆಭರಣಗಳನ್ನು ಪರ್ಫ್ಯೂಮ್ ನಿಂದ ದೂರವಿರಿಸಿ.

ನಿಮ್ಮ ಒಡವೆಗಳ ಬಾಕ್ಸ್ ನಲ್ಲಿ ಸದಾ 2 ತುಂಡು ಚಾಕ್‌ ಪೀಸ್‌ ಇರಲಿ, ಆಗ ಅದು ತೇವಾಂಶ ಹೀರಿಕೊಳ್ಳುತ್ತದೆ.

ನಿಮ್ಮ ಸ್ವರ್ಣಾಭರಣ, ರತ್ನಾಭರಣಗಳನ್ನು ನೇಲ್ ‌ಪಾಲಿಶ್‌ ರಿಮೂವರ್‌, ಪರ್ಫ್ಯೂಮ್ ಸಂಪರ್ಕದಿಂದ ದೂರವಿಡಿ.

6 ತಿಂಗಳಿಗೊಮ್ಮೆ ಇದನ್ನು ಜ್ಯೂವೆಲರ್‌ ಬಳಿ ಶುಚಿಗೊಳಿಸುವಿಕೆಗಾಗಿ ಕೊಂಡೊಯ್ಯಿರಿ.

ಪೋಲ್ಕಿ, ಕುಂದಣದ ಆಭರಣಗಳನ್ನು ತೇವಾಂಶದಿಂದ ದೂರವಿರಿಸಲು, ಹತ್ತಿ ಬಟ್ಟೆಯಲ್ಲಿ ಸುತ್ತಿ, ಪ್ಲಾಸ್ಟಿಕ್‌ ಬಾಕ್ಸ್ ನಲ್ಲಿ ಜೋಪಾನವಾಗಿಡಿ.

ಸ್ಟೇಟ್‌ ಮೆಂಟ್‌ ಜ್ಯೂವೆಲರಿ ಇಂದಿನ ಫ್ಯಾಷನ್‌. ಈ ನಿಟ್ಟಿನಲ್ಲಿ ಕುತ್ತಿಗೆಯ ಆಭರಣಗಳನ್ನು ಆದಷ್ಟೂ ಕಡಿಮೆ ಮಾಡಿ, ಕಿವಿಯೋಲೆ ಉಂಗುರಗಳನ್ನು ಹೆಚ್ಚು ಧರಿಸಿ.

ವಿವಾಹದ ಆಭರಣಗಳಲ್ಲಿ ಹೆಚ್ಚಾಗಿ ಕುಂದಣ, ಪೋಲ್ಕಿ ಒಡವೆಗಳನ್ನೇ ಇಷ್ಟಪಡುತ್ತಾರೆ. ಇದರಿಂದ ಧರಿಸುವವರ ಆಕರ್ಷಣೆ ಹೆಚ್ಚುತ್ತದೆ.

ಕೆಂಪು, ನೀಲಿ, ಪಚ್ಚೆಯ ರತ್ನಾಭರಣಗಳು ಇತ್ತೀಚೆಗೆ ಹೆಚ್ಚು ಟ್ರೆಂಡಿ ಎನಿಸಿವೆ.

ಈಗೀಗ ಪೀಕಾಕ್‌ ಪ್ಯಾಟರ್ನ್‌ ಮತ್ತೆ ಮಾರುಕಟ್ಟೆಗೆ ಮರಳಿದೆ.

ಚೇನ್‌ ವಿತ್‌ ಲಾಕೆಟ್‌ ಈಗೀಗ ಕಾಲೇಜು ಹುಡುಗಿಯರಿಗೆ ಹೆಚ್ಚು ಶೋಭೆ ನೀಡುತ್ತಿದೆ.

ಜ್ಯೂವೆಲರ್ಸ್ಡಿಸೈನರ್ಗಳ ಪ್ಲಸ್ಪಾಯಿಂಟ್ಸ್

ಇತ್ತೀಚೆಗೆ ಹೆಚ್ಚು ಹೆಚ್ಚು ಡಿಸೈನರ್‌ಗಳು ಜ್ಯೂವೆಲರಿ ಡಿಸೈನ್‌ ಮಾಡುವಾಗ ವಿಭಿನ್ನ ಬಗೆಯ ಕಲರ್‌ ಸ್ಟೋನ್ಸ್ ನ್ನು ಹೇಗೆ ಬೆರೆಸುತ್ತಾರೆಂದರೆ, ಅಂಥ ಒಡವೆಗಳು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತವೆ. ಇದರ ಡಿಸೈನ್‌ ಮತ್ತು ಸ್ಟೋನ್‌ ಮಿಶ್ರಣ, ಗ್ರಾಹಕರು ಒಡವೆಗಳ ಮಧ್ಯೆ ಒಂದು ಭಾವನಾತ್ಮಕ ಸಂಬಂಧ ಉಂಟುಮಾಡುತ್ತದೆ. ಗ್ರಾಹಕರ ಮನೋಭಾವಕ್ಕೆ ತಕ್ಕಂತೆ ವಿನ್ಯಾಸ ರೂಪಿಸುವುದು ಅವರ ಗುರಿಯಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ