ಏಕಮುಖ ತೀರ್ಪಿನಿಂದ ಕಾನೂನು ಕೂಡ ಕಟಕಟೆಗೆ

ಸುಪ್ರೀಂ ಕೋರ್ಟ್‌ ಬಾಲ್ಯ ವಿವಾಹದ ಒಂದು ಪ್ರಕರಣದಲ್ಲಿ ಹೀಗೆ ಹೇಳಿತು, `ಬಾಲ್ಯ ವಿವಾಹ ಮಾನವ ಹಕ್ಕುಗಳಿಗೆ ವಿರುದ್ಧವಾಗಿರಬಹುದು. ಅದು ಎಷ್ಟೇ ತುಚ್ಛವಾಗಿರಬಹುದು, ಯಾವ ಪ್ರಮಾಣದಲ್ಲಿ ಅವುಗಳ ಹೆಚ್ಚಳವಾಗುತ್ತಿದೆಯೋ ಅದನ್ನು ಅಪರಾಧೀಕರಣವಾಗಿಸಬಾರದು. ದೇಶದಲ್ಲಿ ಈಗ ಪ್ರತಿಯೊಂದು ಕೆಲಸವನ್ನು ಅಪರಾಧ ಎಂದು ಘೋಷಿಸುವ ಪರಂಪರೆ ಶುರುವಾಗಿಬಿಟ್ಟಿದೆ.

ಮೊದಲು ಜೀವಿಸುವ ಹಾಗೂ ಜೀವಿಸಲು ಕೊಡು ಎಂಬ ಸಿದ್ಧಾಂತವನ್ನು ಕಾನೂನು ರೂಪಿಸುವವರು ಗಮನದಲ್ಲಿ ಇಟ್ಟುಕೊಳ್ಳುತ್ತಿದ್ದರು. ಈಗ ಅವರು ಧರ್ಮದ ಅನುಯಾಯಿಗಳೇ ಆಗಿಬಿಟ್ಟಿದ್ದಾರೆ. ನೀವು ಏನೇ ತಪ್ಪು ಮಾಡಿದರೂ ಪ್ರಾಯಶ್ಚಿತ್ತ ಮಾಡಿಕೊಳ್ಳಲೇ ಬೇಕಾಗುತ್ತದೆ.

ಸುಪ್ರಿಂಕೋರ್ಟ್‌ ಸಮಕ್ಷಮ ಒಂದು ಪ್ರಕರಣ ಬಂದಿತ್ತು. ಅದೇನೆಂದರೆ, 15 ಹಾಗೂ 17 ವಯಸ್ಸಿನ ಹುಡುಗಿ ಹುಡುಗ ಒಪ್ಪಿಗೆಯ ಮೇರೆಗೆ ಲೈಂಗಿಕ ಸಂಬಂಧ ಹೊಂದಬಹುದೇ? ಎಂಬುದೇ ಆ ಪ್ರಕರಣವಾಗಿತ್ತು. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೀಗೆ ಹೇಳಿತು, `18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಜೊತೆ ಆಕೆ ವಿವಾಹಿತೆ ಆಗಿರಬಹುದು ಅಥವಾ ಅವಿವಾಹಿತೆಯಾಗಿರಬಹುದು. ಒಪ್ಪಿಗೆ ಇರಬಹುದು ಅಥವಾ ಇಲ್ಲದೆ ಇರಬಹುದು, ಅದನ್ನು ಅಪರಾಧ ಎಂದು ಘೋಷಿಸಿದೆ. 15-18 ವರ್ಷದ ವಿವಾಹಿತ ಹುಡುಗಿಯ ಜೊತೆ ಗಂಡನ ಲೈಂಗಿಕ ಸಂಬಂಧ ಈವರೆಗೆ ಅಪರಾಧ ಆಗಿರಲಿಲ್ಲ.

ವಾಸ್ತವ ಸಂಗತಿಯೆಂದರೆ, ಹುಡುಗಿಯರ ಲೈಂಗಿಕ ಸಂಬಂಧ 13-14ನೇ ವಯಸ್ಸಿನಲ್ಲಿ ಒಪ್ಪಿಗೆಯ ಮೇರೆಗೆ ಆರಂಭವಾಗುತ್ತದೆ. ಅದು ಯಾವ ಮಟ್ಟಿಗೆ ಇರುತ್ತದೆ ಎಂದರೆ, ಅದನ್ನು ಕಾನೂನು ವ್ಯಾಪ್ತಿಗೆ ತಂದರೆ ನೂರಾರು ಸಾವಿರಾರು ಹುಡುಗರು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಸಂಖ್ಯೆಯ ಹುಡುಗಿಯರು ಸಂತ್ರಸ್ತೆಯರಾಗಿ ಸಾಕ್ಷಿ ಹೇಳಬೇಕಾಗುತ್ತದೆ. ಈ ಸಂಬಂಧಗಳು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವನ್ನು ಸಾಮಾನ್ಯ ಅಪರಾಧಗಳ ಸ್ಥಾನದಲ್ಲಿ ತೆಗೆದುಕೊಳ್ಳುವುದು ಕೂಡ ಸರಿಯಲ್ಲ. ಸಮಾನ ವಯಸ್ಸಿನ ಅಪ್ರಾಪ್ತ ವಯಸ್ಕರ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವುದಾದರೆ, ಅವರಿಬ್ಬರ ಮೇಲೂ ಜೀವನವಿಡೀ ದೊಡ್ಡ ಕಳಂಕವೇ ತಗುಲುತ್ತದೆ. ಹುಡುಗನನ್ನು ರಿಮ್ಯಾಂಡ್‌ ಹೋಮಿಗೆ ಅಲ್ಲಿನ ಯಾತನೆಗಳನ್ನು ಸಹಿಸಿಕೊಳ್ಳಲು ಕಳಿಸಿಕೊಡಲಾಗುತ್ತದೆ. ಅವನ ಕೆರಿಯರ್‌ ಮುಳುಗಿ ಹೋಗುತ್ತದೆ. ಹುಡುಗಿ ಬಹಳ ಕೆಟ್ಟು ಹೋಗಿದ್ದಾಳೆ ಎಂಬ ಕಳಂಕ ಅಂಟಿಕೊಳ್ಳುತ್ತದೆ. ಅವಳ ಓದುಬರಹ ಅರ್ಧದಲ್ಲಿಯೇ ನಿಂತುಬಿಡುತ್ತದೆ. ಅಪ್ರಾಪ್ತ  ವಯಸ್ಸಿನವರ ಲೈಂಗಿಕ ಸಂಬಂಧ ಒಪ್ಪಿಗೆಯ ಮೇರೆಗೆ ಆಗ್ದಿದರೆ ಅವರನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ನಮ್ಮ ಪೊಲೀಸರು ಹಾಗೂ ನ್ಯಾಯಾಲಯಗಳು ಈ ತೆರನಾದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಹುಡುಗ ಹುಡುಗಿಯ ಪೋಷಕರಿಂದ ಸಾಕಷ್ಟು ಲೂಟಿ ಮಾಡುತ್ತಾರೆ. ನ್ಯಾಯಾಲಯಗಳು ಪ್ರಕರಣಗಳನ್ನು ಒಂದು ತಾರೀಕಿನಿಂದ ಇನ್ನೊಂದು ತಾರೀಕಿಗೆ ಮುಂದೂಡುತ್ತಿರುತ್ತವೆ. ಇಬ್ಬರ ಸಹಜ ನೈಸರ್ಗಿಕ ಕ್ರಿಯೆ ಅವರನ್ನು ಕತ್ತಿಯ ಕೂಪಕ್ಕೆ ಬೀಳಿಸುತ್ತದೆ.

ಈ ಭಯಾನಕ ಸ್ಥಿತಿ ಈಗ ಕಂಡುಬರುವುದಿಲ್ಲ, ಅಪರಾಧಗಳು ನಡೆಯುತ್ತಲೇ ಇದ್ದರೂ ಯಾರೊಬ್ಬರೂ ಕಾನೂನಿನ ಬಾಗಿಲು ತಟ್ಟುವುದಿಲ್ಲ. ಪ್ರಕರಣವನ್ನು ಹತ್ತಿಕ್ಕಿ ಇಡಲಾಗುತ್ತದೆ. ಹುಡುಗರನ್ನು ಹೊಡೆದು ಬಡಿದು ಮಾಡಲಾಗುತ್ತದೆ, ಹುಡುಗಿಯರನ್ನು ಮನೆಯೊಳಗೆ ಕೂಡಿ ಹಾಕಲಾಗುತ್ತದೆ. ಒಂದು ವೇಳೆ ಪೊಲೀಸರಿಗೆ ಗೊತ್ತಾದರೆ ಅವರ ಸ್ಥಿತಿ ಅಯೋಮಯ. ಸುಪ್ರಿಂ ಕೋರ್ಟ್ ಪುನರುಚ್ಛರಿಸಿದ ಪ್ರಕಾರ, ಅಪ್ರಾಪ್ತ ವಯಸ್ಸಿನವರ ಲೈಂಗಿಕ ಸಂಬಂಧ ಬಲಾತ್ಕಾರವೇ ಆಗಿದೆ. ಅದರಲ್ಲಿ ತಪ್ಪಿತಸ್ಥ ಕೇವಲ ಹುಡುಗನಾಗಿದ್ದರೆ, ಪ್ರತಿ 4 ಮನೆಗೊಬ್ಬ ಹುಡುಗ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ.

ಈ ರೀತಿಯ ಸಂವೇದನಾಶೀಲ ಆದರೆ ನೈಸರ್ಗಿಕ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌, ಬೇರೆ ನ್ಯಾಯಾಲಯಗಳು ಹಾಗೂ ಪೊಲೀಸರು `ಖಾಪ್‌ ಪಂಚಾಯಿತಿ’ಗಳ ಹಾಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನೋಡುತ್ತಿವೆ. ಪ್ರತಿಯೊಂದು ಪ್ರಕರಣವನ್ನೂ ವಿಚಾರಣೆ ನಡೆಸದೆಯೇ ಅಪರಾಧಿ ಎಂದು ಘೋಷಿಸಬಹುದು ಹಾಗೂ ಶಿಕ್ಷೆಯನ್ನೂ ಪ್ರಕಟಿಸಬಹುದು. ಪೊಲೀಸರ ಶಿಕ್ಷೆ ಖಾಪ್‌ಪಂಚಾಯಿತಿಗಿಂತಲೂ ಘೋರವಾಗಿರುತ್ತದೆ.

ಧರ್ಮದ ವ್ಯಾಪಾರವನ್ನು ಕಾನೂನುಬಾಹಿರ ಮಾಡುವುದೇ ಸೂಕ್ತ

ವೀರೇಂದ್ರ ದೇವ್ ‌ದೀಕ್ಷಿತನಂಥ ಸ್ವಾಮಿಗಳು ಹುಡುಗಿಯರನ್ನು ಹೇಗೆ ಪುಸಲಾಯಿಸುತ್ತಾರೆಂದರೆ, ಅವರು ತಮ್ಮ ತಂದೆತಾಯಿಯರನ್ನೇ ಮರೆತುಬಿಡಬೇಕು. ಇದೊಂದು ಸೋಜಿಗವೇ ಸರಿ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಜೇಶ್‌ ಪ್ರತಾಪ್ ಸಿಂಗ್‌ 7 ವರ್ಷಗಳ ಮುಂಚೆ 16 ವರ್ಷದ ಮಗಳನ್ನು ಯಾವ ಮೋಹದಲ್ಲಿ ಅದೂ ಯಾವ ಮೂಢನಂಬಿಕೆಯಲ್ಲಿ ಬಾಬಾನ ದ್ವಾರಕಾ ಆಶ್ರಮಕ್ಕೆ ಕಳಿಸಿಕೊಟ್ಟನೊ ನಿಜಕ್ಕೂ ಆಶ್ಚರ್ಯ.

ಧರ್ಮದ ಹೆಸರಿನ ಮೇಲೆ ಅನಾಚಾರ ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದೆ. ಜನರು ಧರ್ಮದ ಅನಾಚಾರವನ್ನು ತಮಗೆ ತಾವೇ ಅದು ತಮ್ಮ ಕರ್ಮ ಎಂದು ಹೇಳಿಕೊಂಡು ಬರುತ್ತಿದ್ದಾರೆ. ವೇಶ್ಯೆಯರು ಉಸಿರುಗಟ್ಟುವ ವಾತಾವರಣದಲ್ಲಿ ಜೀವಿಸುತ್ತಿದ್ದರೂ ಅದನ್ನು ತಮ್ಮ ಅನಿವಾರ್ಯ ಕರ್ಮ ಎನ್ನುತ್ತಾರೆ. ಸೈನಿಕರು ಗುಂಡಿನ ಮಳೆಯ ನಡುವೆ ಬದುಕುವುದು ತಮ್ಮ ಅನಿವಾರ್ಯತೆ ಎಂದು ಭಾವಿಸುವಂತೆ, ಧರ್ಮದ ಅನಾಚಾರವನ್ನು ಹೋಲಿಸಬಹುದು. ಈ ಎಲ್ಲದರಲ್ಲೂ ನಿರಂತರ ತರ್ಕ ಮತ್ತು ಸತ್ಯದ ಹೆಸರಿನ ಮೇಲೆ ಮೂಢಭಕ್ತಿಯನ್ನು ಅವರ ತಲೆಯಲ್ಲಿ ತುಂಬಲಾಗುತ್ತದೆ. ಆ ಹುಡುಗಿಯರ ತಂದೆತಾಯಂದಿರು ಅದನ್ನೇ ತಮ್ಮ ಭಾಗ್ಯ ಎಂದು ಹೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅದರ ಬಗ್ಗೆ ಹೆಮ್ಮೆ ಕೂಡ ಪಟ್ಟುಕೊಳ್ಳುತ್ತಾರೆ.

ಬಹುತೇಕ ಎಲ್ಲ ಸಮಾಜಗಳಲ್ಲಿ ತಂದೆ ತನ್ನ ಹೆಣ್ಣುಮಕ್ಕಳನ್ನು ತಾನೇ ಹುಡುಕಿದ ವರನ ಜೊತೆ ಕಳಿಸುವಾಗ, ಇನ್ಮುಂದೆ ನೀನು ಗಂಡನ ಆಸ್ತಿ, ಅವನದೇ ಸಂಪೂರ್ಣ ಜವಾಬ್ದಾರಿ ಎಂದು ಹೇಳುತ್ತ ಅವಳನ್ನು ತನ್ನ ಜೀವನದಿಂದ ಹೊರಗೆ ಹಾಕಿಬಿಡುತ್ತಾನೆ. ಎಷ್ಟೋ ಸಮಾಜದಲ್ಲಿ ಮದುವೆಯ ಬಳಿಕ ಮಗಳ ಮುಖವನ್ನು ನೋಡಲು ಹೋಗುವುದೇ ಇಲ್ಲ.

ಹೆಣ್ಣುಮಕ್ಕಳ ಬಗೆಗಿನ ಇದೇ ಯೋಚನೆ ಆಶ್ರಮದ ಸ್ವಾಮಿಗಳಿಗೆ ಅದೃಷ್ಟ ಖುಲಾಯಿಸುತ್ತದೆ. ಮಗಳ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅವಳನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವಾಗ ವರದಕ್ಷಿಣೆಯ ರೀತಿಯಲ್ಲಿ ಆಕೆಯ ತಂದೆತಾಯಿಯರಿಂದ ದಾನ ಕೂಡ ಪಡೆಯಲಾಗುತ್ತದೆ. ಬಳಿಕ ಅವಳನ್ನು ತಮಗೆ ತೋಚಿದ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳುತ್ತಾರೆ. 3-4 ತಿಂಗಳುಗಳಲ್ಲಿಯೇ ಅವರು ಆಶ್ರಮದ ಜೀವನಕ್ಕೆ ಒಗ್ಗಿಕೊಂಡು ಬಿಡುತ್ತಾರೆ. ಅವರು ಅಲ್ಲಿಯೇ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತ ಹೋಗುತ್ತಾರೆ. ನೂರಾರು ಬಾಬಾಗಳು ಇದರ ಲಾಭ ಪಡೆಯುತ್ತಾರೆ. ಅವರು ಕೇವಲ ಹುಡುಗಿಯರನ್ನಷ್ಟೇ ಸ್ವೀಕರಿಸುವುದಿಲ್ಲ, ವಿವಾಹಿತರನ್ನು ಕೂಡ. ಬಹಳಷ್ಟು ಮಹಿಳೆಯರು ಉದ್ದೇಶಪೂರ್ವಕವಾಗಿಯೇ ತಮ್ಮ ಗಂಡಂದಿರನ್ನು ತೊರೆದು ಆಶ್ರಮ ಸೇರಿಕೊಳ್ಳುತ್ತಾರೆ. ಕೆಲವರಂತೂ ಎಲ್ಲವನ್ನೂ ಮೀರಿ ಆಶ್ರಮದಲ್ಲಿ ತನು ಸೇವೆ ಹಾಗೂ ಗಂಡನ ಹಣ ಸೇವೆ ಮಾಡುತ್ತಾರೆ.

ಯಾರಾದರೂ ಈ ಬಗ್ಗೆ ಗುಲ್ಲೆಬ್ಬಿಸಿದರೆ ರಾಮ ರಹೀಮ್ ಅಥವಾ ವೀರೇಂದ್ರ ದೇವ್ ಇದಕ್ಕೆ ಅಪವಾದವಾಗಿದ್ದಾರೆ ಎಂದು ಹೇಳುತ್ತಾರೆ. ಆ ಮಹಿಳೆಯರೇ ಸ್ವಯಂಸ್ಛೂರ್ತಿಯಿಂದ ಅಥವಾ ತಂದೆ ತಾಯಿಯರ ಒಪ್ಪಿಗೆಯ ಮೇರೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ.

ಒಂದು ವೇಳೆ ಈ ದುರಂತ ಕಥೆಗಳಿಗೆ ಅಂತ್ಯ ಹಾಡಬೇಕೆಂದರೆ, ಧರ್ಮದ ಅಂಗಡಿಗಳನ್ನು ಕಾನೂನುಬಾಹಿರ ಎಂದು ಸಾರಬೇಕು. ಅದು ಅಮೆರಿಕವೇ ಆಗಿರಬಹುದು ಅಥವಾ ಭಾರತವಾಗಿರಬಹುದು, ಎಲ್ಲೆಡೆ ಅಸಾಧ್ಯ ಎನಿಸುತ್ತದೆ. ಎಲ್ಲಿಯವರೆಗೆ ಇದು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅಂತಹ ಸ್ವಾಮಿಗಳು ಭಾರತ, ಅಮೆರಿಕ ಸಹಿತ ಎಲ್ಲೆಲ್ಲೂ ಸೃಷ್ಟಿಯಾಗುತ್ತಲೇ ಇರುತ್ತಾರೆ.

ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ!

ಹತ್ಯಾಕಾಂಡಗಳಿಗೆ ನಮಗೆ ಉಗ್ರರ ಅವಶ್ಯಕತೆ ಏಕಿದೆ? ನಮ್ಮ ನಿರಪರಾಧಿ, ಸಾಮಾನ್ಯ ಜನರನ್ನು ಸಾಯಿಸಲು ರೈಲ್ವೆಗಳು, ಆಸ್ಪತ್ರೆಗಳು, ಜಾತ್ರೆಗಳು, ಸಿನಿಮಾ ಮಂದಿರಗಳು ಮತ್ತು ಈಗ ರೆಸ್ಟೋರೆಂಟ್‌ಗಳೇ ಸಾಕು. ಮುಂಬೈನ ಕಮಾಮಿಲ್‌ನ ಕಾಂಪೌಂಡ್‌ನಲ್ಲಿದ್ದ ರೆಸ್ಟೋರೆಂಟ್‌ ಬಾರ್‌ನಲ್ಲಿ ಬೆಂಕಿ ಅನಾಹುತಕ್ಕೆ ಸಿಲುಕಿ 14ಕ್ಕೂ ಹೆಚ್ಚು ಜನರು ಸುಟ್ಟು ಕರಕಲಾದರು. ಸುಮಾರು 50 ಜನರು ಗಾಯಗೊಂಡರು. ಪಾಕಿಸ್ತಾನೀಯರ ಮೇಲೆ ದೋಷಾರೋಪ ಹೊರಿಸುವ ಮುನ್ನ ನಾವು ನಮ್ಮ ಸುರಕ್ಷತೆಯ ಬಗ್ಗೆ ಎಷ್ಟು ಜಾಗರೂಕರಾಗಿದ್ದೇವೆ ಎಂಬುದನ್ನು ಅವಲೋಕಿಸಬೇಕು.

ಕಮಾಮಿಲ್‌ನ ಕಾಂಪೌಂಡ್‌ನ ಮನೆಗಳ ಮೇಲ್ಭಾಗದಲ್ಲಿ ಛಾವಣಿಯ ಮೇಲೆ ನಿರ್ಮಾಣಗೊಂಡ ರೆಸ್ಟೋರೆಂಟ್‌ಗಳು ಕಾನೂನುರೀತ್ಯಾ ಇದ್ದವು ಎನ್ನುವ ವಿವಾದ ಆಧಾರರಹಿತ. ಸರ್ಕಾರಿ ಅಧಿಕಾರಿಗಳು ಆಕಾಶದಿಂದ ಇಳಿದ ದೇವದೂತರೇನಲ್ಲ. ಅವರು ಮೊಹರು ಹಾಕಿದರೆಂದರೆ ದುರ್ಘಟನೆ ನಡೆಯುವುದೇ ಇಲ್ಲ ಎಂದೇನಲ್ಲ. ರೈಲುಗಳು, ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳ ದುರ್ಘಟನೆಗಳು ಸ್ಪಷ್ಟವಾಗಿ ಹೇಳುವುದೇನೆಂದರೆ ಸರ್ಕಾರ ಏನು ಮಾಡುತ್ತದೋ ಅದನ್ನು ನಿಯಮಗಳನ್ವಯವೇ ಮಾಡುತ್ತದೆ. ಆದರೆ ಅದು ಅಪಾಯಕಾರಿಯಾಗಿರುತ್ತದೆ.

ಸಾಮಾನ್ಯ ಜನರು ದುರ್ಘಟನೆಗಳ ಬಗ್ಗೆ ಅದೆಷ್ಟು ಜಾಗರೂಕರಾಗಿದ್ದಾರೆಂದು ತಿಳಿದುಕೊಳ್ಳುವುದು ಅತ್ಯವಶ್ಯ. ಹೆಚ್ಚಿನ ಜನರು ಅರೆಬರೆ ನಿರ್ಮಿಸಿದ, ಹರುಕುಮುರುಕು ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅವರಿಗೆ ನಿಯಮಗಳ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ.

ಮುಂಬೈನ ಬೆಲಾರ್ಡ್‌ ಎಸ್ಟೇಟ್‌ ಭಾಗದಲ್ಲಿ 100-150 ವರ್ಷಗಳಷ್ಟು ಹಳೆಯ ಕಟ್ಟಡಗಳಿವೆ. ಅವು ಎಂದೋ ಪುನರ್‌ನಿರ್ಮಾಣಗೊಳ್ಳಬೇಕಿದ್ದವು. ಆದರೆ ಬಾಡಿಗೆದಾರರ ಕಾರಣದಿಂದ ಖಾಲಿ ಆಗಿಲ್ಲ. ಮುಂಬೈನ ರೈಲು ಹಳಿಗುಂಟ ಗುಡಿಸಲುಗಳು ನಿರ್ಮಾಣಗೊಂಡಿವೆ. ರಸ್ತೆಪಕ್ಕದಲ್ಲಿ ಪಾರ್ಕಿಂಗ್‌ ಮಾಡಲಾಗುತ್ತದೆ. ಜನಸಾಮಾನ್ಯರು ಅತ್ಯಂತ ಮಜವಾಗಿ ರಸ್ತೆ ಮಧ್ಯದಲ್ಲಿಯೇ ನಡೆಯುತ್ತಿರುತ್ತಾರೆ, ವಾಹನಗಳನ್ನು ಸ್ಪರ್ಶಿಸುತ್ತಾರೆ.

ರಸ್ತೆಯಲ್ಲಿ ನಡೆಯಲು ಕೂಡ ಮುಂಬೈ ಮಹಾಗನರ ಪಾಲಿಕೆಯ ಅನುಮತಿ ಪಡೆಯಬೇಕಾಗುತ್ತಾ? ಇದನ್ನು ಸ್ವತಃ ಜನಸಾಮಾನ್ಯರೇ ನಿರ್ಧರಿಸಬೇಕು.

ಈ ಬಾರ್‌ ಅಂಡ್‌ ರೆಸ್ಟೊರೆಂಟ್‌ಗೆ ಬಂದವರೇನೂ ಸಲ್ಮಾನ್‌ ಖಾನ್‌ನ ಕಾರಿಗೆ ಸಿಲುಕಿ ಸಾಯಲು ಬಂದ ಅಮಾಯಕರೇನಾಗಿರಲಿಲ್ಲ. ಅವರೆಲ್ಲ ಸಾಕಷ್ಟು ಹಣ ಖರ್ಚು ಮಾಡಿ ಏರ್‌ಕಂಡೀಶನ್ಡ್ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದರು. ಅವರಿಗೆ ತಮ್ಮ ಸುರಕ್ಷತೆಯ ಚಿಂತೆ ಇರಲಿಲ್ಲವೇ? ನಾವು ಕುರಿಗಳ ಹಾಗೆ ಸಾಗುತ್ತಿದ್ದೇವೆ ಮತ್ತು ಬಳಿಕ ಅಪಾಯ ಎದುರಿಸಬೇಕಾಗುತ್ತದೆ. ಈ ನಿಯಮಗಳ ಪಾಲನೆಯಿಂದ ಸುರಕ್ಷತೆ ಸಿಗುವುದಿಲ್ಲ. ಅಕ್ರಮ ಮತ್ತು ಸಕ್ರಮ ನಿರ್ಮಾಣಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ನಮ್ಮ ಜೀವದ ಸುರಕ್ಷತೆಯ ಬಗ್ಗೆ ಎಚ್ಚರದಿಂದಿರಬೇಕು. ಇದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ನಗರದ 3ರಲ್ಲಿ ಇಬ್ಬರಿಗೆ 1 ನಿಮಿಷ ನಿಲ್ಲುವ ಲೋಕಲ್ ಟ್ರೇನ್‌ನಲ್ಲಿ ಹತ್ತಲು ಮತ್ತು ಇಳಿಯಲು ಅಭ್ಯಾಸ ಮಾಡಿಕೊಂಡವರಿಗೆ ತಮ್ಮ ಸುರಕ್ಷತೆಯ ಗ್ರಂಥಿ ಎಂದೋ ಕುಗ್ಗಿ ಹೋಗಿರುತ್ತದೆ.

ಕಮಾಮಿಲ್ ‌ಕಾಂಪೌಂಡ್‌ ಬಗೆಗಿನದು ಬಿಟ್ಟುಬಿಡಿ, ಮುಂಬೈನ ಇಂಚಿಂಚು ಜಾಗ ಅಸುರಕ್ಷತೆಯಿಂದ ಕೂಡಿದೆ. ಅಲ್ಲಿನ ಪ್ರತಿಯೊಂದು ಮನೆಗಳು, ಶಾಲೆಗಳು ಆಫೀಸ್‌ಗಳು ಅಪಾಯದಲ್ಲಿವೆ. ಆದರೂ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಜೀವಿಸುತ್ತಿದ್ದಾರೆ. ಏಕೆಂದರೆ ಜೀವವಂತೂ ಇದೆ ಸಾಯುವ ಯೋಚನೆ ಮುಂಬೈನ ಯಾರಿಗೂ ಇಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ