ಕಾಮಿಕ್ಕ್ಯಾರೆಕ್ಟರ್ಗಳ ವ್ಯಾಪಕ ಮೋಡಿ : ಕಾಸ್ಟ್ಯೂಮ್ ಡ್ರೆಸೆಸ್‌ ಈಗ ಜನಪ್ರಿಯ. ಅಂದರೆ ಇಂದಿನ ಆಧುನಿಕ ಯುವಜನತೆ ಕಾಮಿಕ್ಸ್/ವಿಡಿಯೋ ಗೇಮ್ಸ್ ನ ಪಾತ್ರಗಳ ವೇಷ ಧರಿಸಿ ಪಾರ್ಟಿಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಅದರಲ್ಲೂ ಕಾಸ್‌ಪ್ಲೇ ಮಾಡುವವರು ಹೆಚ್ಚು ಕಾಣಿಸುತ್ತಿದ್ದಾರೆ. ನೀವು ಏಕೆ ನಿಮ್ಮ ಮೆಚ್ಚಿನ ಚಂಪಕ ಪತ್ರಿಕೆಯ ಚೀಕು, ಮೀಕು ಆಗಿ ಟ್ರೈ  ಮಾಡಬಾರದು?

ಧರ್ಮದ ಕುರೂಪಿ ಮುಖ : ಅಲ್ ಖೈದಾದ ಛಾಪು ಹೊತ್ತಿರುವ ಮತ್ತೊಂದು ಹತ್ಯಾಕಾಂಡ. ಇದು ಆಫ್ರಿಕಾದ ಕೇನ್ಯಾದಲ್ಲಿ ನಡೆದಿತ್ತು. ಇದರಲ್ಲಿ 36 ಮಂದಿಯನ್ನು ಸಾಲಾಗಿ ಮಲಗಿಸಿ ಸುಡಲಾಯಿತು. ಅವರ ಪ್ರಕಾರ ಇದು ಧರ್ಮ ರಕ್ಷಣೆಯ ಕಾರ್ಯವಂತೆ.

ಹಾಡಲೇ.... ನಾ ಹಾರಲೇ....? :  ಸುಂದರ ಕಾಯದ ಏಂಜೆಲ್ಸ್ ಚಿಟ್ಟೆಗಳ ತರಹ ಕೈಗೆ ಸಿಗುವುದುಂಟೆ? ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ವಿಕ್ಟೋರಿಯಾ ಸೀಕ್ರೇಟ್‌ ಫ್ಯಾಷನ್‌ ಶೋನಲ್ಲಿ ಮಾಡೆಲ್ಸ್ ಈ ರೀತಿ ಬಟರ್‌ ಫ್ಲೈ, ಏಂಜೆಲ್ಸ್ ಆಗಿ ರಾಂಪ್‌ ಮೇಲೆ ಮಿರಿಮಿರಿ ಮಿಂಚಿದರು. ಯಾರೂ ತಮ್ಮ ಕೈಗೆಟುಕಲಿಲ್ಲವಲ್ಲ ಎಂಬುದು ವೀಕ್ಷಕರ ಕೊರಗಾಯ್ತು.

ಪ್ರಾಣಿಗಳಂಥ ವ್ಯವಹಾರ : ಮೆಕ್ಸಿಕೋದಲ್ಲಂತೂ ಕಟುಕರು ಪ್ರಾಣಿಗಳನ್ನು ಕತ್ತರಿಸುವಂತೆ ಮನುಷ್ಯರ ಕೊಲೆ ಮಾಡಲಾಗುತ್ತದೆ. ಅಲ್ಲಿನ ಜನ ಸರ್ಕಾರದ ಕೈಲಾಗದ ಹೇಡಿತನದಿಂದ ರೋಸಿದ್ದಾರೆ. ಮಾದಕ ಸಾಮಗ್ರಿಗಳ ಮಾರಾಟದ ಮಾಫಿಯಾವನ್ನು ಕಂಟ್ರೋಲ್ ‌ಮಾಡುವುದು ಯಾವ ಸರ್ಕಾರದ ಕೈಲೂ ಆಗದ ಕೆಲಸ. ಈ ಹುಡುಗಿ ಇಲ್ಲಿ ಸತ್ತುಬಿದ್ದಿಲ್ಲ. ಇದು ಪ್ರತಿಭಟನೆಯ ಪರಿಯಷ್ಟೆ.

ವಿದೇಶೀ ಹೋಳಿ : ಹೋಳಿ ಹಬ್ಬ ಇನ್ನೂ ಎಲ್ಲೋ ಇದೆ, ಈಗಲೇ ಇವರೇಕೆ ಬಣ್ಣ ಎರಚಾಡುತ್ತಿದ್ದಾರೆ ಅಂದುಕೊಂಡಿರಾ? ಕಾರಾಕಸ್‌ ಎಂಬ ದೇಶದಲ್ಲಿ ನವೆಂಬರ್‌ ಅಂತ್ಯದಲ್ಲಿ ಆಚರಿಸುವ ಬಣ್ಣದ ಎರಚಾಟದ ಹಬ್ಬವಿದು. ನಮ್ಮ ಹೋಳಿ ಇಲ್ಲಿಂದ ಅಲ್ಲಿಗೆ ಹೇಗೆ ಹೋಯ್ತು ಎಂದು ತಲೆಕೆಡಿಸಿಕೊಳ್ಳುವ ಬದಲು, ಮೋಜು ಮಾಡಲು ಬಣ್ಣ ಎರಚಿ ಖುಷಿಪಡಿ.

ಚಳಿ ಚಳಿ ತಾಳೆನು ಚಳಿಯ : ಎಲ್ಲೆಲ್ಲೂ ಮಂಜು ಹರಡಿದೆ, ಚಳಿ ಅಡಗಿಸುವಂಥ ಬಟ್ಟೆಗಳೂ ಇಲ್ಲ. ಆದರೆ ಪ್ರಿಯ ಪ್ರೇಯಸಿ ಒಟ್ಟಿಗೆ ಕೂಡಿರಲು ಯಾವ ಚಳಿ ಏನು ಮಾಡೀತು? ಇತ್ತೀಚೆಗೆ ಜಪಾನಿನ ಒಸಾಕಾ ನಗರದಲ್ಲಿ ನಡೆದ ಸ್ಕೇಟಿಂಗ್‌ ಡ್ಯಾನ್ಸ್ ಸ್ಪಧೆಯಲ್ಲಿ ರಷ್ಯಾದ ಜೋಡಿಯ ಮೋಹಕ ಭಂಗಿ.

ಮಾತೃತ್ವದ ಮಹಿಮೆ :  ಎಳೆ ಕೂಸುಗಳಿಗೆ ಹಾಲೂಡಿಸುವುದು ಪಾವನ ಕೆಲಸ. ಇತ್ತೀಚೆಗೆ ಯೂರೋಪ್‌ ದೇಶಗಳಲ್ಲಿ ಎಲ್ಲೆಡೆ ಬಯಲು ಪ್ರದೇಶಗಳಲ್ಲಿ ಬ್ರೆಸ್ಟ್ ಫೀಡಿಂಗ್‌ ಕಂಡುಬರುತ್ತಿದೆ. ಅಲ್ಲಿನ ಹೆಂಗಸರು ಯಾವುದೇ ಹಿಂಜರಿಕೆಯಿಲ್ಲದೆ, ಸೆರಗಿನ ಯೋಚನೆಯೂ ಮಾಡದೆ ಹೀಗೆ ಹಾಲೂಡಿಸುತ್ತಿದ್ದಾರೆ.

ಮೋಜು ಮಸ್ತಿಗಾಗಿ : ನ್ಯೂಯಾರ್ಕ್‌ನಲ್ಲಿ ಬೀದಿ ಬದಿ ಸಂಪು, ಹರತಾಳಗಳು ನಡೆಯುವಂತೆ ಬೇಕಾದಷ್ಟು ಮೋಜು ಮಸ್ತಿ ಕೂಡ ನಡೆಯುತ್ತದೆ. ಒಂದು ಪ್ರಾಚೀನ ಮೆಸ್ಸಿ ಸ್ಟೋರ್‌ನಿಂದ ಆರಂಭವಾದ ಈ ಪರಂಪರೆ, ಬಣ್ಣಬಣ್ಣದ ಮುಖವಾಡ, ಚಿತ್ರವಿಚಿತ್ರ ವೇಷ ಧರಿಸಿ ಜನ ತಮ್ಮ ನೋವು ಮರೆಯಲು ಹೊಸ ಮಾರ್ಗ ಹುಡುಕಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ