``ನೋಡು ನೋಡು..... ಸಾರ್‌ ಬೆಲ್ ‌ಮಾಡ್ತಿದ್ದಾರೆ. ಈಗ ಡೀಪ್‌ ನೆಕ್‌ ಟಾಪ್‌ ಮಿನಿ ಸ್ಕರ್ಟ್‌ ಧರಿಸಿರುವ ಟೀನಾ ಅವರ ಕ್ಯಾಬಿನ್‌ಗೆ ಹೋಗಿಬಿಡುತ್ತಾಳೆ. ಅವಳು ತನ್ನ ಕಣ್ಣು, ಕೈ ತಿರುಗಿಸುತ್ತಾ ತೋರುವ ಹಾವಭಾವಗಳಿಂದ ಅವರು ಅವಳನ್ನೇ ಎವೆಯಿಕ್ಕದೆ ನೋಡುತ್ತಾ ಕೂತುಬಿಡುತ್ತಾರೆ. ರೀ ಸಾರ್‌..... ನಮ್ಮನ್ನು ಯಾವಾಗಲಾದರೂ ಕ್ಯಾಬಿನ್‌ಗೆ ಹೀಗೆ ಕರೆಸಿಕೊಳ್ಳಬಾರದೇ? ನಾವೇನು ಅಂದವಾಗಿ ಇಲ್ಲವೇ? ಗೂಬೆಗಳ ತರಹ ಕಾಣ್ತೀವಾ? ನೀವು ಹ್ಞೂಂ ಅಂದ್ರೆ ನಾಳೆಯಿಂದಾನೇ ನಾವು ಶಾರ್ಟ್ಸ್ ಧರಿಸಿ ಬರುತ್ತೇವೆ.....''

``ಏ ಸಾಕು ಸುಮ್ನಿರೇ..... ಕೇಳಿಸಿಕೊಂಡವರು ಏನೆಂದುಕೊಂಡಾರು? ನಾವೆಂದಾದರೂ ಅಂಥ ಕಿರು ಸೈಝಿನ ಬಿಗಿ ಡ್ರೆಸ್‌ ಧರಿಸಿ ಬರುತ್ತೇವೆಯೇ? ಹಾಗೆಂದು ಇವರೇನಾದರೂ ರೂಲ್ಸ್ ‌ಮಾಡಲಿ, ಈಗಲೇ ಕೆಲಸಕ್ಕೆ ರಿಸೈನ್‌ ಮಾಡಿ ಹೋಗಿಬಿಡೋಣ.''

``ಹೋಗೆ ಸಾಕು..... ನಿನ್ನ ಗೊಡ್ಡು ಪುರಾಣ! ಸದಾ ಗಂಗಮ್ಮ ಗೌರಮ್ಮರ ಹಾಗೆ ನಾವಿದ್ದು ಸಾಧಿಸಿರುವುದೇನು? ಇಂಥ ಟೀನಾ ರೀನಾರನ್ನು ಕಂಡು ಹೊಟ್ಟೆ ಉರಿದುಕೊಳ್ಳೋದೇ ಬಂತು. ಅದೇ ನಮ್ಮ ಟೀನಾ ನೋಡು, ತನ್ನ ಹಾವಭಾವಗಳಿಂದ ಹೇಗೆ ನಮ್ಮ ಬಾಸ್‌ರನ್ನು ತನ್ನ ಬೆರಳ ತುದಿಯಲ್ಲೇ ಕುಣಿಸುತ್ತಾಳೆ.... ನಾನು ನೀನು ಇದ್ದೀವಿ.... ದಂಡಕ್ಕೆ!''

ಆಫೀಸ್‌ನಲ್ಲಿ ನಡೆಯುತ್ತಿದ್ದ ಉಮಾ ಸುಮಾರ ಈ ಮಾತುಗಳನ್ನು ಇತರ ಸಿಬ್ಬಂದಿ ಕೇಳಿ ಮುಸಿ ಮುಸಿ ನಗುತ್ತಿದ್ದರು. ಆದರೆ ಟೀನಾ ಕ್ಯಾಬಿನ್‌ನಿಂದ ಹೊರಬಂದಿದ್ದೇ ಎಲ್ಲರ ಬಾಯಿಗೂ ಬೀಗ ಬಿತ್ತು. ಟೀನಾ ಎಲ್ಲರನ್ನೂ ಕಡೆಗಣ್ಣಿನಲ್ಲೇ ಒಮ್ಮೆ ಗಮನಿಸಿಕೊಂಡು, `ಅಂತಿಂಥ ಹೆಣ್ಣು ನಾನಲ್ಲ.... ನನ್ನಂಥ ಹೆಣ್ಣು ಯಾರೂ ಇಲ್ಲ....' ಎಂದು ಮನದಲ್ಲೇ ಗುನುಗುತ್ತಿದ್ದರೆ, `ಮುಂದಿದೆ ನಿಂಗೆ ಮಾರಿಹಬ್ಬ!' ಎಂದು ಸಿಬ್ಬಂದಿ ಮನದಲ್ಲೇ ಶಾಪ ಹಾಕಿಕೊಂಡಂತಿತ್ತು.

ಖಾಸಗಿ ಆಫೀಸುಗಳ ಹಣೆಬರಹ

ಈ ಪರಿಸ್ಥಿತಿ ಕೇವಲ ಉಮಾ ಸುಮಾರ ಖಾಸಗಿ ಕಂಪನಿ ಒಂದರದೇ ಅಲ್ಲ, ಬದಲಿಗೆ ಎಷ್ಟೋ ಆಫೀಸುಗಳಲ್ಲಿ ನಡೆಯುವುದೇ ಹೀಗೇ. ಸೆಕ್ಷುಯಲಿ ಆ್ಯಕ್ಟಿವ್ ಆಗಿರುವಂಥ ಇಂಥ ಯುವತಿಯರು ಎಲ್ಲಿಯವರೆಗೆ ತಮ್ಮ ಬಾಸ್‌ಗಳನ್ನು ಕಿರುಬೆರಳಿನಲ್ಲಿ ಆಡಿಸುತ್ತಾ ದರ್ಬಾರು ನಡೆಸುತ್ತಾರೋ, ಅಲ್ಲಿಯವರೆಗೂ ಆ ಆಫೀಸ್‌ನ ಇತರ ತರುಣಿಯರು ಶಿಕ್ಷೆ ಅನುಭವಿಸುವುದು ತಪ್ಪಲ್ಲ. ಈ ತರಹದ ಬೋಲ್ಡ್ ಯುವತಿಯರ ಕಾರಣದಿಂದ ಸಾಧಾರಣ ತರುಣಿಯರು ಯಾವ ತರಹದ ಮೆಂಟಲ್, ಫೈನಾನ್ಶಿಯಲ್ ಹರಾಸ್ಮೆಂಟ್‌ಎದುರಿಸಬೇಕಾಗುತ್ತದೆ ಎಂಬುದನ್ನು ಗಮನಿಸೋಣವೇ?

ನಮಗೆ ಬೈಗುಳ ತಪ್ಪಿದ್ದಲ್ಲ!

ಈ ಬೋಲ್ಡ್ ಹುಡುಗಿಯರು ಎಂಥದೇ ತಪ್ಪು ಮಾಡಿರಲಿ, ಬಾಸ್‌ ಅವರನ್ನು ಬೇಗ ಬೈಯಲು ಹೋಗುವುದಿಲ್ಲ. ಬದಲಿಗೆ ಯಾರ ತಪ್ಪು ಇಲ್ಲವೋ ಅಂಥ ತರುಣಿಯರನ್ನು ಬೈದು ತಮ್ಮ ಕೋಪ ತಣಿಸಿಕೊಳ್ಳುತ್ತಾರೆ. ಒಂದು ಆ್ಯಡ್‌ ಏಜೆನ್ಸಿಯಲ್ಲಿ ಕೆಲಸ ಮಾಡುವ ಶಶಿಕಲಾ ಕುಲಕರ್ಣಿ ಹೇಳುತ್ತಾರೆ, ``ನನ್ನ ಜೊತೆ ಇಂಥ ಹಲವಾರು ಹಿಂಸಕ ಪ್ರಸಂಗಗಳು ನಡೆದಿವೆ. ನನ್ನ ಹಾಟ್‌ ಕಲೀಗ್ ಒಬ್ಬಳು ಮಾಡುವ ತಪ್ಪುಗಳನ್ನು ನಿರ್ಲಕ್ಷಿಸಿ, ನಾನು ಎದುರಿಗೆ ಕಂಡ ತಕ್ಷಣ ಚೇಂಬರ್‌ಗೆ ಕರೆಸಿ, ಬಾಸ್‌ ನನ್ನನ್ನು ಬೇಕಾದಷ್ಟು ಬೈದಿದ್ದಾರೆ.

``ಆರಂಭದಲ್ಲಿ ನಾನು ಏನೂ ಹೇಳುತ್ತಿರಲಿಲ್ಲ. ಆದರೆ ನಂತರ ನನಗೇ ಅನ್ನಿಸಿತು, ಅವಳು ತಪ್ಪು ಮಾಡಿದ್ದರೆ ಆ ಕೋಪವನ್ನು  ಇವರು ನನ್ನ ಮೇಲೇಕೆ ಕಾರಬೇಕು? ಅದಾದ ಮೇಲೆ ನಾನು ಬಾಸ್‌ ಬಳಿ ಹೋಗಬೇಕಾಗಿ ಬಂದಾಗ, ನಾನು ನಿರಪರಾಧಿ ಎನ್ನುವ ಸಾಕ್ಷಿ ಪುರಾವೆ ತೆಗೆದುಕೊಂಡೇ ಹೋಗುತ್ತಿದ್ದೆ. ಆಗ ಅವರಿಗೆ ಅದರಿಂದ ನೇರವಾಗಿ ಅಪರಾಧಿ ಯಾರು ಎಂದು ಗೊತ್ತಾಗುತ್ತಿತ್ತು. ``ಒಮ್ಮೊಮ್ಮೆ ಬಾಸ್‌ ಅವಳನ್ನು ನನ್ನ ಮುಂದೆಯೇ ಕರೆಸಿ ಬೈದದ್ದಿದೆ. ಇದು ನಾಟಕೀಯ ಎನಿಸಿದರೂ, ಅದರಿಂದ ನನ್ನ ಮನಸ್ಸಿಗೆ ತುಸು ಸಮಾಧಾನ ಸಿಗುತ್ತಿದ್ದುದಂತೂ ಸುಳ್ಳಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ