ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿರಬಹುದು, ಪುರುಷರ ಹೆಜ್ಜೆಯೊಂದಿಗೆ ಹೆಜ್ಜೆ ಇಟ್ಟು ನಡೆಯುತ್ತಿರಬಹುದು. ಆದರೆ ಅವರ ಕೆಲವು ಧೋರಣೆಗಳು ಮೊದಲು ಹೇಗಿದ್ದವೋ, ಈಗಲೂ ಹಾಗೆಯೇ ಇವೆ. ಹಣದ ಬಗೆಗಿನ ವಿಷಯವನ್ನೇ ತೆಗೆದುಕೊಳ್ಳಿ, ಅವರು ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ಉಳಿತಾಯದ ಬಗ್ಗೆಯೇ ಹೆಚ್ಚು ವಿಶ್ವಾಸ ಹೊಂದಿರುತ್ತಾರೆ. ತಮ್ಮ ಇಚ್ಛೆಗಳ ಮೇಲೆ ಕಡಿವಾಣ ಹಾಕಿಕೊಳ್ಳಲು ಅವರಿಗೆ ಈಗಲೂ ಬರುತ್ತದೆ. ಈಗಂತೂ ಅವರು ಹಲವು ಕಡೆ ಹಣ ಹೂಡಿಕೆ ಮಾಡಲು ಇಷ್ಟಪಡುತ್ತಾರೆ.

ಈ ಕುರಿತಂತೆ ಮನೋಚಿಕಿತ್ಸಕಿ ಶಿಲ್ಪಾ ಹೀಗೆ ಹೇಳುತ್ತಾರೆ, ``ಈಗಲೂ ಮಹಿಳೆಯರ ಯೋಚನೆ ಕೆಲವೊಂದು ಪ್ರಕರಣಗಳಲ್ಲಿ ಪುರುಷರಿಗಿಂತ ಭಿನ್ನವಾಗಿರುತ್ತದೆ. ಪುರುಷರು ಭವಿಷ್ಯಕ್ಕಿಂತ ಸದ್ಯದ ಖುಷಿಯಿಂದ ಕೂಡಿದ ವರ್ತಮಾನದ ಬಗೆಗೆ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಆದರೆ ಮಹಿಳೆಯರು ಪ್ರತಿಯೊಂದು ಕೆಲಸವನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಾರೆ. ಪುರುಷರು ಕೂಡ ಹಾಗೆಯೇ ಮಾಡಬೇಕೆಂದು ಅವರು ಇಚ್ಛಿಸುತ್ತಾರೆ.

``ಮಹಿಳೆಯರು ಅಪಾಯದಿಂದ ದೂರ ಇರಲು ಇಚ್ಛಿಸುತ್ತಾರೆ, ಅದರಲ್ಲೂ ವಿಶೇಷವಾಗಿ ಹಣದ ಹೂಡಿಕೆ ವಿಷಯದಲ್ಲಿ. ಹೀಗಾಗಿ ಅವರು ಹಣವನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದು ಭಾವಿಸುತ್ತಾರೆ. ಪುರುಷರು ಮಾತ್ರ ಲಾಭ ಪಡೆಯುವ ದೃಷ್ಟಿಯಿಂದ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ‌ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವುದನ್ನು ಸೂಕ್ತ ಎಂದು ತಿಳಿಯುತ್ತಾರೆ. ಆದರೆ ಇದು ಅಪಾಯದಿಂದ ಕೂಡಿರುತ್ತದೆ. ಹೀಗಾಗಿ ಮಹಿಳೆಯರು ಆಸ್ತಿ, ಚಿನ್ನ ಹಾಗೂ ಬೆಳ್ಳಿಯಲ್ಲಿ ಹಣ ಹೂಡಿಕೆ ಮಾಡಬೇಕು ಇಲ್ಲಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿಯಾಗಿಟ್ಟು ಲಾಭ ಪಡೆದುಕೊಳ್ಳಬೇಕೆನ್ನುತ್ತಾರೆ.''

ಪುರುಷರೂ ಬಜೆಟ್ರೂಪಿಸಬೇಕು

ಮಹಿಳೆಯರನ್ನು ಮನೆಯ ಹಣಕಾಸು ಮಂತ್ರಿ ಎಂದು ಕರೆಯುತ್ತಾರೆ. ಇದು ಸತ್ಯ ಕೂಡ. ಪುರುಷನೊಬ್ಬ ಹಣ ಗಳಿಸಿ ಅದನ್ನು ತನ್ನ ತಾಯಿ ಅಥವಾ ಹೆಂಡತಿಯ ಬಳಿ ಕೊಟ್ಟರೆ, ಅದನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ಮಹಿಳೆಯದ್ದೇ ಆಗಿರುತ್ತದೆ. ಹೀಗಾಗಿ ಮಹಿಳೆ ಗೃಹಿಣಿಯೇ ಆಗಿರಬಹುದು ಅಥವಾ ಉದ್ಯೋಗಸ್ಥೆ, ಆಕೆ ತನ್ನ ಕುಟುಂಬವನ್ನು ಆರ್ಥಿಕವಾಗಿ ಬಲಗೊಳಿಸಲು ಬಜೆಟ್‌ಗನುಸಾರ ಮುನ್ನಡೆಯಲು ಇಷ್ಟಪಡುತ್ತಾಳೆ. ಏಕೆಂದರೆ ಭವಿಷ್ಯದಲ್ಲಿ ತಮ್ಮ ಆರ್ಥಿಕ ಸ್ಥಿತಿ ಬಿಗಡಾಯಿಸದಿರಲಿ ಎನ್ನುವುದು ಇದರ ಹಿಂದಿನ ಯೋಚನೆಯಾಗಿರುತ್ತದೆ. ಪುರುಷರೂ ಕೂಡ ಬಜೆಟ್‌ಗನುಗುಣವಾಗಿ ಸಾಗಬೇಕು ಎಂದು ಅವರು ಬಯಸುತ್ತಾರೆ.

ಮಕ್ಕಳ ಶಿಕ್ಷಣದ ಯೋಜನೆ ರೂಪಿಸಿ

ಶಿಕ್ಷಣ ಇಂದು ಎಷ್ಟು ದುಬಾರಿ ಆಗಬಿಟ್ಟಿದೆಯೆಂದರೆ, ತಂದೆ ತಾಯಿಯರಿಗೆ ಅದರ ಹೊರೆ ಹೊತ್ತುಕೊಳ್ಳುವುದು ಕಷ್ಟವಾಗಿಬಿಟ್ಟಿದೆ. ಪುರುಷರಿಗಿಂತ ಹೆಚ್ಚಾಗಿ ಇದು ಮಹಿಳೆಯರನ್ನು ಕಾಡುತ್ತಿದೆ. ತಮ್ಮ ಮಗು ಒಳ್ಳೆಯ ಶಿಕ್ಷಣದಿಂದ ಎಲ್ಲಿ ವಂಚಿತವಾಗುತ್ತದೊ ಎಂಬ ಹೆದರಿಕೆ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮೊದಲೇ ಯೋಜನೆ ರೂಪಿಸುವುದು ಅತ್ಯಗತ್ಯವಾಗಿದೆ.

ಮದುವೆಯ ಯೋಜನೆ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ತಂದೆ ತಾಯಿಯರಿಗೆ ತಮ್ಮ ಬೆಳೆದ ಮಕ್ಕಳಿಗೆ ಮದುವೆ ಮಾಡುವುದು ಚಿಂತೆಯ ವಿಷಯವಾಗಿದೆ. ಅದರಲ್ಲೂ ಹೆಣ್ಣು ಮಗಳ ಮದುವೆ. ಉದ್ಯೋಗಸ್ಥ ಮಹಿಳೆಯರಿಂದ ಹಿಡಿದು ಗೃಹಿಣಿಯರ ತನಕ ಎಲ್ಲರಿಗೂ ಇದು ಚಿಂತೆಯ ವಿಷಯವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ