ಅಸ್ಸಾಂನ ನಾಯಗಾಂವ್‌ನಲ್ಲಿ ಜನಿಸಿದ ಸಂಯುಕ್ತಾ ದತ್ತ ಅದೇ ರಾಜ್ಯದ ಮೂಗಾಂ ಸಿಲ್ಕ್ ಹಾಗೂ ಮಲ್ಬರಿ ಸಿಲ್ಕ್ ಗೆ ಇಡೀ ವಿಶ್ವದಲ್ಲಿ ಹೇಗೆ ಜನಪ್ರಿಯತೆ ತಂದುಕೊಟ್ಟರೆಂದರೆ, ಇಂದು ಎಲ್ಲೆಡೆ ಅವುಗಳಿಗೆ ಬೇಡಿಕೆ ಬರುತ್ತಿದೆ. ಈ ಕೆಲಸಕ್ಕೆ ಅವರಿಗೆ ಪ್ರೇರಣೆ ದೊರೆತದ್ದು ಕುಶಲಕರ್ಮಿಗಳ ದಯನೀಯ ಸ್ಥಿತಿ. ಆರ್ಥಿಕ ದುಸ್ಥಿತಿಯಿಂದ ಆ ಕುಶಲಕರ್ಮಿಗಳು ಹಳ್ಳಿ ತೊರೆದು ನಗರಕ್ಕೆ ಹೋಗುವುದು ಅನಿವಾರ್ಯ ಎಂಬಂತಾಗಿತ್ತು. ಇಂತಹ ಕಷ್ಟದ ಕಾಲದಲ್ಲಿ ಸಂಯುಕ್ತಾ ಅವರಿಗೆ ಸಾಥ್‌ ಕೊಟ್ಟರು. ಅಷ್ಟೇ ಅಲ್ಲ, ಅವರ ಕಲೆಗೆ ಉದ್ಯಮದ ಸ್ವರೂಪ ನೀಡಲು ನೆರವಾದರು.

ಹ್ಯಾಂಡ್‌ಲೂಮ್ ನಲ್ಲಿನ ಅವರ ಈ ಕಾರ್ಯ ಪರಿಗಣಿಸಿ, 2017ರಲ್ಲಿ `ಗ್ಲೋಬ್‌ ಇಂಡಿಯಾ ಐಕಾನ್‌ ಅವಾರ್ಡ್‌' ದೊರೆಯಿತು. ಅಷ್ಟೇ ಅಲ್ಲ, ಈ ವರ್ಷ `ಕಾನ್‌ ಸಿನಿಮಾ ಉತ್ಸವ'ದಲ್ಲಿ ಕೆಲವು ನಟಿಯರಿಗೆ ಡ್ರೆಸ್‌ ಡಿಸೈನ್‌ ಮಾಡುವ ಅವಕಾಶ ದೊರಕಿತು.

ಕುಶಲಕರ್ಮಿಗಳೇ ಪ್ರೇರಣೆ

ಸಂಯುಕ್ತಾ ಹೇಳುತ್ತಾರೆ, ``ನಾನು ಸಿವಿಲ್ ‌ಎಂಜಿನಿಯರ್‌. ಅಸ್ಸಾಂನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದೆ. ಕೆಲಸದ ನಿಮಿತ್ತ ನಾನು ಆಗಾಗ ಹಳ್ಳಿಗಳಿಗೆ ಹೋಗಬೇಕಿತ್ತು. ಆಗ ಇಂತಹ ಕುಶಲಕರ್ಮಿಗಳನ್ನು ಭೇಟಿಯಾಗುವ ಅವಕಾಶ ದೊರೆಯುತ್ತಿತ್ತು. ಬಡವರಾದ ಅವರ ಕಲೆ ಉತ್ಕೃಷ್ಟವಾಗಿದ್ದರೂ, ಮಾರ್ಕೆಟಿಂಗ್‌ ಮಾಡಲು ಆಗುತ್ತಿರಲಿಲ್ಲ. ಅವರ ಕಷ್ಟ ನೋಡಿ ಉದ್ಯೋಗ ತೊರೆದು ಈ ಕ್ಷೇತ್ರಕ್ಕೆ ಬರಲು ನಿರ್ಧರಿಸಿದೆ. ಕುಟುಂಬದವರು ಉದ್ಯೋಗ ಬಿಡುವುದನ್ನು ವಿರೋಧಿಸಿದರು. ಆದರೂ ನಾನು ಮುಂದೆ ಇಟ್ಟ ಹೆಜ್ಜೆ ಹಿಂತೆಗೆದುಕೊಳ್ಳಲಿಲ್ಲ. ಬಳಿಕ ಪತಿ ಹಾಗೂ ಮನೆಯವರು ನನಗೆ ಬೆಂಬಲ ನೀಡಿದರು.

ಹೊಸ ಯೋಚನೆ

``ಅಂದಹಾಗೆ ಅಸ್ಸಾಂ ಸಿಲ್ಕ್ಸ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಇಲ್ಲಿನ ಕುಶಲಕರ್ಮಿಗಳ ಡಿಸೈನ್ಸ್ ಮತ್ತು ಮೋಟಿಫ್ಸ್ ಬಹಳ ಹಳೆಯ ಸ್ಟೈಲಗಳು. ಹೀಗಾಗಿ ಜನರು ಇವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ. ಅದಕ್ಕೆ ನಾನು ಹೊಸ ರೂಪ ಕೊಟ್ಟೆ. ಗೌಹಾತಿಯಲ್ಲಿ ಒಂದು ಎಕ್ಸಿಬಿಷನ್‌ ಮಾಡಿದೆ. ಅಲ್ಲಿ ಜನ ಮುಗಿಬಿದ್ದು ಕೊಂಡುಕೊಂಡರು. ಅದರಿಂದಾಗಿ ನನಗೆ ಹಾಗೂ ಕುಶಲಕರ್ಮಿಗಳಿಗೆ ಬಲ ಬಂತು.''

ಅಸ್ಸಾಂನ `ಮೇಖಲಾ ಚಾದೋರ್‌' ಡಿಸೈನ್‌ ಬಗ್ಗೆ ಸಂಯುಕ್ತಾ ಬಹಳ ಪ್ರಭಾವಿತರಾಗಿದ್ದಾರೆ. ಅದು ಸೀರೆಯ ಪ್ರತಿರೂಪವೇ ಹೌದು. ಅದರಲ್ಲಿ ಕಸೂತಿ ಮತ್ತು ಡಿಸೈನ್‌ ಜನರಿಗೆ ಬಹಳ ಇಷ್ಟವಾಯಿತು. ಈ ಕ್ಷೇತ್ರದಲ್ಲಿನ ಸವಾಲುಗಳ ಬಗ್ಗೆ ಕೇಳಿದ ಪ್ರಶ್ನೆಗೆ, ``ಮೊದಲು ಈ ಕ್ಷೇತ್ರಕ್ಕೆ ಕುಶಲಕರ್ಮಿಗಳನ್ನು ಆಕರ್ಷಿಸುವುದು ಕಷ್ಟದ ಕೆಲಸವಾಗಿತ್ತು. ಏಕೆಂದರೆ ಈ ಕೆಲಸದಲ್ಲಿ ಹೆಚ್ಚು ಗಳಿಕೆಯಿಲ್ಲ ಎಂಬ ಭಾವನೆ ಅವರದ್ದಾಗಿತ್ತು. ಅವರಿಗೆ ಸೂಕ್ತ ಸಂಬಳ ನಿಯಮಿತವಾಗಿ ದೊರೆಯುತ್ತಿದ್ದಂತೆ ಅವರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಬರತೊಡಗಿದರು. ಕುಶಲಕರ್ಮಿಗಳಿಗೆ ಆಹಾರ, ವೈದ್ಯಕೀಯ ವ್ಯವಸ್ಥೆ ಕೂಡ ಕಲ್ಪಿಸಿದ್ದೇನೆ. ಮೊದಲು 10 ಜನರಿದ್ದರು. ಈಗ 200 ಕುಶಲಕರ್ಮಿಗಳು ಮತ್ತು 130 ಲೂಮ್ಸ್ ನನ್ನ ಜೊತೆಗಿದೆ!''

ಅವರು ಡಿಸೈನ್‌ ಮಾಡಿದ ಪೋಷಾಕುಗಳು ಭಾರತದಲ್ಲಷ್ಟೇ ಅಲ್ಲ ಅಮೆರಿಕ, ಆಸ್ಟ್ರೇಲಿಯಾ, ಅಬುದಾಭಿ, ದುಬೈ, ಯೂರೋಪ್‌, ಸಿಂಗಾಪೂರ್‌ ಮುಂತಾದ ಕಡೆ ಕೂಡ ಹೋಗುತ್ತಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ